ಪ್ರತ್ಯಕ್ಷ ಈಶ್ವರನು ಸೃಷ್ಟಿಯ ರಚನೆಯ ಸಮಯದಲ್ಲಿ ಆಯುರ್ವೇದದ ನಿರ್ಮಿತಿ ಮಾಡಿದನು; ಆದ್ದರಿಂದ ಆಯುರ್ವೇದದ ಸಿದ್ಧಾಂತವು ವಿಶ್ವದ ಆರಂಭದಿಂದ ಅಬಾಧಿತವಿದೆ. ಯುಗಾನುಯುಗಗಳಲ್ಲಿ ಪ್ರತಿವರ್ಷ ಅವೇ ಋತುಗಳು ಬರುತ್ತವೆ ಮತ್ತು ಆಯುರ್ವೇದದಲ್ಲಿ ಹೇಳಿದ ಋತುಚರ್ಯಗಳೂ ಅದೇ ಇದೆ. ಇದರಿಂದಲೇ ಸತತವಾಗಿ ಬದಲಾಗುವ ಅಲೋಪಥಿಗಿಂತ ಶಾಶ್ವತ ವಾದ ಆಯುರ್ವೇದ ಎಷ್ಟು ಮಹಾನ ಇದೆ, ಎಂಬುದು ತಿಳಿಯುತ್ತದೆ. ಇಂದಿನ ಲೇಖನದಿಂದ ನಾವು ವಸಂತ ಋತುವಿನಲ್ಲಿ ಪಾಲಿಸುವ ಆರೋಗ್ಯ ನಿಯಮಗಳನ್ನು ತಿಳಿದುಕೊಳ್ಳೋಣ.
೧. ವೈದ್ಯರ ‘ತಂದೆ’ ವಸಂತ !
‘ದಕ್ಷಿಣಾಯನದಲ್ಲಿ ಭಾರತದಿಂದ ದೂರ ಹೋಗಿರುವ ಸೂರ್ಯನು ಚಳಿಗಾಲದ ಕೊನೆಗೆ ಭಾರತದ ಸಮೀಪ ಬರುತ್ತಿದ್ದಂತೆ ಹಿಮಾಲಯದ ಮೇಲಿನ ಹಿಮವು ಕ್ರಮೇಣ ಕರಗುತ್ತ ಹೋಗುತ್ತದೆ. ಅದರಂತೆಯೇ ಚಳಿಗಾಲದಲ್ಲಿ ಶರೀರದಲ್ಲಿ ಸಂಗ್ರಹಿತವಾದ ಕಫ ಸೂರ್ಯನ ಕಿರಣಗಳಿಂದ ಕರಗಿಹೋಗುತ್ತದೆ. ಚಳಿ ಮುಗಿಯುವ ತನಕ ತೀವ್ರ ಬೇಸಿಗೆಕಾಲ ಪ್ರಾರಂಭವಾಗುವ ವರೆಗಿನ ಕಾಲವೆಂದರೆ ವಸಂತ ಋತು. ‘ಚೈತ್ರ-ವೈಶಾಖ ವಸಂತಋತು’, ಎಂಬುದನ್ನು ನಾವು ಶಾಲೆಯಲ್ಲಿ ಕಲಿತ್ತಿದ್ದರೂ, ‘ಈಗಿನ ಮಾಲಿನ್ಯದಿಂದಾಗಿ ಸುಮಾರು ಮಾರ್ಚ ೧೫ ರಿಂದ ಏಪ್ರಿಲ್ ೧೫ ರ ವರೆಗೆ ವಸಂತ ಋತು ಇರುತ್ತದೆ’, ಎಂದು ಹೇಳಬಹುದು. ಈ ದಿನಗಳಲ್ಲಿ ಹೆಚ್ಚಾದ ಕಫದಿಂದ ನೆಗಡಿ, ಕೆಮ್ಮು, ಜ್ವರ, ದಮ್ಮು ಇಂತಹ ರೋಗಗಳು ಹೆಚ್ಚಾಗುತ್ತದೆ. ಈ ದಿನಗಳಲ್ಲಿ ರೋಗಗಳ ಪ್ರಮಾಣ ಚಳಿಗಾಲಕ್ಕಿಂತ ಹೆಚ್ಚು ಇರುತ್ತದೆ; ಆದ್ದರಿಂದ ‘ವೈದ್ಯರಿಗೆ ಶಾರದಿ ಮಾತಾ-ಪಿತಾ ಚ ಕುಸುಮಾಕರಃ |’ ಅಂದರೆ ಶರದ ಋತುವು ವೈದ್ಯರ ತಾಯಿ, ವಸಂತ ಋತುವು ವೈದ್ಯರ ತಂದೆ’, ಎಂದು ತಮಾಷೆಯಿಂದ ಅನ್ನುತ್ತಾರೆ.
೨. ಕಫ ಸಮತೋಲನದಲ್ಲಿಡಲು ವಸಂತ ಋತುಚರ್ಯ !
ಕಫ ಇದು ಸ್ನಿಗ್ಧ (ಅಂಟು), ತಣ್ಣಗೆ ಮತ್ತು ಗುರು (ಭಾರ) ಈ ಗುಣಗಳಿರುವುದರಿಂದ ವಸಂತ ಋತುಗಳಲ್ಲಿ ನಮ್ಮ ಆಹಾರದಿಂದ, ಹಾಗೆಯೇ ಆಚರಣೆಯಿಂದ ಈ ಗುಣಗಳು ಹೆಚ್ಚಾಗದೇ ಅವು ಸಮತೋಲನದಲ್ಲಿರುವ ವ್ಯವಸ್ಥೆ, ಅಂದರೆ ವಸಂತ ಋತುಚರ್ಯ.
೩. ಕಫದ ‘ನಿರ್ಮಾಪಕ’ ನೀರು !
ಕಫ ಈ ಶಬ್ದದ ವ್ಯಾಖ್ಯೆಯ ಮೂಲಃ ‘ಕೇನ ಫಲತಿ ಇತಿ ಕಫಃ |’ ‘ಕ’ ಅಂದರೆ ‘ನೀರು’. ನೀರಿನಿಂದ ಉತ್ಪನ್ನವಾಗುವುದು ಕಫ. ಅದಕ್ಕಾಗಿ ಈ ದಿನಗಳಲ್ಲಿ ಕುಡಿಯುವ ನೀರಿನಲ್ಲಿ ಪ್ರತಿಲೀಟರ್‌ಗೆ ಕಾಲು ಚಮಚ ಶುಂಠಿ ಅಥವಾ ಭದ್ರಮುಷ್ಟಿ ಇವುಗಳ ಪುಡಿ ಹಾಕಿ ಕುಡಿದರೆ ಕಫವು ಹೆಚ್ಚಾಗುವುದಿಲ್ಲ. ಉಷ್ಣತೆಯ ತೊಂದರೆ ಇರುವವರು ಶುಂಠಿಗಿಂತ ಭದ್ರಮುಷ್ಟಿಯ ಪುಡಿಯನ್ನು ಬಳಸಬೇಕು.
೪. ಸಿಹಿ ಬೇಡ, ಕಹಿ… !
ಸಿಹಿ ಮತ್ತು ಹುಳಿ ಪದಾರ್ಥಗಳನ್ನು ಹೆಚ್ಚು ತಿನ್ನಬಾರದು. ಈ ಋತುಗಳ ಆರಂಭದ ೧೫ ದಿನ ದಿನನಿತ್ಯ ಬೇವಿನಸೊಪ್ಪು ೪-೫ ಎಳೆ ಎಲೆಗಳನ್ನು ತಿನ್ನಬೇಕು, ಅಂದರೆ ಉತ್ತಮ ಆರೋಗ್ಯರಕ್ಷಣೆಯಾಗುತ್ತದೆ. ಯುಗಾದಿ ಹಬ್ಬಕ್ಕೆ ಧರ್ಮಧ್ವಜವನ್ನು ಏರಿಸುವಾಗ ಬೇವಿನ ಎಲೆ ಬಳಸುತ್ತಾರೆ, ಅದಕ್ಕೆ ಇದೂ ಒಂದು ಕಾರಣವಿದೆ.
೫. ಕಫನಾಶಕ ದ್ವಿದಳಧಾನ್ಯಗಳು
ದ್ವಿದಳಧಾನ್ಯಗಳಿಗೆ ಆಯುರ್ವೇದದಲ್ಲಿ ‘ಶಿಂಬಿ ಧಾನ್ಯ’ ಎಂದು ಕರೆಯುತ್ತಾರೆ. ಇದರ ಗುಣಗಳನ್ನು ಹೇಳುವಾಗ ಆಚಾರ್ಯರು, ‘ಮೇದಃ ಶ್ಲೇಷ್ಮಾಸ್ತ್ರಪಿತ್ತೇಷು ಹಿತಂ ಲೇಪೋಪಸೆಕಯೋಃ |’ ಅಂದರೆ ‘ದ್ವಿದಳಧಾನ್ಯವು ಅನಾವಶ್ಯಕ ಮೇದ ಮತ್ತು ಕಫ ಕಡಿಮೆ ಮಾಡುವ ಸಲುವಾಗಿ, ಹಾಗೆಯೇ ರಕ್ತ ಮತ್ತು ಪಿತ್ತ ಇವುಗಳಿಗೆ ಲಾಭದಾಯಕವಿದೆ. ದ್ವಿದಳಧಾನ್ಯಗಳ ಹಿಟ್ಟನ್ನು ಉಟಣೆಯಂತೆ ಉಪಯೋಗಿಸಿದರೆ ಒಳ್ಳೆಯದು’, ಯಾರಿಗೆ ದ್ವಿದಳಧಾನ್ಯಗಳು ಪಚನವಾಗುವುದಿಲ್ಲವೋ, ಅವರು ಹೆಸರುಕಾಳು ಮತ್ತು ಚನ್ನಂಗಿಕಾಳುಗಳನ್ನು ಆಹಾರದಲ್ಲಿ ಇಡ
ಬೇಕು; ಏಕೆಂದರೆ ಈ ದ್ವಿದಳಧಾನ್ಯಗಳು ಪಚನವಾಗಲು ಹಗುರವಿರುತ್ತದೆ.
೬. ಎಣ್ಣೆ ಪದಾರ್ಥಗಳು ಬೇಡ !
ಸ್ನಿಗ್ಧ (ಎಣ್ಣೆ) ಪದಾರ್ಥಗಳಿಂದ ಕಫವು ಹೆಚ್ಚಾಗುವುದರಿಂದ, ಇಂತಹ ಪದಾರ್ಥಗಳನ್ನು ಅಲ್ಪ ಪ್ರಮಾಣದಲ್ಲಿ ತಿನ್ನಬೇಕು.
೭. ಧಾನ್ಯಗಳು ಹಳೆಯ ಅಥವಾ ಹುರಿದಿದ್ದು ಇರಬೇಕು
‘ನವಂ ಧಾನ್ಯಮಭಿಷ್ಯನ್ದಿ ಲಘು ಸಂವತ್ಸರೋಷಿತಮ್ |’ ಅಂದರೆ ‘ಹೊಸ ಧಾನ್ಯಗಳು ಶರೀರದಲ್ಲಿನ ಸ್ರಾವ (ಕಫ) ಹೆಚ್ಚಿಸುವ ಮತ್ತು ಪಚನಕ್ಕೆ ಭಾರವಿರುತ್ತದೆ, ಅದಕ್ಕೆ ಒಂದು ವರ್ಷ ಹಳೆಯ ಧಾನ್ಯಗಳು ಅದರ ವಿರುದ್ಧ ಧರ್ಮದ ಅಂದರೆ ಪಚನಕ್ಕೆ ಹಗುರವಿರುತ್ತವೆ’, ಎಂದು ಆಯುರ್ವೇದದಲ್ಲಿ ಹೇಳಿದೆ. ಕಫವು ಹೆಚ್ಚಾಗಬಾರದು ಮತ್ತು ಹೆಚ್ಚಿದ ಕಫ ಕಡಿಮೆಯಾಗಬೇಕು, ಅದಕ್ಕಾಗಿ ಇಂತಹ ಧಾನ್ಯಗಳನ್ನು ತಿನ್ನಬೇಕು. ಹಳೆಯ ಧಾನ್ಯಗಳು ಸಿಗದಿದ್ದರೆ, ಹೊಸ ಧಾನ್ಯಗಳನ್ನು ಹುರಿದು ಉಪಯೋಗಿಸಿದರೂ ಅದೇ ಲಾಭವಾಗುತ್ತದೆ.
೮. ವ್ಯಾಯಾಮ ಮಾಡಿರಿ !
ವ್ಯಾಯಾಮದಿಂದ ಕಫ ಕಡಿಮೆಯಾಗುತ್ತದೆ. ಅದಕ್ಕಾಗಿ ವಸಂತ ಋತುವಿನಲ್ಲಿ ಅರ್ಧಶಕ್ತಿ ವ್ಯಾಯಾಮ ಮಾಡಬೇಕು, ಎಂದು ಶಾಸ್ತ್ರದಲ್ಲಿ ಹೇಳಿದೆ. ವ್ಯಾಯಾಮ ಮಾಡುವಾಗ ಬಾಯಿಯಿಂದ ಉಸಿರು ತೆಗೆದುಕೊಳ್ಳುವ ಅವಶ್ಯಕತೆ ಅನಿಸತೊಡಗಿದರೆ ಅದರ ಅರ್ಥ ಅರ್ಧ ಶಕ್ತಿ ಉಪಯೋಗಿಸಲಾಗಿದೆ, ಎಂದು ತಿಳಿಯಬೇಕು. ದಿನಕ್ಕೆ ಸ್ವಲ್ಪ ಸ್ವಲ್ಪ ಹೊತ್ತು ಅರ್ಧಗಂಟೆ ಅಥವಾ ೧ ಗಂಟೆ ದಿನನಿತ್ಯ ವ್ಯಾಯಾಮವನ್ನು ಮಾಡಬೇಕು.
೯. ಹಗಲಿನಲ್ಲಿ ಮಲಗುವುದು ವರ್ಜ್ಯ !
‘ರಾತ್ರೌ ಜಾಗರಣಂ ರೂಕ್ಷಂ ಸ್ನಿಗ್ಧಂ ಪ್ರಸ್ವಪನಂ ದಿವಾ |’ ಅಂದರೆ ‘ರಾತ್ರಿ ಜಾಗರಣೆ ಮಾಡುವುದರಿಂದ ಶರೀರದಲ್ಲಿ ಶುಷ್ಕತೆ, ಹಗಲು ಮಲಗುವುದರಿಂದ ಸ್ನಿಗ್ಧತೆ ಹೆಚ್ಚುತ್ತದೆ.’ ಹಗಲು ಮಲಗುವುದರಿಂದ ಶರೀರದಲ್ಲಿ ಅನಾವಶ್ಯಕ ಸ್ರಾವ ನಿರ್ಮಾಣವಾಗುತ್ತವೆ ಮತ್ತು ಅದರಿಂದ ಗಂಟಲಿನಲ್ಲಿ ಕಫ ಆಗುವುದು, ಮೈ ಭಾರವಾಗುವುದು, ಬುದ್ಧಿ ಮಂದವಾಗುವುದು ಇಂತಹ ರೋಗಗಳಾಗುತ್ತವೆ. ವಸಂತ ಋತುವಿನಲ್ಲಿ ಆದಷ್ಟು ಮಧ್ಯಾಹ್ನ ಮಲಗಬಾರದು. ವೃದ್ಧರು, ರೋಗಿ ಗಳು ಮತ್ತು ತುಂಬಾ ದಣಿವು ಆಗಿರುವ ವ್ಯಕ್ತಿಗಳು ಮಧ್ಯಾಹ್ನ ಮಲಗಿದರೆ ನಡೆಯುತ್ತದೆ.
೧೦. ಕಫಕ್ಕೆ ಸರ್ವಶ್ರೇಷ್ಠ ಔಷಧಿ – ಜೇನುತುಪ್ಪ !
ಜೇನುತುಪ್ಪವು ಕಫದ ಸಲುವಾಗಿ ಸರ್ವಶ್ರೇಷ್ಠ ಔಷಧಿಯಾಗಿದೆ. ಈ ಋತುವಿನಲ್ಲಿ ಆಗುವ ನೆಗಡಿ-ಕೆಮ್ಮುಗಳ ಮೇಲೆ ಸ್ವಲ್ಪ ಸ್ವಲ್ಪ ಸಮಯದ ನಂತರ ಜೇನುತುಪ್ಪವನ್ನು ನೆಂಚಬೇಕು. ದಿನವಿಡಿ ೫-೬ ಚಮಚೆಯಷ್ಟು ಜೇನುತುಪ್ಪ ತಿನ್ನಬೇಕು.
೧೧. ಆನಂದದಿಂದ ಇರಬೇಕು !
ವಸಂತ ಋತು ಇದು ಆನಂದ ಹೆಚ್ಚಿಸುವ ಋತು ಇದೆ. ಈ ಋತುವಿನಲ್ಲಿ ಕೋಗಿಲೆ ಹಾಡಲು ಆರಂಭಿಸುತ್ತದೆ. ಗಿಡ-ಮರಗಳಿಗೆ ಹೊಸ ಚಿಗುರು ಒಡೆದು ಅರಳುತ್ತವೆ. ಯುಗಾದಿಹಬ್ಬ, ರಾಮನವಮಿ ಇಂತಹ ಹಬ್ಬ-ಉತ್ಸವಗಳು ಈ ಋತುವಿನಲ್ಲಿ ಬರುತ್ತವೆ. ಆನಂದದಿಂದ ಇರುವುದರಿಂದ ಆರೋಗ್ಯ ಸರಿಯಿರುತ್ತದೆ ಮತ್ತು ಆದುದರಿಂದ ಯಾವಾಗಲೂ ಆನಂದದಿಂದ ಇರಬೇಕು.
ಈ ಋತುವಿನಲ್ಲಿ ಹೇಳಿದ ನಿಯಮಗಳನ್ನು ಪಾಲಿಸಿ ಎಲ್ಲರಿಗೆ ಸಾಧನೆಗಾಗಿ ಉತ್ತಮ ಆರೋಗ್ಯ ಲಭಿಸಲಿ ಮತ್ತು ಅವರ ಆನಂದವು ಹೆಚ್ಚಲಿ, ಎಂದು ಭಗವಾನ ಧನ್ವಂತರಿ ದೇವರ ಚರಣಗಳಲ್ಲಿ ಪ್ರಾರ್ಥನೆ !’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.