ಹಿಂದೂಗಳೇ, ನಾವು ಪ್ರತಿನಿತ್ಯ ಪಠಿಸುವ ಶ್ಲೋಕ ನೆನಪಿದೆಯೇ?
ಇದು ಭಗ್ನಾವಶೇಷವಾಗಿರುವ ಶಾರದಾದೇವಿಯ ಮಂದಿರ. ಕಾಶ್ಮೀರಪುರವಾಸಿನಿಯಾಗಿದ್ದ ದೇವಿ ಮಂದಿರ ಭಗ್ನವಾಗಿದ್ದು ಈಗ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. ಆದಿಶಂಕರಾಚಾರ್ಯರು ಪಂಡಿತರನ್ನು ಸೋಲಿಸಿ ಇಲ್ಲಿಯೇ ಸರ್ವಜ್ಞಪೀಠಾರೋಹಣವನ್ನು ಮಾಡಿದ್ದರು. ಇನ್ನು ನಾವು ಯಾವ ಭಾವದಿಂದ ಈ ಮೇಲಿನ ಶ್ಲೋಕವನ್ನು ಪಠಿಸುತ್ತೀರಿ? ಎಲ್ಲ ಜಡತ್ವವನ್ನು ಬಿಟ್ಟು ಇನ್ನಾದರೂ ಜಾಗೃತರಾಗಿ, ಇಷ್ಟು ಪವಿತ್ರವಾದ, ಮಹತ್ವವಾದ, ಶ್ರೇಷ್ಠವಾದ ಸರಸ್ವತಿ ದೇವಿಯ ಮಂದಿರ ನಮ್ಮ ಜಾಗದಲ್ಲಿಯೇ ಇರಬೇಕು. ಇನ್ನು ಆ ಶ್ಲೋಕ ಪಠಿಸುವುದರೊಂದಿಗೆ ದೇವಿಗೆ ಈ ರೀತಿ ಪ್ರಾರ್ಥನೆ ಮಾಡಿ, “ಹೇ ದೇವಿ, ನೀನಿರುವ ಪವಿತ್ರ ಸ್ಥಾನವನ್ನು ನಾವು ಮರಳಿ ಪಡೆದುಕೊಳ್ಳುವಂತೆ ನಮ್ಮಲ್ಲಿ ತೇಜವನ್ನು ತುಂಬು, ನೀನೇ ನಮಗೆ ಶಕ್ತಿಯನ್ನು ನೀಡು.”
ಶ್ರೇಷ್ಠವಾದ ಈ ದೇವಸ್ಥಾನದ ಬಗ್ಗೆ ವಿಕಿಪೀಡಿಯಾದ ಮಾಹಿತಿ ಹೀಗಿದೆ.
ಕಾಶ್ಮೀರದ ನೀಲಂ ಕಣಿವೆಯಲ್ಲಿರುವ ಶಾರದಾ ಎಂಬ ಗ್ರಾಮದಲ್ಲಿ ಈ ಪೀಠವಿದೆ. ಶ್ರೀನಗರದಿಂದ ಸುಮಾರು ೭೦ ಮೈಲು ದೂರವಿರುವ ಈ ಸ್ಥಳವು ಸಮುದ್ರದಿಂದ ೧೦೦೦೦ ಅಡಿ ಎತ್ತರದಲ್ಲಿದೆ. ೧೪೨ ಅಡಿ ಉದ್ದವಿರುವ ದೇವಸ್ಥಾನವು ೯೪.೬ ಅಡಿ ಅಗಲವಿದೆ. ದೇವಸ್ಥಾನದ ಹೊರಗೋಡೆಗಳು ೬ ಅಡಿ ಅಗಲ ಮತ್ತು ೧೧ ಅಡಿ ಎತ್ತರವಿವೆ. ಕೆಲವೆಡೆ ೮-೮ ಅಡಿ ಎತ್ತರದ ಕಮಾನುಗಳು ಕೂಡ ಇವೆ.
ಮೂಲ – ವಿಕಿಪೀಡಿಯಾ
Mundondu dina ee pavitra stalau navu poojisuvantahli 👌👌👌🌄🌅🌻