ಸನಾತನ ಸಂಸ್ಥೆಗೆ ೨೦ ವರ್ಷ ಪೂರ್ಣ !
ವೈಜ್ಞಾನಿಕ ಪರಿಭಾಷೆಯಲ್ಲಿ ಅಧ್ಯಾತ್ಮ ಪ್ರಸಾರವನ್ನು ಮಾಡಿ ಆದರ್ಶ ಸಮಾಜದ ನಿರ್ಮಾಣಕ್ಕಾಗಿ ಕಾರ್ಯನಿರತವಾಗಿರುವ ಸನಾತನ ಸಂಸ್ಥೆಯು ಚೈತ್ರ ಶುಕ್ಲ ಪಕ್ಷ ಪಂಚಮಿ (ಏಪ್ರಿಲ್ ೧೦) ರಂದು ತಿಥಿಗನುಸಾರ ೨೦ ವರ್ಷ ಪೂರ್ಣವಾದ ದಿನವಾಗಿದೆ. ೨೨ ಮಾರ್ಚ್ ೧೯೯೯ ರಂದು ಪರಾತ್ಪರ ಗುರು ಡಾ. ಆಠವಲೆಯವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು ಮತ್ತು ಕಳೆದ ೨೦ ವರ್ಷಗಳಲ್ಲಿ ಸಣ್ಣ ಸಸ್ಯ ಹೆಮ್ಮರವಾಗಲಾರಂಭಿಸಿತು. ಭಾರತವು ವಿಶ್ವಗುರು ಆಗಿತ್ತು; ಆದರೆ ಇಂದಿನ ಜಾತ್ಯತೀತ ಸ್ಥಿತಿಯ ರಾಜ್ಯಾಡಳಿತ, ಹಿಂದೂಗಳು ಪಾಶ್ಚಾತ್ಯ ಸಂಸ್ಕೃತಿಯನ್ನು ಅಂಗೀಕರಿಸುವುದು, ಇದರಿಂದಲೇ ಆದಂತಹ ನೈತಿಕ ಅಧಃಪತನ, ಮಿತಿಮೀರಿದ ಭ್ರಷ್ಟಾಚಾರ, ಹೆಚ್ಚಾಗಿರುವ ಅಧರ್ಮ, ಢೋಂಗಿ ಸಾಧುಗಳಿಂದ ಹೆಚ್ಚಾಗುತ್ತಿರುವ ತೊಂದರೆ ಇತ್ಯಾದಿಗಳಿಂದ ಅದು ವಿಶ್ವಗುರುವಿನ ಸ್ಥಾನವನ್ನು ಮರೆತು ಅಧೋಗತಿಯತ್ತ ಹೋಗಿದೆ. ಈ ಸ್ಥಿತಿಯಿಂದ ದೇಶವನ್ನು ಹಾಗೂ ಹಿಂದೂ ಧರ್ಮವನ್ನು ಹೊರತೆಗೆಯಲು ಸಂತರು-ಮಹಂತರು ತಮ್ಮ ಕ್ಷಮತೆಗನುಸಾರ ಪ್ರಯತ್ನ ಮಾಡುತ್ತಿದ್ದರು; ಆದರೆ ಸದ್ಯದ ವಿಜ್ಞಾನಯುಗದಲ್ಲಿ ಹಿಂದೂಗಳಿಗೆ ಧರ್ಮದ ಮಹತ್ವ ಹಾಗೂ ಅದರ ಹಿನ್ನೆಲೆಯ ಅಧ್ಯಾತ್ಮಶಾಸ್ತ್ರವನ್ನು ಹೇಳಿ ಅವರನ್ನು ಸಾಧನೆಯತ್ತ ಹೊರಳಿಸುವುದು, ತುಂಬಾ ಕಷ್ಟ ಆಗಿತ್ತು. ಇದೇ ವಿಷಯ ಪರಾತ್ಪರ ಗುರು ಡಾ. ಆಠವಲೆಯವರು ಸನಾತನ ಸಂಸ್ಥೆಯ ಮಾಧ್ಯಮದಿಂದ ತಿಳಿಸಲು ಆರಂಭಿಸಿದರು ಮತ್ತು ಅದಕ್ಕೆ ಯಶಸ್ಸು ಕೂಡಾ ಸಿಗುತ್ತಿದೆ. ಇಂದು ದೇಶ ಹಾಗೂ ವಿದೇಶಗಳಲ್ಲಿಯೂ ಸನಾತನದ ಆಧ್ಯಾತ್ಮಿಕ ಮಾರ್ಗದರ್ಶನದಲ್ಲಿ ಸಾವಿರಾರು ಜಿಜ್ಞಾಸುಗಳು ಪ್ರತಿದಿನ ತಮ್ಮ ಕ್ಷಮತೆಗನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ ಮತ್ತು ಹಿಂದೂ ಧರ್ಮಕ್ಕನುಸಾರ ಆಚರಣೆಯನ್ನೂ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿನ ಅಧ್ಯಾತ್ಮವನ್ನು ಸದ್ಯದ ವೈಜ್ಞಾನಿಕ ಪರಿಭಾಷೆಯಲ್ಲಿ ಮಂಡಿಸುವುದು ಮತ್ತು ಈ ಮೂಲಕ ಸಮಾಜವನ್ನು ಸಾಧನೆಯತ್ತ ಹೊರಳಿಸುವುದು, ಈ ಕಾರ್ಯವನ್ನು ಸನಾತನ ಸಂಸ್ಥೆ ಮಾಡುತ್ತಿದೆ. ಈ ರೀತಿಯ ಪ್ರಯತ್ನ ದೇಶದಾದ್ಯಂತ ಎಂದಿಗೂ ಆಗಿರಲಿಲ್ಲ ಅಥವಾ ಎಲ್ಲಿಯಾದರೂ ಆಗಿದ್ದರೆ ಅದರ ಪರಿಣಾಮ ಕಾಣಲಿಲ್ಲ. ಆದ್ದರಿಂದ ‘ಸಾವಿರಾರು ಜನರು ಸಾಧನೆಯನ್ನು ಮಾಡುತ್ತಿರುವುದು, ಇದು ಸನಾತನದ ಯಶಸ್ಸಾಗಿದೆ, ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸನಾತನಕ್ಕೆ ಸಿಕ್ಕಿದ ಈ ಯಶಸ್ಸನ್ನು ಇದೇ ದೃಷ್ಟಿಯಿಂದ ನೋಡುತ್ತಿದೆ ಮತ್ತು ಮುಂದೆಯೂ ಇದೇ ಉದ್ದೇಶ ಇರುವುದು. ಸಾಧಕರ ಸಂಖ್ಯೆ ಎಷ್ಟು ಹೆಚ್ಚಾಯಿತು ಅಥವಾ ಕಾರ್ಯವು ಎಷ್ಟು ಹೆಚ್ಚಾಗುವುದು, ಇವೆಲ್ಲದಕ್ಕಿಂತ ಎಷ್ಟು ಜನರು ಸಾಧನೆಯನ್ನು ಮಾಡಿ ಮುಂದೆ ಹೋಗುತ್ತಿದ್ದಾರೆ, ಎಂಬುದು ಸನಾತನದ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿದೆ. ಕಳೆದ ೨೦ ವರ್ಷಗಳಲ್ಲಿ ಸನಾತನದ ಮಾರ್ಗದರ್ಶನಕ್ಕನುಸಾರ ೨೫ ಮಾರ್ಚ್ ೨೦೧೯ ತನಕ ೬೭ ಸಾಧಕರು ಸಂತ ಪದವಿಯಲ್ಲಿ ವಿರಾಜಮಾನರಾದರು, ೧೪ ಸಾಧಕರು ಸದ್ಗುರು ಪದವಿಯನ್ನು ತಲುಪಿದರು ಹಾಗೂ ಒಬ್ಬರು ಪರಾತ್ಪರ ಗುರು ಪದವಿಯಲ್ಲಿ ಆರೂಢರಾದರು. ಶೇ. ೬೦ ಮತ್ತು ಅದಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ೧ ಸಾವಿರದ ೨೨೮ ಸಾಧಕರು ಸಂತ ಪದವಿಯತ್ತ ಮಾರ್ಗಕ್ರಮಣ ಮಾಡುತ್ತಿದ್ದಾರೆ. ಇದೇ ಸನಾತನದ ಅತ್ಯಂತ ದೊಡ್ಡ ಯಶಸ್ಸಾಗಿದೆ, ಎಂಬುದನ್ನು ಗಮನದಲ್ಲಿಡಬೇಕು.
ಸಮಾಜಕ್ಕೆ ಆನಂದವನ್ನು ಅನುಭವಿಸಲು ಕಲಿಸುವ ಸಂಸ್ಥೆ !
ಅಧ್ಯಾತ್ಮ ಇದು ಮನಸ್ಸು ಮತ್ತು ಬುದ್ಧಿಯ ಆಚೆಗಿನದ್ದಾಗಿರುತ್ತದೆ. ಮನಸ್ಸು ಮತ್ತು ಬುದ್ಧಿಯ ಲಯವಾಗದೇ ಅಧ್ಯಾತ್ಮದಲ್ಲಿ ಜೀವಿಸಲು ಆಗುವುದಿಲ್ಲ. ಹೀಗಿರುವಾಗ ಈಗಿನ ವೈಜ್ಞಾನಿಕ ಕಾಲದಲ್ಲಿ ಅಧ್ಯಾತ್ಮವನ್ನು ಬುದ್ಧಿಯಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಈ ಪ್ರಯತ್ನ ಎಷ್ಟು ಹಾಸ್ಯಾಸ್ಪದವಾಗಿದೆ, ಎಂಬುದು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರು ಸನಾತನ ಸಂಸ್ಥೆಯ ಮಾಧ್ಯಮದಿಂದ ತೋರಿಸಿಕೊಟ್ಟರು. ಹಿಂದೂ ಧರ್ಮದಲ್ಲಿಯ ಪ್ರತಿಯೊಂದು ಕೃತಿ, ಕರ್ಮಕಾಂಡದ ಹಿಂದೆ ಕಾರ್ಯಕಾರಣಭಾವ ಇರುತ್ತದೆ. ‘ನ್ಯೂಟನ್ ಗುರುತ್ವಾಕರ್ಷಣೆಯನ್ನು ಕಂಡು ಹಿಡಿದರು, ಎಂದು ಹೇಳುತ್ತಾರೆ; ಆದರೆ ಆ ಗುರುತ್ವಾಕರ್ಷಣೆ ಎಲ್ಲಿಯಾದರೂ ಕಾಣಿಸುತ್ತದೆಯೇ ? ಇಲ್ಲ; ಆದರೆ ಅದರ ಪರಿಣಾಮ ಕಾಣುತ್ತದೆ, ಅದೇ ರೀತಿ ಅಧ್ಯಾತ್ಮದಲ್ಲಿ ಶಕ್ತಿ, ಭಾವ, ಚೈತನ್ಯ, ಆನಂದ, ಶಾಂತಿ ಇವುಗಳನ್ನು ಅನುಭವಿಸುವುದಿರುತ್ತದೆ. ಅದು ಅಧ್ಯಾತ್ಮದಲ್ಲಿ ಹೇಳಿದಂತೆ ಕೃತಿ ಮಾಡಿದರೆ ಸಾಧ್ಯವಾಗುತ್ತದೆ. ಇದನ್ನೇ ಸನಾತನವು ಹೇಳಿದ್ದರಿಂದ ಹಾಗೂ ಅದರಂತೆ ಸಾಧನೆಯನ್ನು ಮಾಡಿ ಪ್ರತ್ಯಕ್ಷ ಅನುಭವವನ್ನು ಪಡೆದಿದ್ದರಿಂದ ಇಂದು ಅನೇಕ ಉನ್ನತ ಶಿಕ್ಷಣ ಪಡೆದವರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ. ಸದ್ಯದ ಯುವ ಪೀಳಿಗೆಯು ದೊಡ್ಡಪ್ರಮಾಣದಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿದೆ. ಇದರ ಕಾರಣ ಪ್ರತಿಯೊಬ್ಬರಿಗೆ ಈ ಬಿಡುವಿಲ್ಲದ ಜೀವನದಲ್ಲಿ ಆನಂದ ಬೇಕಾಗಿರುತ್ತದೆ ಮತ್ತು ಅದಕ್ಕಾಗಿ ಜೀವನವಿಡೀ ಒದ್ದಾಡುತ್ತಿರುತ್ತಾರೆ; ಆದರೆ ಕೊನೆಯ ತನಕ ಅವರಿಗೆ ಅದು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಯುವಕರು ಸನಾತನ ಸಂಸ್ಥೆಯ ಕಾರ್ಯದಲ್ಲಿ ತನು, ಮನ, ಧನದ ತ್ಯಾಗವನ್ನು ಮಾಡಿ ಪಾಲ್ಗೊಳ್ಳುವುದನ್ನು ನೋಡಿ ಅನೇಕ ಸಂಘಟನೆಗಳಿಗೆ ಇದು ಆಶ್ಚರ್ಯವೆನಿಸುತ್ತದೆ. ಇದರ ರಹಸ್ಯ ಇಂದು ತಿಳಿದುಕೊಳ್ಳುವ ಆವಶ್ಯಕತೆ ಇದೆ. ಇಂದಿನವರಿಗೆ ಸಂತರ ಅನುಭವಸಿದ್ಧ ಜ್ಞಾನಕ್ಕಿಂತ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ಸಿಕ್ಕಿದ ಮಾಹಿತಿಯ ಮೇಲೆ ಹೆಚ್ಚು ನಂಬಿಕೆ ಇರುತ್ತದೆ. ಆದ್ದರಿಂದ ೨೦೧೪ ರಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದವತಿಯಿಂದ ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಉಪಕರಣಗಳ ಮಾಧ್ಯಮದಿಂದ ಸಂಶೋಧನೆಯನ್ನು ಮಾಡಲಾಗುತ್ತಿದೆ. ‘ಹಿಂದೂ ಧರ್ಮದಲ್ಲಿನ ಆಚಾರ, ಧಾರ್ಮಿಕ ಕೃತಿ,ಸಾಮಾಜಿಕ ಕೃತಿ (ಉದಾ. ದೀಪಪ್ರಜ್ವಲನೆ, ಉದ್ಘಾಟನೆ ಇತ್ಯಾದಿ), ಯಜ್ಞ, ಅನುಷ್ಠಾನ, ಮಂತ್ರೋಚ್ಚಾರ ಇತ್ಯಾದಿ ವಿಷಯದ ಆಧ್ಯಾತ್ಮಿಕ ಮಹತ್ವವನ್ನು ಆಧುನಿಕ ವೈಜ್ಞಾನಿಕ ಪರಿಭಾಷೆಯಲ್ಲಿ ಸಮಾಜಕ್ಕೆ ತಿಳಿಸವುದು, ಇದು ಸಂಶೋಧನೆಯ ಉದ್ದೇಶವಾಗಿದೆ. ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಜುಲೈ ೨೦೧೬ ರಿಂದ ೩೧.೩.೨೦೧೯ ರ ತನಕ ೧೧ ರಾಷ್ಟ್ರೀಯ ಮತ್ತು ೩೪ ಅಂತರರಾಷ್ಟ್ರೀಯ ಹೀಗೆ ೪೫ ಪರಿಷತ್ತುಗಳಲ್ಲಿ ಶೋಧ ಪ್ರಬಂಧವನ್ನು ಮಂಡಿಸಿತು. ಅದರಲ್ಲಿ ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಲಭಿಸಿತು. ಇದನ್ನು ತಥಾಕಥಿತ ಬುದ್ಧಿಪ್ರಾಮಾಣ್ಯವಾದಿಗಳು ಗಮನದಲ್ಲಿಡಬೇಕು. ವಿದೇಶದಲ್ಲಿ ಯಾವರೀತಿ ಹಿಂದೂ ಧರ್ಮದ ಬಗ್ಗೆ ವೈಜ್ಞಾನಿಕ ಸ್ತರದಲ್ಲಿ ಅಭ್ಯಾಸವನ್ನು ಮಾಡಲು ಪ್ರಯತ್ನಿಸಲಾಗುತ್ತದೆಯೋ, ಅದೇ ರೀತಿ ಭಾರತದಲ್ಲಿ ಆಗುತ್ತಿರುವಂತೆ ಕಾಣಿಸುವುದಿಲ್ಲ. ಆದ್ದರಿಂದ ಈ ಅಭ್ಯಾಸಕ್ಕೆ ಮಹತ್ವವಿದೆ. ಪರಾತ್ಪರ ಗುರು ಡಾ. ಆಠವಲೆ ಇವರು ಸ್ವತಃ ಸಂಮ್ಮೋಹನ ಉಪಚಾರತಜ್ಞರಾಗಿದ್ದರು ಮತ್ತು ಅವರು ಈ ಸಂಶೋಧನೆಯನ್ನು ಮಾಡಿದರು ಅದನ್ನು ಅನೇಕ ಸ್ಥಳಗಳಲ್ಲಿ ಮಂಡಿಸಿದರು. ಇದೇ ಮಾರ್ಗದಲ್ಲಿ ಅವರು ಅಧ್ಯಾತ್ಮದಲ್ಲಿ ಕೇವಲ ಸಂಶೋಧನೆ ಮಾತ್ರವಲ್ಲದೇ, ಅದಕ್ಕನುಸಾರ ಸಾಧನೆಮಾಡಿ ಅದರ ಅನುಭೂತಿ ಪಡೆದರು ಮತ್ತು ಸಮಾಜಕ್ಕೆ ತಿಳಿಸುತ್ತಿದ್ದಾರೆ.
ಈಶ್ವರೀ ರಾಜ್ಯದ ಸ್ಥಾಪನೆ ಮಾಡುವುದು
ರಾಜನು ಧರ್ಮನಿಷ್ಠನಾಗಿದ್ದರೆ, ಪ್ರಜೆಗಳು ಧರ್ಮನಿಷ್ಠ ಇರುವರು. ಆಗ ಆ ಪ್ರಜೆಗಳಿಂದ ಪಾಪವೇ ಆಗುವುದಿಲ್ಲ; ಆದ್ದರಿಂದಲೇ ‘ರಾಜಾ ಕಾಲಸ್ಯ ಕಾರಣಮ್, ಎಂದು ಹೇಳಿದ್ದಾರೆ. ರಾಜನು ಅಧರ್ಮಿಯಾಗಿದ್ದರೆ, ರಾಜ್ಯವ್ಯವಸ್ಥೆ ಅಧರ್ಮಿಯಾಗಿರುತ್ತದೆ. ಇಂದಿನ ಪ್ರಜಾಪ್ರಭುತ್ವದ ಸ್ಥಿತಿಯನ್ನು ನೋಡಿದರೆ, ಅದಕ್ಕೆ ರಾಮರಾಜ್ಯದ ಉಪಮೆ ಕೊಡಲು ಎಂದಿಗೂ ಸಾಧ್ಯವಿಲ್ಲ. ಇಂದು ಭಾರತದಲ್ಲಿ ಹಿಂದೂಗಳ ದೇವತೆಗಳನ್ನು ಅವಮಾನಿಸಲಾಗುತ್ತಿದೆ, ಹಿಂದೂ ಧರ್ಮದಲ್ಲಿಯ ರೂಢಿ ಹಾಗೂ ಪರಂಪರೆಯನ್ನು ಸುಳ್ಳೆಂದು ಹೇಳಲಾಗುತ್ತಿದೆ, ಹಿಂದೂಗಳ ದೇವಸ್ಥಾನದ ಸರಕಾರಿಕರಣವಾಗುತ್ತಿದೆ, ಹಿಂದೂಗಳ ಮತಾಂತರ ನಿರಂತರ ನಡೆಯುತ್ತಿದೆ, ಹಿಂದೂ ಯುವತಿಯರು ‘ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆ, ಹಿಂದೂಗಳಿಗೆ ಧರ್ಮಶಿಕ್ಷಣ ಸಿಗದಿದ್ದುದರಿಂದ ಅವರು ದಿಕ್ಕು ತಪ್ಪಿದ್ದಾರೆ. ‘ಈ ಸ್ಥಿತಿಯನ್ನು ಬದಲಾಯಿಸಬೇಕಿದೆ, ಎಂದು ಹಲವರಿಗೆ ಅನಿಸುತ್ತದೆ; ಆದರೆ ಅದು ವೈಯಕ್ತಿಕವಾಗಿ ಏನೂ ಮಾಡಲು ಸಾಧ್ಯವಿಲ್ಲ. ಕೆಲವು ಸಂಘಟನೆಗಳು, ಸಂಸ್ಥೆಗಳು, ರಾಜಕೀಯ ಪಕ್ಷಗಳ ಮೇಲೆ ವಿಶ್ವಾಸವನ್ನಿಡಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಈ ವ್ಯವಸ್ಥೆಯನ್ನು ಬದಲಾಯಿಸಲು ಸನಾತನ ಸಂಸ್ಥೆಯು ಪ್ರಯತ್ನಿಸುತ್ತಿದೆ. ಒಬ್ಬೊಬ್ಬರಿಗೆ ಸಾಧನೆಯನ್ನು ಹೇಳುವುದು ಮತ್ತು ಅವರಿಂದ ಅದನ್ನು ಮಾಡಿಸಿಕೊಳ್ಳುವುದು ಅತ್ಯಂತ ಕಷ್ಟಕರವಾಗಿದೆ ಮತ್ತು ಸಮಯವೂ ಹೆಚ್ಚು ಹೋಗುತ್ತದೆ; ಆದರೆ ಅದನ್ನೇ ರಾಜಕಾರಣಿಗಳು ಹೇಳಿದರೆ, ಸಂಪೂರ್ಣ ದೇಶದಲ್ಲಿಯ ಜನರಿಂದ ಸಾಧನೆಯನ್ನು ಮಾಡಿಸಿಕೊಳ್ಳಬಹುದು. ಇಂದಿನ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಇದು ಸಾಧ್ಯವಿಲ್ಲದ್ದರಿಂದ ವ್ಯವಸ್ಥೆಯನ್ನೇ ಬದಲಾಯಿಸುವ ಅವಶ್ಯಕತೆ ಇದೆ. ಈ ಕಾರ್ಯವನ್ನು ಸನಾತನ ಸಂಸ್ಥೆಯು ಈಶ್ವರನ ಇಚ್ಛೆಯಂತೆ ಹಾಗೂ ಸಂತರ ಮಾರ್ಗದರ್ಶನದಲ್ಲಿ ಮಾಡುತ್ತಿದೆ. ನಿಃಸ್ವಾರ್ಥ ಭಾವದಿಂದ ಈಶ್ವರನ ಸೇವೆ ಎಂದು ಕಾರ್ಯವನ್ನು ಮಾಡುವ ಸನಾತನ ಸಂಸ್ಥೆಯ ಕಡೆಗೆ ಜನರು ಬರುತ್ತಿದ್ದಾರೆ. ಇದು ಕಳೆದ ೨೦ ವರ್ಷಗಳಲ್ಲಿ ಕಂಡು ಬರುತ್ತಿದೆ. ಪ್ರತಿಯೊಬ್ಬ ವ್ಯಕ್ತಿಯ ಆಧ್ಯಾತ್ಮಿಕ ಮತ್ತು ವ್ಯವಹಾರಿಕ ಉನ್ನತಿಗಾಗಿ ಅಪೇಕ್ಷಿತವಾಗಿರುವಂತಹ ಸಮಾಜವ್ಯವಸ್ಥೆ ಇರಬೇಕು. ಇದೇ ಉದ್ದೇಶದಿಂದ ಸನಾತನ ಸಂಸ್ಥೆಯ ಹಿಂದೂ ರಾಷ್ಟ್ರ (ಈಶ್ವರೀ ರಾಜ್ಯದ) ಸ್ಥಾಪನೆಗಾಗಿ ಪ್ರಯತ್ನ ನಡೆಯುತ್ತಿದೆ. ಕಾಲಾನುಸಾರ ಹಾಗೂ ವಿವಿಧ ಸಂತರು ಹೇಳಿದಂತೆ ೨೦೨೩ ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗುವುದು. ಮುಂದಿನ ೪ ವರ್ಷಗಳಲ್ಲಿ ಅದನ್ನು ಸಾಧಿಸಬೇಕಿದೆ. ಈ ಕಾರ್ಯವು ಈಶ್ವರನ ಇಚ್ಚೆ ಹಾಗೂ ಸಂತರ ಕೃಪೆಯಿಂದ ಆಗಲಿದೆ. ಅದಕ್ಕಾಗಿ ಪ್ರತಿಯೊಬ್ಬರು ಅಳಿಲು ಸೇವೆ ಮಾಡಬೇಕಿದೆ, ಅದಕ್ಕಾಗಿ ಸನಾತನ ಸಂಸ್ಥೆ ಪ್ರಯತ್ನ ಮಾಡುತ್ತಿದೆ. ಕಳೆದ ೨೦ ವರ್ಷಗಳಲ್ಲಿ ದೇಶದಲ್ಲಿಯ ಅನೇಕ ರಾಜ್ಯಗಳಲ್ಲಿ ಸಂಸ್ಥೆಯ ಪ್ರಸಾರವಾಗಿದೆ. ಕುಂಭಮೇಳದ ಮಾಧ್ಯಮದಿಂದ ಕೆಲವು ಸಾಧು, ಸಂತರು, ಮಹಂತರು ಸನಾತನದ ಕಾರ್ಯದೊಂದಿಗೆ ಜೋಡಿಸಲ್ಪಟ್ಟಿದ್ದಾರೆ. ಶಂಕರಾಚಾರ್ಯರ ಆಶೀರ್ವಾದವೂ ಸಂಸ್ಥೆಗೆ ಲಭಿಸಿದೆ. ಸಾಧು, ಸಂತ, ಮಹಂತರ ಆಶೀರ್ವಾದ ಸಿಗುವುದು ಇದು ಸನಾತನ ಸಂಸ್ಥೆಯ ೨೦ ವರ್ಷಗಳ ಕಾಲ ನಿರಪೇಕ್ಷವಾಗಿ ಮಾಡಿದ ಕಾರ್ಯದ ಪ್ರತಿಫಲವಾಗಿದೆ, ಎಂಬುದನ್ನು ಗಮನದಲ್ಲಿಡಬೇಕು. ಸನಾತನ ಸಂಸ್ಥೆಯ ಮುಂದಿನ ಮಾರ್ಗಕ್ರಮಣ ಇದೇ ದಿಕ್ಕಿನತ್ತ ಸಾಗಿ ‘ಭಾರತವನ್ನು ಮತ್ತೊಮ್ಮೆ ವಿಶ್ವಗುರು ಸ್ಥಾನದಲ್ಲಿ ವಿರಾಜಮಾನಗೊಳಿಸುವುದು, ಇದೇ ಸಂಸ್ಥೆಯ ಧ್ಯೇಯವಾಗಲಿದೆ. ಅದಕ್ಕಾಗಿ ‘ಹಿಂದೂಗಳು ಸಾಧನೆ ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಬೇಕು, ಇದೇ ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !