ಪ್ರಭು ಶ್ರೀರಾಮನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !

ರಾಮಾಯಣವು ಭಾರತದ ಇತಿಹಾಸದ ಅವಿಭಾಜ್ಯ ಅಂಗ. ಪ್ರಗತಿಪರರು ರಾಮಾಯಣದ ಅಸ್ತಿತ್ವವನ್ನು ಅಲ್ಲಗಳೆಯಲು ಎಷ್ಟೇ ಪ್ರಯತ್ನಪಟ್ಟರೂ, ರಾಮಾಯಣ ಕಾಲದ ಅನೇಕ ಕುರುಹುಗಳು ಇಂದಿಗೂ ನಮಗೆ ಆಯಾ ಸಮಯದ ಸಾಕ್ಷ್ಯವನ್ನು ನೀಡುತ್ತವೆ. ರಾಮಾಯಣವು ತ್ರೇತಾಯುಗದಲ್ಲಿ ಆಗಿಹೋಗಿದ್ದರೂ ಅದರಿಂದ ಹಿಂದೂ ಸಂಸ್ಕೃತಿಯ ಮಹಿಮೆ, ಪ್ರಾಚೀನತೆ ನಮ್ಮ ಗಮನಕ್ಕೆ ಬರುತ್ತದೆ. ಈ ಲೇಖನದಲ್ಲಿ ಶ್ರೀಲಂಕಾ ದ್ವೀಪದಲ್ಲಿರುವ ರಾಮಾಯಣ ಕಾಲದ ಸ್ಥಳಗಳ ಮಾಹಿತಿಯನ್ನು ನೀಡುವ ಪ್ರಯತ್ನವನ್ನು ಮಾಡಿದ್ದೇವೆ.

ಸೀತಾಮಾತೆಯು ಅಗ್ನಿಪ್ರವೇಶ ಮಾಡಿದ ಸ್ಥಳದಲ್ಲಿರುವ ಅಶ್ವತ್ಥ ಮರ ಮತ್ತು ದೇವಸ್ಥಾನ. ಇದು ಲಂಕೆಯ ಮಧ್ಯಪ್ರಾಂತದ ಅತಿ ಎತ್ತರದ ಬೆಟ್ಟದ ಮೇಲಿದೆ.

ರಾವಣನ ಹೆಂಡತಿ ಮಂಡೋದರಿಯ ಅರಮನೆಯ ಅವಶೇಷಗಳು (ಗುರುಲುಪೋಥಾ) ! ಸೀತೆಯನ್ನು ಅಪಹರಿಸಿ ರಾವಣನು ಇದೇ ಅರಮನೆಯಲ್ಲಿ ಇರಿಸಿದ್ದನು.

ಮಂಡೋದರಿಯ ಅರಮನೆಯ ದಕ್ಷಿಣ ದಿಕ್ಕಿನಲ್ಲಿರುವ ಈ ಮೆಟ್ಟಿಲುಗಳನ್ನೇ ಇಳಿದು ಸೀತಾ ಮಾತೆಯು ಸ್ನಾನಕ್ಕೆಂದು ಅಲ್ಲಿರುವ ನದಿತೀರಕ್ಕೆ ಹೋಗುತ್ತಿದ್ದರು !

ಸೀತಾಮಾತೆಯನ್ನು ಹುಡುಕಿ ಬಂದ ರಾಮಭಕ್ತ ಹನುಮಂತನು, ಸೀತೆಯು ಕುಳಿತಿದ್ದ ಅಶೋಕವೃಕ್ಷದ ಮೇಲೆ ಹಾರಲು ಇದೇ ಬಂಡೆಕಲ್ಲಿನ ಮೇಲೆ ಕಾಲಿಟ್ಟಿದ್ದು. ಅಲ್ಲಿ ಹನುಮಂತನ ಹೆಜ್ಜೆ ಗುರುತಿದೆ !

ಸರಯೂ ನದೀತೀರದಲ್ಲಿರುವ ಅಯೋಧ್ಯೆ, ಮನು ನಿರ್ಮಿಸಿದ ನಗರ…

ತ್ರೇತಾಯುಗದಲ್ಲಿ ಶ್ರೀರಾಮನು ಅವನ ಪ್ರಜೆಗಳೊಂದಿಗೆ ಇದೇ ಸರಯೂ ನದಿಯಲ್ಲಿ ಜಲಸಮಾಧಿಯನ್ನು ಪ್ರವೇಶಿಸಿದ್ದನು. ಕಲಿಯುಗದಲ್ಲಿ ರಾಮಜನ್ಮಭೂಮಿ ಹೋರಾಟಕ್ಕೆ ೧೯೯೦ ರಲ್ಲಿ ಅಯೋಧ್ಯೆಗೆ ಬಂದಿದ್ದ ಕರಸೇವಕರ ಮೇಲೆ ಅಂದಿನ ಮುಖ್ಯಮಂತ್ರಿಗಳಾದ ಮುಲಾಯಂ ಸಿಂಗ್ ಯಾದವರು ಬಂದೂಕು ಚಲಾಯಿಸಲು ಆದೇಶ ನೀಡಿದ್ದರು. ಆ ಕರಸೇವಕರ ಮೃತದೇಹಗಳನ್ನು ಇದೇ ಸರಯೂ ನದಿಯಲ್ಲಿ ವಿಸರ್ಜಿಸಲಾಯಿತು!

ಗುಡಿಸಲಿನಲ್ಲಿರುವ ಶ್ರೀರಾಮ !

ಭಾರತದ ರಾಜಾ, ರಾವಣನ ನಾಶ ಮಾಡಿ ಲಂಕೆಯನ್ನು ಗೆದ್ದು ಬಂದ ಅವತಾರ, ಶ್ರೀರಾಮನು ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಇಂದು ಈ ಸ್ಥಿತಿಯಲ್ಲಿದ್ದಾನೆ ! ಅನೇಕ ವರ್ಷಗಳಿಂದ ಇದೇ ಗುಡಿಸಿಲಿನಲ್ಲಿ ವಾಸವಿದೆ ! ಇದಕ್ಕಿಂತ ದೊಡ್ಡ ಅವಮಾನ ಇರಬಹುದೇ? ಹಿಂದೂಗಳ ಆರಾಧ್ಯದೇವತೆ ಈ ರೀತಿ ಗಾಳಿ, ಮಳೆ, ಬಿಸಿಲು ಸಹಿಸಬೇಕಾಗಿರುವುದು ನಮಗೆ ಲಜ್ಜಾಸ್ಪದ ಅಲ್ಲವೇ?

2 thoughts on “ಪ್ರಭು ಶ್ರೀರಾಮನ ಅವತಾರಕ್ಕೆ ಸಂಬಂಧಿಸಿದ ಸ್ಥಳಗಳ ದರ್ಶನ !”

  1. Wonderful knowledge without History we can’t make history know ur history make new history or repeat history.

    Reply

Leave a Comment