೧. ಮಹರ್ಷಿಗಳು ಹೇಳಿದ ಪರಿಹಾರ (ಉಪಾಯ)
ಮಹರ್ಷಿಗಳು, ‘ಇಂದು ಸೋಮವಾರವಾಗಿರುವುದರಿಂದ ಸಾಯಂಕಾಲ ೫ ರಿಂದ ೬ ರ ಸಮಯದಲ್ಲಿ ಶಿವನ ದೇವಸ್ಥಾನಕ್ಕೆ ಹೋಗಿ ದರ್ಶನವನ್ನು ಪಡೆಯಬೇಕು. ಮತ್ತು ಇಂದು ಕಾಲಭೈರವನ ದೇವಸ್ಥಾನಕ್ಕೆ ಹೋಗಿ ಅವನಿಗೆ ೯ ಪ್ರದಕ್ಷಿಣೆಗಳನ್ನು ಹಾಕಬೇಕು ಮತ್ತು ೨೧ ಗೊಂಡಬಿಗಳಿಂದ ಮಾಲೆಯನ್ನು ತಯಾರಿಸಿ ಅರ್ಪಿಸಬೇಕು’ ಎಂದರು. (ಛಾಯಾಚಿತ್ರ ಕ್ರ. ೧)
೨೧ ಗೊಡಂಬಿಯ ಮಾಲೆಯನ್ನು ಕಾಲಭೈರವನಿಗೆ ಅರ್ಪಿಸುತ್ತಿರುವ ಸದ್ಗುರು (ಸೌ.) ಅಂಜಲಿ ಗಾಡಗೀಳ
೧ ಅ. ಕಾಲಭೈರವನ ದರ್ಶನವನ್ನು ಪಡೆಯುವುದು : ಮಹರ್ಷಿಗಳ ಆಜ್ಞೆಗನುಸಾರ ನಾವು ಜಯಪುರದ ಸಮೀಪವಿರುವ ಆಮೇರವೆಂಬ ಊರಿನಲ್ಲಿ ‘ಜಯಗಡ ಕೋಟೆ’ಯಲ್ಲಿನ ೧ ಸಾವಿರ ವರ್ಷಗಳ ಹಿಂದೆ ಸ್ಥಾಪಿಸಲಾದ ಕಾಲಭೈರವನ ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡಿದೆವು. ಅವನಿಗೆ ೯ ಪ್ರದಕ್ಷಿಣೆಗಳನ್ನು ಹಾಕಿದೆನು ಮತ್ತು ೨೧ ಗೊಂಡಬಿಗಳಿಂದ ತಯಾರಿಸಿದ ಮಾಲೆಯನ್ನು ಅರ್ಪಿಸಿದೆನು. (ಆ ಕಾಲದ ರಾಜನು ಕೋಟೆಯನ್ನು ಸ್ಥಾಪಿಸುವಾಗ ಈ ಕಾಲಭೈರವನ ಸ್ಥಾಪನೆಯನ್ನು ಮಾಡಿದ್ದನು. ಅಂದಿನಿಂದ ಇಂದಿನವರೆಗೂ ೪೦ ರಾಜರು ಆಗಿ ಹೋದರು; ಆದರೆ ರಕ್ಷಣೆಗಾಗಿ ಕಾಲಭೈರವನಿರುವುದರಿಂದ ಒಮ್ಮೆಯೂ ಯುದ್ಧ ವಾಗಲಿಲ್ಲ.) ಪೂ. ಡಾ. ಚಾರುದತ್ತ ಪಿಂಗಳೆಯವರಿಗೆ, ‘ಈ ಕಾಲಭೈರವನಿಗೂ ರಾಜಸ್ಥಾನದಲ್ಲಿನ ಸವಾಯಿ ಮಾಧೋಪುರದಲ್ಲಿನ ತ್ರಿನೇತ್ರ ಗಣಪತಿಯ ಹಾಗೆ ತ್ರಿನೇತ್ರಗಳಿವೆ’, ಎಂದು ಮೂರ್ತಿಯ ಸಮೀಪ ಹೋದಾಗ ಗಮನಕ್ಕೆ ಬಂತು. ಗರ್ಭಗುಡಿಯ ಹೊರಗೆ ಬಂದ ನಂತರ ನನ್ನ ಗಮನ ಅಲ್ಲಿ ಗೋಡೆಯ ಮೇಲೆ ಚಿತ್ರಿಸಲಾದ ಕಾಲಭೈರವನ ಪ್ರಾಚೀನ ಚಿತ್ರ ದೆಡೆಗೆ ಹೋಯಿತು. ಅದರಲ್ಲಿ ಕಾಲಭೈರವನಿಗೆ ೨೧ ಮಾನವಿ ರುಂಡದ ಮಾಲೆಯನ್ನು ಹಾಕಲಾಗಿತ್ತು. (ಛಾಯಾಚಿತ್ರ ಕ್ರ. ೨)
ಕಾಲಭೈರವನ ಪ್ರಾಚೀನ ಚಿತ್ರ
೧ ಅ ೧. ದೊರೆತ ಸಾಕ್ಷಿ
ಅ. ಈ ದೇವಸ್ಥಾನವು ಎತ್ತರದ ಪರ್ವತದ ಮೇಲಿರುವ ಕೋಟೆಯ ಒಳಗಿರುವುದರಿಂದ ಬೆಳಗ್ಗೆ ೯ ಗಂಟೆಗೆ ತೆರೆಯುತ್ತದೆ. ನಾವೆಲ್ಲರೂ ಬೆಳಗ್ಗೆ ೮.೪೫ ಕ್ಕೆ ಅಲ್ಲಿಗೆ ತಲುಪಿದೆವು. ಕೋಟೆಯ ಕಾವಲುಗಾರನು ನಮಗೆ ‘ಕೇವಲ ನೀವು ಒಳಗೆ ಹೋಗಬಹುದು’, ಎಂದು ಹೇಳಿ ನಮಗೆ ೬ ಜನರಿಗೆ ಕೋಟೆಯ ಒಳಗಡೆಗೆ ಬಿಟ್ಟನು.
ಆ. ಕಾಲಭೈರವನ ದೇವಸ್ಥಾನದ ಸಮೀಪ ಹೋಗುವಾಗ ಒಂದು ಕಪ್ಪು ನಾಯಿ ದೇವಸ್ಥಾನದಿಂದ ನಮ್ಮ ಕಡೆಗೆ ಬಂದಿತು. (ಕಪ್ಪು ನಾಯಿ ಕಾಲಭೈರವನ ವಾಹನವಾಗಿದೆ.) (ಛಾಯಾಚಿತ್ರ ಕ್ರ. ೩)
ಕಾಲಭೈರವನ ದೇವಸ್ಥಾನದ ಬಳಿ ಬಂದ ಕಪ್ಪು ನಾಯಿ
೧ ಅ. ‘ಶ್ರೀ ತಾಡಕೇಶ್ವರ ಮಹಾದೇವರ ದರ್ಶನ ಪಡೆಯುವುದು : ಸಾಯಂಕಾಲ ೫ ಗಂಟೆಗೆ ನಾವು ಜಯಪುರದಲ್ಲಿನ ಪ್ರಾಚೀನ ಶಿವಮಂದಿರ ಶ್ರೀ ತಾಡಕೇಶ್ವರ ಮಹಾದೇವರ ದೇವಸ್ಥಾನಕ್ಕೆ ಹೋದೆವು.
ಶ್ರೀ ತಾಡಕೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಿರುವ ಪೂ. ಡಾ. ಚಾರುದತ್ತ ಪಿಂಗಳೆ
ನಮ್ಮೊಂದಿಗೆ ಪೂ. ಡಾ. ಚಾರುದತ್ತ ಪಿಂಗಳೆಯವರೂ ಇದ್ದರು. ನಾನು ಮತ್ತು ಪೂ. ಡಾ. ಚಾರುದತ್ತ ಪಿಂಗಳೆಯವರು ಅಲ್ಲಿನ ಸ್ವಯಂಭೂ ಶಿವಲಿಂಗದ ಮೇಲೆ ಜಲಾಭಿಷೇಕವನ್ನು ಮಾಡಿದೆವು ಮತ್ತು ಬಿಲ್ವಾರ್ಚನೆ ಪೂಜೆಯನ್ನು ಮಾಡಿದೆವು. (ಛಾಯಾಚಿತ್ರ ಕ್ರ. ೪) ದೇವಸ್ಥಾನವಿರುವ ಸ್ಥಳದಲ್ಲಿ ಮೊದಲಿಗೆ ಈಚಲು ವೃಕ್ಷ (ಮರಾಠಿಯಲ್ಲಿ ತಾಡ ವೃಕ್ಷ ಎನ್ನುತ್ತಾರೆ.) ಇದ್ದುದರಿಂದ ಈ ದೇವಸ್ಥಾನಕ್ಕೆ ‘ಶ್ರೀ ತಾಡಕೇಶ್ವರ ಮಹಾದೇವ’, ಎಂದು ಹೆಸರು ಬಂದಿದೆ. (ಮಹರ್ಷಿಗಳು ನಾಡಿಭವಿಷ್ಯವನ್ನು ಈಚಲು (ತಾಡ) ವೃಕ್ಷದ ಎಲೆಯ ಮೇಲೆ ಬರೆದಿದ್ದಾರೆ ಮತ್ತು ದೇವಸ್ಥಾನದ ಹೆಸರು ಸಹ ತಾಡಕೇಶ್ವರವಾಗಿದೆ. ಈ ಮಾಧ್ಯಮದಿಂದ ಮಹರ್ಷಿಗಳು ನಮಗೆ ಸಾಕ್ಷಿಯನ್ನು ನೀಡಿದರು.) – (ಸದ್ಗುರು) ಸೌ. ಅಂಜಲಿ ಗಾಡಗೀಳ.