ಸಂಧಿಕಾಲ ಮತ್ತು ಸಂಧಿಕಾಲದಲ್ಲಿ ಆಚಾರಪಾಲನೆಯ ಮಹತ್ವ
ಮುಸ್ಸಂಜೆಯ ಸಮಯದಲ್ಲಿ ಮನೆಯಲ್ಲಿ ಮತ್ತು ತುಳಸಿಯ ಹತ್ತಿರ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುವುದು ಮತ್ತು ಆ ಸಮಯದಲ್ಲಿ ವಾತಾವರಣದಲ್ಲಿನ ಕೆಟ್ಟ ಶಕ್ತಿಗಳಿಂದ ತೊಂದರೆಯಾಗಬಾರದೆಂದು ಮನೆಯಲ್ಲಿಯೇ ಇರುವುದು: ‘ಮುಸ್ಸಂಜೆಯ ಸಮಯದಲ್ಲಿ (ದೀಪವನ್ನು ಹಚ್ಚುವ ಸಮಯದಲ್ಲಿ) ದೇವರ ಮುಂದೆ ಮತ್ತು ತುಳಸಿಯ ಮುಂದೆ ದೀಪವನ್ನು ಹಚ್ಚುವುದರಿಂದ ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ. ಇದರಿಂದ ಮನೆಯಲ್ಲಿರುವ ವ್ಯಕ್ತಿಗಳು ವಾತಾವರಣದಲ್ಲಿನ ಕೆಟ್ಟ ಶಕ್ತಿಗಳ ಸಂಚಾರದಿಂದಾಗುವ ತೊಂದರೆದಾಯಕ ಲಹರಿಗಳ ಹಲ್ಲೆಗಳಿಂದ ರಕ್ಷಿಸಲ್ಪಡುತ್ತಾರೆ. ಆದುದರಿಂದ ಸಾಧ್ಯವಿದ್ದಷ್ಟು ದೀಪ ಹಚ್ಚುವ ಸಮಯಕ್ಕಿಂತ ಮೊದಲೇ ಮನೆಗೆ ಬರಬೇಕು ಮತ್ತು ದೀಪ ಹಚ್ಚಿದನಂತರ ಮನೆಯಿಂದ ಹೊರಗೆ ಹೋಗಬಾರದು. ಬಹಳಷ್ಟು ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಗಳು ಮುಸ್ಸಂಜೆಯ ಸಮಯದಲ್ಲಿಯೇ ಹೆಚ್ಚಿನ ಪ್ರಮಾಣ ದಲ್ಲಿ ಆಗುತ್ತವೆ. ಅಘೋರಿ ವಿದ್ಯೆಯ ಉಪಾಸಕರು ಮುಸ್ಸಂಜೆಯ ಸಮಯದಲ್ಲಿ ವಾತಾವರಣದ ಕಕ್ಷೆಯನ್ನು ಪ್ರವೇಶಿಸುವ ಕೆಟ್ಟ ಶಕ್ತಿಗಳನ್ನು ವಶಪಡಿಸಿಕೊಂಡು ಅವುಗಳಿಂದ ಕೆಟ್ಟ ಕೃತ್ಯಗಳನ್ನು ಮಾಡಿಸಿಕೊಳ್ಳುತ್ತಾರೆ. ಆದುದರಿಂದ ಮುಸ್ಸಂಜೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅಪಘಾತಗಳು, ಕೊಲೆಗಳು ಆಗುತ್ತವೆ ಅಥವಾ ಬಲಾತ್ಕಾರದಂತಹ ಕೃತಿಗಳು ಘಟಿಸುತ್ತವೆ. ಈ ಕಾಲಕ್ಕೆ ‘ತೊಂದರೆದಾಯಕ ಅಥವಾ ವಿನಾಶದ ಸಮಯ’ ಎಂದು ಹೇಳುತ್ತಾರೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ನಾಮದಿಂದ ಬರೆಯುತ್ತಾರೆ, ೨೧.೨.೨೦೦೫, ಮಧ್ಯಾಹ್ನ ೧.೨೮)
ದೇವರ ಮುಂದೆ ದೀಪ ಹಚ್ಚಿದ ನಂತರ ಶ್ಲೋಕಗಳನ್ನು ಹೇಳಬೇಕು
ಶ್ಲೋಕಪಠಣದ ಲಾಭ
ಅ.‘ಶುಭಂ ಕರೋತಿ ಕಲ್ಯಾಣಂ…’ ಇಂತಹ ಶ್ಲೋಕಗಳನ್ನು ಹೇಳಿ ದೀಪದ ಸ್ತುತಿಯನ್ನು ಮಾಡಿ ಕೆಟ್ಟ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಮಾರಕ ಕಾರ್ಯವನ್ನು ಮಾಡಬೇಕು.’ – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳ ಇವರು ಓರ್ವ ವಿದ್ವಾಂಸ ಈ ನಾಮದಿಂದ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)
ಆ. ‘ಶ್ಲೋಕಪಠಣದಿಂದ ನಿರ್ಮಾಣವಾಗುವ ಸಾತ್ತ್ವಿಕ ಸ್ಪಂದನಗಳಿಂದ ಮನೆಯ ಶುದ್ಧಿಯಾಗುತ್ತದೆ. ಇದರಿಂದ ಕೆಟ್ಟ ಶಕ್ತಿಗಳ ತೊಂದರೆಯೂ ಕಡಿಮೆಯಾಗುತ್ತದೆ.
ಇ. ದೀಪ ಹಚ್ಚಿದನಂತರ ಮಾಡುವ ಸ್ತೋತ್ರಪಠಣದಿಂದ ಮಕ್ಕಳಿಗೆ ಸ್ತೋತ್ರಗಳು ಬಾಯಿಪಾಠವಾಗುತ್ತವೆ, ವಾಣಿಯು ಶುದ್ಧವಾಗುತ್ತದೆ ಮತ್ತು ಉಚ್ಚಾರ ಸ್ಪಷ್ಟವಾಗಲು ಸಹಾಯವಾಗುತ್ತದೆ.’
ಇತರ ಅಂಶಗಳು
ಅ. ಮುಸ್ಸಂಜೆಯ ಸಮಯದಲ್ಲಿ ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಾಬಲ್ಯವು ಹೆಚ್ಚಿರುತ್ತದೆ. ಆದುದರಿಂದ ವಾಯುಮಂಡಲದಲ್ಲಿರುವ ಈ ಕೆಟ್ಟ ಶಕ್ತಿಗಳು ಮಕ್ಕಳ ಮನಸ್ಸು ಮತ್ತು ಬುದ್ಧಿಯ ಮೇಲೆ ಆಕ್ರಮಣ ಮಾಡುವ ಸಾಧ್ಯತೆಯು ಅಧಿಕವಾಗಿರುತ್ತದೆ.
ಆ. ವಾಯುಮಂಡಲದಲ್ಲಿ ಕಾರ್ಯನಿರತವಾಗಿರುವ ಕೆಟ್ಟ ಶಕ್ತಿಗಳು ರಾತ್ರಿ ಸಮಯದಲ್ಲಿ ಮಕ್ಕಳ ಮನಸ್ಸಿನಲ್ಲಿ ಹೆದರಿಕೆಯನ್ನುಂಟು ಮಾಡುತ್ತವೆ.
ಇ. ಮುಸ್ಸಂಜೆಯ ಸಮಯದಲ್ಲಿ ‘ಶುಭಂ ಕರೋತಿ…’ ಹೇಳುವುದರಿಂದ ದೇಹದ ಸುತ್ತಲೂ ಸಂರಕ್ಷಣಾ ಕವಚ ನಿರ್ಮಾಣವಾಗಿ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಹಾಗೆಯೇ ದೇವರ ಆಶೀರ್ವಾದದಿಂದ ದೇಹದಲ್ಲಿ ಕಾರ್ಯನಿರತವಾಗಿರುವ ಶಕ್ತಿಯ ಸ್ಪಂದನಗಳು ೧೨ ಗಂಟೆಗಳ ಕಾಲ ಸೂಕ್ಷ್ಮದಲ್ಲಿ ಕಾರ್ಯನಿರತವಾಗಿರುತ್ತವೆ.
ಈ. ಮಕ್ಕಳ ಮನಸ್ಸಿನಲ್ಲಿರುವ ಹೆದರಿಕೆ ದೂರವಾಗಿ ಅವರಿಗೆ ದೇವರೊಂದಿಗೆ ಅನುಸಂಧಾನ ಸಾಧಿಸಲು ಸಾಧ್ಯವಾಗುತ್ತದೆ. ಹಾಗೆಯೇ ಮಕ್ಕಳಲ್ಲಿ ಕ್ಷಾತ್ರವೃತ್ತಿ ಹೆಚ್ಚಾಗಲು ಸಹಾಯವಾಗುತ್ತದೆ.’ – ಕು.ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩೧.೮.೨೦೦೯)
ಉ. ಶ್ಲೋಕಪಠಣದ ನಂತರ ದೇವರಿಗೆ ಆರತಿ ಮತ್ತು ಪ್ರಾರ್ಥನೆಯನ್ನು ಮಾಡಬೇಕು
ಊ. ದೀಪಹಚ್ಚುವ ಸಮಯದಲ್ಲಿ ಮನೆಯಲ್ಲಿನ ಎಲ್ಲ ಸದಸ್ಯರೂ ಉಪಸ್ಥಿತರಿರಬೇಕು
ಊ೧. ಎಲ್ಲರೂ ಉಪಸ್ಥಿತರಿರುವುದರಿಂದಾಗುವ ಲಾಭಗಳು
ಅ. ದೀಪಹಚ್ಚುವ ಸಮಯದಲ್ಲಿ ಮನೆಯ ಎಲ್ಲ ಸದಸ್ಯರು ಉಪಸ್ಥಿತರಿರುವುದರಿಂದ ಚಿಕ್ಕ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳಾಗುತ್ತವೆ.
ಆ. ಪ್ರಾರ್ಥನೆಯ ನಿಮಿತ್ತದಿಂದ ಕುಟುಂಬದಲ್ಲಿನ ಎಲ್ಲ ವ್ಯಕ್ತಿಗಳು ಒಂದಾಗುತ್ತಾರೆ, ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವುದು, ಪರಸ್ಪರರ ಕುಶಲತೆಯನ್ನು ವಿಚಾರಿಸುವುದು, ಯಾವುದಾದರೊಂದು ಹಬ್ಬವಿದ್ದಲ್ಲಿ ಅದರ ಮಹತ್ವವನ್ನು ಚಿಕ್ಕ ಮಕ್ಕಳಿಗೆ ತಿಳಿಸುವುದು ಇತ್ಯಾದಿಗಳಿಂದಾಗಿ ಮನೆಯು ಸ್ಥಿರವಾಗಿ ಉಳಿಯಲು ಸಹಾಯವಾಗುತ್ತದೆ.
ಮುಸ್ಸಂಜೆಯ ಸಮಯದಲ್ಲಿ ಚಿಕ್ಕಮಕ್ಕಳ ದೃಷ್ಟಿ ತೆಗೆಯಬೇಕು
ಚಿಕ್ಕ ಮಕ್ಕಳಿಗೆ ಬೇಗನೆ ದೃಷ್ಟಿ ತಗಲುತ್ತದೆ. ದೃಷ್ಟಿ ತಗಲಿದವರ ದೇಹದಲ್ಲಿನ ತ್ರಾಸದಾಯಕ ಸ್ಪಂದನಗಳನ್ನು ವಿಶಿಷ್ಟ ವಸ್ತುಗಳಲ್ಲಿ ಸೆಳೆದುಕೊಂಡು ಅವರ ತೊಂದರೆಗಳನ್ನು ದೂರಗೊಳಿಸುವುದಕ್ಕೆ ದೃಷ್ಟಿ ತೆಗೆಯುವುದು ಎನ್ನುತ್ತಾರೆ. ದೃಷ್ಟಿ ತೆಗೆಯಲು ಕಲ್ಲುಪ್ಪು-ಸಾಸಿವೆ, ಕಲ್ಲುಪ್ಪು-ಸಾಸಿವೆ-ಕೆಂಪು ಮೆಣಸು, ನೀರಿರುವ ತೆಂಗಿನಕಾಯಿ ಮುಂತಾದವುಗಳನ್ನು ಉಪಯೋಗಿಸುತ್ತಾರೆ. ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳ ದೃಷ್ಟಿಯನ್ನೂ ಇದೇ ರೀತಿ ತೆಗೆಯಲಾಗುತ್ತದೆ. ಚಿಕ್ಕಮಕ್ಕಳಿಗೆ ದೃಷ್ಟಿ ತಗಲುವ ಕಾರಣಗಳು ಮತ್ತು ದೃಷ್ಟಿಯನ್ನು ತೆಗೆಯುವ ಪದ್ಧತಿ ಈ ವಿಷಯದಲ್ಲಿನ ಹೆಚ್ಚಿನ ಮಾಹಿತಿಯನ್ನು ಸನಾತನದ ‘ದೃಷ್ಟಿ ತೆಗೆಯುವ ವಿಧಗಳು (೨ ಭಾಗಗಳು)’ ಈ ೨ ಗ್ರಂಥಗಳಲ್ಲಿ ನೀಡಲಾಗಿದೆ. ಹಾಗೆಯೇ ದೃಷ್ಟಿ ತೆಗೆಯುವ ಯೋಗ್ಯ ಪದ್ಧತಿ ಮತ್ತು ಅದರ ಹಿಂದಿನ ಶಾಸ್ತ್ರವನ್ನು ಅರಿತುಕೊಳ್ಳಲು ಸನಾತನದ ಧ್ವನಿಚಿತ್ರಮುದ್ರಿಕೆ ‘ಧಾರ್ಮಿಕ ಕೃತಿಗಳನ್ನು ಹೇಗೆ ಮಾಡಬೇಕು ಮತ್ತು ಅವುಗಳ ಹಿಂದಿನ ಶಾಸ್ತ್ರೀಯ ದೃಷ್ಟಿಕೋನ’ ಇದನ್ನು ಅಗತ್ಯವಾಗಿ ವೀಕ್ಷಿಸಿರಿ.
ಇತ್ತೀಚಿನ ಸ್ಥಿತಿ
ಇಂದು ದೂರದರ್ಶನದ ಶಬ್ದದಲ್ಲಿ ಸ್ತೋತ್ರಪಠಣದ ಶಬ್ದವು ಎಲ್ಲಿಯೋ ಕಳೆದು ಹೋಗಿದೆ. ಇಂದು ವಿಭಕ್ತ ಕುಟುಂಬ ಪದ್ಧತಿಯಿಂದಾದ ಹಾನಿಯನ್ನು ನಾವು ನೋಡುತ್ತಲೇ ಇದ್ದೇವೆ. ಇದಕ್ಕೆ ಯಾರು ಜವಾಬ್ದಾರರು ? ದೂರದರ್ಶನ, ತಂದೆ-ತಾಯಿ, ಅಧ್ಯಾತ್ಮದ ಜೊತೆಯಿಲ್ಲದ ಶಿಕ್ಷಣಪದ್ಧತಿ, ಸಮಾಜ ಅಥವಾ ಪ್ರತಿಯೊಬ್ಬ ವ್ಯಕ್ತಿ ?
(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ’)
Good information🙏