೧. ಇಂಡೋನೇಶಿಯಾದಲ್ಲಿ ಬಳಸಲಾಗುತ್ತಿರುವ ಸಂಸ್ಕೃತಕ್ಕೆ ಸಂಬಂಧಿಸಿದ ಕೆಲವು ಸರ್ವಸಾಮಾನ್ಯ ಶಬ್ದಗಳು
ಸಂಸ್ಕೃತವನ್ನಾಧರಿಸಿದ ಶಬ್ದಗಳು | ಇಂಡೋನೇಶಿಯಾದಲ್ಲಿ ಬಳಸಲಾಗುತ್ತಿರುವ ಶಬ್ದಗಳು |
೧. ನಿವಾಸ ಸ್ಥಾನ | ಆಶ್ರಮಾ |
೨. ಪತಿ | ಸ್ವಾಮಿ |
೩. ಪತ್ನಿ | ಸ್ತ್ರೀ |
೪. ಸ್ತ್ರೀ | ವನಿತಾ |
೫.ಪುರುಷ | ಪ್ರಿಯ |
೬. ನಟ | ಸೂತ್ರಧಾರ |
೭.ಸೈನಿಕ | ಪರವೀರ |
೮. ವಾಹನಗಳ ಅಂಗಡಿ | ವಾಹನಾ |
೯. ಪರಿವಹನ | ಪರಿವಿಸತಾ |
೧೦. ಶಿಬಿರ | ಲೋಕಕಾರ್ಯ |
೧೧. ಮಹಿಳಾ ಮಂಡಲ | ಧರ್ಮ ವನಿತಾ |
೧೨. ಗ್ರಂಥಾಲಯ | ಪೇರಪುಸ್ತಕಾನ್ |
೨. ನಗರಗಳ ಮತ್ತು ವ್ಯಕ್ತಿಗಳ ಹೆಸರು ಕೂಡ ಸಂಸ್ಕೃತದಲ್ಲಿರುವುದು
ಇಂಡೋನೇಶಿಯಾದಲ್ಲಿ ನಗರಗಳ ಹೆಸರು ಕೂಡ ಸುಂದರವಾಗಿವೆ. ಇಂಡೋನೇಶಿಯಾದ ರಾಜಧಾನಿ ‘ಜಕಾರ್ತಾ’ ಎಂಬ ನಗರದ ನಿಜವಾದ ಹೆಸರು ‘ಜಯಕರ್ತಾ’ ! ಇಂಡೋನೇಶಿಯಾದ ಸಾಂಸ್ಕೃತಿಕ ರಾಜಧಾನಿ ‘ಯೋಗ್ಯಕರ್ತಾ’. ಈ ನಗರದ ವಾಯವ್ಯ ದಿಕ್ಕಿಗೆ ‘ಪೂರ್ವಕರ್ತಾ’ ಎಂಬ ನಗರವಿದೆ. ಪೂರ್ವದಿಕ್ಕಿಗೆ ‘ಸೂರಕರ್ತಾ’ ಎಂಬ ನಗರವಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ. ೮೭ ರಷ್ಟು ಜನಸಂಖ್ಯೆ ಮುಸಲ್ಮಾನರಿರುವ ಇಂಡೋನೇಶಿಯಾ ಇದು ಜಗತ್ತಿನ ಎಲ್ಲಕ್ಕಿಂತ ದೊಡ್ಡ ಇಸ್ಲ್ಮಾಮೀ ದೇಶವಾಗಿದೆ. ಹೀಗಿದ್ದರೂ ಅಲ್ಲಿಯ ಜನರ ಹೆಸರುಗಳು ಯುಧಿಷ್ಠಿರ, ಭೀಮಾ, ಕೃಷ್ಣ, ವಾಯು, ಸೂರ್ಯಾ, ಆದಿಪುತ್ರೊ, ಶಿಖಂಡಿ, ಭೈರವಾ, ಸೂರ್ಯಧರ್ಮಾ, ಅರ್ಜುನಾ ಹೀಗಿವೆ. ‘ವಿಷ್ಣು’ ಎಂಬ ಹೆಸರು ಇಲ್ಲಿ ಸರ್ವಸಾಮಾನ್ಯವಾಗಿದೆ.
೩. ಭಗವಾನ ಶ್ರೀವಿಷ್ಣುವಿನ ವಾಹನವಾದ ‘ಗರುಡ’ ಇಂಡೋನೇಶಿಯಾದ ರಾಷ್ಟ್ರೀಯ ಪಕ್ಷಿ !
‘ಭಿನ್ನೆಕಾ ತುಂಗಳ ಏಕಾ’ ಎಂಬುದು ಇಂಡೋನೇಶಿಯಾದ ಧ್ಯೇಯವಾಕ್ಯ ವಾಗಿದೆ. ಇದರ ಅರ್ಥ, ‘ಕಾಣಿಸುವುದು ಅನೇಕ, ಇರುವುದು ಒಂದು’ ! ಇಂಡೋನೇಶಿಯಾದ ರಾಷ್ಟ್ರೀಯ ಲಾಂಛನ ‘ಗರುಡ’ವಾಗಿದೆ. ಅವರ ರಾಷ್ಟ್ರೀಯ ವಿಮಾನ ಇಲಾಖೆಯ ಹೆಸರು ಸಹ ‘ಗರುಡಾ ಇಂಡೋನೇಶಿಯಾ’ ಎಂದಿದೆ.’ – (ಸದ್ಗುರು) ಸೌ. ಅಂಜಲಿ ಗಾಡಗೀಳ, ಇಂಡೋನೇಶಿಯಾ.