ದೇವತೆಗಳಿಗೆ ಜನಿವಾರವನ್ನು ಅರ್ಪಿಸುವುದು (ಹಾಕುವುದು), ಎಂದರೆ ದೇವತೆಗಳ ವ್ಯಾಪಕ ಪ್ರಕಾಶವನ್ನು ಜನಿವಾರದೊಳಗಿನ ನೂಲಿನ ವಲಯದಲ್ಲಿ ಸೀಮಿತಗೊಳಿಸಿ ದ್ವೈತದಲ್ಲಿನ ಕಾರ್ಯವನ್ನು ಮಾಡಲು ದೇವತೆಗಳನ್ನು ಆಹ್ವಾನಿಸುವುದು. ಜನಿವಾರವು ನೂಲಿನಿಂದ ತಯಾರಿಸಲ್ಪಟ್ಟಿದ್ದು, ಮಂತ್ರಶಕ್ತಿಯಿಂದ ಯುಕ್ತಸಂಪನ್ನವಾಗಿರುತ್ತದೆ. ಇದರಿಂದ ಪ್ರಕ್ಷೇಪಿತವಾಗುವಂತಹ ನಾದಲಹರಿಗಳಿಂದ ಬ್ರಹ್ಮಾಂಡದಲ್ಲಿನ ದೇವತೆಗಳ ನಿರ್ಗುಣ ತತ್ತ್ವವು ಜಾಗೃತವಾಗಿ ಜೀವದ ಈಶ್ವರನ ಬಗೆಗಿರುವ ಭಾವದಂತೆ, ಜೀವಕ್ಕಾಗಿ ಸಗುಣಲಹರಿಗಳ ಮಾಧ್ಯಮದಿಂದ ಕಾರ್ಯ ಮಾಡುತ್ತದೆ. ಜನಿವಾರದ ಮಾಲೆ ಅಥವಾ ಜನಿವಾರದ ನೂಲು ಇದು ಈಶ್ವರ (ಅದ್ವೈತ) ಮತ್ತು ಜೀವ (ದ್ವೈತ) ಇವುಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ. ಜನಿವಾರವನ್ನು ಅರ್ಪಿಸುವುದು, ಇದು ದ್ವೈತ ಮತ್ತು ಅದ್ವೈತದ ಅನುಸಂಧಾನವನ್ನು ಸಾಧಿಸುವ ಮಹತ್ವದ ಪ್ರಕ್ರಿಯೆಯಾಗಿದೆ. ಪೂಜೆಯ ನಂತರ ಶರೀರದ ಮೇಲಿನ ಜನಿವಾರವನ್ನು ವಿಸರ್ಜಿಸಿ, ದೇವತೆಗೆ ಅರ್ಪಿಸಿದ ಜನಿವಾರವನ್ನು ಧರಿಸುವುದರಿಂದ ಜೀವಕ್ಕೆ ದೇವತೆಯ ಚೈತನ್ಯದ ಲಾಭವು ದೊರಕುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೨.೪.೨೦೦೫, ಮಧ್ಯಾಹ್ನ ೨.೪೫
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಪೂಜಾಸಾಮಗ್ರಿಗಳ ಮಹತ್ವ’)