೨೧ ಡಿಸೆಂಬರ್ ೨೦೧೬ – ತ್ರಿನೇತ್ರ ಗಣಪತಿ, ರಣಥಂಭೋರ ಕೋಟೆ, ರಾಜಸ್ಥಾನ ರಣಥಂಭೋರ ಕೋಟೆಯೆಡೆಗೆ ಪ್ರಯಾಣ : ಇಂದು ಮಧ್ಯಾಹ್ನ ನಾವು ತ್ರಿನೇತ್ರ ಗಣಪತಿಯ ದರ್ಶನ ಪಡೆಯಲು ಜಯಪೂರದಿಂದ ಸವಾಯಿ ಮಾಧೋಪುರದಲ್ಲಿನ ರಣಥಂಭೋರ ಕೋಟೆಯೆಡೆಗೆ ಪ್ರಯಾಣ ಮಾಡಿದೆವು. ಚತುಷ್ಚಕ್ರದಿಂದ ಇದು ಐದು ಗಂಟೆಯ ಪ್ರವಾಸವಾಗಿದೆ. ನಾವು ನಾಳೆ ಕೋಟೆಯಲ್ಲಿನ ತ್ರಿನೇತ್ರ ಗಣಪತಿಯ ದರ್ಶನವನ್ನು ಪಡೆಯಲಿದ್ದೇವೆ.’ – (ಸದ್ಗುರು) ಸೌ. ಅಂಜಲಿ ಗಾಡಗೀಳ
೨೨ ಡಿಸೆಂಬರ್ ೨೦೧೬ – ಸವಾಯಿಮಾಧೋಪುರ, ರಾಜಸ್ಥಾನ
ತ್ರಿನೇತ್ರ ಗಣಪತಿಯ ದರ್ಶನ
ತ್ರಿನೇತ್ರ ಗಣಪತಿಯ ದೇವಸ್ಥಾನ
ಇಂದು ಬೆಳಗ್ಗೆ ೧೧ ಗಂಟೆಗೆ ನಾವು ಇಲ್ಲಿನ ರಣಥಂಭೋರ ಕೋಟೆಯಲ್ಲಿನ ತ್ರಿನೇತ್ರ ಗಣಪತಿಯ ದರ್ಶನ ಪಡೆಯಲು ಹೊರಟೆವು. ಈ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿಯೂ ನಾವು ತ್ರಿನೇತ್ರ ಗಣಪತಿಯ ದರ್ಶನವನ್ನು ಪಡೆದಿದ್ದೆವು. ಆಗ ಮಹರ್ಷಿಗಳು ನಮಗೆ ಇಲ್ಲಿನ ಗಣಪತಿಯ ಪ್ರತೀಕವೆಂದು ೪ ಕಲ್ಲುಗಳನ್ನು ತೆಗೆದುಕೊಳ್ಳಲು ಹೇಳಿದರು. ಆಗ ನಾವು ಕಲ್ಲುಗಳನ್ನು ತೆಗೆದುಕೊಂಡು ಅವುಗಳಿಗೆ ದೇವಸ್ಥಾನದಲ್ಲಿನ ಸಿಂಧೂರವನ್ನು ಪೂಜಾರಿಗಳ ಕಡೆಯಿಂದ ಹಚ್ಚಿಸಿದೆವು. ಈ ಸಮಯದಲ್ಲಿ ದರ್ಶನವನ್ನು ಪಡೆಯುವಾಗ ನಮಗೆ ಮಹರ್ಷಿಗಳು ಈ ಕಲ್ಲಿನ ಗಣಪತಿಯನ್ನು ಜೊತೆಗೆ ತೆಗೆದುಕೊಂಡು ಹೋಗಲು ಹೇಳಿದ್ದರು. ಆ ರೀತಿಯಲ್ಲಿ ನಾವು ಈ ಗಣಪತಿಯನ್ನು ತೆಗೆದುಕೊಂಡು ದೇವಸ್ಥಾನ ತಲುಪಿದ ತಕ್ಷಣ ನಮಗೆ ೨ ದೈವಿ ಸಾಕ್ಷಿಗಳು ದೊರೆತವು. ಅವು ಮುಂದಿನ ರೀತಿಯಲ್ಲಿವೆ.
ಅ. ನಾವು ದೇವಸ್ಥಾನದೊಳಗೆ ಹೆಜ್ಜೆಯನ್ನಿಟ್ಟೆವು ಮತ್ತು ಅದೇ ಕ್ಷಣ ದೇವಸ್ಥಾನದಲ್ಲಿನ ಮಂಗಲವಾದ್ಯಗಳು ಮೊಳಗತೊಡಗಿದವು.
ಆ. ಆ ಕಲ್ಲಿನ ಗಣಪತಿಯನ್ನು ದೇವಸ್ಥಾನದ ಪೂಜಾರಿಗಳಿಗೆ ನೀಡಿದೆವು ಮತ್ತು ಅವುಗಳನ್ನು ತ್ರಿನೇತ್ರ ಗಣಪತಿಯ ಚರಣಗಳಲ್ಲಿಡಲು ಹೇಳಿದೆವು. ಅವರು ಅವುಗಳನ್ನು ಗಣಪತಿಯ ಚರಣಗಳಲ್ಲಿಟ್ಟರು ಮತ್ತು ಅದೇ ಕ್ಷಣ ದೇವಸ್ಥಾನದಲ್ಲಿ ಗಂಟೆಗಳು ಬಾರಿಸಿದವು. ಈ ರೀತಿಯಲ್ಲಿ ಈ ೪ ಗಣಪತಿ ನಮಗೆ ಲಾಭದಾಯಕ ವಾಗಿವೆ ಎಂಬುದರ ಸಾಕ್ಷಿಯನ್ನು ದೇವರು ನೀಡಿದರು. ಪೂಜಾರಿಗಳು ಈ ಗಣಪತಿಗಳಿಗೆ ಆರತಿಯನ್ನು ಮಾಡಿದರು. ಮುಂದೆ ಈ ೪ ಗಣಪತಿಗಳನ್ನು ಯಾವ ಯಾವ ಆಶ್ರಮಗಳಲ್ಲಿಡಲು ಮಹರ್ಷಿಗಳು ಹೇಳುವರೋ ಅಲ್ಲಿ ಇಡುವೆವು. ಈ ಗಣಪತಿಗಳ ಮೇಲೆ ಜಯಪುರದ ಓರ್ವ ಶಿಲ್ಪಕಾರನಿಂದ ತ್ರಿನೇತ್ರ ಗಣಪತಿಯ ರೀತಿಯಲ್ಲಿ ತ್ರಿನೇತ್ರಗಳನ್ನು ಕೆತ್ತಿಸಲಾಯಿತು.
ತ್ರಿನೇತ್ರ ಗಣಪತಿಯ ಚರಣಗಳಲ್ಲಿಟ್ಟ ಕಲ್ಲಿನ ಗಣಪತಿ
ಗಣಪತಿಯ ಪ್ರತೀಕವಾಗಿರುವ ಕಲ್ಲಿಗೆ ಪೂಜಾರಿಗಳಿಂದ ಸಿಂಧೂರ ಹಚ್ಚಿಸಿಕೊಳ್ಳುತ್ತಿರುವ ಸದ್ಗುರು (ಸೌ.) ಅಂಜಲಿ ಗಾಡಗೀಳ
ನರಸಿಂಹನ ದರ್ಶನ
ನರಸಿಂಹನ ಮೂರ್ತಿ
ಸಾಯಂಕಾಲ ನಾವು ಮಹರ್ಷಿಗಳು ಹೇಳಿದಂತೆ ಇಲ್ಲಿಂದ ೨೫ ಕಿ.ಮೀ. ದೂರದಲ್ಲಿರುವ ನರಸಿಂಹ ದೇವರ ದರ್ಶನವನ್ನು ಪಡೆಯಲು ಹೋದೆವು. ‘ಹೇ ನರಸಿಂಹಾ, ಯಾವ ರೀತಿಯಲ್ಲಿ ನೀನು ಉಗ್ರ ರೂಪವನ್ನು ತಾಳಿ ಹಿರಣ್ಯಕಶ್ಯಪು ಎಂಬ ದೈತ್ಯನ ಸಂಹಾರ ಮಾಡಿದೆಯೋ, ಅದೇ ರೀತಿಯಲ್ಲಿ ಈಗ ಬೇಗನೆ ಪ್ರಕಟವಾಗಿ ಅಧರ್ಮದಿಂದ ವರ್ತಿಸುವ ದುಷ್ಟ ಪ್ರವೃತ್ತಿಯ ನಿರ್ಮೂಲನೆ ಮಾಡು’, ಎಂಬ ಪ್ರಾರ್ಥನೆಯನ್ನು ಮಾಡಲು ಮಹರ್ಷಿಗಳು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದರು. ಈ ದೇವಸ್ಥಾನವನ್ನು ಸವಾಯಿ ಮಾಧೋಸಿಂಗನೆಂಬ ರಾಜನು ಸಾಧಾರಣ ೫೦೦ ವರ್ಷಗಳ ಹಿಂದೆ ಕಟ್ಟಿಸಿದ್ದನು. ಇದು ಜಾಗೃತ ದೇವಸ್ಥಾನವಾಗಿದೆ. ಈ ನರಸಿಂಹನ ಜಾಗೃತವಿರುವುದರ ಬಗ್ಗೆ ಮುಂದಿನಂತೆ ಅನುಭೂತಿ ಬಂದಿತ್ತು.
೨೦೦ ವರ್ಷಗಳ ಹಿಂದೆ ದೇವಾಲಯದ ಪೂಜಾರಿಯು ಭಾಂಗ್ ಕುಡಿದ ಅಮಲಿನಲ್ಲಿ ರಾತ್ರಿ ೧೨ ಗಂಟೆಗೆ ದೇವಸ್ಥಾನಕ್ಕೆ ಆರತಿ ಮಾಡಲು ಹೋದರು. ಆಗ ಪೂಜಾರಿಗೆ ಕಾವಲುಗಾರನು ‘ಇಷ್ಟು ರಾತ್ರಿ ದೇವರು ಎಚ್ಚರವಿರುತ್ತಾರೆಯೇ ? ಎಂದು ಕೇಳಿದನು. ಆಗ ಪೂಜಾರಿಯು ಅವನಿಗೆ ಅಮಲಿನಲ್ಲಿಯೇ, ‘ಹೌದು, ಇದು ಜಾಗೃತ ಮೂರ್ತಿಯಾಗಿದೆ ಎಂದು ಹೇಳಿದರು. ಹೀಗೆ ಹೇಳಿ ಹೋದ ನಂತರ ಪೂಜಾರಿಗೆ ಪ್ರಜ್ಞೆ ಬಂತು ಮತ್ತು ದೇವರಿಗೆ ‘ಹೇ ದೇವರೇ, ನಾನು ಅಮಲಿನಲ್ಲಿ ಈ ಮಾತನ್ನು ಹೇಳಿಬಿಟ್ಟೆನು, ನನ್ನನ್ನು ಕ್ಷಮಿಸು ಮತ್ತು ನನ್ನ ಮಾನವನ್ನು ಕಾಪಾಡು. ನೀನು ಜಾಗೃತವಾಗಿರುವುದರ ಸಾಕ್ಷಿ ನೀಡು’ ಎಂದು ವಿನಂತಿಸಿಕೊಂಡರು. ಅನಂತರ ರಾತ್ರಿ ಆ ಕಾವಲುಗಾರ ಊರಿನ ಗಡಿಗೆ ಹೋದಾಗ ಅವನಿಗೆ ಪ್ರತ್ಯಕ್ಷ ನರಸಿಂಹ ದೇವರು ದರ್ಶನ ನೀಡಿದರು. ಆಗಿನಿಂದ ಜನರಿಗೆ ಈ ದೇವರು ಜಾಗೃತ ವಾಗಿದ್ದಾರೆಂದು ದೃಢವಾಯಿತು. ಮಹರ್ಷಿಗಳು ನಮಗೆ ನರಸಿಂಹ ದೇವರಿಗೆ ಮದರಂಗಿಯ ಹೂವಿನ ಹಾರವನ್ನು ಅರ್ಪಿಸಲು ಹೇಳಿದರು; ಆದರೆ ನಮಗೆ ಆ ಹೂವುಗಳು ಸಿಗದಿದ್ದುದರಿಂದ ನಾವು ದೇವರಿಗೆ ಮದರಂಗಿಯ ಗೊಂಚಲನ್ನು ಅರ್ಪಿಸಿ ಪ್ರಾರ್ಥನೆಯನ್ನು ಮಾಡಿದೆವು.
ಶ್ರೀ ವಿಷ್ಣುವಿನ ರೂಪದ ಶ್ರೀ ರಂಗನಾಥನ್
ಹೆಚ್ಚಿನ ಸಲ ನರಸಿಂಹನ ದೇವಸ್ಥಾನದ ಹಿಂಬದಿ ಶ್ರೀ ವಿಷ್ಣುವಿನ ಮಂದಿರವೂ ಇರುತ್ತದೆ. ವಿಚಾರಿಸಿದ ಬಳಿಕ ಇಲ್ಲಿಯೂ ಇತ್ತು. ಅದರ ಹೆಸರು ‘ಶ್ರೀರಂಗನಾಥನ್’ ಎಂದಾಗಿದೆ. ನಾವು ಅವರ ದರ್ಶನವನ್ನೂ ಪಡೆದವು. ರಾಜಸ್ಥಾನದಲ್ಲಿನ ‘ಪುಷ್ಕರ’ ಎಂಬ ಬ್ರಹ್ಮದೇವರ ಮಂದಿರವಿರುವಲ್ಲಿಗೆ ಹೋಗಬೇಕಾಗಿರುವುದು ಬಹುತೇಕ ನಾಳೆ ನಮಗೆ ಮಹರ್ಷಿಗಳು ಜಯಪುರದಿಂದ ೧೪೫ ಕಿ.ಮೀ. ದೂರದಲ್ಲಿರುವ ಪುಷ್ಕರ ಎಂಬಲ್ಲಿಗೆ ಹೋಗಲು ಹೇಳುವವರಿದ್ದಾರೆ. ಅಲ್ಲಿ ಭಾರತದಲ್ಲಿರುವ ಏಕೈಕ ಬ್ರಹ್ಮದೇವನ ಮಂದಿರವಿದೆ – (ಸದ್ಗುರು) ಸೌ. ಅಂಜಲಿ ಗಾಡಗೀಳ