ದಕ್ಷಿಣ ಪೂರ್ವ ಏಶಿಯಾದ ೧೭ ಸಾವಿರ ದ್ವೀಪಗಳ ದೇಶವೆಂದರೆ ಇಂಡೋನೆಶಿಯಾ. ಈ ದೇಶದಲ್ಲಿ ಹಿಂದೂಗಳ ಸಂಖ್ಯೆ ಶೇ. ೧೭ ಮಾತ್ರವಿದೆ. ಅದರಲ್ಲಿ ಎಲ್ಲಕ್ಕಿಂತ ಹೆಚ್ಚು ಹಿಂದೂಗಳು ಬಾಲಿ ದ್ವೀಪದಲ್ಲಿ ಇರುತ್ತಾರೆ. ಪುರಾಣದಲ್ಲಿ ‘ವಾಲಿ’ ದ್ವೀಪ ಎಂದು ಹೇಳಲಾಗಿದೆ, ಅದುವೇ ಈಗಿನ ಬಾಲಿ ದ್ವೀಪವಾಗಿದೆ. ಬಾಲಿಯ ಶೇ. ೮೩.೫ ರಷ್ಟು ಜನರು ಹಿಂದೂಗಳಿದ್ದಾರೆ. ವಾಲ್ಮೀಕಿ ರಾಮಾಯಣದಲ್ಲಿ ಸೀತಾಮಾತೆಯನ್ನು ಶೋಧಿಸುವುದಕ್ಕೆ ಸುಗ್ರೀವನು ವಾನರಸೇನೆಯನ್ನು ‘ಯಾವಾದ್ವೀಪ’ (ಈಗಿನ ಇಂಡೋನೆಶಿಯಾದಲ್ಲಿನ ‘ಜಾವಾ ದ್ವೀಪ’ ಮತ್ತು ‘ವಾಲಿದ್ವೀಪ’ ಕ್ಕೆ ಕಳುಹಿಸಿದ ಉಲ್ಲೇಖವಿದೆ). ಬಾಲಿಯಲ್ಲಿ ಹಿಂದೂಗಳ ಪವಿತ್ರ ಸ್ಥಾನವೆಂದರೆ ‘ಅಗುಂಗ ಪರ್ವತ’ ಮತ್ತು ಪವಿತ್ರ ದೇವಸ್ಥಾನವೆಂದರೆ ಪರ್ವತದ ತಪ್ಪಲಿನಲ್ಲಿರುವ ‘ಬೇಸಾಖಿ ದೇವಸ್ಥಾನ’ ! ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಅವರೊಂದಿಗೆ ವಿದ್ಯಾರ್ಥಿ – ಸಾಧಕರು ೨೧.೩.೨೦೧೮ ರಂದು ಬಾಲಿ ದ್ವೀಪದ ಮೇಲೆ ಬೇಸಾಖಿ ದೇವಸ್ಥಾನಕ್ಕೆ ದರ್ಶನಕ್ಕೆ ಹೋಗಿದ್ದರು. ಅಲ್ಲಿ ಬಾಲಿನಿಸ್ ಪದ್ಧತಿಯಂತೆ ಪೂಜೆಯನ್ನು ಸಹ ಮಾಡಿದರು.
೧. ಸಮುದ್ರಮಂಥನದಲ್ಲಿ ಹಗ್ಗದ ಪಾತ್ರವಹಿಸಿದ ವಾಸುಕಿ ನಾಗನ ಪ್ರತೀಕ ಮತ್ತು ಅಖಂಡ ಜಾಗೃತ ಜ್ವಾಲಾಮುಖಿ ಇರುವ ಅಗುಂಗ ಪರ್ವತ !
ವಾಸುಕಿ ನಾಗನ ಪ್ರತೀಕ ಮತ್ತು ಅಖಂಡ ಜಾಗೃತ ಜ್ವಾಲಾಮುಖಿ ಇರುವ ಅಗುಂಗ ಪರ್ವತ
ಅಗುಂಗ ಪರ್ವತ ಅಂದರೆ ಉರಿಯುತ್ತಿರುವ ಮತ್ತು ಅಖಂಡವಾದ ಜಾಗೃತ ಜ್ವಾಲಾಮುಖಿಯಾಗಿದೆ. ಇಲ್ಲಿ ಪ್ರತಿ ೫-೧೦ ನಿಮಿಷಗಳಿಗೊಮ್ಮೆ ಬೂದಿಯ ಸ್ಫೋಟವಾಗುತ್ತಿರುತ್ತದೆ. ೩ ಸಾವಿರ ೧೦೫ ಮೀಟರ ಎತ್ತರವಿರುವ ಈ ಜ್ವಾಲಾಮುಖಿ ಕಳೆದ ವರ್ಷವಿಡಿ ಜಾಗೃತವಾಗಿತ್ತು. ಇದರಿಂದ ಅನೇಕಬಾರಿ ಬಾಲಿ ದ್ವೀಪದಲ್ಲಿ ವಿಪತ್ತು ಬಂದೆರಗಿತ್ತು. ಬಾಲಿಯಲ್ಲಿ ಹಿಂದೂಗಳು ಈ ಪರ್ವತವನ್ನು ಪವಿತ್ರವೆಂದು ನಂಬುತ್ತಾರೆ. ಸತ್ಯಯುಗದಲ್ಲಿ ಸಮುದ್ರಮಂಥನದ ಸಮಯದಲ್ಲಿ ಕಡುಗೋಲಿನ ಕಾರ್ಯ ಮಾಡಿದ ಸುಮೇರು ಪರ್ವತವು ಜಾವಾ ದ್ವೀಪದಲ್ಲಿದೆ. ಸಮುದ್ರ ಮಂಥನದಲ್ಲಿ ಹಗ್ಗದ ಪಾತ್ರವಹಿಸಿದ ವಾಸುಕಿ ನಾಗನ ಬಾಯಿಯೇ ಎಂದು ಅಗುಂಗ ಪರ್ವತದ ಕಡೆಗೆ ನೋಡಿದಾಗ ಅನಿಸುತ್ತದೆ. ಈ ಪರ್ವತದ ರಚನೆ ಬಾಯಿ ತೆರೆದ ನಾಗನಂತಿದೆ. ಬಾಲಿಯಲ್ಲಿನ ಜನರ ಹೇಳಿಕೆಯಂತೆ, ಬಾಲಿ ದ್ವೀಪವೆಂದರೆ ಮಾರ್ಕಂಡೇಯ ಮಹರ್ಷಿಗಳ ಸ್ಥಾನವಿದೆ ಮತ್ತು ಬಾಲಿಯಲ್ಲಿ ಇರುವ ಹಿಂದೂಗಳು ಅಂದರೆ ಭಾರತದಲ್ಲಿನ ಕಲಿಂಗ ರಾಜ್ಯದಿಂದ (ಅಂದರೆ ಈಗಿನ ಓಡಿಶಾ ರಾಜ್ಯದಿಂದ) ಬಂದಿರುವ ಮಾರ್ಕಂಡೇಯ ಮಹರ್ಷಿಗಳ ವಂಶಜರೇ ಆಗಿದ್ದಾರೆ. ಅಗುಂಗ ಪರ್ವತವು ಮಾರ್ಕಂಡೇಯ ಮಹರ್ಷಿಗಳ ತಪೋಭೂಮಿಯಾಗಿದೆ ಎಂದೂ ಹೇಳುತ್ತಾರೆ.
೨. ಅಗುಂಗ ಪರ್ವದ ಮೇಲೆ ೨೩ ದೇವಸ್ಥಾನಗಳ ಸಮೂಹವಾಗಿರುವ ಬೇಸಾಖಿ ದೇವಸ್ಥಾನದ ವೈಶಿಷ್ಟ್ಯಪೂರ್ಣ ರಚನೆ !
ಅಗುಂಗ ಪರ್ವತದ ಮೇಲೆ ೧ ಸಾವಿರ ಮೀಟರ ಎತ್ತರ ಏರಿದ ನಂತರ ದೇವಸ್ಥಾನಗಳ ಒಂದು ದೊಡ್ಡ ಸಮೂಹವಿದೆ. ಇದನ್ನೇ ‘ಪುರಾ ಬೇಸಾಖಿ ಎಂದು ಕರೆಯುತ್ತಾರೆ. ‘ಪುರಾ ಅಂದರೆ ದೇವಸ್ಥಾನ ಮತ್ತು ‘ಬೇಸಾಖಿ ಅಂದರೆ ವಾಸುಕಿ. ಅಗುಂಗ ಪರ್ವತವು ವಾಸುಕಿಯ ಸ್ಥಾನವಾಗಿರುವುದರಿಂದ ಈ ದೇವಸ್ಥಾನಕ್ಕೆ ವಾಸುಕಿ ಎಂಬ ಹೆಸರು ಇರಬಹುದು. ಬೇಸಾಖಿ ದೇವಸ್ಥಾನವಿದು ಒಟ್ಟು ೨೩ ದೇವಸ್ಥಾನಗಳ ಸಮೂಹವಿದೆ.
ಬೇಸಾಖಿ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿರುವ ೧. ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಇತರರು.
೨ ಅ. ಈ ದೇವಸ್ಥಾನವನ್ನು ಕೆಳಗಿನಿಂದ ಮೇಲಿನ ವರೆಗೆ ಬೇರೆ ಬೇರೆ ೬ ಹಂತಗಳಲ್ಲಿ ಕಟ್ಟಲಾಗಿದೆ.
೨ ಆ. ದೇವಸ್ಥಾನದ ಮಧ್ಯಭಾಗದಲ್ಲಿರುವ ಒಂದು ದೇವಸ್ಥಾನದಲ್ಲಿ ಎರಡೂ ಬದಿಗೆ ವಾಸುಕಿ ಮತ್ತು ತಕ್ಷಕ ನಾಗ ಇವುಗಳಂತಹ ನಾಗಪ್ರತಿಮೆಗಳಿವೆ.
೨ ಇ. ನಾಗಪ್ರತಿಮೆಯ ಮೇಲಿನ ೩ ಕಂಬಗಳ ಮೇಲೆ ೩ ಪೀಠಗಳಿವೆ. ಈ ೩ ಪೀಠಗಳೆಂದರೆ, ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ಸ್ಥಾನಗಳಾಗಿವೆ. ಈ ಪೀಠಗಳಿಗೆ ‘ಪದ್ಮಾಸನ ಎಂದು ಸಹ ಕರೆಯುತ್ತಾರೆ. ಈ ಪೀಠಗಳ ಮೇಲೆ ದೇವತೆಗಳ ಪ್ರತಿಮೆಗಳು ಇರುವುದಿಲ್ಲ.
೨ ಈ. ಬಾಲಿಯಲ್ಲಿನ ಹಿಂದೂ ದೇವತೆಗಳ ಪ್ರತಿಮೆಯ ಪೂಜೆಯ ಬದಲು ಅವರ ಶಸ್ತ್ರಗಳು ಅಥವಾ ವಾಹನಗಳ ಪೂಜೆ ಮಾಡುತ್ತಾರೆ.
೨ ಉ. ಈ ದೇವಸ್ಥಾನದಲ್ಲಿ ಬಲಗಡೆಗೆ ವಾರ್ಷಿಕ ಉತ್ಸವದಲ್ಲಿ ಉಪಯೋಗಿಸಲ್ಪಡುವ ದೇವತೆಗಳ ವಾಹನಗಳ ಸ್ಥಾನವಿದೆ. ಈ ಸ್ಥಳದಲ್ಲಿ ದೇವತೆಗಳ ವಾಹನಗಳ ಕಟ್ಟಿಗೆಯ ಪ್ರತಿಮೆಯನ್ನು ಇಡಲಾಗುತ್ತದೆ.
೨ ಏ. ದೇವಸ್ಥಾನದ ಎಡಗಡೆಗೆ ವಾದ್ಯಶಾಲೆ ಇದೆ. ಅಲ್ಲಿ ಉತ್ಸವದ ಸಮಯದಲ್ಲಿ ಬಾರಿಸುವ ವಾದ್ಯಗಳಿವೆ. ಆ ವಾದ್ಯಶಾಲೆಯ ಪಕ್ಕಕ್ಕೆ ಇರುವ ಮಂಟಪದಲ್ಲಿ ಅರ್ಚಕರ ವಸ್ತುಗಳನ್ನು ಇಡುವ ಸ್ಥಳವಿದೆ. ‘ದೇವಸ್ಥಾನಗಳ ಕಳಸಗಳ ರಚನೆಯು ಸುಮೇರು ಪರ್ವತದಂತೆ ಇದೆ. ಅದರಲ್ಲಿ ಸಪ್ತಲೋಕ ಮತ್ತು ಸಪ್ತಪಾತಾಳಗಳಿವೆ’, ಎಂಬ ನಂಬಿಕೆ ಇದೆ.
ಸಪ್ತಲೋಕ ಮತ್ತು ಸಪ್ತಪಾತಾಳಗಳ ಪ್ರತೀಕವಾಗಿರುವ ಬೇಸಾಖಿ ದೇವಸ್ಥಾನದ ಕಲಶ ಹೊತ್ತಿರುವ ವಿಶೇಷ ಗೋಪುರ
ಪದ್ಮಾಸನ ಎಂದು ಗುರುತಿಸಲಾಗುವ ಮತ್ತು ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ಸ್ಥಾನಗಳಿರುವ ೩ ಕಂಬದ ಮೇಲಿನ ೩ ಪೀಠಗಳು
ಒಂದು ದೇವಸ್ಥಾನದಲ್ಲಿ ದ್ವಾರಪಾಲನಾಗಿರುವ ವಾಸುಕಿ ಮತ್ತು ತಕ್ಷಕ ನಾಗಗಳಂತಹ ನಾಗಪ್ರತಿಮೆ
೩. ಅದ್ವೈತ ಸಿದ್ಧಾಂತ ಮತ್ತು ಆಗಮ ಪದ್ಧತಿ ಇವುಗಳಿಗನುಸಾರ ಪೂಜೆ
ಬೇಸಾಖಿ ಮಂದಿರದಲ್ಲಿ ಅದ್ವೈತ ಸಿದ್ಧಾಂತ ಮತ್ತು ಬಾಲಿಯ ಪ್ರಾಚೀನ ಆಗಮ ಪದ್ಧತಿಗನುಸಾರ ಪೂಜೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಪೂಜೆ ಮಾಡಲು ಬರುವವರು ‘ಸಾರೋಂಗ’ ಎಂಬ ವಿಶೇಷ ಬಟ್ಟೆಗಳನ್ನು ಧರಿಸುವ ಅವಶ್ಯಕತೆ ಇದೆ. ದೇವಸ್ಥಾನದಲ್ಲಿ ಪಾದರಕ್ಷೆಗಳನ್ನು ಹಾಕಿದರೂ ನಡೆಯುತ್ತದೆ. ದೇವಸ್ಥಾನದಲ್ಲಿ ಒಬ್ಬ ಮುಖ್ಯ ಅರ್ಚಕರು ಇರುತ್ತಾರೆ ಮತ್ತು ಇತರ ಅನೇಕ ಅರ್ಚಕರು ಇರುತ್ತಾರೆ. ಮುಖ್ಯ ದೇವಸ್ಥಾನದ ಎದುರಿಗೆ ಒಂದು ಖಾಲಿ ಪೀಠ ಇರುತ್ತದೆ. ಆ ಪೀಠದ ಮುಂದೆ ಕುಳಿತು ಊದಿನಕಡ್ಡಿ ಹಚ್ಚುವುದು, ಹೂವುಗಳನ್ನು ಇಡುವುದು, ನಮಸ್ಕಾರ ಮಾಡುವುದು ಇತ್ಯಾದಿ ಕೃತಿ ಅರ್ಚಕರು ಹೇಳಿದಾಗ ಮಾಡುತ್ತಾರೆ. ಆಗ ಅರ್ಚಕರು ಬಾಲಿನೀಸ್ ಭಾಷೆಯಲ್ಲಿ ಮಂತ್ರ ಮತ್ತು ಪ್ರಾರ್ಥನೆ ಹೇಳುತ್ತಾರೆ. ಅನೇಕ ಬಾರಿ ಗಾಯತ್ರಿ ಮಂತ್ರವನ್ನೂ ಹೇಳುತ್ತಾರೆ. ಪೂಜೆಯ ಪದ್ಧತಿಗೆ ಇಲ್ಲಿಯ ಹಿಂದೂ ಅಭ್ಯಾಸಕರು ‘ಬಾಲಿನೀಸ ಆಗಮ’ ಎಂದು ಕರೆಯುತ್ತಾರೆ.
ಪೂಜೆ ಮಾಡುವುದಕ್ಕೆ ಸಾರೋಂಗ ಎಂಬ ವಿಶೇಷ ಬಟ್ಟೆ ಧರಿಸಿದ ಬಾಲಿನೀಸ್ ಹಿಂದೂ ಮಹಿಳೆ
೪. ಮಂತ್ರೋಚ್ಚಾರ ಮತ್ತು ಪೂಜಾವಿಧಿ ಇವುಗಳ ಮೇಲೆ ಟಿಬೇಟಿಯನ್ ಬೌದ್ಧರ ಪ್ರಭಾವ
ಅರ್ಚಕರು ಹೇಳಿದ ಗಾಯತ್ರಿ ಮಂತ್ರದಲ್ಲಿನ ಉಚ್ಚಾರಗಳು ಬೇರೆ ಬೇರೆಯಾಗಿರುತ್ತವೆ. ಅವುಗಳು ಕೇಳಲಿಕ್ಕೆ ಸಂಸ್ಕೃತವೂ ಅನಿಸುವುದಿಲ್ಲ. ಇಲ್ಲಿಯ ಹಿಂದೂಗಳು ಮಾಡುತ್ತಿರುವ ಪೂಜಾವಿಧಿ, ಮಂತ್ರ, ಹೂ ಇಡುವ ಪದ್ಧತಿ, ಘಂಟೆ ಬಾರಿಸುವ ಪದ್ಧತಿ ಇವೆಲ್ಲವೂ ಟಿಬೇಟಿಯನ್ ಬೌದ್ಧರಂತೆ ಇದೆ. ದೇವಸ್ಥಾನದಲ್ಲಿ ಯಾವುದೇ ವಿಗ್ರಹ ಇರುವುದಿಲ್ಲ. ಈ ಕುರಿತು ಇಲ್ಲಿಯ ಹಿಂದೂ ಅಭ್ಯಾಸಕರ ಅಭಿಪ್ರಾಯದಂತೆ, ಬಾಲಿ ಇಲ್ಲಿಯ ಹಿಂದೂ ನಿರ್ಗುಣ ಉಪಾಸನೆ ಮಾಡುತ್ತಾರೆ. ‘ಸಗುಣದಲ್ಲಿನ ಪ್ರತಿಮೆಯ ಪೂಜೆ ಮತ್ತು ನಿರ್ಗುಣದಲ್ಲಿನ ಈಶ್ವರೋಪಾಸನೆ ಇವುಗಳಲ್ಲಿ ಇರುವ ಅಚಿಂತ್ಯ ಉಪಾಸನೆ ಹೀಗೆ ಇಲ್ಲಿ ಪ್ರಚಲಿತವಾಗಿರಬೇಕು’, ಎಂದು ಇಲ್ಲಿಯ ಅಭ್ಯಾಸಕರಾದ ಡಾ. ಜಾನಿ ಅರ್ಥಾರವರು ಹೇಳಿದರು. ದೇವಸ್ಥಾನದ ಉತ್ಸವ ಸಮಯಕ್ಕೆ ದೇವಸ್ಥಾನದಲ್ಲಿ ಬಲಿ ಕೊಡುವುದು, ಮಾಂಸದ ನೈವೇದ್ಯ ತೋರಿಸುವುದು ಮತ್ತು ಮಾಂಸಾಹಾರ ಮಾಡುವುದು, ಇವು ಇಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಚಲಿತವಿದೆ.
೫. ಬೇಸಾಖಿ ದೇವಸ್ಥಾನಕ್ಕೆ ಭೇಟಿ ನೀಡುವ ಸಂದರ್ಭದಲ್ಲಿಯ ಅನುಭವಿಸಿದ ಅನುಭೂತಿ
೫ ಅ. ಅಗುಂಗ ಪರ್ವತದ ಮೇಲಿನ ಜ್ವಾಲಾಮುಖಿಯು ಜಾಗೃತಗೊಂಡಿದ್ದರಿಂದ ವರ್ಷವಿಡಿ ಮುಚ್ಚಿದ ಬೇಸಾಖಿ ದೇವಸ್ಥಾನ ಸದ್ಗುರು (ಸೌ.) ಅಂಜಲೀ ಗಾಡಗೀಳರವರು ಭೇಟಿ ನೀಡುವ ಮೊದಲು ಕೇವಲ ೨ ವಾರ ಮೊದಲು ತೆರೆಯುವುದು : ಬೇಸಾಖಿ ದೇವಸ್ಥಾನಕ್ಕೆ ಹೋದ ನಂತರ ತಿಳಿಯಿತೇನೆಂದರೆ, ಕಳೆದ ಒಂದು ವರ್ಷದಿಂದ ಅಲ್ಲಿನ ಅಗುಂಗ ಪರ್ವತದ ಮೇಲಿನ ಜ್ವಾಲಾಮುಖಿ ಜಾಗೃತವಾಗಿತ್ತು. ಆದರೆ ಕೇವಲ ೨ ವಾರಗಳಿಂದ ಅದು ಶಾಂತವಾಗಿದೆ. ಅಲ್ಲಿಯ ದೇವಸ್ಥಾನದ ಮುಖ್ಯ ಅರ್ಚಕರು ಸದ್ಗುರು ಕಾಕೂ ಅವರಿಗೆ ಹೇಳಿದರು, ‘ಅಮ್ಮ, ನೀವು ತುಂಬಾ ಭಾಗ್ಯವಂತರು, ಈ ದೇವಸ್ಥಾನವು ಕಳೆದ ಅನೇಕ ತಿಂಗಳುಗಳಿಂದ ಮುಚ್ಚಿತ್ತು. ೨ ವಾರಗಳ ಹಿಂದೆಯಷ್ಟೇ ತೆರೆಯಲಾಗಿದೆ ಮತ್ತು ಇಂದು ನೀವು ದೇವಸ್ಥಾನದ ಪವಿತ್ರ ಉತ್ಸವದ ದಿನದಂದು ಬಂದಿರುತ್ತೀರಿ’ ಎಂದು ಹೇಳಿದಾಗ ಸದ್ಗುರು ಕಾಕೂರವರು ‘ಈ ದೈವೀ ಪ್ರಯಾಣ ಯಾವಾಗ ಮಾಡಬೇಕು ಎಲ್ಲಿ ಮಾಡಬೇಕು, ಎಂಬುದನ್ನು ಈಶ್ವರನೇ ನಿರ್ಧರಿಸುತ್ತಾನೆ’ ಎಂದು ಹೇಳಿದರು.
೫ ಆ. ಜಾಗತಿಕ ಹಿಂದೂ ಪರಿಷತ್ತಿನ ಡಾ. ಜಾನಿ ಅರ್ಥಾರವರ ಸಹಾಯದಿಂದ ದೇವಸ್ಥಾನದಲ್ಲಿ ಹೋಗಲು ಸಾಧ್ಯವಾಯಿತು ಅಲ್ಲಿಯ ವಿಶೇಷ ಪೂಜೆಯನ್ನೂ ಮಾಡಲು ಸಿಗುವುದು : ನಾವು ಬೇಸಾಖಿ ದೇವಸ್ಥಾನಕ್ಕೆ ಭೇಟಿ ನೀಡಲು ನಿರ್ಧರಿಸಿದಾಗ, ಬಾಲಿ ಇಲ್ಲಿನ ಜಾಗತಿಕ ಹಿಂದೂ ಪರಿಷತ್ತಿನ ಡಾ. ಜಾನಿ ಅರ್ಥಾ ನಮಗೆ ಸಹಾಯಕ್ಕೆ ಬಂದರು. ಅವರು ದೇವಸ್ಥಾನದಲ್ಲಿ ನಮ್ಮೊಂದಿಗೆ ಬರಲು ಸಿದ್ಧರಾದರು. ಅವರು ದೇವಸ್ಥಾನದಲ್ಲಿ ಹೋಗಲು ನಮಗೆ ಸಹಾಯ ಮಾಡಿದರು. ಸಾಮಾನ್ಯವಾಗಿ ದೇವಸ್ಥಾನದಲ್ಲಿ ಹೋಗಬೇಕಿದ್ದರೆ, ಬಾಲಿನೀಸ ಜನರ ಪಾರಂಪರಿಕ ಉಡುಪು ಧರಿಸಬೇಕಾಗುತ್ತದೆ. ಆ ದಿನ ಡಾ. ಜಾನಿ ಅರ್ಥಾರವರ ಸಹಾಯದಿಂದ ನಮಗೆ ತೀರ ದೇವಸ್ಥಾನದ ಒಳಗಿನ ವರೆಗೆ ಹೋಗಲು ದೊರೆಯಿತು ಮತ್ತು ಸದ್ಗುರು ಕಾಕೂ ಅವರಿಂದ ಅವರು ವಿಶೇಷ ಪೂಜೆಯನ್ನೂ ಮಾಡಿಸಿಕೊಂಡರು.
Good informations
Good customs and sanathana dharma alive now also here. Hindu dharama is oldest dharma