‘ಅಂಕೋರ ವಾಟ’ ದೇವಸ್ಥಾನದ ಭವ್ಯ ಪರಿಸರ
ಮಹಾಭಾರತದಲ್ಲಿ ಯಾವ ಭೂಭಾಗಕ್ಕೆ ‘ಕಂಭೋಜ ದೇಶ’, ಎಂದು ಸಂಬೋಧಿಸಲಾಗಿದೆಯೊ, ಅದನ್ನೇ ಈಗ ಕಂಬೋಡಿಯಾ ದೇಶ ಎಂದು ಕರೆಯಲಾಗುತ್ತದೆ ! ಇಲ್ಲಿ ೧೫ ನೇ ಶತಮಾನದವರೆಗೆ ಹಿಂದೂಗಳು ನೆಲೆಸುತ್ತಿದ್ದರು. ೮೦೨ ರಿಂದ ೧೪೨೧ ವರೆಗೆ ಇಲ್ಲಿ ಹಿಂದೂ ಸಾಮ್ರಾಜ್ಯವಿತ್ತು ಎಂದು ಹೇಳಲಾಗುತ್ತದೆ. ನಿಜವೆಂದರೆ ಕಂಭೋಜ ಪ್ರದೇಶವು ಕೌಂಡಿನ್ಯ ಋಷಿಗಳ ಕ್ಷೇತ್ರವಾಗಿತ್ತು, ಹಾಗೆಯೆ ಕಂಭೋಜ ದೇಶ ನಾಗಲೋಕವೂ ಇತ್ತು. ‘ಕಂಭೋಜ ದೇಶದ ರಾಜನು ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ್ದನು, ಎಂಬುದಾಗಿಯೂ ಉಲ್ಲೇಖವಿದೆ. ನಾಗಲೋಕ ಇದ್ದುದರಿಂದ ಅದು ಶಿವಕ್ಷೇತ್ರವೂ ಇದೆ ಮತ್ತು ಇಲ್ಲಿಯ ಮಹೇಂದ್ರ ಪರ್ವತದ ಮೇಲೆ ಶ್ರೀವಿಷ್ಣುವಿನ ವಾಹನ ಗರುಡ ಇತ್ತು ಎಂದು ಹೇಳಲಾಗುತ್ತದೆ. ಆದ್ದರಿಂದ ಇದು ವಿಷ್ಣುಕ್ಷೇತ್ರವೂ ಇದೆ. ಈ ರೀತಿಯಾಗಿ ಹರಿಹರ ಕ್ಷೇತ್ರವಾಗಿರುವ ಈ ಕಂಭೋಜ ದೇಶದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸದ್ಗುರು (ಸೌ.) ಅಂಜಲೀ ಗಾಡಗೀಳ ಮತ್ತು ಅವರೊಂದಿಗೆ ಇರುವ ೪ ವಿದ್ಯಾರ್ಥಿಸಾಧಕರು ಮಾಡಿದ ಅಧ್ಯಯನ ಪ್ರಯಾಣದ ಕೆಲವು ಕ್ಷಣಚಿತ್ರಗಳನ್ನು ಇಲ್ಲಿ ಕೊಡುತ್ತಿದ್ದೇವೆ.
ಹಿಂದೂಗಳ ವೈಭವಶಾಲಿ ಕೊಡುಗೆಯಾಗಿರುವ ಅಂಕೋರ ವಾಟ ದೇವಸ್ಥಾನ !
‘ಪರಮವಿಷ್ಣುಲೋಕವೆಂದೂ ಹೇಳಲಾಗುವ ಈ ದೇವಸ್ಥಾನದ ಭಾವಪೂರ್ಣ ದರ್ಶನ ಪಡೆಯೋಣ !
೧. ಹಿಂದೂ ರಾಜಾ ಯಶೋವರ್ಮನು ಸ್ಥಾಪಿಸಿದ ‘ಅಂಕೋರ ನಗರ’ದ ಹೆಸರು ‘ಯಶೋಧರಾಪುರಾ’ವೇ ಮುಂದೆ ಅದೇ ವಂಶದಲ್ಲಿನ ರಾಜಾ ಸೂರ್ಯವರ್ಮನ (ಎರಡನೇಯ) ನಗರದ ಮಧ್ಯಭಾಗದಲ್ಲಿ ಭವ್ಯವಾದ ಶ್ರೀವಿಷ್ಣುವಿನ ‘ಪರಮ ವಿಷ್ಣುಲೋಕ’ ದೇವಸ್ಥಾನವನ್ನು ಕಟ್ಟುವುದು
ಜಗತ್ತಿನ ಎಲ್ಲಕ್ಕಿಂತ ದೊಡ್ಡದಾದ ಹಿಂದೂಗಳ ದೇವಸ್ಥಾನವು, ಹಿಂದೂಗಳು ಬಹುಸಂಖ್ಯೆಯಲ್ಲಿರುವ ಭಾರತದಲ್ಲಿರದೇ ಅದು ಕಂಬೋಡಿಯಾದಲ್ಲಿದೆ. ಆ ದೇವಸ್ಥಾನದ ಹೆಸರು ‘ಅಂಕೋರ ವಾಟ’ ಎಂಬುದಾಗಿದೆ !’ ಆ ದೇವಸ್ಥಾನದ ದರ್ಶನವನ್ನು ಪಡೆಯಲು ೨೫ ಮಾರ್ಚ್‌ಗೆ ನಾವು ಸದ್ಗುರು ಸೌ. ಅಂಜಲಿ ಗಾಡಗೀಳ ಇವರೊಂದಿಗೆ ಕಂಬೋಡಿಯಾದ ರಾಜಧಾನಿ ನೋಮ ಫೇನ್‌ದಿಂದ ವಿಮಾನದಲ್ಲಿ ಉತ್ತರ ಕಂಬೋಡಿಯಾದಲ್ಲಿರುವ ‘ಸೀಮ ರೀಪ’ ನಗರಕ್ಕೆ ತಲುಪಿದೆವು. ಸೀಮ ರೀಪ ನಗರದಿಂದ ೬ ಕಿ.ಮೀ. ದೂರದಲ್ಲಿ ಈ ದೇವಸ್ಥಾನವಿದೆ. ದೇವಸ್ಥಾನ ಮತ್ತು ಅದರ ಪರಿಸರವನ್ನು ನೋಡಲು ಇಡೀ ಒಂದು ದಿನವೇ ಬೇಕಾಗುತ್ತದೆ.
೯ ನೇ ಶತಮಾನದಲ್ಲಿನ ಹಿಂದೂ ರಾಜಾ ಯಶೋ ವರ್ಮನು ಸ್ಥಾಪಿಸಿದ ‘ಅಂಕೋರ ನಗರ’ ಆ ಕಾಲದಲ್ಲಿ ಅದರ ಹೆಸರು ‘ಯಶೋಧರಾಪುರಾ’, ಎಂದಿತ್ತು. ಮುಂದೆ ಅದೇ ವಂಶದಲ್ಲಿನ ರಾಜಾ ಸೂರ್ಯವರ್ಮನು (ಎರಡನೇಯ) ಈ ನಗರದ ಮಧ್ಯಭಾಗದಲ್ಲಿ ಭವ್ಯವಾದ ಭಗವಾನ ಶ್ರೀವಿಷ್ಣುವಿನ ಮಂದಿರವನ್ನು ಕಟ್ಟಿದನು. ಆ ಮಂದಿರದ ಮೂಲ ಹೆಸರು ಅಂಕೋರ ವಾಟ ಎಂದಾಗಿತ್ತು. ರಾಜಾ ಸೂರ್ಯವರ್ಮನು (ಎರಡನೇಯ) ಕಂಬೋಡಿಯಾದಲ್ಲಿ ಕಟ್ಟಿದ ದೇವಸ್ಥಾನವು ಜಗತ್ತಿನಲ್ಲಿಯೇ ಅತಿದೊಡ್ಡದಾಗಿದೆ !
‘ಪರಮವಿಷ್ಣುಲೋಕ !’ ಈಗ ಇದರ ಹೆಸರನ್ನು ಸ್ಥಳೀಯ ಭಾಷೆಯಲ್ಲಿ ‘ಅಂಕೋರ ವಾಟ’ ಎಂದು ಕರೆಯುತ್ತಾರೆ. ‘ಅಂಕೋರ’ ಅಂದರೆ ‘ನಗರ’ ಮತ್ತು ‘ವಾಟ’ ಅಂದರೆ ‘ವನ’. (‘ವಾಟಿಕಾ.’) ಈ ದೇವಸ್ಥಾನವು ನಗರದ ಮಧ್ಯಭಾಗದಲ್ಲಿರುವುದರಿಂದ ಈ ಹೆಸರು ಬಂದಿರಬಹುದು. ಆಗ ಹಿಂದೂ ರಾಜರಲ್ಲಿ ‘ಈ ಮಂದಿರವೆಂದರೆ ‘ವಿಷ್ಣುಲೋಕ’ವಾಗಿದೆ ಮತ್ತು ರಾಜಾ ಅಂದರೆ ಶ್ರೀವಿಷ್ಣುವಿನ ದಾಸನಿರುತ್ತಾನೆ ಎಂಬ ಭಾವವಿತ್ತು. ಅವನು ಪ್ರಜೆಗಳ ಪಾಲನೆ-ಪೋಷಣೆ ಮಾಡುತ್ತಾನೆ.’ ಅಷ್ಟೆ ಅಲ್ಲದೇ ಪ್ರಜೆಗಳಲ್ಲಿ ‘ರಾಜಾ ಎಂದರೆ ‘ವಿಷ್ಣುಸ್ವರೂಪ’ವಾಗಿದ್ದಾನೆ’ ಎಂಬ ಭಾವವಿರುತ್ತಿತ್ತು.
೨. ‘ಅಂಕೋರ ವಾಟ’ ದೇವಸ್ಥಾನದಮುಖ್ಯ ಪ್ರವೇಶದ್ವಾರದ ಮಧ್ಯಭಾಗದಲ್ಲಿ ಅಷ್ಟಭುಜ ಶ್ರೀವಿಷ್ಣುವಿನ ಮೂರ್ತಿ, ಎಡಕ್ಕೆ ಶ್ರೀ ಬ್ರಹ್ಮದೇವ ಮತ್ತು ಬಲಕ್ಕೆ ಭಗವಾನ ಶಿವನ ಮೂರ್ತಿ ಇರುವುದು
ಅಂಕೋರ ವಾಟ ದೇವಸ್ಥಾನದ ಪರಿಸರದ ಒಟ್ಟು ವಿಸ್ತೀರ್ಣವು ೪೦೨ ಎಕರೆಯಷ್ಟು ವಿಶಾಲವಾಗಿದೆ. ದೇವಸ್ಥಾನದ ನಾಲ್ಕೂ ಬದಿಗಳು ನೀರಿನಿಂದ ತುಂಬಿದ್ದು ೨೦ ಅಡಿ ಆಳದ ಕಂದಕಗಳಿವೆ. ದೇವಸ್ಥಾನದ ಪಶ್ಚಿಮದಲ್ಲಿನ ಕಂದಕದಿಂದ ನಿರ್ಮಾಣ ಮಾಡಿದ ಒಂದು ದೊಡ್ಡ ಸೇತುವೆಯ ಮೇಲಿಂದ ೨೦೦ ಮೀಟರ್ ನಡೆದು ಹೋದ ಮೇಲೆ ಮುಖ್ಯ ಪ್ರವೇಶದ್ವಾರವಿದೆ. ಆ ಮುಖ್ಯ ಪ್ರವೇಶದ್ವಾರದ ಮಧ್ಯಭಾಗದಲ್ಲಿ ಶ್ರೀವಿಷ್ಣುವಿನ ಅಷ್ಟಭುಜ ಮೂರ್ತಿ, ಎಡಕ್ಕೆ ಶ್ರೀ ಬ್ರಹ್ಮದೇವನ ಮತ್ತು ಬಲಕ್ಕೆ ಭಗವಾನ ಶಿವನ ಮೂರ್ತಿ ಇದೆ. ಮುಖ್ಯ ಪ್ರವೇಶದ್ವಾರದ ಎಡಕ್ಕೆ ಮತ್ತು ಬಲಕ್ಕೆ ೨ ದೊಡ್ಡ ದ್ವಾರಗಳಿವೆ. ಅವುಗಳಿಗೆ ‘ಹತ್ತಿದ್ವಾರ’ (ಆನೆದ್ವಾರ)ಎನ್ನುತ್ತಾರೆ. ಈ ಬಾಗಿಲಿನಿಂದ ಆನೆಯನ್ನು ಕರೆದೊಯ್ಯುತ್ತಿದ್ದರು.
೩. ದೇವಸ್ಥಾನದ ಪರಿಸರದಲ್ಲಿ ‘ಶಿವ-ಬ್ರಹ್ಮ ಗ್ರಂಥಾಲಯ’ ಮತ್ತು ಶಿವ-ವಿಷ್ಣು ಗ್ರಂಥಾಲಯ’ ಇರುವುದು, ಆ ಕಾಲದಲ್ಲಿ ಗ್ರಂಥಾಲಯದಲ್ಲಿ ಭಕ್ತರಿಗಾಗಿ ವೇದ, ವೇದಕ್ಕೆ ಸಂಬಂಧಪಟ್ಟ ಗ್ರಂಥಗಳು ಮತ್ತು ಉಪಾಸನೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಅಧ್ಯಯನಕ್ಕಾಗಿ ಇಟ್ಟಿರುವುದು
ದೇವಸ್ಥಾನದ ಎಡಬದಿಗೆ ‘ಶಿವ-ಬ್ರಹ್ಮ ಗ್ರಂಥಾಲಯ
ದೇವಸ್ಥಾನದ ಬಲಬದಿಗೆ ‘ಶಿವ-ವಿಷ್ಣು ಗ್ರಂಥಾಲಯ
ಮುಖ್ಯ ಪ್ರವೇಶದ್ವಾರದಿಂದ ಇನ್ನೂ ೧೦೦ ಮೀಟರ್ ಮುಂದೆ ನಡೆದು ಹೋದನಂತರ ಎಡಬದಿಗೆ ೧ ಮತ್ತು ಬಲಬದಿಗೆ ೧, ಹೀಗೆ ಎರಡು ಗ್ರಂಥಾಲಯಗಳಿವೆ. ಎಡಬದಿಯ ಗ್ರಂಥಾಲಯಕ್ಕೆ ‘ಶಿವ-ಬ್ರಹ್ಮ ಗ್ರಂಥಾಲಯ’, ಬಲಬದಿಯ ಗ್ರಂಥಾಲಯ ‘ಶಿವ-ವಿಷ್ಣು ಗ್ರಂಥಾಲಯ’, ಎಂದು ಹೇಳುತ್ತಾರೆ. ಆ ಕಾಲದಲ್ಲಿ ಈ ಎರಡು ಗ್ರಂಥಾಲಯಗಳಲ್ಲಿ ಭಕ್ತರಿಗೆ ವೇದ, ವೇದಕ್ಕೆ ಸಂಬಂಧಪಟ್ಟ ಇತರ ಗ್ರಂಥಗಳು ಮತ್ತು ದೇವಸ್ಥಾನದಲ್ಲಿನ ಉಪಾಸನೆಗೆ ಸಂಬಂಧಪಟ್ಟ ಪುಸ್ತಕಗಳನ್ನು ಅಧ್ಯಯನಕ್ಕಾಗಿ ಇಡುತ್ತಿದ್ದರು. ಒಟ್ಟಿನಲ್ಲಿ ಈ ಸ್ಥಾನವೆಂದರೆ ಒಂದು ವೇದಪಾಠಶಾಲೆ ಮತ್ತು ಗುರುಕುಲವೇ ಆಗಿತ್ತು.
ಅಂಕೋರ ವಾಟ ದೇವಸ್ಥಾನ ಮತ್ತು ಗರ್ಭಗುಡಿ ಹಾಗೆಯೇ ಅದರ ಪರಿಸರದಲ್ಲಿನ ಶಿಲ್ಪಕಲೆಗಳ ವೈಶಿಷ್ಟ್ಯಗಳು !
೪. ದೇವಸ್ಥಾನದ ನಾಲ್ಕೂ ಪ್ರಾಂಗಣಗಳ ಗೋಡೆಗಳ ಮೇಲೆ ಅನೇಕ ಶಿಲ್ಪಗಳನ್ನು ಕೆತ್ತಿರುವುದು
ಅಂಕೋರ ವಾಟ ದೇವಸ್ಥಾನದ ಭವ್ಯತೆಯನ್ನು ತೋರಿಸುವ ರೇಖಾಚಿತ್ರ ! ಈ ರೇಖಾಚಿತ್ರದಿಂದ ದೇವಸ್ಥಾನದ ಪರಿಸರದ ವ್ಯಾಪ್ತಿಯು ನಮ್ಮ ಗಮನಕ್ಕೆ ಬರುತ್ತದೆ.
ದೇವಸ್ಥಾನದ ಪರಿಸರದಲ್ಲಿರುವ ಗ್ರಂಥಾಲಯದಿಂದ ಮುಂದೆ ೨೦೦ ಮೀಟರ್ ನಡೆದ ನಂತರ ಮುಖ್ಯ ದೇವಸ್ಥಾನವು ಸಿಗುತ್ತದೆ. ಇದು ದೇವಸ್ಥಾನದ ಪಶ್ಚಿಮದ್ವಾರವಾಗಿದೆ. ಇಲ್ಲಿ ದೇವಸ್ಥಾನದ ಮೊದಲನೇ ಪ್ರಾಂಗಣವು ಪ್ರಾರಂಭವಾಗುತ್ತದೆ. ಪ್ರಾಂಗಣದ ನಾಲ್ಕೂ ಬದಿಗಳಲ್ಲಿ ೪ ಪ್ರಾಂಗಣಗಳು ಇವೆ. ಈ ನಾಲ್ಕೂ ಪ್ರಾಂಗಣಗಳ ಗೋಡೆಗಳು ಮತ್ತು ೪ ಮೂಲೆಗಳು ಹಾಗೂ ೪ ದಿಕ್ಕುಗಳಲ್ಲಿರುವ ನಾಲ್ಕು ಪ್ರವೇಶದ್ವಾರಗಳ ಗೋಡೆಗಳಲ್ಲಿ ದೇವತೆಗಳ ಅನೇಕ ಶಿಲ್ಪಗಳನ್ನು ಕೆತ್ತಲಾಗಿವೆ. ಈ ಶಿಲ್ಪಗಳಲ್ಲಿನ ದೇವತೆಗಳ ಅಲಂಕಾರಗಳ ಕೆತ್ತನೆಯ ಕೆಲಸವು ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ. ಅದರಲ್ಲಿ ವಿವಿಧ ರೀತಿಯ ಕೇಶರಚನೆಗಳೂ ನೋಡಲು ಸಿಗುತ್ತವೆ. ಪ್ರವೇಶದ್ವಾರದಲ್ಲಿ ಬೇರೆಬೇರೆ ಹೂವುಗಳ ಚಿತ್ರಗಳನ್ನು ಕೆತ್ತಿದ್ದಾರೆ. ಪ್ರತಿಯೊಂದು ಪ್ರವೇಶದ್ವಾರ ಹಾಗೆಯೇ ಗರ್ಭಗುಡಿ ಇವುಗಳ ಮೆಟ್ಟಿಲುಗಳು ಎಂದಿನಂತೆ ಓರೆಯಾಗಿರದೇ ನೇರವಾಗಿವೆ. ‘ಆ ಕಾಲದ ಜನರು ಪ್ರತಿದಿನ ದೇವಸ್ಥಾನಕ್ಕೆ ಹೋಗಿ ಹೇಗೆ ಪೂಜೆ ಮಾಡುತ್ತಿದ್ದರು ?’, ಎಂಬುದನ್ನು ನಾವು ಊಹಿಸಲೂ ಸಾಧ್ಯವಿಲ್ಲ. ‘ದೇವಸ್ಥಾನವನ್ನು ನಿರ್ಮಿಸಲು ಲಕ್ಷಗಟ್ಟಲೆ ದೊಡ್ಡ ದೊಡ್ಡ ಕಲ್ಲುಗಳನ್ನು ಬಳಸಿದ್ದಾರೆ. ಈ ಎಲ್ಲ ಕಲ್ಲುಗಳನ್ನು ಅಲ್ಲಿಂದ ೭೦ ಕಿ. ಮೀ. ದೂರದಲ್ಲಿರುವ ಮಹೇಂದ್ರ ಪರ್ವತದಿಂದ ನದಿಯ ಮೂಲಕ ತಂದಿರಬಹುದು’, ಎಂದು ನಮ್ಮ ‘ಗೈಡ್’ ಹೇಳಿದನು.
೫. ‘ಅಂಕೋರ ವಾಟ’ ದೇವಸ್ಥಾನದ ನಾಲ್ಕು ಬದಿಗಳು ಮತ್ತು ಅವುಗಳ ಮೇಲೆ ಕೆತ್ತಲಾಗಿರುವ ಶಿಲ್ಪಗಳು
ಅ. ದಕ್ಷಿಣ-ಪೂರ್ವ (ಆಗ್ನೇಯ)ದ ಮೂಲೆ : ಇಲ್ಲಿಯ ಶಿಲ್ಪಕಲೆಗಳಲ್ಲಿ ಸಮುದ್ರಮಂಥನ ದೃಶ್ಯ, ಯಮನು ಶಿಕ್ಷೆ ವಿಧಿಸುತ್ತಿರುವುದು ಹಾಗೂ ಸ್ವರ್ಗ ಮತ್ತು ನರಕದ ದೃಶ್ಯಗಳು ಒಳಗೊಂಡಿದೆ.
ಆ. ದೇವಸ್ಥಾನದಲ್ಲಿನ ದಕ್ಷಿಣ-ಪಶ್ಚಿಮ (ನೈರುತ್ಯ)ದ ಮೂಲೆ : ಇಲ್ಲಿ ಅನೇಕ ಶಿಲ್ಪಗಳನ್ನು ಕೆತ್ತಲಾಗಿವೆ. ಅದರಲ್ಲಿ ಭಗವಾನ ಶ್ರೀಕೃಷ್ಣನ ಲೀಲೆ, ಪ್ರಭು ಶ್ರೀರಾಮನು ವಾಲಿಯ ವಧೆ ಮಾಡುತ್ತಿರುವ ಪ್ರಸಂಗ, ರಾವಣನು ಕೈಲಾಸ ಪರ್ವತವನ್ನು ಎತ್ತಿದ ಪ್ರಸಂಗ, ಸಮುದ್ರಮಂಥನದ ದೃಶ್ಯ, ಪ್ರಭು ಶ್ರೀರಾಮನು ಮಾರೀಚ ರಾಕ್ಷಸನನ್ನು ಬೆಂಬತ್ತುವ ದೃಶ್ಯ, ದಕ್ಷಿಣಾಮೂರ್ತಿಯ ರೂಪದಲ್ಲಿರುವ ಭಗವಾನ ಶಿವ, ಧ್ಯಾನಮಗ್ನನಾಗಿದ್ದ ಭಗವಾನ ಶಿವ, ವೈಕುಂಠಲೋಕದಲ್ಲಿ ಭಗವಾನ ಶ್ರೀವಿಷ್ಣುವು ಇತರ ದೇವತೆಗಳಿಂದ ಸ್ತುತಿಯನ್ನು ಆಲಿಸುತ್ತಿರುವುದು ಹೀಗೆ ಅನೇಕ ಶಿಲ್ಪಗಳು ಇಲ್ಲಿವೆ.
ಇ. ಪಶ್ಚಿಮ-ಉತ್ತರ (ವಾಯುವ್ಯ) ಮೂಲೆ : ಬಾಣಾಸುರನ ಮೇಲೆ ವಿಜಯ ಸಾಧಿಸುವಾಗ ಶ್ರೀಕೃಷ್ಣ, ಹಾಗೆಯೇ ಅಸುರರ ಯುದ್ಧದಲ್ಲಿ ಗೆಲ್ಲುತ್ತಿರುವ ಶ್ರೀವಿಷ್ಣು ಇಂತಹ ದೃಶ್ಯಗಳಿರುವ ಶಿಲ್ಪಗಳಿವೆ.
ಈ. ದೇವಸ್ಥಾನದ ಉತ್ತರ-ಪೂರ್ವ (ಈಶಾನ್ಯ)ದ ಮೂಲೆ : ಸೀತೆಯ ಅಗ್ನಿಪರೀಕ್ಷೆ, ರಾವಣ ವಧೆಯ ನಂತರ ಪ್ರಭು ಶ್ರೀರಾಮನು ಅಯೋಧ್ಯೆಗೆ ಹಿಂತಿರುಗುವಾಗ, ರಾಮ, ಲಕ್ಷ್ಮಣ ಮತ್ತು ವಿಭೀಷಣ ಇವರು ಸಂಭಾಷಣೆ ನಡೆಸುತ್ತಿರುವಾಗ, ಹನುಮಂತನು ಶ್ರೀರಾಮನಿಗೆ ಕೊಟ್ಟ ಉಂಗುರವನ್ನು ಸೀತಾಮಾತೆಗೆ ಕೊಡುತ್ತಿರುವ, ಶೇಷನ ಮೇಲೆ ಮಲಗಿದ ಶ್ರೀವಿಷ್ಣುವಿನ ಬಳಿ ಸಮಸ್ಯೆಗಳನ್ನು ಮಂಡಿಸುತ್ತಿರುವ ದೇವತೆಗಳು, ದೇವತೆಗಳು ಮತ್ತು ಅಸುರರು ಇವರ ನಡುವಿನ ಯುದ್ಧ, ರಾಮ ಮತ್ತು ಲಕ್ಷ್ಮಣರು ಸುಗ್ರೀವನೊಂದಿಗೆ ಮಾತನಾಡುತ್ತಿರುವ, ರಾಮ ಮತ್ತು ಲಕ್ಷ್ಮಣರು ಕಬಂಧ ಎಂಬ ಹೆಸರಿನ ರಾಕ್ಷಸನೊಂದಿಗೆ ಹೋರಾಡುತ್ತಿರುವ, ಸೀತಾ ಸ್ವಯಂವರ ಹೀಗೆ ಅನೇಕ ಶಿಲ್ಪಗಳು ಇಲ್ಲಿವೆ.
೬. ‘ಅಂಕೋರ ವಾಟ’ ಮುಖ್ಯ ದೇವಸ್ಥಾನ ಮತ್ತು ಗರ್ಭಗುಡಿ
ಗರ್ಭಗುಡಿಗೆ ಹೋಗಲು ಈ ಮೊದಲಿನ ಮೆಟ್ಟಿಲುಗಳು ! ಈ ಮೆಟ್ಟಿಲುಗಳ ವೈಶಿಷ್ಟ್ಯವೆಂದರೆ ಅವು ನೇರವಾಗಿವೆ !
ಗರ್ಭಗುಡಿಗೆ ಹೋಗಲು ತುಂಬಾ ಎತ್ತರದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ ! ಅಲ್ಲಿ ಹೋಗಲು ಈಗ ಕಟ್ಟಿರುವ ಮೆಟ್ಟಲುಗಳು !
‘ಅಂಕೋರ ವಾಟ’ ದೇವಸ್ಥಾನ ಎರಡನೇ ಪ್ರಾಂಗಣದಿಂದ ಒಳಗೆ ಮೇಲೆ ಹತ್ತಬೇಕಾಗುತ್ತದೆ. ಆಗ ನಾವು ಕೊನೆಯ ಪ್ರಾಂಗಣಕ್ಕೆ ತಲುಪುತ್ತೇವೆ. ಇಲ್ಲಿ ೫ ಗೋಪುರದಂತೆ ಶಿಖರವಿರುವ ಮುಖ್ಯ ದೇವಸ್ಥಾನ ಕಾಣಿಸುತ್ತದೆ. ಈ ೫ ಶಿಖರಗಳೆಂದರೆ ಪವಿತ್ರ ಮೇರು ಪರ್ವತದ ೫ ಶಿಖರಗಳಿರುತ್ತವೆ. (ನಮ್ಮ ‘ಗೈಡ್’ನು ನಮಗೆ ತೋರಿಸಿದ ‘ಅಂಕೋರ ವಾಟ’ನ ಮುಖ್ಯ ದೇವಸ್ಥಾನದ ೪ ಗೋಪುರಗಳು, ಮಂದಿರದ ನಾಲ್ಕು ಬದಿಗೆ ಇರುವ ೪ ಶಿಖರಗಳು ಮತ್ತು ದೇವಸ್ಥಾನದ ಮುಖ್ಯ ಪ್ರವೇಶದ್ವಾರದಲ್ಲಿರುವ ೩ ಶಿಖರಗಳು ಹೀಗೆ ಒಟ್ಟು ೧೨ ಶಿಖರಗಳಾಗುತ್ತವೆ ಮತ್ತು ಅವುಗಳು ೧೨ ಜ್ಯೋತಿರ್ಲಿಂಗದ ಪ್ರತೀಕವಾಗಿವೆ. ದೇವಸ್ಥಾನದ ಮುಖ್ಯ ಪ್ರವೇಶದ್ವಾರದ ಹತ್ತಿರವಿರುವ ೩ ಶಿಖರಗಳು ಈಗ ಅಸ್ತಿತ್ವದಲ್ಲಿಲ್ಲ ಎಂದು ಹೇಳಿದನು.) ಈ ೫ ಶಿಖರಗಳಿರುವ ದೇವಸ್ಥಾನದ ಮಧ್ಯಭಾಗದಲ್ಲಿ ಗರ್ಭಗುಡಿಯಿದೆ. ೫ ನೇ ಶಿಖರವು ಗರ್ಭಗುಡಿಯ ಮೇಲಿದೆ. ಗರ್ಭಗುಡಿಗೆ ಹೋಗಲು ತುಂಬಾ ಎತ್ತರದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಗರ್ಭಗುಡಿಯಿಂದ ನಮಗೆ ಪಶ್ಚಿಮ ದಿಕ್ಕಿಗೆ ೭೫೦ ಮೀಟರ್ ದೂರದಲ್ಲಿರುವ ಮುಖ್ಯ ಪ್ರವೇಶದ್ವಾರ ಕಾಣಿಸುತ್ತದೆ.
ಗರ್ಭಗುಡಿಯಿಂದ ದೇವಸ್ಥಾನ ಭವ್ಯತೆ ಮತ್ತು ಮಂದಿರ ಪರಿಸರದ ಭವ್ಯ ಪ್ರಚಂಡ ವಿಸ್ತೀರ್ಣವು ಕಾಣಿಸುತ್ತದೆಯೊ, ಅದನ್ನು ನಾವು ಶಬ್ದದಲ್ಲಿ ವರ್ಣಿಸಲು ಸಾಧ್ಯವಿಲ್ಲ. ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ನಮಗೆ ಹಿಂದೂಗಳ ಜಗತ್ತಿನ ಅತಿದೊಡ್ಡ ದೇವಸ್ಥಾನದ ದರ್ಶನವಾಯಿತು ಮತ್ತು ಆ ದೇವಸ್ಥಾನದಿಂದ ಕಲಿಯಲು ಸಿಕ್ಕಿತು. ಅದಕ್ಕಾಗಿ ಅಧ್ಯಯನದ ಪ್ರಯಾಣದಲ್ಲಿನ ನಾವೆಲ್ಲ ಸಾಧಕರು ಪರಾತ್ಪರ ಗುರು ಡಾಕ್ಟರ ಮತ್ತು ಸದ್ಗುರು (ಸೌ.) ಅಂಜಲಿ ಗಾಡಗೀಳ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ ಸಲ್ಲಿಸುತ್ತೇವೆ.’
– ಶ್ರೀ. ವಿನಾಯಕ ಶಾನಬಾಗ, ಕಂಬೋಡಿಯಾ