ಹಬ್ಬದಂದು ಹೊಸ ಅಥವಾ ರೇಷ್ಮೆ ಬಟ್ಟೆ ಧರಿಸುವುದರಿಂದಾಗುವ ಲಾಭಗಳು !

ಅ. ದೇವತೆಗಳ ಆಶೀರ್ವಾದ ಸಿಗುತ್ತದೆ: ಹಬ್ಬ, ಶುಭದಿನ ಮತ್ತು ಧಾರ್ಮಿಕ ವಿಧಿಗಳಿರುವ ದಿನ ಕೆಲವೊಮ್ಮೆ ದೇವತೆಗಳು ಸೂಕ್ಷ್ಮದಲ್ಲಿ ಭೂಮಿಗೆ ಬಂದಿರುತ್ತಾರೆ. ಇಂತಹ ದಿನ ವಸ್ತ್ರಾಲಂಕಾರಗಳಿಂದ ಸುಶೋಭಿತರಾಗುವುದೆಂದರೆ ಒಂದು ರೀತಿಯಲ್ಲಿ ಅವರನ್ನು ಸ್ವಾಗತಿಸುವುದೇ ಆಗಿದೆ. ಇದರಿಂದ ದೇವತೆಗಳು ಪ್ರಸನ್ನರಾಗಿ ಆಶೀರ್ವಾದ ನೀಡುತ್ತಾರೆ ಮತ್ತು ನಮಗೆ ದೇವತೆಗಳ ಲಹರಿಗಳನ್ನು ಸೆಳೆದುಕೊಳ್ಳಲು ಸಾಧ್ಯವಾಗುತ್ತದೆ.

ಆ. ದೇವತೆಗಳ ತತ್ತ್ವಲಹರಿಗಳಿಂದ ವರ್ಷವಿಡೀ ಲಾಭವಾಗುತ್ತದೆ: ಹಬ್ಬಗಳ ದಿನ ಹೊಸ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸುವುದರಿಂದ ಆ ಬಟ್ಟೆಗಳಲ್ಲಿ ದೇವತೆಗಳ ತತ್ತ್ವವು ಬಹಳಷ್ಟು ಪ್ರಮಾಣದಲ್ಲಿ ಆಕರ್ಷಿತವಾಗಿ ಬಟ್ಟೆಗಳು ಸಾತ್ತ್ವಿಕವಾಗುತ್ತವೆ. ಬಟ್ಟೆಗಳಲ್ಲಿ ಆಕರ್ಷಿತವಾದ ದೇವತೆಗಳ ತತ್ತ್ವಲಹರಿಗಳು ದೀರ್ಘಕಾಲ ಉಳಿದುಕೊಳ್ಳುತ್ತವೆ. ಇಂತಹ ಬಟ್ಟೆಗಳನ್ನು ಧರಿಸುವುದರಿಂದ ವರ್ಷವಿಡೀ ದೇವತೆಗಳ ತತ್ತ್ವಲಹರಿಗಳ ಲಾಭವು ಸಿಗುತ್ತದೆ.

ಇ. ದೇವತೆಗಳ ತತ್ತ್ವಲಹರಿಗಳಿಂದ ದೇಹಗಳ ಶುದ್ಧಿಯಾಗುತ್ತದೆ: ದೇವತೆಗಳ ತತ್ತ್ವಲಹರಿಗಳು ಜೀವದ ಸ್ಥೂಲದೇಹ, ಮನೋದೇಹ, ಕಾರಣದೇಹ ಮತ್ತು ಮಹಾಕಾರಣ ದೇಹಗಳೆಡೆಗೆ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುವುದರಿಂದ ಆ ದೇಹಗಳ ಶುದ್ಧಿಯಾಗಿ ಅವು ಸಾತ್ತ್ವಿಕವಾಗುತ್ತವೆ.

ಈ. ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಜೀವದ ರಕ್ಷಣೆಯಾಗುತ್ತದೆ: ಹಬ್ಬ, ಯಜ್ಞ, ಉಪನಯನ, ವಿವಾಹ, ವಾಸ್ತುಶಾಂತಿಯಂತಹ ಧಾರ್ಮಿಕ ವಿಧಿಗಳ ಸಮಯದಲ್ಲಿ ದೇವತೆಗಳು ಮತ್ತು ಆಸುರೀ ಶಕ್ತಿಗಳ ನಡುವೆ ಅನುಕ್ರಮವಾಗಿ ಬ್ರಹ್ಮಾಂಡ, ವಾಯುಮಂಡಲ ಮತ್ತು ವಾಸ್ತು ಈ ಸ್ಥಳಗಳಲ್ಲಿ ಸೂಕ್ಷ್ಮ ಯುದ್ಧವು ನಡೆದಿರುತ್ತದೆ. ಹಬ್ಬವನ್ನು ಆಚರಿಸುವ ಮತ್ತು ಧಾರ್ಮಿಕ ವಿಧಿಗಳ ಸ್ಥಳಗಳಲ್ಲಿ ಉಪಸ್ಥಿತರಿರುವ ವ್ಯಕ್ತಿಗಳ ಮೇಲೆ ಈ ಸೂಕ್ಷ್ಮ ಯುದ್ಧದ ಪರಿಣಾಮವಾಗಿ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ವಿವಿಧ ಸುವರ್ಣಾಲಂಕಾರ ಮತ್ತು ಹೊಸ ಅಥವಾ ರೇಷ್ಮೆಯ ಬಟ್ಟೆಗಳನ್ನು ಧರಿಸುವುದರಿಂದ ಆ ವ್ಯಕ್ತಿಯ ಸುತ್ತಲೂ ಈಶ್ವರನ ಸಗುಣ-ನಿರ್ಗುಣ ಸ್ತರದ ಚೈತನ್ಯದ ಸಂರಕ್ಷಣಾ ಕವಚವು ನಿರ್ಮಾಣವಾಗಿ ವ್ಯಕ್ತಿಯ ಸಾತ್ತ್ವಿಕತೆಯು ಹೆಚ್ಚಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ಹಲ್ಲೆಗಳಿಂದ ಆ ವ್ಯಕ್ತಿಯ ರಕ್ಷಣೆಯಾಗುತ್ತದೆ. – ಈಶ್ವರ (ಕು.ಮಧುರಾ ಭೋಸಲೆಯವರ ಮಾಧ್ಯಮ ದಿಂದ, ೧೨.೧೧.೨೦೦೭, ರಾತ್ರಿ ೮.೧೫)

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು?’)

Leave a Comment