ದೇವದ (ಪನವೇಲ) – ಇಲ್ಲಿನ ಸನಾತನದ ಆಶ್ರಮದ ಸಾಧಕರಿಗಾಗಿ ಪರಾತ್ಪರ ಗುರು ಡಾ. ಆಠವಲೆಯವರ ಸಾಕ್ಷಾತ ಪ್ರತಿರೂಪವಾಗಿರುವ, ಸನಾತನದ ಪ್ರತಿಯೊಬ್ಬ ಸಾಧಕನ ಮೇಲೆ ಅಪಾರ ಪ್ರೀತಿಯ ಸುರಿಮಳೆಯ ಕೃಪೆ ಹರಿಸುವ, ಸಾವಿರಾರು ಸಾಧಕರಿಗೆ ಮಂತ್ರೋಪಾಯ ನೀಡಿ ಅವರಿಗೆ ಜೀವನದಾನವನ್ನು ನೀಡುವ, ಜ್ಞಾನಯೋಗಿ ಮತ್ತು ಋಷಿತುಲ್ಯ ಪರಾತ್ಪರ ಗುರು ಪಾಂಡೆ ಮಹಾರಾಜರು (ವಯಸ್ಸು ೯೨ ವರ್ಷಗಳು) ರವಿವಾರ, ಮಾಘ ಕೃಷ್ಣ ಪಕ್ಷ ದ್ವಾದಶಿ, ಕಲಿಯುಗ ವರ್ಷ ೫೧೨೦ (ಅಂದರೆ ೩ ಮಾರ್ಚ ೨೦೧೯) ರಂದು ಸಾಯಂಕಾಲ ೫ ಗಂಟೆ ೨೨ ನಿಮಿಷಕ್ಕೆ ಇಲ್ಲಿನ ಸನಾತನದ ಆಶ್ರಮದಲ್ಲಿ ದೇಹ ತ್ಯಜಿಸಿದರು.
೯೩ ನೇ ವಯಸ್ಸಿನಲ್ಲಿಯೂ ಅವಿರತ ಸೇವಾನಿರತರಾಗಿದ್ದು ಮುಂಬರುವ ಹಿಂದೂ ರಾಷ್ಟ್ರಕ್ಕಾಗಿ ಮತ್ತು ಅದಕ್ಕೂ ಮೊದಲು ಬರುವ ಆಪತ್ಕಾಲಕ್ಕಾಗಿ ಅಖಿಲ ಮನುಕುಲಕ್ಕೆ ಉಪಯುಕ್ತ ಜ್ಞಾನಾಮೃತವನ್ನು ನೀಡುವ ಪರಾತ್ಪರ ಗುರು ಪಾಂಡೆ ಮಹಾರಾಜರಿಗೆ ೨೫ ಫೆಬ್ರವರಿಗೆ ರಾತ್ರಿ ಹೃದಯಾಘಾತವಾಗಿತ್ತು. ಅದರ ನಂತರ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಯ ನಂತರ ಮಾರ್ಚ ೨ ರಂದು ರಾತ್ರಿ ಅವರನ್ನು ಇಲ್ಲಿನ ಸನಾತನದ ಆಶ್ರಮಕ್ಕೆ ಪುನಃ ಕರೆ ತರಲಾಗಿತ್ತು. ಹೃದಯಾಘಾತವಾಗುವ ೨ ನಿಮಿಷಗಳ ಮೊದಲು ಪರಾತ್ಪರ ಗುರು ಪಾಂಡೆ ಮಹಾರಾಜರು ದೇವದ ಆಶ್ರಮದಲ್ಲಿನ ಓರ್ವ ಸಾಧಕನಿಗೆ, “ಮೃತ್ಯು ಶಾಂತವಾಗಿ ಬಂದರೆ ಒಳ್ಳೆಯದಾಗುವುದು !” ಎಂದು ಹೇಳಿದರು. ಪ್ರತ್ಯಕ್ಷದಲ್ಲಿ ಅವರು ಅತ್ಯಂತ ಶಾಂತ ಸ್ಥಿತಿಯಲ್ಲಿ ದೇಹ ತ್ಯಜಿಸಿದರು. ಪರಾತ್ಪರ ಗುರು ಪಾಂಡೆ ಮಹಾರಾಜರು ೩ ಜನವರಿ ೨೦೦೭ ರಿಂದ ದೇವದ, ಪಾನವೇಲ ಇಲ್ಲಿನ ಸನಾತನ ಆಶ್ರಮದಲ್ಲಿ ವಾಸ್ತವ್ಯಕ್ಕಾಗಿ ಇದ್ದರು.
ದೇಹತ್ಯಾಗದ ಸಮಯದಲ್ಲಿ ಅವರ ಬಳಿ ಅವರ ಪುತ್ರ ಶ್ರೀ. ಅಮೋಲ ಪಾಂಡೆ, ಸೊಸೆ ಸೌ. ದೇವಯಾನಿ ಪಾಂಡೆ, ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಮೊಮ್ಮಗಳಾದ ಕು. ಗೌರಿ ಮತ್ತು ಮಮ್ಮೊಗ ಶ್ರೀ. ಸೌರಭ ಹಾಗೂ ಇತರ ಸಂಬಂಧಿಕರು ಉಪಸ್ಥಿತರಿದ್ದರು.
ಮಾರ್ಚ ೪ ರಂದು ಪರಾತ್ಪರ ಗುರು ಪಾಂಡೆ ಮಹಾರಾಜರ ಅಂತಿಮಸಂಸ್ಕಾರದ ವಿಧಿ ಮಾಡಲಾಯಿತು.
ಪರಾತ್ಪರ ಗುರು ಪಾಂಡೆ ಮಹಾರಾಜರು ಅಖಿಲ ಮನುಕುಲಕ್ಕಾಗಿ ಸನಾತನದ ಸಾಧಕರ ಮೇಲೆ ಮಾಡಿದ ಕೃಪೆಗಾಗಿ ಸನಾತನದ ಸದ್ಗುರು, ಸಂತ ಮತ್ತು ಸಾಧಕರ ವತಿಯಿಂದ ಅವರ ಪಾವನ ಚರಣಗಳಲ್ಲಿ ಅನಂತ ಕೋಟಿ ಕೃತಜ್ಞತೆಗಳು !
ಕರ್ಮಯೋಗ, ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಅದ್ವಿತಿಯ ಸುರೇಖ ಸಂಗಮವಿರುವ
ಪರಾತ್ಪರ ಗುರು ಪಾಂಡೆ ಮಹಾರಾಜರ ಚರಣಗಳಲ್ಲಿ ಶಿರಸಾಷ್ಟಾಂಗ ನಮಸ್ಕಾರಗಳು !
‘ಭಕ್ತಿಯೋಗದಲ್ಲಿ ಮಾಧುರ್ಯವಿರುತ್ತದೆ, ಜ್ಞಾನಯೋಗದಲ್ಲಿ ಒಂದು ರೀತಿ ಶುಷ್ಕತೆ ಇರುತ್ತದೆ. ಪರಾತ್ಪರ ಗುರು ಪಾಂಡೆ ಮಹಾರಾಜರಲ್ಲಿ ಭಕ್ತಿಯೋಗ ಮತ್ತು ಜ್ಞಾನಯೋಗ ಇವುಗಳ ಸುರೇಖ ಸಂಗಮವಿತ್ತು. ಇತರ ಎಲ್ಲಿಯೂ ಹೀಗೆ ಅನುಭವಿಸಲು ಸಿಗಲಾರದು. ಈ ಸಂಗಮದಿಂದ, ಅಂದರೆ ಅವರ ಮಾತಿನಲ್ಲಿನ ಮಾಧುರ್ಯದಿಂದಾಗಿ ಮತ್ತು ಜ್ಞಾನದಿಂದಾಗಿ ‘ಅವರ ಮಾತುಗಳನ್ನು ಸತತವಾಗಿ ಕೇಳುತ್ತಲೇ ಇರಬೇಕು’, ಅನಿಸುತ್ತಿತ್ತು. ನಾವು ದೂರವಾಣಿಯಿಂದ ಮಾತನಾಡುವಾಗ ಶೇ. ೮೦ ರಷ್ಟು ಅವರ ಮಾತುಗಳೇ ಇರುತ್ತಿದ್ದವು ಮತ್ತು ನಾನು ಅದರ ಆನಂದ ಪಡೆಯುತ್ತಿದ್ದೆನು. ೧೮.೨.೨೦೦೫ ರಲ್ಲಿ ಆದ ನಮ್ಮ ಮೊದಲನೇ ಭೇಟಿಯಿಂದ ನಾನು ಇದನ್ನು ಅನುಭವಿಸುತ್ತಿದ್ದೇನೆ.
ಅವರ ಲೇಖನ ಕೇವಲ ಅಧ್ಯಾತ್ಮಶಾಸ್ತ್ರಕ್ಕೆ ಸಂಬಂಧಪಟ್ಟಿರುತ್ತಿರಲಿಲ್ಲ, ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಕುರಿತು ಎಲ್ಲರಿಗೂ ತಿಳಿಯುವಂತೆ ಬರೆಯುತ್ತಿದ್ದರು. ಆದುದರಿಂದ ಅದು ಸನಾತನ ಪ್ರಭಾತದಲ್ಲಿ ನಿಯಮಿತವಾಗಿ ಮುದ್ರಣವಾಗುತ್ತಿತ್ತು. ಆಧ್ಯಾತ್ಮಿಕ ಕಾರಣಗಳಿಂದ ದೇಶ-ವಿದೇಶಗಳಲ್ಲಿನ ಸಾಧಕರಿಗೆ ತೊಂದರೆಯಾಗುತ್ತಿದ್ದರೆ ಅವರು ರಾತ್ರಿ-ಮಧ್ಯರಾತ್ರಿ ಯಾವಾಗ ಉಪಾಯ ಕೇಳಿದರೂ ತಕ್ಷಣ ಪ್ರೀತಿಯಿಂದ ಹೇಳುತ್ತಿದ್ದರು ಮತ್ತು ನಂತರ ಸಾಧಕರಿಗೆ ವಿಚಾರಿಸುತ್ತಿದ್ದರು, ಅಂದರೆ ಅವರು ಅಖಂಡ ಕರ್ಮಯೋಗಿಗಳೂ ಇದ್ದರು. ಅವರು ಹೇಳಿದ ಉಪಾಯಗಳಿಂದ ಸಾವಿರಾರು ಸಾಧಕರಿಗೆ ಲಾಭವಾಗಿದೆ.
‘ಪರಾತ್ಪರ ಗುರು ಪಾಂಡೆ ಮಹಾರಾಜರ ಕೃಪಾದೃಷ್ಟಿ ನಮ್ಮೆಲ್ಲರ ಮೇಲೆ ಅಖಂಡವಾಗಿರಲಿ’, ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ.’
– (ಪರಾತ್ಪರ ಗುರು) ಡಾ. ಆಠವಲೆ