ಗಣಪತಿಯು ಹಿಂದೂಸ್ಥಾನಕ್ಕೆ ಮಾತ್ರ ಅಲ್ಲ; ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆ!

ಅಗ್ರಪೂಜೆಯ ದೇವತೆಯಾಗಿರುವ ಗಣಪತಿಯು ಹಿಂದೂಸ್ಥಾನಕ್ಕಷ್ಟೇ ಅಲ್ಲದೇ ವಿಶ್ವವ್ಯಾಪಿ ವೈದಿಕ ಸಂಸ್ಕೃತಿಯ ದೇವತೆಯಾಗಿದ್ದರು. ಹಿಂದೆ ಇಸ್ಲಾಂ ರಾಷ್ಟ್ರಗಳಲ್ಲಿಯೂ ಗಣಪತಿಯನ್ನು ಪೂಜಿಸಲಾಗುತ್ತಿದ್ದ ಪುರಾವೆಗಳು ಸಿಕ್ಕಿವೆ. ಕಾಬೂಲನಿಂದ ನೇರ ಕ್ಯಾಸ್ಪಿಯನ್ ಸಮುದ್ರದ ವರೆಗೆ ಭಾರತೀಯ ಸಂಸ್ಕೃತಿ ಪಸರಿಸಿದ್ದರಿಂದ ಆ ಸ್ಥಳಗಳಲ್ಲಿ ಹಿಂದೂ ದೇವಸ್ಥಾನಗಳ ಅಸ್ತಿತ್ವವಿರುವುದು ಸ್ವಾಭಾವಿಕವಾಗಿದೆ. ಹಿಂದೂ ದೇವತೆಗಳಲ್ಲಿ ಶಿವ ಮತ್ತು ಶ್ರೀ ಗಣೇಶನ ಸ್ಥಾನ ಉಚ್ಚವಾಗಿರುವುದರಿಂದ ಇವೆರಡು ದೇವತೆಗಳ ಮೂರ್ತಿಗಳು ಹೆಚ್ಚು ಪ್ರಮಾಣದಲ್ಲಿ ಕಂಡು ಬರುತ್ತವೆ.

ಜಗತ್ತಿನ ೬೬ ದೇಶಗಳಲ್ಲಿ ಯಾವುದಾದರೊಂದು ರೂಪದಲ್ಲಿ ಶ್ರೀ ಗಣೇಶ ದೇವಸ್ಥಾನಗಳು ಮತ್ತು ಅದರಲ್ಲಿನ ಶ್ರೀ ಗಣೇಶಮೂರ್ತಿಗಳಿವೆ. ಅದರ ಕೆಲವು ಉದಾಹರಣೆಗಳು :

೧. ಅಫ್ಘಾನಿಸ್ತಾನ

ಇಲ್ಲಿ ಹಿಂದೂ ರಾಜರು ಅನೇಕ ವರ್ಷಗಳ ಕಾಲ ರಾಜ್ಯವಾಳಿದರು. ಈ ಕಾಲಖಂಡದಲ್ಲಿ ಕೇವಲ ದೊಡ್ಡ ದೇವಸ್ಥಾನಗಳಲ್ಲದೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಂದೂ ದೇವತೆಗಳ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಅದರಲ್ಲಿ ಶ್ರೀ ಗಣೇಶ ಮೂರ್ತಿಗಳ ಸಂಖ್ಯೆಯು ಎಲ್ಲಕ್ಕಿಂತ ಹೆಚ್ಚಿದೆ. ಕಾಬೂಲನಲ್ಲಿನ ಪ್ರಖ್ಯಾತ ಸಂಗ್ರಹಾಲಯದಲ್ಲಿ ಶ್ರೀ ಗಣೇಶನಿಗೆ ಸಂಬಂಧಿಸಿದ ಮೂರ್ತಿಗಳ ಸಂಖ್ಯೆಯು ೬೦ ರಷ್ಟಿದೆ.

೧ ಅ. ತಾಲಿಬಾನಿನ ರಾಜ್ಯಾಡಳಿತದಲ್ಲಿ ಕಳುವಾಗಿದ್ದ ಶ್ರೀ ಗಣೇಶನ ಗುಪ್ತರ ಕಾಲದ ಸುಂದರ ಮೂರ್ತಿ ! :

ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಮೂರ್ತಿಗಳ ವಿಧ್ವಂಸ ಪ್ರಾರಂಭಿಸಿದಾಗ ಅಲ್ಲಿ ಶ್ರೀ ಗಣೇಶನ ಗುಪ್ತರ ಕಾಲದ ಎರಡು ಮೂರ್ತಿಗಳು ಅಸ್ತಿತ್ವದಲ್ಲಿದ್ದವು. ಅದರಲ್ಲಿನ ಒಂದು ಮೂರ್ತಿಯ ಕಳುವಾಗಿ ಮಾರಾಟವಾಯಿತು. ಆ ಮೂರ್ತಿಯಲ್ಲಿನ ಶ್ರೀಗಣೇಶನು ಎತ್ತರ ಮತ್ತು ನಾಲ್ಕು ಕೈಗಳುಳ್ಳವನಿದ್ದನು. ಅವನ ನಾಲ್ಕು ಕೈಗಳ ಪೈಕಿ ಒಂದು ಕೈಯಲ್ಲಿ ಕಮಲ ಮತ್ತು ಎರಡನೇ ಕೈಯಲ್ಲಿ ಮೋದಕ ವಿತ್ತು. ಜಗತ್ತಿನಲ್ಲಿ ಅನೇಕ ಸುಂದರ ಶ್ರೀ ಗಣೇಶನ ಮೂರ್ತಿಗಳಿದ್ದವು; ಆದರೆ ಈ ಮೂರ್ತಿಯ ಸೌಂದರ್ಯ ಸೊಬಗು ಬೇರೆಯೇ ಆಗಿತ್ತೆಂದು ಹೇಳಲಾಗುತ್ತದೆ. ಶ್ರೀ ಗಣೇಶನು ಪ್ರತಿಯೊಂದು ಸ್ಥಿತಿಯಲ್ಲಿ ಮತ್ತು ಭಂಗಿಯಲ್ಲಿ ಸುಂದರವಾಗಿರುತ್ತಾನೆ ಎಂದು ಹೇಳಲಾಗುತ್ತಿದ್ದರೂ ಮೇಲೆ ಉಲ್ಲೇಖಿಸಿದ ಶ್ರೀ ಗಣೇಶನ ಮೂರ್ತಿಯಂತಹ ಸೌಂದರ್ಯ ಇತರ ಎಲ್ಲಿಯೂ ನೋಡಲು ದೊರಕುವುದಿಲ್ಲ. ‘ಯಾರು ಈ ಮೂರ್ತಿಯನ್ನು ನೋಡುತ್ತಿದ್ದರೋ ಅವರು ಆ ಮೂರ್ತಿಯನ್ನು ನೋಡುವುದರಲ್ಲಿ ಮಂತ್ರಮುಗ್ದರಾಗುತ್ತಿದ್ದರು’ ಎಂದು ಈ ಮೂರ್ತಿಯ ಬಗ್ಗೆ ಹೇಳಲಾಗುತ್ತದೆ.

೧ ಆ. ೨೦೦೧ ರಲ್ಲಿ ತಾಲಿಬಾನಿಗಳಿಂದ ಪೀರರತನನಾಥದಲ್ಲಿ ‘ಮಹಾವಿನಾಯಕ’ ಹೆಸರಿನ ಶ್ರೀ ಗಣೇಶ ಮೂರ್ತಿಯ ವಿಧ್ವಂಸ ! :

ಪೀರರತನ ನಾಥದಲ್ಲಿ ‘ಮಹಾವಿನಾಯಕ’ ಎಂಬ ಹೆಸರಿನ ಎರಡನೇ ಶ್ರೀ ಗಣೇಶ ಮೂರ್ತಿಯಿದೆ. ಈ ಶ್ರೀ ಗಣೇಶನು ದ್ವಿಭುಜ ಮತ್ತು ಬಲಮುರಿಯಾಗಿದ್ದನು. ಈ ಐತಿಹಾಸಿಕ ಮೂರ್ತಿಯ ಛಾಯಾಚಿತ್ರವು ಪುಣೆಯ ಬುಧವಾರಪೇಠೆಯಲ್ಲಿರುವ ಪ್ರಸಿದ್ಧ ಐತಿಹಾಸಿಕ ಸಂಶೋಧಕ ಶ್ರೀ.ಸಂಜಯ ಗೊಡಬೊಲೆಯವರಿಂದ ದೊರೆಯಿತು. ಶ್ರೀಗಣೇಶಮೂರ್ತಿಯ ಎರಡು ಕೈಗಳನ್ನು ಮುರಿದಿರುವುದು ಈ ಛಾಯಾಚಿತ್ರದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಶ್ರೀ ಗಣೇಶ ಮೂರ್ತಿಯ ಎರಡು ಕೈಗಳನ್ನು ಮುರಿದು ತಾಲಿಬಾನಿಯರಿಗೆ ಸಮಾಧಾನವಾಗಿಲ್ಲ ಎಂದೇನೋ ೨೦೦೧ ರಲ್ಲಿ ತಾಲಿಬಾನ ಮುಖಂಡ ಮುಲ್ಲಾ ಓಮರನ ಆದೇಶದಂತೆ ಈ ಮೂರ್ತಿಯೊಂದಿಗೆ ಎಲ್ಲ ಮೂರ್ತಿಗಳನ್ನು ನಾಶ ಮಾಡಲಾಯಿತು!

೨. ತುರ್ಕಸ್ಥಾನ

ಕೇವಲ ಅಫ್ಘಾನಿಸ್ತಾನದಲ್ಲಷ್ಟೇ ಅಲ್ಲ ಇತರ ಇಸ್ಲಾಂ ರಾಷ್ಟ್ರಗಳಲ್ಲಿಯೂ ಉತ್ಖನನದ ಸಮಯದಲ್ಲಿ ಶ್ರೀ ಗಣೇಶಮೂರ್ತಿಗಳು ದೊರಕುತ್ತವೆ. ತುರ್ಕಸ್ಥಾನದ ಅಂಕಾರಾ ಪಟ್ಟಣದ ಸಮೀಪದಲ್ಲಿ ಉತ್ಖನನದಲ್ಲಿ ದೊರಕಿದ ಮೂರ್ತಿಗಳಲ್ಲಿ ಶ್ರೀಗಣೇಶ ಮೂರ್ತಿಯು ಲುಂಗಿ ಧರಿಸಿ ಕುಳಿತಿರುವ ಮತ್ತು ಮಸ್ತಕದಲ್ಲಿ ಗೊಂಡೆಯಿರುವ ತುರ್ಕಿ ಟೊಪ್ಪಿಗೆ ಧರಿಸಿದ ತುರ್ಕಿ ಉಡುಪಿನಲ್ಲಿದೆ.

೩. ಬಲೂಚಿಸ್ಥಾನ (ಪಾಕಿಸ್ತಾನ ಮತ್ತು ಇರಾನ್‌ನಲ್ಲಿ ವಿಭಜಿಸಲಾದ ಭಾಗ)

ಇಲ್ಲಿ ದೊರೆತ ಗಣೇಶ ಮೂರ್ತಿಯು ಬಲುಚಿಯ ಉಡುಪಿನಲ್ಲಿದೆ. ಶ್ರೀ ಗಣೇಶಮೂರ್ತಿಯ ಮಸ್ತಕದಲ್ಲಿ ಬಲುಚಿ ಪಗಡಿಯಿದೆ ಮತ್ತು ಅವನ ಸುತ್ತಲಿನ ಸ್ತ್ರೀಯರು ಪರಂಪರೆಯುಳ್ಳ ಬಲುಚಿ ಲಂಗಗಳನ್ನು ಧರಿಸಿ ಗಣೇಶನ ಆರತಿ ಮಾಡುತ್ತಿರುವಂತೆ ಕಾಣಿಸುತ್ತಾರೆ.

೪. ಇಂಡೋನೇಷ್ಯಾ

ಇದು ಶ್ರೀ ಗಣೇಶಮೂರ್ತಿಯ ವಿಡಂಬನೆಯಾಗದೇ ಇರುವ ಏಕೈಕ ಇಸ್ಲಾಂ ದೇಶವಾಗಿದೆ. ಇಂಡೋನೇಷ್ಯಾದ ಜನತೆಯು ಹಿಂದೂ ದೇವತೆಗಳಿಗೆ ರಾಷ್ಟ್ರೀಯ ಸಾಂಸ್ಕೃತಿಕ ಸ್ಮಾರಕದ ಪ್ರತೀಕವೆನ್ನುತ್ತಾರೆ. ಅವು ಅವರ ಶ್ರದ್ಧೆಯ ದೇವತೆಗಳಾಗಿವೆ. ಅದರಿಂದ ಅವರು ಅವುಗಳನ್ನು ಸಂರಕ್ಷಿಸುವುದೇ ರಾಷ್ಟ್ರೀಯ ಕರ್ತವ್ಯವೆಂದು ತಿಳಿಯುತ್ತಾರೆ. ಇಂಡೋನೇಷ್ಯಾದಲ್ಲಿನ ನಾಣ್ಯ, ನೋಟುಗಳಲ್ಲಿ ಗಣಪತಿಯ ಚಿತ್ರ ಕಾಣುತ್ತದೆ.
‘ನೋಟುಗಳ ಮೇಲೆ ಗಣಪತಿಯ ಚಿತ್ರವನ್ನು ಮುದ್ರಿಸುವೆವು ಎಂದು ಇಸ್ಲಾಂ ಪಂಥದ ಇಂಡೋನೇಷ್ಯಾ ಅಭಿಮಾನದಿಂದ ಹೇಳುತ್ತದೆ; ಆದರೆ ಹಿಂದೂ ದೇವತೆಗಳನ್ನು ಪೂಜಿಸಲಾಗುವ ಭಾರತದಲ್ಲಿ ಹೀಗೇಕೆ ಆಗಲು ಸಾಧ್ಯವಿಲ್ಲ?’

೫. ಏಷ್ಯಾದ ರಾಷ್ಟ್ರಗಳು

೫ ಅ. ರಷ್ಯಾ:

ತಾಷ್ಕಂದ ಮತ್ತು ಬಾಕು ಎಂಬಲ್ಲಿನ ದೇವಸ್ಥಾನದಲ್ಲಿ ಇಂದಿಗೂ ಶ್ರೀ ಗಣೇಶಮೂರ್ತಿಯ ಅವಶೇಷಗಳು ಕಂಡುಬರುತ್ತವೆ. ಇಲ್ಲಿ ಶಿವಮಂದಿರಗಳು ಹೆಚ್ಚಿನ ಪ್ರಮಾಣದಲ್ಲಿದ್ದರೂ ಅಲ್ಲಿ ಶಿವ-ಪಾರ್ವತಿಯೊಂದಿಗೆ ಶ್ರೀ ಗಣೇಶ ಮೂರ್ತಿಯೂ ಕಾಣುತ್ತದೆ.

೫ ಆ. ದಕ್ಷಿಣ-ಪೂರ್ವ ಏಷ್ಯಾದಲ್ಲಿನ ದೇಶಗಳು:

ಇಲ್ಲಿ ಶ್ರೀ ಗಣೇಶನು ಅಲ್ಲಿನ ಪಾರಂಪರಿಕ ಕುರ್ತಾ ಮತ್ತು ಟೊಪ್ಪಿಯ ಉಡುಪಿನಲ್ಲಿ ವಿರಾಜಮಾನನಾಗಿರುವುದು ಕಂಡುಬರುತ್ತವೆ. ವಿಯೆಟ್ನಾಮ್, ಚೀನಾ, ಜಪಾನ, ಮಲೇಷ್ಯಾ ಮತ್ತು ಕೋರಿಯಾ ಈ ದೇಶಗಳಲ್ಲಿ ಇಂದಿಗೂ ಶ್ರೀ ಗಣೇಶ ಮೂರ್ತಿಗಳು ಉಪಲಬ್ಧವಾಗಿವೆ. ಚೀನಾ ನಿಲುವಂಗಿ ಧರಿಸಿದ ಶ್ರೀ ಗಣೇಶಮೂರ್ತಿ ಅತ್ಯಂತ ಮನಮೋಹಕವಾಗಿದೆ.

೫ ಇ. ಮಧ್ಯ ಏಷ್ಯಾ:

ಇಲ್ಲಿ ನಡೆದ ಸಂಶೋಧನೆಯಲ್ಲಿ ಸಂಶೋಧಕರಿಗೆ ಒಂದು ದೊಡ್ಡ ತೈಲಚಿತ್ರವು ದೊರೆಯಿತು. ಆ ಚಿತ್ರದ ಶೈಲಿಯು ‘ಮನಿಚಿಯನ್’ ಆಗಿದೆ. ಈ ಚಿತ್ರವು ಶ್ರೀ ಗಣೇಶನದ್ದಾಗಿದ್ದು, ಇದು ಈ ರೀತಿಯ ಏಕೈಕ ಉಪಲಬ್ಧ ಚಿತ್ರವಾಗಿದೆ. ಅದನ್ನು ಸದ್ಯ ಬರ್ಲಿನ್ (ಜರ್ಮನಿ) ನಲ್ಲಿನ ಒಂದು ಸಂಗ್ರಹಾಲಯದಲ್ಲಿ ಇಡಲಾಗಿದೆ. – ಮುಝಫ್ಫರ ಹುಸೈನ (ದೈ. ಲೋಕಸತ್ತಾ (೧೯.೮.೨೦೦೧))

ಆಧಾರ : ಸಾಪ್ತಾಹಿಕ ಸನಾತನ ಪ್ರಭಾತ

 

Leave a Comment