ಸಾಮಾಜಿಕ ಐಕ್ಯತೆಯ ಪ್ರತೀಕವಾಗಿರುವ ಆಶ್ರಮ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯದ ಶಕ್ತಿಸ್ರೋತ !

ರಾಷ್ಟ್ರ ಮತ್ತು ಧರ್ಮಕ್ಕಾಗಿ ನಿಷ್ಠೆಯಿಂದ ಸಮರ್ಪಿಸಿಕೊಂಡ ಸಾಧಕರು !

ಆಶ್ರಮದಲ್ಲಿ ಸಾಧಕರಿಗೆ ರಾಷ್ಟ್ರಪ್ರೇಮ ಮತ್ತು ಧರ್ಮಪ್ರೇಮವನ್ನು ಕಲಿಸಲಾಗುತ್ತದೆ. ಇದರಿಂದ ಅವರಲ್ಲಿ ರಾಷ್ಟ್ರಬಂಧುತ್ವ ಮತ್ತು ಧರ್ಮಬಂಧುತ್ವ ನಿರ್ಮಾಣವಾಗಿ ಸಂಘಟಿತ ಭಾವವು ತಾನಾಗಿಯೇ ನಿರ್ಮಾಣವಾಗುತ್ತದೆ.

ಜಾತಿಭೇದ ಮತ್ತು ಮೇಲು-ಕೀಳು ಇವುಗಳ ಲವಲೇಶವೂ ಇಲ್ಲ !

‘ಈಶ್ವರಪ್ರಾಪ್ತಿ’ಯ ಅಂತಿಮ ಧ್ಯೇಯವನ್ನು ತಲುಪಲು ‘ಅಹಂ’ ನಾಶಗೊಳಿಸಲು ಪ್ರತಿಯೊಬ್ಬ ಸಾಧಕನೂ ಪ್ರಯತ್ನಿಸುತ್ತಿರುತ್ತಾನೆ. ಇದರಿಂದಾಗಿ ಅವನ ಮನಸ್ಸಿನಲ್ಲಿ ಜಾತಿಮತ, ಮೇಲು-ಕೀಳು ಮುಂತಾದ ಭಾವನೆಗಳೂ ಬರುವುದಿಲ್ಲ. ಅನೇಕ ದಿನಗಳಿಂದ ತಮ್ಮ ಜೊತೆಗಿರುವ ಸಾಧಕರ ಜಾತಿಯೂ ಅವರಿಗೆ ಗೊತ್ತಿರುವುದಿಲ್ಲ ಮತ್ತು ವಿಚಾರಿಸುವುದೂ ಇಲ್ಲ. ಇದರಿಂದಾಗಿ ಸನಾತನ ಆಶ್ರಮದಲ್ಲಿ ವಿವಿಧ ಜಾತಿಮತದ ಸಾಧಕರು ಆನಂದದಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಇದರಿಂದ ‘ಈಶ್ವರಪ್ರಾಪ್ತಿಯ ಅತ್ಯುಚ್ಚ ಧ್ಯೇಯದಿಂದಾಗಿ ಅಖಂಡ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ’ ಎಂಬುದು ಸ್ಪಷ್ಟವಾಗುತ್ತದೆ.

‘ಸನಾತನದ ಆಶ್ರಮದಲ್ಲಿ ಮನುಷ್ಯರನ್ನು ರೂಪಿಸುತ್ತಾರೆ !’
– ಪ.ಪೂ. ನರೇಂದ್ರನಾಥ ಮಹಾರಾಜರು (ಮಚ್ಛಿಂದ್ರನಾಥರ ಬಳಿಕ ನಾಥ ಸಂಪ್ರದಾಯದ 16ನೇ ಪದಾಧಿಕಾರಿ)

ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯದ ಶಕ್ತಿಸ್ರೋತ !

ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ವಿಭಾಗಗಳು ಆಶ್ರಮದಲ್ಲಿ ಕಾರ್ಯನಿರತವಾಗಿವೆ. ಆದ್ದರಿಂದ ಈ ಆಶ್ರಮವು ರಾಷ್ಟ್ರ ಮತ್ತು ಧರ್ಮಕ್ಕಾಗಿ ಕಾರ್ಯ ಮಾಡುವ ಹಿಂದುತ್ವನಿಷ್ಠರಿಗೆ ಶಕ್ತಿಸ್ರೋತವಾಗಿದೆ.

‘ಸನಾತನ ಕಲಾಮಂದಿರ’ದಿಂದ ಧರ್ಮಸತ್ಸಂಗಗಳ ನಿರ್ಮಿತಿ !

ಧರ್ಮಶಿಕ್ಷಣ ನೀಡುವ ‘ಧರ್ಮಸತ್ಸಂಗ’ಗಳ 370 ಭಾಗಗಳನ್ನು ತಯಾರಿಸ ಲಾಗಿದ್ದು ರಾಷ್ಟೀಯ ಮತ್ತು ಸ್ಥಳೀಯ ‘ಚಾನೆಲ್’ಗಳಲ್ಲಿ ಪ್ರಸಾರಗೊಂಡಿವೆ.

ಪರಿಪೂರ್ಣ ಅಧ್ಯಾತ್ಮಶಾಸ್ತ್ರ ಕಲಿಸುವ ಗ್ರಂಥಗಳ ನಿರ್ಮಿತಿ !

ಸಾಧನೆ, ರಾಷ್ಟ್ರ, ಧರ್ಮ ಇತ್ಯಾದಿ ವಿಷಯಗಳ ಬಗ್ಗೆ ಜನವರಿ 2018 ರ ವರೆಗೆ 17 ಭಾಷೆಗಳಲ್ಲಿ 306 ಗ್ರಂಥಗಳ 71,42,000 ಕ್ಕಿಂತಲೂ ಹೆಚ್ಚು ಪ್ರತಿಗಳು ಪ್ರಕಾಶಿತಗೊಂಡಿವೆ.

ನಿಯತಕಾಲಿಕೆ ಮತ್ತು ಜಾಲತಾಣಗಳ ಮೂಲಕ ಜನಜಾಗೃತಿ !

‘ಸನಾತನ ಪ್ರಭಾತ’ ನಿಯತಕಾಲಿಕೆ, Sanatan.org ಮತ್ತು HinduJagruti.org ನಂತಹ ಜಾಲತಾಣಗಳ ಮೂಲಕ ರಾಷ್ಟ್ರ ಮತ್ತು ಧರ್ಮದ ಬಗ್ಗೆ ಜಾಗೃತಿಯಾಗುತ್ತದೆ.

ಸನಾತನ ಸಾಧಕ-ಪುರೋಹಿತ ಪಾಠಶಾಲೆ !

 

ಹಿಂದೂ ಸಮಾಜಕ್ಕೆ ಧಾರ್ಮಿಕ ವಿಧಿಗಳನ್ನು ‘ಸಾಧನೆ’ಯೆಂದು ಮಾಡುವ ಸಾಧಕ-ಪುರೋಹಿತರನ್ನು ನೀಡುವುದಕ್ಕಾಗಿ ಈ ಪಾಠಶಾಲೆಯು ಕಾರ್ಯನಿರತವಾಗಿದೆ.

Leave a Comment