ಪುರುಷರು ಮತ್ತು ಸ್ತ್ರೀಯರು ಊಟಕ್ಕೆ ಕುಳಿತುಕೊಳ್ಳುವ ಪದ್ಧತಿ

ಪುರುಷರು ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಏಕೆ ಕುಳಿತುಕೊಳ್ಳಬೇಕು?

1336469117_jevan-paddhat600.jpg

ಅ. ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನ ಜೀರ್ಣವಾಗಲು ಸಹಾಯವಾಗುತ್ತದೆ: ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತರೆ ಅನ್ನವು ಸರಿಯಾಗಿ ಜೀರ್ಣವಾಗುತ್ತದೆ. ಸುಖಾಸನದ ವಿಶಿಷ್ಟ ಅವಸ್ಥೆಯಿಂದ ಅನ್ನವು ಹೊಟ್ಟೆಯಲ್ಲಿ ಚೆನ್ನಾಗಿ ಸೇರಿಕೊಳ್ಳುತ್ತದೆ. ಮುಂದಕ್ಕೆ ಬಾಗಿ ಊಟವನ್ನು ಮಾಡಬೇಕಾಗುವುದರಿಂದ ಹೊಟ್ಟೆಯ ಸ್ನಾಯುಗಳು ಪದೇಪದೇ ಕುಗ್ಗುತ್ತವೆ ಮತ್ತು ಹಿಗ್ಗುತ್ತವೆ. ಇದರಿಂದ ಜೀರ್ಣವಾಗಲು ಆವಶ್ಯಕವಾದ ರಕ್ತದ ಪೂರೈಕೆಯು ಹೆಚ್ಚುತ್ತದೆ. ಹಾಗೆಯೇ ಅನ್ನವನ್ನು ಸೇವಿಸುವಾಗ ನಿರ್ಮಾಣವಾಗುವ ವಾಯು (ಗ್ಯಾಸ್) ಹೊರ ಬೀಳಲು ಸಹಾಯವಾಗುತ್ತದೆ.

ಆ. ಕಾಲುಗಳನ್ನು ಮಡಚಿಕೊಂಡು ಊಟಕ್ಕೆ ಕುಳಿತುಕೊಳ್ಳುವುದರಿಂದ ಭೋಜನದಲ್ಲಿನ ಸಾತ್ತ್ವಿಕತೆಯು ಜೀವದ ಸಂಪೂರ್ಣ ದೇಹದಲ್ಲಿ ಸಹಜವಾಗಿ ಗ್ರಹಿಸಲ್ಪಡುತ್ತದೆ: ಊಟವನ್ನು ಮಾಡುವಾಗ ಪುರುಷರು ಸುಖಾಸನದಲ್ಲಿ (ಕಾಲುಗಳನ್ನು ಮಡಚಿ) ಕುಳಿತುಕೊಳ್ಳಬೇಕು. ಸುಖಾಸನದಲ್ಲಿ ಕುಳಿತುಕೊಳ್ಳುವುದರಿಂದ ಜೀವದ ದೇಹದಲ್ಲಿನ ಸೂಕ್ಷ್ಮವಾಯು ಮತ್ತು ಅವುಗಳ ಪ್ರವಾಹವು ಸರಾಗವಾಗಿ ಕಾರ್ಯನಿರತವಾಗುತ್ತವೆ. ಹಾಗೆಯೇ ಜೀವದ ದೇಹದಲ್ಲಿರುವ ತ್ರಿಗುಣಗಳೂ ಕೆಲವು ಪ್ರಮಾಣದಲ್ಲಿ ಸ್ಥಿರವಾಗುತ್ತವೆ. ಇದರಿಂದ ಜೀವವು ಸೇವಿಸಿದ ಭೋಜನದಲ್ಲಿನ ಸಾತ್ತ್ವಿಕತೆಯು ಅದರ ದೇಹದಲ್ಲಿ ಸಹಜವಾಗಿ ಗ್ರಹಿಸಲ್ಪಟ್ಟು ಸ್ಥೂಲದೇಹ ಮತ್ತು ಪ್ರಾಣದೇಹಕ್ಕೆ ಆವಶ್ಯಕ ಪ್ರಮಾಣದಲ್ಲಿ ಇಂಧನದ ಪೂರೈಕೆಯಾಗುತ್ತದೆ.
– ಶ್ರೀ ಗುರುತತ್ತ್ವ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೦.೬.೨೦೦೭, ಮಧ್ಯಾಹ್ನ ೩.೩೫)

ಸ್ತ್ರೀಯರು ಊಟಕ್ಕೆ ಬಲಮಂಡಿಯನ್ನು ಹೊಟ್ಟೆಗೆ (ಮೈಗೆ) ತಗಲಿಸಿಕೊಂಡು ಏಕೆ ಕುಳಿತುಕೊಳ್ಳಬೇಕು?

ಬಲಮಂಡಿಯನ್ನು ಹೊಟ್ಟೆಗೆ ತಗಲಿಸಿಕೊಂಡು ಕುಳಿತುಕೊಳ್ಳುವುದರಿಂದ ಮಣಿಪುರಚಕ್ರವು (ನಾಭಿಸ್ಥಾನ) ಕಾರ್ಯನಿರತವಾಗಲು ಸಹಾಯವಾಗುತ್ತದೆ. ಈ ಸ್ಥಿತಿಯಿಂದ ಜೀವದ ದೇಹದ ರಜೋಗುಣಿ ವಿಚಾರಗಳ ವೇಗದ ಮೇಲೆಯೂ ನಿಯಂತ್ರಣವುಂಟಾಗಿ ಊಟ ಮಾಡುವ ಕ್ರಿಯೆಯಲ್ಲಿ ಯಾವುದೇ ತೊಂದರೆದಾಯಕ ಸ್ಪಂದನಗಳು ನಿರ್ಮಾಣವಾಗುವುದಿಲ್ಲ. ಅದಕ್ಕಾಗಿ ಹಿಂದಿನ ಕಾಲದಲ್ಲಿ ಸ್ತ್ರೀಯರು ತಮ್ಮಲ್ಲಿನ ರಜೋಗುಣಿ ಕಾರ್ಯಕಾರಿ ಶಕ್ತಿಯನ್ನು ನಿಯಂತ್ರಣದಲ್ಲಿಡಲು ಪೂಜೆಯನ್ನು ಮಾಡುವಾಗ ಅಥವಾ ಊಟಕ್ಕೆ ಕುಳಿತುಕೊಳ್ಳುವಾಗ ಬಲಮಂಡಿಯನ್ನು ಹೊಟ್ಟೆಗೆ ತಗಲಿಸಿಕೊಂಡು ಕುಳಿತುಕೊಳ್ಳುತ್ತಿದ್ದರು.

(ಆಧಾರ: ಸನಾತನ ನಿರ್ಮಿಸಿದ ಗ್ರಂಥ ‘ಭೋಜನಕ್ಕೆ ಸಂಬಂಧಿಸಿದ ಆಚಾರಗಳು’)

Leave a Comment