೧. ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲುಗಳ ರಕ್ಷಣೆಯಾಗುತ್ತದೆ
ಅ. ‘ಕಾಲ್ಗೆಜ್ಜೆಗಳಲ್ಲಿರುವ ಲೋಹದೆಡೆಗೆ ದೇವತೆಗಳ ತೇಜತತ್ತ್ವಯುಕ್ತ ಲಹರಿಗಳು ಆಕರ್ಷಿತವಾಗುತ್ತವೆ. ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ತೇಜತತ್ತ್ವ ಮತ್ತು ಸಾತ್ತ್ವಿಕ ನಾದಲಹರಿಗಳಿಂದಾಗಿ, ಪಾತಾಳ ಮತ್ತು ವಾಯುಮಂಡಲದಲ್ಲಿನ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಕಾಲ್ಗೆಜ್ಜೆಗಳನ್ನು ಧರಿಸುವ ಜೀವದ ರಕ್ಷಣೆಯಾಗುತ್ತದೆ.’
ಆ. ‘ಕಾಲ್ಗೆಜ್ಜೆಗಳಿಂದ ಪ್ರಕ್ಷೇಪಿತವಾಗುವ ನಾದದಿಂದ ಪೃಥ್ವಿತತ್ತ್ವಕ್ಕೆ ಸಂಬಂಧಿಸಿದ ಈಶ್ವರೀ ತತ್ತ್ವವು ಸ್ತ್ರೀಯರೆಡೆಗೆ ಆಕರ್ಷಿತವಾಗುತ್ತದೆ. ಇದರಿಂದ ಪಾತಾಳದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣದಿಂದ ಸ್ತ್ರೀಯರ ರಕ್ಷಣೆಯಾಗಲು ಸಹಾಯವಾಗುತ್ತದೆ.’
೨. ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾಕವಚವು ನಿರ್ಮಾಣವಾಗುತ್ತದೆ: ‘ಕಾಲ್ಗೆಜ್ಜೆಯ ನಾದವು ಬ್ರಹ್ಮಾಂಡದಲ್ಲಿರುವ ಕ್ರಿಯಾಶಕ್ತಿಯನ್ನು ಆಕರ್ಷಿಸುವಂತಹದ್ದಾಗಿರುವುದ ರಿಂದ, ಕಾಲ್ಗೆಜ್ಜೆಗಳ ನಾದದಿಂದ ಪ್ರಕ್ಷೇಪಿತವಾಗುವ ಕ್ರಿಯೆಯ ಲಹರಿಗಳು ಪಾತಾಳದಿಂದ ಪ್ರಕ್ಷೇಪಿತವಾಗುವ ತೊಂದರೆದಾಯಕ ಲಹರಿಗಳನ್ನು ವಿರೋಧಿಸಿ ಅವುಗಳ ವಿಭಜನೆಯನ್ನು ಮಾಡಿ ಅವುಗಳಲ್ಲಿರುವ ಶಕ್ತಿಯನ್ನು ಕಡಿಮೆಗೊಳಿಸುತ್ತವೆ. ನಾದರೂಪೀ ಕ್ರಿಯಾಲಹರಿಗಳ ಈ ಲಹರಿಗಳು ಸ್ತ್ರೀಯರ ದೇಹದ ಸುತ್ತಲೂ ಸಂರಕ್ಷಣಾ ಕವಚವನ್ನು ನಿರ್ಮಿಸುತ್ತವೆ, ಹಾಗೆಯೇ ಈ ನಾದಲಹರಿಗಳಿಂದಾಗಿ ಸ್ತ್ರೀಯಲ್ಲಿನ ಶಕ್ತಿರೂಪೀ ರಜೋಗುಣಕ್ಕೆ ಗತಿ ಸಿಗುತ್ತದೆ ಮತ್ತು ಅವಳೇ ಒಂದು ಸ್ವಯಂಸಿದ್ಧಸ್ವರೂಪವಾಗುತ್ತಾಳೆ.
೩. ಕಾಲ್ಗೆಜ್ಜೆಗಳ ಸ್ಪರ್ಶದಿಂದ ಕಾಲುಗಳ ಮೇಲೆ ಬಿಂದುಒತ್ತಡದ (ಆಕ್ಯುಪ್ರೆಶರ್) ಉಪಾಯವಾಗುತ್ತದೆ.
೪. ಕಾಲ್ಗೆಜ್ಜೆಗಳಲ್ಲಿರುವ ಘುಂಗುರುಗಳಲ್ಲಿನ ಸಾತ್ತ್ವಿಕ ನಾದಲಹರಿಗಳಿಂದ ವಾಯು ಮಂಡಲದ ಶುದ್ಧೀಕರಣವಾಗುತ್ತದೆ.
(ಆಧಾರ : ಸನಾತನ ಸಂಸ್ಥೆಯು ನಿರ್ಮಿಸಿದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ (ಕೈ-ಕಾಲುಗಳಲ್ಲಿ ಧರಿಸುವ ಆಭರಣಗಳು)’)