ಯುಗಾದಿ – ಹಿಂದೂಗಳ ಹೊಸ ವರ್ಷಾರಂಭ (Hindu New Year)

ಯುಗಾದಿ – ಸಂವತ್ಸರಾರಂಭ

ಯುಗಾದಿ ಅಂದರೆ ಚೈತ್ರ ಶುಕ್ಲ ಪ್ರತಿಪದೆ ಅಂದರೆ ಹಿಂದೂಗಳ ಹೊಸ ವರ್ಷಾರಂಭದ ದಿನ ! ಈ ತಿಥಿಯಂದು ವರ್ಷಾರಂಭವನ್ನು ಮಾಡಲು ನೈಸರ್ಗಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಬ್ರಹ್ಮದೇವನು ಈ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. 2024 ರಲ್ಲಿ ಏಪ್ರಿಲ್ 9 ರಂದು, ಕ್ರೋಧೀ ನಾಮ ಸಂವತ್ಸರವು ಪ್ರಾರಂಭವಾಗುವುದು.

ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.

ಯುಗಾದಿ, ಹೊಸ ವರ್ಷ, ಸಂವತ್ಸರಾರಂಭ 2024, ಕ್ರೋಧೀ
ಯುಗಾದಿ, ಹೊಸ ವರ್ಷ, ಸಂವತ್ಸರಾರಂಭ 2024, ಕ್ರೋಧೀ

ಯುಗಾದಿಯಂದು ಹೊಸ ವರ್ಷವನ್ನು ಏಕೆ ಆಚರಿಸುತ್ತೇವೆ ?

ನೈಸಗಿಕ ಕಾರಣಗಳು

ಸರಿಸುಮಾರು ಪ್ರತಿಪದೆಯ ಸಮಯದಲ್ಲಿ ಸೂರ್ಯನು ವಸಂತ – ಸಂಪಾತದ ಮೇಲೆ ಬರುತ್ತಾನೆ (ಸಂಪಾತ ಬಿಂದು ಎಂದರೆ (ಮಕರ) ಕ್ರಾಂತಿವೃತ್ತ ಮತ್ತು ವಿಷುವವೃತ್ತ (ಕರ್ಕಾಟಕ) ಈ ಎರಡು ವೃತ್ತಗಳು ಯಾವ ಬಿಂದುವಿನಲ್ಲಿ ಪರಸ್ಪರ ಭೇದಿಸುತ್ತವೆಯೋ ಆ ಬಿಂದು) ಮತ್ತು ವಸಂತ ಋತುವು ಪ್ರಾರಂಭವಾಗುತ್ತದೆ. ಎಲ್ಲ ಋತುಗಳಲ್ಲಿ ‘ಕುಸುಮಾಕರಿ ವಸಂತ ಋತುವು ನನ್ನ ವಿಭೂತಿಯಾಗಿದೆ’ ಎಂದು ಭಗವಂತನು ಶ್ರೀಮದ್ಭಗವದ್ಗೀತೆಯಲ್ಲಿ (೧೦:೩೫) ಹೇಳಿದ್ದಾನೆ. ಈ ಸಮಯದಲ್ಲಿ ಸಮಶೀತೋಷ್ಣ, ಉತ್ಸಾಹವರ್ಧಕ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಶಿಶಿರ ಋತುವಿನಲ್ಲಿ ಗಿಡಮರಗಳ ಎಲೆಗಳು ಉದುರಿ ಹೋಗಿರುತ್ತವೆ ಮತ್ತು ಪ್ರತಿಪದೆಯ ಸಮಯದಲ್ಲಿ ಅವುಗಳಿಗೆ ಹೊಸ ಚಿಗುರು ಬರುತ್ತಿರುತ್ತವೆ. ಗಿಡಮರಗಳು ಚೆನ್ನಾಗಿ ಕಾಣುತ್ತವೆ. ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ಕಾಲಚಕ್ರವು ವಿಶ್ವದ ಉತ್ಪತ್ತಿಯ ಕಾಲಚಕ್ರಕ್ಕೆ ಸಂಬಂಧಿಸಿದೆ. ಆದುದರಿಂದ ಸೃಷ್ಟಿಯು ನವಚೇತನದಿಂದ ತುಂಬಿರುತ್ತದೆ.  ಯುಗಾದಿ ಪಾಡ್ಯದಂದು ಪ್ರಾರಂಭವಾಗುವ ಹೊಸವರ್ಷದ ತುಲನೆಯನ್ನು ಸೂರ್ಯೋದಯಕ್ಕೆ ಉದಯವಾಗುವ ತೇಜೋಮಯ ದಿನದೊಂದಿಗೆ ಮಾಡಬಹುದು.

ಐತಿಹಾಸಿಕ ಕಾರಣಗಳು

ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.

ಆಧ್ಯಾತ್ಮಿಕ ಕಾರಣಗಳು

ಬ್ರಹ್ಮದೇವನು ಇದೇ ದಿನದಿಂದು ಸೃಷ್ಟಿಯನ್ನು ನಿರ್ಮಿಸಿದನು. ಅರ್ಥಾತ್ ಈ ದಿನ ಸತ್ಯಯುಗವು ಪ್ರಾರಂಭವಾಯಿತು. ಆದುದರಿಂದಲೇ ಈ ದಿನದಂದು ವರ್ಷಾರಂಭವನ್ನು ಮಾಡುತ್ತಾರೆ. ಯುಗಾದಿಯಂದು ತೇಜ ಮತ್ತು ಪ್ರಜಾಪತಿ ಲಹರಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತವೆ. ಸೂರ್ಯೋದಯದ ಸಮಯದಲ್ಲಿ ಈ ಲಹರಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಹೆಚ್ಚಿನ ಸಮಯದವರೆಗೆ ಉಳಿಯುತ್ತದೆ. ಅದು ಜೀವದ ಜೀವಕೋಶಗಳಲ್ಲಿ ಸಂಗ್ರಹವಾಗುತ್ತದೆ ಹಾಗೂ ಅವಶ್ಯಕತೆಗನುಸಾರ ಆ ಜೀವದಿಂದ ಉಪಯೋಗಿಸಲ್ಪಡುತ್ತದೆ.

ಯುಗಾದಿ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ

ಯುಗಾದಿ ಹಬ್ಬದ ದಿನದಿಂದ ತಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯವನ್ನು ಸ್ಥಾಪಿಸುವ ಸಂಕಲ್ಪ ಮಾಡಿ!

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಯುಗಾದಿ ಅಂದರೆ ಹಿಂದೂಗಳ ಹೊಸ ವರ್ಷಾರಂಭದ ದಿನವಾಗಿದೆ ! ಹಿಂದೂ ಧರ್ಮದಲ್ಲಿ ಮೂರುವರೆ ಮುಹೂರ್ತಗಳಲ್ಲಿ ಶುಭಕಾರ್ಯಗಳ ಸಂಕಲ್ಪವನ್ನು ಮಾಡಲಾಗುತ್ತದೆ. ಯುಗಾದಿ ಹಬ್ಬವು ಮೂರುವರೆ ಮುಹೂರ್ತಗಳಲ್ಲಿ ಒಂದು ಮುಹೂರ್ತವಾಗಿದೆ.

ಅಯೋಧ್ಯೆಯಲ್ಲಿ ಇತ್ತೀಚೆಗೆ ರಾಮಲಲ್ಲಾ (ಬಾಲಕ ರೂಪ ಶ್ರೀರಾಮನ ಮೂರ್ತಿ) ವಿರಾಜಮಾನನಾದ ನಂತರ ದೇಶಕ್ಕೆ ಆಧ್ಯಾತ್ಮಿಕ ಅಧಿಷ್ಠಾನವು ಪ್ರಾಪ್ತವಾಗಿದೆ. ಈಗ ದೇಶಕ್ಕೆ ರಾಮರಾಜ್ಯದ ಆವಶ್ಯಕತೆಯಿದೆ! ಪ್ರಭು ಶ್ರೀರಾಮನು ಎಲ್ಲ ಜನರ ಕಲ್ಯಾಣಕ್ಕಾಗಿ ಆದರ್ಶ ರಾಮರಾಜ್ಯವನ್ನು ಸ್ಥಾಪಿಸಿದನು. ರಾಮರಾಜ್ಯವೆಂದರೆ ಅಧ್ಯಾತ್ಮಪರಾಯಣ (ಸಾತ್ತ್ವಿಕ) ಜನರ ಆದರ್ಶ ರಾಜ್ಯ ! ಸದ್ಯದ ಭ್ರಷ್ಟ ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಕಲ್ಪನೆಯು ದುರ್ಲಭವಾಗಿದೆ, ಆದರೆ ಸದ್ಯದ ಕಾಲವು ಸಂಕ್ರಮಣಕಾಲವಾಗಿರುವುದರಿಂದ ಈ ಕಾಲದಲ್ಲಿ ರಾಮರಾಜ್ಯದ ಸ್ಥಾಪನೆಯನ್ನು ಆರಂಭಿಸುವುದು ಸುಲಭವಾಗಿದೆ. ರಾಷ್ಟ್ರದಲ್ಲಿ ರಾಮರಾಜ್ಯ ತರುವ ಮೊದಲು ಜನತೆಯು ತಮ್ಮ ಜೀವನದಲ್ಲಿ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯವನ್ನು ತರಲು ನಿರಂತರವಾಗಿ ಕೆಲವು ವರ್ಷಗಳ ಕಾಲ ಪ್ರಯತ್ನಿಸಬೇಕಾಗುತ್ತದೆ. ವೈಯಕ್ತಿಕ ಜೀವನದಲ್ಲಿ ರಾಮರಾಜ್ಯವನ್ನು ತರಲು ಸ್ವತಃ ಸಾಧನೆಯನ್ನು ಮಾಡಬೇಕಾಗಲಿದೆ, ಹಾಗೆಯೇ ನೈತಿಕ ಮತ್ತು ಸದಾಚಾರಣೆಯ ಜೀವನ ಜೀವಿಸುವ ಸಂಕಲ್ಪವನ್ನು ಮಾಡಬೇಕಾಗಲಿದೆ. ಸಾಮಾಜಿಕ ಜೀವನದಲ್ಲಿ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯನ್ನು ವಿರೋಧಿಸಲು ಪ್ರಯತ್ನಶೀಲರಾಗಬೇಕಾಗಿದೆ.

ಸಾತ್ತ್ವಿಕವಾಗಿರುವ ಸಮಾಜದ ಮುಂದಾಳತ್ವದಿಂದಲೇ ಅಧ್ಯಾತ್ಮಾಧಾರಿತ ರಾಷ್ಟ್ರರಚನೆ, ಅಂದರೆ ರಾಮರಾಜ್ಯ ಬರಲು ಸಾಧ್ಯವಿದೆ; ಆದ್ದರಿಂದಲೇ ಈ ಯುಗಾದಿ ಹಬ್ಬದ ದಿನದಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯವನ್ನು ತರುವ ಸಂಕಲ್ಪವನ್ನು ಮಾಡಿ!

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

ಯುಗಾದಿಯಂದು ಮಾಡಬೇಕಾದ ೧೦ ಕೃತಿಗಳು

1. ಅಭ್ಯಂಗಸ್ನಾನ ಮಾಡಿ 

ಅಭ್ಯಂಗಸ್ನಾನವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ಕ್ಲಿಕ್ ಮಾಡಿ

2. ಮನೆ ಬಾಗಿಲಿಗೆ ತೋರಣವನ್ನು ಕಟ್ಟಿ (ಮನೆಬಾಗಿಲನ್ನು ಅಲಂಕರಿಸಿ) 

3. ಸಂವತ್ಸರ ಪೂಜೆಯನ್ನು ಮಾಡಿ

4. ಸೂರ್ಯೋದಯದ ಸಮಯದಲ್ಲಿ ಬ್ರಹ್ಮಧ್ವಜವನ್ನು ಏರಿಸಿ, ಅದಕ್ಕೆ ಪೂಜೆ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ

5. ಕ್ಷಮತೆಗನುಸಾರ ಸತ್ಪಾತ್ರೆ ದಾನ ಮಾಡಿ

6. ಪಂಚಾಂಗ ಶ್ರವಣ (ವರ್ಷಫಲದ ಶ್ರವಣವನ್ನು ಮಾಡಿ)

7. ಬೇವಿನ ಪ್ರಸಾದ ಸೇವಿಸಿ (ಬೇವು – ಬೆಲ್ಲ ಹಂಚಿ) 

8. ಭೂಮಿಯ ಉಳುಮೆ ಮಾಡಿ

9. ದಿನವನ್ನು ಆನಂದದಲ್ಲಿ ಕಳೆಯಿರಿ, ಸಾತ್ತ್ವಿಕತೆ ನೀಡುವ ಕೃತಿಗಳನ್ನು ಮಾಡಿ

10. ಸೂರ್ಯಾಸ್ತದ ಸಮಯದಲ್ಲಿ ಬ್ರಹ್ಮಧ್ವಜವನ್ನು ಇಳಿಸಿ

ಬ್ರಹ್ಮಧ್ವಜ ನಿಲ್ಲಿಸುವ ಪದ್ಧತಿ ಮತ್ತು ಬ್ರಹ್ಮಧ್ವಜದ ಪೂಜಾವಿಧಿ

ಬ್ರಹ್ಮಧ್ವಜಕ್ಕೆ ಸಲ್ಲಿಸಬೇಕಾದ ಪ್ರಾರ್ಥನೆ

ಬ್ರಹ್ಮಧ್ವಜದ ಮೇಲಿನ ತಾಮ್ರದ ಕಲಶದ ಮಹತ್ವ

ಯುಗಾದಿ ಮತ್ತು ಬೇವಿನ ಸಂಬಂಧ

ಯುಗಾದಿ ಹಬ್ಬದ ಬಗ್ಗೆ ವೀಡಿಯೋಗಳು

ಸನಾತನದ ಉಚಿತ ಆನ್‌ಲೈನ್ ಸತ್ಸಂಗಗಳಲ್ಲಿ ಪಾಲ್ಗೊಳ್ಳಿ

ಹಬ್ಬ ಹರಿದಿನಗಳ ಮಾಹಿತಿಯೊಂದಿಗೆ, ಅವುಗಳನ್ನು ಶಾಸ್ತ್ರೀಯವಾಗಿ ಆಚರಿಸುವುದರಿಂದಾಗುವ ಲಾಭಗಳನ್ನು ತಿಳಿದುಕೊಳ್ಳಲು ಇಂದೇ ಭಾಗವಹಿಸಿ…