ಮಜಾಪಾಹಿತ ಕಾಲದ ಶಂಖ ಮತ್ತು ಚಕ್ರದ ಆಕಾರದಲ್ಲಿನ ಬಾಗಿಲಿನ ‘ಹ್ಯಾಂಡಲ್’ಗಳು
ಮೋಜೋಕರ್ತಾ ಈ ನಗರವು ಇಂಡೋನೇಶಿಯಾದಲ್ಲಿನ ಎರಡನೇ ದೊಡ್ಡ ನಗರವಾಗಿದ್ದು ಸುರಾಬಾಯಾದಿಂದ ೭೦ ಕಿ.ಮೀ. ದೂರದಲ್ಲಿದೆ. ಒಂದು ಕಾಲದಲ್ಲಿ ಈ ನಗರವು ಸಂಪೂರ್ಣ ದಕ್ಷಿಣ ಪೂರ್ವ ಏಶಿಯಾದಲ್ಲಿ ಹರಡಿದ ‘ಮಜಾಪಾಹಿತ’ ಹಿಂದೂ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈಗ ಅಲ್ಲಿ ಕೇವಲ ಅದರ ಅವಶೇಷಗಳೇ ಉಳಿದಿವೆ. ಸಮುದ್ರದ ಹತ್ತಿರ ರಾಜಧಾನಿಯಿದ್ದರೆ, ವಿದೇಶದಿಂದ ಬರುವವರಿಗೆ ಆಕ್ರಮಣ ಮಾಡಲು ಸುಲಭವಾಗುತ್ತದೆ; ಎಂದು ಮಜಾಪಾಹಿತ ಜನರು ಅವರ ನಗರವನ್ನು ಸಮುದ್ರದಿಂದ ದೂರ ನಿರ್ಮಿಸಿದ್ದರು.
೧. ಒಂದು ಕಾಲದಲ್ಲಿ ‘ಬಿಲ್ವದ ಮರಗಳಿರುವ ಊರು’ಎಂದು ಪ್ರಚಲಿತವಾಗಿದ್ದ ಮೋಜೋಕರ್ತಾ ನಗರ
ಮೋಜೋಕರ್ತಾ ನಗರದ ಮೊದಲಿನ ಹೆಸರು ‘ಮಜಾಪಾಹಿತ’ ಆಗಿತ್ತು ! ಆ ಹೆಸರಿನಿಂದಲೇ ‘ಮಜಾಪಾಹಿತ ಸಾಮ್ರಾಜ್ಯ’ ಎಂದು ಹೆಸರು ಬಂದಿತು. ಇದರಲ್ಲಿನ ‘ಮಜಾ’ ಎಂದರೆ ಜಾವಾನೀಸ ಭಾಷೆಯಲ್ಲಿ ‘ಬಿಲ್ವದ ಮರ’. ಆ ಸ್ಥಳದಲ್ಲಿ ಬಿಲ್ವದ ಅನೇಕ ಮರಗಳಿದ್ದವು; ಆದುದರಿಂದ ಅಲ್ಲಿನ ಜನರು ಅದಕ್ಕೆ ‘ಬಿಲ್ವದ ಮರಗಳಿರುವ ಊರು’, ಎಂದು ಕರೆಯತೊಡಗಿದರು. ಅದಕ್ಕೂ ಹಿಂದೆ ಮಜಾಪಾಹಿತ ಊರಿನ ಹೆಸರು ‘ಬಿಲ್ವವಾಟಿಕಾ’ ಆಗಿತ್ತು !
೨. ಮಜಾಪಾಹಿತ ರಾಜ್ಯದ ರಾಜ್ಯಭಾಷೆ ಸಂಸ್ಕೃತವಾಗಿತ್ತು
ಮಜಾಪಾಹಿತ ಹಿಂದೂ ಸಾಮ್ರಾಜ್ಯವು ೧೨೯೩ ರಿಂದ ೧೫೨೭ ರ ಕಾಲಾವಧಿಯಲ್ಲಿ ಇಂಡೋನೇಶಿಯಾದಲ್ಲಿನ ಹಿಂದೂಗಳ ಬಹಳ ದೊಡ್ಡ ಸಾಮ್ರಜ್ಯವಾಗಿತ್ತು. ಒಂದು ಕಾಲದಲ್ಲಿ ಮಜಾಪಾಹಿತ ಈ ಹಿಂದೂ ಸಾಮ್ರಾಜ್ಯದ ಸಂಬಂಧವು ಭಾರತದ ಕರ್ನಾಟಕ, ಗೋವಾ ಈ ಪ್ರದೇಶಗಳೊಂದಿಗೆ ಹಾಗೆಯೇ ಚೀನ, ಕಂಬೋಜ (ಈಗಿನ ಕಂಬೋಡಿಯಾ), ಥಾಯಲ್ಯಾಂಡ್, ಬ್ರಹ್ಮದೇಶ (ಬರ್ಮಾ) ಮುಂತಾದ ದೇಶಗಳೊಂದಿಗಿತ್ತು. ‘ಸಂಸ್ಕೃತ’ವು ಅವರ ರಾಜ್ಯಭಾಷೆಯಾಗಿತ್ತು ಮತ್ತು ‘ಜಾವಾನೀಸ’ ಎಂಬುದು ಅವರ ಮಾತನಾಡುವ (ಆಡುಭಾಷೆ) ಭಾಷೆಯಾಗಿತ್ತು. ೧೩೫೦ ರಿಂದ ೧೩೮೯ ಈ ಕಾಲಾವಧಿಯಲ್ಲಿ ಮಜಾಪಾಹಿತದ ಅರಸರಾದ ಹ್ಯಾಮ್ ವಾರೂಕ್ ಇವರು ಅವರ ಸೇನಾಪತಿ ‘ಗಜಾ ಮದಾ’ ಇವರ ಸಹಾಯದಿಂದ ಥಾಯಲ್ಯಾಂಡ್, ಮಲೇಶಿಯಾ, ಫಿಲಿಪಿನ್ಸ, ಸಿಂಗಾಪೂರ, ಬೋರ್ನಿಯಾ ಮುಂತಾದ ಭೂಭಾಗಗಳನ್ನು ಗೆದ್ದಿದ್ದರು.
೩.’ಮನೆ ಎಂದರೆ ದೇವಲೋಕ ಎಂದು ಭಾವವಿಡುವ ಮತ್ತು ಜೀವನವನ್ನು ಆಧ್ಯಾತ್ಮಿಕರಣ ಮಾಡುವ ಜನರು
ಮಜಾಪಾಹಿತದ ಜನರು ಅವರ ದೈನಂದಿನ ಜೀವನದಲ್ಲಿನ ಎಲ್ಲ ವಿಷಯಗಳನ್ನು ಆಧ್ಯಾತ್ಮೀಕರಣ ಮಾಡಲು ಪ್ರಯತ್ನಿಸುತ್ತಿದ್ದರು. ಉದಾ. ಅವರು ಬಾಗಿಲಿನ ಬೀಗ ಮತ್ತು ಮುಖ್ಯದ್ವಾರವನ್ನು ಎಳೆಯುವಗೋಲಕ್ಕೆ ಭಗವಾನ ಶ್ರೀವಿಷ್ಣುವಿನ ಕೈಯಲ್ಲಿನ ಚಕ್ರ ಅಥವಾ ಶಂಖದಂತಹ ಆಕಾರವನ್ನು ಕೊಟ್ಟಿದ್ದರು. (ಛಾಯಾಚಿತ್ರ ನೋಡಿರಿ) ಮಜಾಪಾಹಿತದಜನರು ‘ಅವರ ಮನೆ ಎಂದರೆ ದೇವಲೋಕ’ ಮತ್ತು ತಾವು ಆ ಭಾವವನ್ನಿಟ್ಟು ಮನೆಯಲ್ಲಿ ಪ್ರವೇಶಿಸಬೇಕು ಎಂಬ ಶ್ರದ್ಧೆಯನ್ನಿಟ್ಟಿದ್ದರು.
೪. ‘ನಾವು ಅನೇಕರಾಗಿದ್ದರೂ ಸಂಘಟಿತರಾಗಿದ್ದೇವೆ’, ಎನ್ನುವ ಧ್ಯೇಯವಾಕ್ಯ
ಮಜಾಪಾಹಿತ ಸಾಮ್ರಾಜ್ಯದ ಅಧಿಪತ್ಯದಲ್ಲಿ ೨೦೦ ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅರಸರು ಸಂಘಟಿತರಾಗಿದ್ದರು. ಅದರಲ್ಲಿ ಅನೇಕ ಬೌದ್ಧ ಮತ್ತು ಕೆಲವು ಹಿಂದೂ ಅರಸರೂ ಇದ್ದರು. ಬೌದ್ಧ ಮತ್ತು ಹಿಂದೂ ಅರಸರು ಸಂಘಟಿತರಾಗಿದ್ದರ ಬಗ್ಗೆ ಆ ಸಮಯದಲ್ಲಿ ‘ಕಾಕಾವೀನ ಸುತಾಸೊಮಾ’ ಎಂಬ ಒಂದು ಕಾವ್ಯವನ್ನು ಬರೆಯಲಾಗಿತ್ತು. ಆ ಕಾವ್ಯದಲ್ಲಿನ ‘ಭಿನ್ನೇಕ ತುಂಗಳ ಏಕಾ’ ಎಂಬ ವಾಕ್ಯವು ಪ್ರಸ್ತುತ ಕಾಲದಲ್ಲಿ ಇಂಡೋನೇಶಿಯಾ ದೇಶದ ಧ್ಯೇಯವಾಕ್ಯವಾಗಿದೆ. ‘ನಾವು ಅನೇಕರಿದ್ದರೂ ಒಬ್ಬರೇ ಆಗಿದ್ದೇವೆ (ಅಂದರೆ ಸಂಘಟಿತರಾಗಿದ್ದೇವೆ)’, ಎಂದು ಈ ವಾಕ್ಯದ ಅರ್ಥವಾಗಿದೆ.
ಗರುಡನ ಮೇಲೆ ಆರೂಢನಾಗಿರುವ ಶ್ರೀ ವಿಷ್ಣುವಿನ ವಿಗ್ರಹ
೫. ಗರುಡನ ಮೇಲೆ ಆರೂಢನಾಗಿರುವ ಶ್ರೀ ವಿಷ್ಣುವಿನ ವಿಗ್ರಹವಿರುವ ಏಕಮೇವ ರಾಜ್ಯ
ಸಂಪೂರ್ಣ ಜಗತ್ತಿನಲ್ಲಿ ಗರುಡನ ಮೇಲೆ ಆರೂಢನಾಗಿರುವ ಶ್ರೀ ವಿಷ್ಣುವಿನ ವಿಗ್ರಹ ಮಜಾಪಾಹಿತದ ರಾಜಧಾನಿಯಾದ ‘ಮೋಜೋಕರ್ತಾ’ ಎಂಬಲ್ಲಿ ಮಾತ್ರವಿತ್ತು ಎಂದು ಹೇಳುತ್ತಾರೆ. ಮೋಜೋಕರ್ತಾ ಇಲ್ಲಿಂದ ೧೦೦ ಕಿ.ಮೀ. ದೂರದಲ್ಲಿ ಸುಮೇರು ಪರ್ವತವಿದೆ. ಅದರ ಹತ್ತಿರದಲ್ಲಿ ಪಾನಾಂಗುಗಾನ್ ಪರ್ವತವಿದೆ. ಅದೇ ಸ್ಥಳದಲ್ಲಿ ಉತ್ಖನನ ಮಾಡಿದಾಗ ದೊರೆತ ಮೂರ್ತಿಯಿದು.
ಮಜಾಪಾಹಿತ ಸಾಮ್ರಾಜ್ಯದ ಸಮಯದಲ್ಲಿನ ಕೊಳಗಳ ಅವಶೇಷಗಳು. ಇಟ್ಟಿಗೆಗಳಿಂದ ನಿರ್ಮಿಸಿರುವ ಈ ಕೊಳಗಳು ಇಂದಿಗೂ ಸುಸ್ಥಿತಿಯಲ್ಲಿವೆ !
೬. ಇಟ್ಟಿಗೆಗಳ ಮೇಲೆಯೂ ಸುಸಂಸ್ಕಾರಗಳನ್ನು ಮಾಡುವುದು
೧೩ನೆ ಶತಮಾನದಲ್ಲಿಮ ಮಜಾಪಾಹಿತ ಜನರು ಕೆಂಪು ಇಟ್ಟಿಗೆಗಳಿಂದ ಕಟ್ಟಡಗಳನ್ನು ನಿರ್ಮಿಸುತ್ತಿದ್ದರು. ಇಟ್ಟಿಗೆಗಳನ್ನು ನಿರ್ಮಿಸುವ ಕಲೆಯು ತುಂಬಾ ಸುಂದರವಾಗಿತ್ತು. ‘ಈ ಕಲೆಯು ಸಂಪೂರ್ಣ ಜಗಿತ್ತಿನಲ್ಲೇ ಕೇವಲ ಮಜಾಪಾಹಿತ ಜನರಿಗೆ ಕರಗತವಾಗಿತ್ತು’ ಎಂದು ನಂಬಲಾಗಿದೆ. ಇಟ್ಟಿಗೆಗಳನ್ನು ತಯಾರಿಸಲು ಜೇಡಿ ಮಣ್ಣನ್ನು ತಯಾರಿಸುವಾಗ ಮಂತ್ರೋಚ್ಛಾರದೊಂದಿಗೆ ಅದರ ಮೇಲೆ ಧಾರ್ಮಿಕ ವಿಧಿಗಳನ್ನು ಮತ್ತು ಒಳ್ಳೆಯ ಸಂಸ್ಕಾರಗಳನ್ನು ಮಾಡುತ್ತಿದ್ದರು. ಇದರಿಂದಾಗಿ ಆ ಇಟ್ಟಿಗೆಗಳಲ್ಲಿಯೂ ದೈವೀ ಸ್ಪಂದನಗಳು ನಿರ್ಮಾಣವಾಗುತ್ತಿದ್ದವು. ಇಟ್ಟಿಗೆಗಳನ್ನು ಕಟ್ಟುವಾಗ ಮಣ್ಣು ಅಥವಾ ಸುಣ್ಣವನ್ನು ಬಳಸಲಾಗುತ್ತಿರಲಿಲ್ಲ. ೨ ಇಟ್ಟಿಗೆಗಳನ್ನು ಒಂದಕ್ಕೊಂದು ಉಜ್ಜಿದಾಗ ಘರ್ಷಣೆಯಿಂದ ಕೆಳಗಿರುವ ಇಟ್ಟಿಗೆಗಳ ಮೇಲೆ ಸ್ವಲ್ಪ ಮಣ್ಣು ಬಿದ್ದು, ಅದರ ಮೇಲೆ ಸ್ವಲ್ಪ ನೀರು ಹಾಕಿದಾಗ ಕೆಳಗಿರುವ ಇಟ್ಟಿಗೆಗಳು ಕಟ್ಟಿದಂತೆ ಆಗುತ್ತಿದ್ದವು. ೭೦೦ ವರ್ಷಗಳು ಕಳೆದರೂ ಕೂಡ ಇಂದಿಗೂ ಆ ಇಟ್ಟಿಗೆಗಳು ನಮಗೆ ನೋಡಲು ಸಿಗುತ್ತವೆ. ಇದರಿಂದಾಗಿ ಧಾರ್ಮಿಕ ವಿಧಿಗಳ ಮಹತ್ವವೂ ನಮಗೆ ತಿಳಿಯುತ್ತದೆ.
ಸದ್ಗುರು (ಸೌ.) ಅಂಜಲಿ ಗಾಡಗೀಳ್, ಇಂಡೋನೇಶಿಯಾ