೧. ಸೌಭಾಗ್ಯಲಯವಾದರೆ ವೈರಾಗ್ಯಭಾವನೆಯು ಉದಯಿಸುತ್ತದೆ: ಯಾವಾಗ ಸೌಭಾಗ್ಯವು ಲಯವಾಗುತ್ತದೆಯೋ, ಆಗ ನಿಜವಾದ ಅರ್ಥದಲ್ಲಿ ಸ್ತ್ರೀಯರಲ್ಲಿನ ಉತ್ಪತ್ತಿಗೆ ಸಂಬಂಧಿಸಿದ ತೇಜದ ಬೀಜವು ಲೋಪವಾಗುತ್ತದೆ ಮತ್ತು ಆ ಸ್ಥಳದಲ್ಲಿ ವೈರಾಗ್ಯಭಾವನೆಯು ಉದಯಿಸುತ್ತದೆ. ತೇಜದ ಲಯವಾಗುವುದೆಂದರೆ ಆಭರಣಗಳ ಶೃಂಗಾರವನ್ನು ತ್ಯಜಿಸಿ ವೈರಾಗ್ಯದ ಜೀವನವನ್ನು ಪ್ರಾರಂಭಿಸುವುದು.
೨. ಸ್ತ್ರೀಯಲ್ಲಿ ವೈರಾಗ್ಯಭಾವವು ಬೇಗನೇ ನಿರ್ಮಾಣವಾಗಬೇಕೆಂದು ಕಲಿಯುಗದಲ್ಲಿ ಆಭರಣಗಳ ತ್ಯಾಗದ ಸಂಕಲ್ಪನೆಯು ದೃಢವಾಯಿತು: ಸ್ತ್ರೀಯರಲ್ಲಿ ವೈರಾಗ್ಯಭಾವವು ಬೇಗನೇ ನಿರ್ಮಾಣವಾಗಬೇಕೆಂದು ಕಲಿಯುಗದಲ್ಲಿ ಆಭರಣಗಳ ತ್ಯಾಗದ ಸಂಕಲ್ಪನೆಯು ದೃಢವಾಯಿತು. ಹಿಂದಿನ ಕಾಲದಲ್ಲಿ ಸ್ತ್ರೀಯರು ತೇಜತತ್ತ್ವದ ಸಾಧನೆಯಿಂದ ಪರಿಪಕ್ವವಾಗಿರುತ್ತಿದ್ದರು. ಇದರಿಂದ ಸಾಧನೆಯ ಮುಂದುಮುಂದಿನ ಹಂತಗಳಲ್ಲಿ ಅವರಲ್ಲಿ ವೈರಾಗ್ಯಭಾವ ನಿರ್ಮಾಣವಾಗುತ್ತಿತ್ತು. ಆದರೆ ಈಗ ಸಾಧನೆಯ ಅಭಾವದಿಂದಾಗಿ ಆಭರಣಗಳ ತ್ಯಾಗದಿಂದ ವಿಧವೆಯರಲ್ಲಿ ವೈರಾಗ್ಯಭಾವವು ನಿರ್ಮಾಣವಾಗಬೇಕು ಮತ್ತು ಅವರ ಪ್ರಯಾಣವು ಮೋಕ್ಷಪ್ರಾಪ್ತಿಯೆಡೆಗೆ ಆಗಬೇಕೆಂದು ವಿಧವಾ ಸ್ತ್ರೀಯರಿಗೆ ಶರೀರದ ಮೇಲಿನ ಸೌಂದರ್ಯದ ಆಭರಣಗಳನ್ನು ತ್ಯಜಿಸುವ ಅವಶ್ಯಕತೆಯು ನಿರ್ಮಾಣವಾಯಿತು. ಆಭರಣಗಳಿಂದ ಸ್ತ್ರೀಯರಲ್ಲಿನ ರಜೋಗುಣವು ಸತತವಾಗಿ ಜಾಗೃತವಾಗಿರುತ್ತದೆ ಮತ್ತು ಆಭರಣಗಳು ಇಲ್ಲದಿದ್ದರೆ ರಜೋಗುಣವು ಬೇಗನೇ ಲಯವಾಗಿ ವೈರಾಗ್ಯಭಾವವು ಮೂಡಲು ಸಹಾಯವಾಗುತ್ತದೆ. – ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧.೧.೨೦೦೮, ಮಧ್ಯಾಹ್ನ ೫.೦೬)
(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಆಭರಣಗಳ ಶಾಸ್ತ್ರ’)
ಆದರೆ ಈಗಿನ ಆಧುನಿಕ ಕಾಲದಲ್ಲಿ ವಿಧವಾ ಸ್ತ್ರೀಯರು ಆಭರಣಗಳನ್ನು ಧರಿಸದಿದ್ದರೆ ಅವರಿಗಾಗುವ ಆಧ್ಯಾತ್ಮಿಕ ಲಾಭಗಳ ಉದಾತ್ತ ವಿಚಾರವನ್ನು ಮಾಡುವುದಿಲ್ಲ. ಅದರ ಬದಲಾಗಿ ವಿಧವೆಯರೂ ಆಭರಣಗಳನ್ನು ಧರಿಸಬೇಕು, ಹಳೆಯ ಕಾಲದ ಗೊಡ್ಡು ಸಂಪ್ರದಾಯಗಳನ್ನು ಬಿಡಬೇಕು ಎಂಬಂತಹ ವಿಚಾರಗಳನ್ನು ಪಸರಿಸಿ, ಎಲ್ಲರನ್ನೂ ಆಧ್ಯಾತ್ಮಿಕ ಲಾಭದಿಂದ ವಂಚಿತರನ್ನಾಗಿಸುತ್ತಿದ್ದಾರೆ. ಅದೇ ರೀತಿ ಇಂತಹ ವಿಚಾರಗಳನ್ನು ಸಮಾಜವು ಯಾವುದೇ ವಿವೇಕಬುದ್ಧಿಯಿಂದ ಶಾಸ್ತ್ರವನ್ನು ಅರಿತುಕೊಳ್ಳದೇ ತಕ್ಷಣ ಸ್ವೀಕರಿಸುತ್ತದೆ. ಹಾಗಾಗಿ ಹಿಂದೂಗಳೇ, ನಮ್ಮ ಮಹಾನ್ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಅರಿತುಕೊಳ್ಳಿ, ಮತ್ತು ಪ್ರತಿಯೊಬ್ಬರಿಗೂ ಇದರ ಶಾಸ್ತ್ರವನ್ನು ತಿಳಿಸಿ ಹೇಳಿ.