ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ ಎಂದರೂ ತಪ್ಪಲ್ಲ.
ಸುಖ ಎಂದೊಡನೆ ಅದರೊಂದಿಗೇ ಹಿಂಬಾಲಿಸಿ ಬರುವ ಇನ್ನೊಂದು ಶಬ್ದವೆಂದರೆ ದುಃಖ. ಏಕೆಂದರೆ ನಮಗೆ ಸಿಗುವ ಸುಖವು ಒಂದು ಭಾಗದಷ್ಟಿದ್ದರೆ, ದುಃಖವು ಅದರ ಮೂರು ಭಾಗ ಅಥವಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಸುಖಕ್ಕೆ ದುಃಖದ ಜೊತೆ ಇದ್ದೇ ಇರುತ್ತದೆ. ಅದರ ಅನುಭವ ಕ್ಷಣಿಕ- ದುಃಖದ ಅನುಭವ ಅಧಿಕ.
ನಾವು ಕ್ಷಣಕ್ಷಣವೂ ಯಾವ ಸುಖದ ಹುಡುಕಾಟದಲ್ಲಿ ಇರುತ್ತೇವೆಯೋ, ಆ ಸುಖವು ಹೊರಗಿನ ಪ್ರಪಂಚದಲ್ಲಿ ಇರದೇ, ಅದು ನಮ್ಮೊಳಗೇ ಇದೆ. ಪ್ರತಿಯೊಬ್ಬರಲ್ಲಿ ಇರುವ ಆ ಪರಾತ್ಮನ ಅಂಶವಾದ ಆತ್ಮವು ಚಿರಂತನ ಆನಂದ, ಶಾಂತಿಯ ಸ್ರೋತವಾಗಿದೆ. ಆಧ್ಯಾತ್ಮಿಕ ಸಾಧನೆಯನ್ನು ಮಾಡಿ ನಾವು ಈ ಆನಂದವನ್ನು ಹೇಗೆ ಅನುಭವಿಸಬಹುದು ಎಂದು ತಿಳಿದುಕೊಳ್ಳೋಣ.
ಆನಂದ ಎಂದರೇನು ?
‘ನಿಮ್ಮ ಜೀವನದ ಧ್ಯೇಯವೇನು’? ನಿಮ್ಮ ಜೀವನದಲ್ಲಿ ನೀವು ಅನೇಕ ಸಣ್ಣ ಪುಟ್ಟ ಅಥವಾ ದೊಡ್ಡ ಗುರಿಗಳನ್ನು ಸಾಧಿಸಿರಬಹುದು. ಜೀವನದಲ್ಲಿ ನಿಮ್ಮ ಗುರಿಗಳು ಹೇಗೆ ಬದಲಾಗಿವೆ? ಇದರಿಂದ ನೀವು ಏನು ಸಾಧಿಸಿದಿರಿ? ನೀವು ಮಾಡಿರುವ ಪ್ರತಿಯೊಂದು ಕೃತಿ, ಪಡೆದಿರುವ ಶ್ರಮ ಏತಕ್ಕಾಗಿ? ಅವುಗಳನ್ನು ನೆನಪಿಸಿಕೊಳ್ಳಿ. ವಿಚಾರ ಮಾಡಿ ಮತ್ತೆ ಮುಂದೆ ಓದಿ.
ಹಾಗಾದರೆ ಜೀವನದ ಧ್ಯೇಯವೇನು ?
ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ಯಾರೇ ಇರಲಿ, ಯಾವುದೇ ಸ್ಥಿತಿಯಲ್ಲಿರಲಿ, ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ ಎಂದರೂ ತಪ್ಪಲ್ಲ.
ಮಾತ್ರವಲ್ಲ, ವಿಚಾರ ಮಾಡಿ, ನಾವು ಯಾವುದೇ ಸುಖಮಯ ಪ್ರಸಂಗವು ದೀರ್ಘಕಾಲದ ವರೆಗೆ ಅನುಭವಿಸಲು ಇಚ್ಛಿಸುತ್ತೇವೆ, ಅಲ್ಲವೇ? ಸುಖಕ್ಕಾಗಿ ನಾವು ಕಷ್ಟ ಪಡೆಯದಿದ್ದರೂ, ದುಃಖ ಬರಬಾರದು ಎಂಬ ಇಚ್ಚೆಯಂತೂ ಇದ್ದೆ ಇರುತ್ತದೆ. ಉದಾಹರಣೆಗೆ, ನೆಚ್ಚಿನ ಕ್ರೀಡೆಯ ನೇರ ಪ್ರಸಾರ ಇರುವ ದಿನ ದೂರದರ್ಶನ ಪೆಟ್ಟಿಗೆ ಕೆಟ್ಟು ಹೋದರೆ, ಅದು ಆದಷ್ಟು ಬೇಗ ಸರಿಮಾಡಿಸಲು ನಾವು ಎಷ್ಟೆಲ್ಲಾ ಪ್ರಯತ್ನ ಪಡುತ್ತೇವೆ, ಅಲ್ಲವೇ?
ಜೀವನದ ಸತ್ಯ
ಮಾನವನ ಜೀವನವನ್ನು ಅವಲೋಕಿಸಿದರೆ, ಸಾಮಾನ್ಯವಾಗಿ ಓರ್ವ ವ್ಯಕ್ತಿಯ ಜೀವನದಲ್ಲಿ ಸುಖವು ಒಂದು ಭಾಗದಷ್ಟಿದ್ದರೆ, ದುಃಖವು ಅದರ ಮೂರು ಭಾಗ ಅಥವಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಅಂದರೆ ಸುಖಕ್ಕೆ ದುಃಖದ ಜೊತೆ ಇದ್ದೇ ಇರುತ್ತದೆ. ಅದರ ಅನುಭವ ಕ್ಷಣಿಕ- ದುಃಖದ ಅನುಭವ ಅಧಿಕ. ಉದಾ: ತೀರಾ ಸೆಕೆಗೆ ಫ್ಯಾನ್ ಹಾಕಿ ಕುಳಿತಾಗ ವಿದ್ಯುತ್ ಪೂರೈಕೆ ನಿಂತು ಹೋದರೆ ದುಃಖ ಆವರಿಸುತ್ತದೆ. ಇತರ ಸಮಯದಲ್ಲಿ ನಮಗೆ ಸುಖ-ದುಃಖದ ವಿಚಾರಗಳು ಇರುವುದಿಲ್ಲ. ಉದಾ: ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಅಥವಾ ಯಾವುದಾದರೊಂದು ಪ್ರಾಪಂಚಿಕ ಕಾರ್ಯದಲ್ಲಿ ತೊಡಗಿರುವಾಗ.
ನಮ್ಮನ್ನು ದುಃಖವು ಯಾವ ರೀತಿಯಲ್ಲಿ ಆವರಿಸಿದೆ ?
ಪ್ರತಿಯೊಬ್ಬರ ಜೀವನದಲ್ಲಿ ಅನೇಕ ಪ್ರಸಂಗಗಳು ನಡೆಯುತ್ತವೆ. ಉದಾಹರಣೆಗೆ ನಮ್ಮ ಆಪ್ತರು ಆಕಸ್ಮಾತ್ತಾಗಿ ಅಪಮೃತ್ಯುವಿಗೀಡಾಗುತ್ತಾರೆ, ಎಷ್ಟೇ ಪ್ರಯತ್ನಿಸಿದರೂ ಕೆಲವು ಮಂದಿಗೆ ಮದುವೆಯೇ ಆಗುವುದಿಲ್ಲ. ಮದುವೆಯಾದವರಿಗೆ ಸಂತಾನ ಭಾಗ್ಯವೇ ಲಭಿಸುವುದಿಲ್ಲ. ಕೆಲವರು ಚಿನ್ನ ಹಿಡಿದರೂ ಅದೆಲ್ಲ ಮಸಿಯಾಗುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಸೋಲೇ ಕಾದಿರುತ್ತದೆ. ಮಕ್ಕಳು ಪರೀಕ್ಷೆಗಾಗಿ ಎಷ್ಟ ಕಷ್ಟಪಟ್ಟು ಓದಿದರೂ ಅಪಯಶಸ್ಸು ಬೆನ್ನುಹತ್ತಿರುತ್ತದೆ.
ಈ ಸಮಸ್ಯೆಗಳನ್ನು ಒಮ್ಮೆ ನೋಡೋಣ. ಕೇವಲ ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ನಾವು ಜೀವನವಿಡೀ ಆನಂದದಿಂದ ಇರಬಹುದೇ? ಒಂದು ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಸಿಕ್ಕಿದರೆ ನಮಗೆ ಜೀವನ ಪೂರ್ತಿ ಸುಖವೇ ಕಾದಿರುತ್ತದೆಯೇ? ಧನಿಕನಿಗೂ ಕಾಡುವ ದುಃಖ, ಬಡವನಿಗೂ ಕಾಡುತ್ತದೆ.
ಇಲ್ಲಿ ನಿಮಗೆ ಅನಿಸಬಹುದು, ‘ನಾನೊಂದು ಸುಖಿ ಜೀವಿ’ ಎಂದು. ಆದರೆ ಜೀವನದಲ್ಲಿ ಬರುವ ಏರುಪೇರುಗಳಿಂದ ನಾವು ಸುಖ ದುಃಖದ ಚಕ್ರದಲ್ಲಿ ಸಿಲುಕಿರುತ್ತೇವೆ. ದುಃಖದ ಪ್ರಸಂಗಗಳು ಎದುರಾದಾಗ, ಏನು ಮಾಡಬಹುದು, ಸ್ಥಿರವಾಗಿ ಹೇಗೆ ಆ ಪ್ರಸಂಗವನ್ನು ಎದುರಿಸುವುದು ಎಂಬುವುದನ್ನು ತಿಳಿದುಕೊಳ್ಳಬಹುದು. ಏಕೆಂದರೆ ಬಾಯಾರಿಕೆ ಆದಾಗ ಬಾವಿಯನ್ನು ತೊಡುವುದಕ್ಕಿಂತ ಮೊದಲೇ ಬಾವಿ ತೋಡಿದರೆ ಒಳ್ಳೆಯದಲ್ಲವೇ?
ಹೀಗಿರುವಾಗ ದುಃಖಿತರಾಗದೆ ಆನಂದಮಯ ಜೀವನವನ್ನು ಹೇಗೆ ನಡೆಸುವುದು, ಎಂಬುದನ್ನು ಕಲಿಸುವ ಸಣ್ಣ ಪುಟ್ಟ ಕೃತಿಗಳಿಂದ ಚಿರಂತನ ಆನಂದವನ್ನು ಪಡೆಯಲು ಬಯಸುವಿರಲ್ಲವೇ?
ನಾವು ಸುಖ ಅಥವಾ ಆನಂದವನ್ನು ಎಲ್ಲಿಂದ ಬಯಸುತ್ತೇವೆ ?
ನಮ್ಮ ಜೀವನದಲ್ಲಿ ಚಿರಂತನ ಆನಂದವನ್ನು ಹೇಗೆ ಪಡೆಯಬಹುದು ಎಂಬುವುದನ್ನು ತಿಳಿದುಕೊಳ್ಳುವ ಮೊದಲು ನಾವು ‘ಸುಖ ಅಥವಾ ಆನಂದವನ್ನು ಎಲ್ಲಿಂದ ಬಯಸುತ್ತೇವೆ’ ಎಂದು ವಿಚಾರ ಮಾಡಿ.
ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದೊಡನೆ ಇಂದಿನ ದಿನವು ಆನಂದದಾಯಕವಾಗಿರಬೇಕು ಎಂದು ಆಶಿಸುತ್ತಾರೆ. ನಮ್ಮ ಜೀವದಲ್ಲಿ ಬರುವ ವ್ಯಕ್ತಿಗಳಿಂದ, ಸನ್ನಿವೇಶಗಳಿಂದ, ಸ್ಥಳಗಳಿಂದ, ತಿಂಡಿ ತಿನಿಸುಗಳಿಂದ ನಾವು ಸುಖವನ್ನು ಬಯಸುತ್ತೇವೆ. ಆದರೆ ಮುಂಜಾನೆ ಮನೆ ಬಾಗಿಲಿಗೆ ಬರುವ ಪತ್ರಿಕೆಯನ್ನು ಓದಿದಾಗ ಅಥವಾ ಟಿ.ವಿ.ಯಲ್ಲಿನ ವಾರ್ತೆ ಹಾಗೂ ಕಾರ್ಯಕ್ರಮಗಳನ್ನು ವೀಕ್ಷಿಸಿದಾಗ ಕಳ್ಳತನ, ಕೊಲೆ, ಸುಲಿಗೆ, ದರೋಡೆ, ಮೋಸ, ವಂಚನೆ, ಮಹಿಳೆಯರ ಮೇಲಿನ ಅತ್ಯಾಚಾರ, ಆತ್ಮಹತ್ಯೆ ಇತ್ಯಾದಿಗಳ ದೃಶ್ಯಗಳು ಕಣ್ಣ ಮುಂದೆ ಸುಳಿದಾಗ ನಾವು ಹತಾಶರಾಗಿ ದುಃಖಿತರಾಗುತ್ತೇವೆ. ಸುಪ್ರಭಾತದಿಂದ ಆರಂಭವಾಗಬೇಕಾದ ದಿನವು ಕುಪ್ರಭಾತದಿಂದಲೇ ಪ್ರಾರಂಭವಾಗುತ್ತದೆ. ಅನಂತರ ನಡೆಯುವ ಘಟನೆಗಳಿಂದ, ಅನುಭವಿಸುವ ಯಾತನೆಗಳಿಂದ ಮನಸ್ಸು ದಿನವಿಡೀ ದುಃಖಮಯವಾಗುತ್ತದೆ.
ಅಂದರೆ ಹೊರ ಜಗತ್ತಿನಲ್ಲಿ ನಾವು ಸುಖ, ಆನಂದವನ್ನು ಹುಡುಕುತ್ತೇವೆ. ಆದರೆ ಕ್ಷಣ ಕ್ಷಣಕ್ಕೂ ಬದಲಾಗುವ ಹೊರ ಜಗತ್ತಿನಿಂದ ನಮಗೆ ಎಂದಾದರೂ ಚಿರಂತನ ಆನಂದ ಸಿಗಬಹುದೇ? ಇದಕ್ಕೆ ಪರಿಹಾರ ಒಂದೇ, ನಮ್ಮ ಒಳಗೆ ಇರುವ ಆನಂದವನ್ನು ನಾವು ಅನುಭವಿಸಲು ಪ್ರಯತ್ನಿಸುವುದು. ನಮ್ಮೊಳಗೇ ಇರುವ ಆನಂದ ಅಂದರೆ ನಮ್ಮಲ್ಲಿರುವ ಆತ್ಮ. ಆತ್ಮವು ಶಾಶ್ವತ ಈಶ್ವರನ ಒಂದು ಅಂಶವಾಗಿರುವುದರಿಂದ, ಈ ಲೌಕಿಕ ಪ್ರಪಂಚದಿಂದ ಸಿಗುವ ಕ್ಷಣಿಕ ಸುಖದ ತುಲನೆಯಲ್ಲಿ ಆತ್ಮದ ಆನಂದವು ಚಿರಂತನವಾಗಿರುತ್ತದೆ.
ಆನಂದವೆಂದರೇನು ?
ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ದವೇ ಆನಂದ. ಆದರೆ ಸುಖಕ್ಕೂ ಆನಂದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ಬಹುಮಂದಿಗೆ ತಿಳಿದೇ ಇಲ್ಲ. ಸುಖ ಎಂದೊಡನೆ ಅದರೊಂದಿಗೇ ಹಿಂಬಾಲಿಸಿ ಬರುವ ಇನ್ನೊಂದು ಶಬ್ದವೆಂದರೆ ದುಃಖ. ಆನಂದವೆಂದರೆ ದುಃಖದ ಜೊತೆಯಿಲ್ಲದ, ನಿರಂತರವಾಗಿ ಸಿಗುವ ಅತ್ಯುಚ್ಚ ಮಟ್ಟದ ಸುಖ. ಪ್ರಾಣಿಮಾತ್ರರು ಬಯಸುತ್ತಿರುವುದು ಇದನ್ನೇ – ಅಂದರೆ ಆನಂದವನ್ನೇ.
ನಾವು ಸುಖವನ್ನು ನಮ್ಮ ಪಂಚ ಜ್ಞಾನೇಂದ್ರಿಯಗಳ ಮಾಧ್ಯಮದಿಂದ ಅನುಭವಿಸುತ್ತೇವೆ. ಅಂದರೆ ಅದು ಹೊರಜಗತ್ತಿಗೆ ಸಂಬಂಧಿಸಿದ್ದು. ಆದರೆ ಆನಂದ ನಮ್ಮಲಿರುವ ಆತ್ಮಕ್ಕೆ ಸಂಬಂಧಪಟ್ಟಿರುವುದರಿಂದ ಅದಕ್ಕೂ ಹೊರಜಗತ್ತಿಗೂ ಯಾವುದೇ ಸಂಬಂಧವಿಲ್ಲ.
ಇದನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ನಮ್ಮ ಹೊರ ಮನಸ್ಸು, ಒಳಮನಸ್ಸು, ಬುದ್ಧಿ ಮತ್ತು ಚಿತ್ತ ಇವುಗಳ ಕಾರ್ಯದ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ಮನಸ್ಸಿನಲ್ಲಿ ಹೊರಮನಸ್ಸು, ಒಳಮನಸ್ಸು (ಚಿತ್ತ) ಎಂಬ ಎರಡು ಭಾಗಗಳಿವೆ. ಚಿತ್ತದೊಳಗೆ ಹಿಂದಿನ ಜನ್ಮಜನ್ಮಾಂತರಗಳ ಸುಖ-ದುಃಖ, ಬೇಕು ಬೇಡಗಳು, ಆಸೆ ಆಕಾಂಕ್ಷೆಗಳು ಅಭ್ಯಾಸಗಳು, ಸ್ವಭಾವಗಳು ಇತ್ಯಾದಿಗಳ ಸಂಸ್ಕಾರ (ಪಡಿಯಚ್ಚು)ಗಳ ಕೇಂದ್ರಗಳಿದ್ದು.
ಕಣ್ಣು, ಕಿವಿ, ಮೂಗು, ನಾಲಿಗೆ, ಮತ್ತು ಚರ್ಮ-ಈ ಪಂಚಜ್ಞಾನೇಂದ್ರಿಯಗಳಿಂದ ಬರುವ ಸಂವೇದನೆಗಳನ್ನು ಹೊರಮನಸ್ಸು ಸ್ವೀಕರಿಸಿ, ಬುದ್ಧಿಯ ಮಾಧ್ಯಮದಿಂದ ಅವುಗಳನ್ನು ವರ್ಗೀಕರಿಸಿ, ಒಳಮನಸ್ಸಿಗೆ ವರ್ಗಾಯಿಸಿದಾಗ ಚಿತ್ತದಲ್ಲಿರುವ ಆಯಾಯ ಕೇಂದ್ರದಲ್ಲಿ ಅವುಗಳು ಸಂಗ್ರಹವಾಗುತ್ತವೆ. ಅಲ್ಲಿಂದ ಅವು ಪುನಃ ಹೊರಮನಸ್ಸಿಗೆ – ಹೀಗೆ ಪಯಣಿಸುತ್ತಿರುತ್ತವೆ. ಹೀಗೆ ನಮ್ಮ ಮನಸ್ಸಿನಲ್ಲಿ ದಿನದ ೨೪ ಗಂಟೆಯ ಕಾಲವೂ ವಿಚಾರ ತರಂಗಗಳು ಏಳುತ್ತಿರುತ್ತವೆ.
ಸುಖಕ್ಕೆ ಒಂದು ಮಿತಿ ಇದೆ. ನಮಗೆ ಸಿಹಿತಿಂಡಿ ಇಷ್ಟ ಎಂದು ನಾವು ಕೇವಲ ಸಿಹಿತಿಂಡಿ ತಿನ್ನುತ್ತಾ ಹೋದರೆ, ನಮ್ಮ ಅರೋಗ್ಯ ಹಾಳಾಗುತ್ತದೆ, ಅಂದರೆ ಇದರಿಂದ ಸಿಗುವ ಸುಖ ನಷ್ಟವಾಗುತ್ತದೆ. ನಮಗೆ ನಮ್ಮ ಪಂಚಜ್ಞಾನೇಂದ್ರಿಯಗಳಿಂದ ಸಿಗುವ ಸುಖದ ತುಲನೆಯಲ್ಲಿ ನಮ್ಮ ಮನಸ್ಸಿಗೆ ಸಿಗುವ ಸುಖವು ಉನ್ನತ ಮಟ್ಟದ ಮತ್ತು ಹೆಚ್ಚು ಕಾಲ ಉಳಿಯುವಂತದ್ದಾಗಿರುತ್ತದೆ. ಅದೇ, ಈ ಸುಖದ ತುಲನೆಯಲ್ಲಿ ನಮ್ಮ ಬುದ್ಧಿಯು ಅನುಭವಿಸುವ ಸುಖವು ಇನ್ನಷ್ಟು ಉನ್ನತ ಮಟ್ಟದ್ದಾಗಿರುತ್ತದೆ. ಆದರೆ ಈ ಸುಖದ ಅನುಭೂತಿಗೂ ಒಂದು ಮಿತಿ ಇದೆ.
ಆದರೆ ಆನಂದ ಚಿರಂತನ. ಅದರ ಅನುಭೂತಿಯನ್ನು ಮಾತ್ರ ಪಡೆಯಬಹುದು, ಅದರ ವಿಶ್ಲೇಷಣೆಯನ್ನು ಮಾಡಲು ಪದಗಳು ಸಾಲದು. ಉದಾ. ಸಕ್ಕರೆಯನ್ನು ಇದುವರೆಗೂ ತಿನ್ನದವರಿಗೆ ‘ಸಿಹಿ’ಯನ್ನು ವರ್ಣಿಸಬಹುದೇ? ಸಕ್ಕರೆಯನ್ನು ತಿಂದವರಿಗೆ ಸಿಹಿ ಏನೆಂದು ತಿಳಿದಿರುತ್ತದೆ.
ಸದಾ ಕಾರ್ಯನಿರತವಾಗಿರುವ ಮನಸ್ಸು ನಮ್ಮ ಸೃಷ್ಟಿಕರ್ತನ ಸ್ಮರಣೆ ಮಾಡಲೂ ಸಮಯವಿಲ್ಲದೆ ಅಶಾಂತಿಯಿಂದ ಚಡಪಡಿಸುತ್ತಿರುತ್ತದೆ. ಚಿತ್ತವು ಶುದ್ಧಿಯಾದಾಗ (ನಿರ್ವಿಚಾರ ಸ್ಥಿತಿಗೆ ಹೋದಾಗ) ಮಾತ್ರ ಶಾಂತಿ ನೆಲೆಸುತ್ತದೆ. ಚಿತ್ತ ಶುದ್ಧಿಗೆ ನಾವೇನು ಮಾಡಬಹುದು? ಮುಂದಿನ ಲೇಖನದಲ್ಲಿ ನೋಡೋಣ.
ಆನಂದಮಯ ಜೀವನವನ್ನು ಹೇಗೆ ನಡೆಸುವುದು ?
ಆನಂದಮಯ ಜೀವನವನ್ನು ಹೇಗೆ ನಡೆಸುವುದು, ಎಂಬುದನ್ನು ವಿಜ್ಞಾನವು ಕಲಿಸಲಾರದು. ಬದಲಾಗಿ ಅಧ್ಯಾತ್ಮವು ಮಾತ್ರ ಕಲಿಸಬಲ್ಲದು. ಅಂದರೆ ಈ ಶಾಸ್ತ್ರವು ಸೀಮಿತ ಮಂದಿಗಲ್ಲ- ಎಲ್ಲರಿಗೂ ಅವಶ್ಯಕವಾಗಿದೆ ಎಂಬುದನ್ನು ತಿಳಿಯಬಹುದು.
ಅಧ್ಯಾತ್ಮವು ಕಹಿಗುಳಿಗೆಯಲ್ಲ !
ಅಧ್ಯಾತ್ಮ ಅಂದರೆ ಏನು? ಅಧಿ+ಆತ್ಮ ಅಂದರೆ ಪರಮಾತ್ಮನ ಅಂಶವಾದ ಆತ್ಮನ ಬಗೆಗಿನ ಶಾಸ್ತ್ರ. ಜಗತ್ತಿನ ಎಲ್ಲ ಜೀವಿಗಳಲ್ಲಿ ಶ್ರೇಷ್ಠವೆನಿಸಿದ ಮಾನವನ ಜನ್ಮವು ಕೇವಲ ವ್ಯಾಪಾರ, ವ್ಯವಹಾರ, ನೌಕರಿ, ಸಂಪಾದನೆಗಾಗಿ ಅಲ್ಲ. ಬದಲಾಗಿ ಪರಮಾತ್ಮನ ಮನೆಯಿಂದ ಬಂದ ನಾವು ನಮ್ಮ ಪ್ರಾರಬ್ಧವನ್ನು ಭೋಗಿಸಿ ಆಧ್ಯಾತ್ಮಿಕ ಸಾಧನೆ ಮಾಡಿ ನಿರಾತಂಕವಾಗಿ ಪರಮಾತ್ಮನ ಮನೆಗೇ ಹಿಂದಿರುಗಬೇಕೆಂಬುದು ನಮ್ಮ ಸೃಷ್ಟಿಕರ್ತನ ಸಂಕಲ್ಪವಾಗಿದೆ. ‘ಅಲ್ಲಿದೆ ನಮ್ಮನೆ, ಇಲ್ಲಿರೋದು ಸುಮ್ಮನೆ’ ಎಂಬುದು ದಾಸವಾಣಿ. ಎಲ್ಲ ಜೀವಿಗಳಿರುವಂತೆ ನಿದ್ರೆ, ಆಹಾರ, ಭಯ, ಮೈಥುನ ಇವುಗಳೊಂದಿಗೆ ಬುದ್ಧಿ (ವಿವೇಕ) ಎಂಬ ವಿಶೇಷ ಶಕ್ತಿಯನ್ನು ಹೊಂದಿರುವ ಮನುಷ್ಯನು ಮಾತ್ರ ಈಶ್ವರ ಪ್ರಾಪ್ತಿಯನ್ನು ಮಾಡಿಕೊಳ್ಳಬಲ್ಲನು. ಆನಂದವು ಪರಮಾತ್ಮನ ಗುಣಧರ್ಮವೇ ಆಗಿರುವುದರಿಂದ ಈಶ್ವರ ಪ್ರಾಪ್ತಿಯನ್ನು ಅಂದರೆ ಆನಂದ ಪ್ರಾಪ್ತಿಯನ್ನು ಮಾಡಿಕೊಳ್ಳುವ ವಿಶೇಷ ಅವಕಾಶವು ಇತರ ಜೀವಿಗಳಿಗಿಲ್ಲ. ಆದರೆ ಪ್ರತಿಯೊಬ್ಬ ಮನುಷ್ಯನಿಗೆ ಇದೆ. ಮಾನವನ ಮನಸ್ಸು ಕ್ಷಣಕ್ಷಣವೂ ಯಾವುದೇ ವಿಚಾರದಲ್ಲಿ ಸಂಕಲ್ಪ-ವಿಕಲ್ಪ (ಬೇಕು, ಬೇಡ ಎಂಬ ವಿಚಾರ) ಮಾಡಿದರೆ ಬುದ್ಧಿಯು (ವಿವೇಕವು) ಈ ಬಗ್ಗೆ ವಿಮರ್ಶೆ ಮಾಡಿ ಸರಿಯಾದ ನಿರ್ಧಾರ ಕೈಗೊಳ್ಳಬಲ್ಲುದು. ಆದುದರಿಂದ ನಮಗೂ ಪರಮಾತ್ಮನು ನೀಡಿರುವ ಬುದ್ಧಿಯನ್ನು ಉಪಯೋಗಿಸಿ ಅವನ ಸಂಕಲ್ಪದಂತೆ ಆಧ್ಯಾತ್ಮಿಕ ಸಾಧನೆ ಮಾಡಿ ಆನಂದ ಪ್ರಾಪ್ತಿಮಾಡಿಕೊಳ್ಳಬೇಕು.
ಚಿತ್ತದೊಳಗಿನ ಕೋಟ್ಯಂತರ ಸಂಸ್ಕಾರಗಳನ್ನು ನಾಶಪಡಿಸಲು ಪರಮಾತ್ಮನ ನಾಮಸ್ಮರಣೆಯೆಂಬ ಅಮೂಲ್ಯ ಬೀಜವನ್ನು ಚಿತ್ತದೊಳಗೆ ಬಿತ್ತಿ, ಆಧ್ಯಾತ್ಮಿಕ ಸಾಧನೆಯೆಂಬ ನೀರು ಗೊಬ್ಬರವನ್ನುಣಿಸಿ ನಾಮ ಸ್ಮರಣೆಯ ಕೇಂದ್ರವು ಚಿತ್ತವನ್ನು ಪೂರ್ತಿ ವ್ಯಾಪಿಸಿದಾಗ ನಿರ್ವಿಚಾರ ಸ್ಥಿತಿಯು ನಿರ್ಮಾಣವಾಗಿ ಮನಸ್ಸು ಶಾಂತವಾಗುತ್ತದೆ. ಶಾಯಿ ತುಂಬಿದ ಬಾಟಲಿಯೊಳಗೆ ಶುದ್ಧ ನೀರನ್ನು ನಿರಂತರವಾಗಿ ತುಂಬಿಸುತ್ತಿದ್ದಂತೆ ಶಾಯಿಯೆಲ್ಲವೂ ಹೊರಗೆ ಹರಿದು ಬಾಟಲಿಯಲ್ಲಿ ಶುದ್ಧ ನೀರು ತುಂಬಿಕೊಳ್ಳುವಂತೆಯೇ ಇದು ನಡೆಯುತ್ತದೆ.
ಸಾಧನಾ ಸಂವಾದ : ಅಧ್ಯಾತ್ಮದ ಪ್ರಾಥಮಿಕ ಸತ್ಸಂಗ (Online)
ಸಾಧನಾ ಸಂವಾದ – ಆನಂದದಾಯಕ ಜೀವನಕ್ಕೆ ದಾರಿದೀಪ ! ಆನಂದದಾಯಕ ಜೀವನವನ್ನು ಹೇಗೆ ನಡೆಸುವುದು ಮತ್ತು ಶೇಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಸಾಧಿಸುವುದು ಎಂಬುದನ್ನು ತಿಳಿಯಲು ‘ಸಾಧನಾ ಸಂವಾದ’ ಸತ್ಸಂಗದಲ್ಲಿ ಭಾಗವಹಿಸಿ. ಸಾಧನಾ ಸಂವಾದ ಸತ್ಸಂಗದ ನಂತರ ‘ಸನಾತನದ ಸತ್ಸಂಗ’ಗಳಿಗೆ ಸೇರಲು ದಯವಿಟ್ಟು ಈ ಫಾರ್ಮ್ ಅನ್ನು ತುಂಬಿಸಿ.
ಇಲ್ಲಿಯ ವೆರೆಗೆ ಜೀವನದಲ್ಲಿ ಬಂದಿರುವ, ನೀವು ಅನುಭವಿಸಿರುವ ಅನುಭೂತಿಗಳನ್ನು ‘ಸಾಧನಾ ಸಂವಾದ’ದಲ್ಲಿ ನಮ್ಮೊಂದಿಗೆ ಹಂಚಿ, ಮತ್ತು ಅವುಗಳ ಆಧ್ಯಾತ್ಮಿಕ ವಿಶ್ಲೇಷಣೆಯನ್ನು ತಿಳಿದುಕೊಳ್ಳಿ.
ಇದರೊಂದಿಗೆ ಸಾಧನೆ ಮಾಡುವಾಗ ಎದುರಾಗುವ ಪ್ರಶ್ನೆಗಳು ಮತ್ತು ಅಡೆತಡೆಗಳ ಬಗ್ಗೆ ನೀವು ಕೇಳಿ ಉತ್ತವನ್ನೂ ಪಡೆಯಬಹುದು.
‘ಸಾಧನಾ ಸಂವಾದ’ ಸತ್ಸಂಗಗಳನ್ನು ಪ್ರತಿ ಭಾನುವಾರ ಒಂದು ಅನುಕೂಲಕರ ಸಮಯದಲ್ಲಿ ಆಯೋಜಿಸಲಾಗುತ್ತದೆ.
ಸಾಧನಾ ಸಂವಾದ ಸತ್ಸಂಗದ ನಂತರ ತಮ್ಮನ್ನು ನಿಯಮಿತ ಸಾಪ್ತಾಹಿಕ ಸತ್ಸಂಗಕ್ಕೆ ನಿಮಂತ್ರಿಸಲಾಗುವುದು. ಅಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಮಾರ್ಗದರ್ಶನ ನೀಡಲಾಗುತ್ತದೆ. ನಿಮ್ಮ ಆನಂದದಾಯಕ ಜೀವನಕ್ಕೆ ಈ ಸತ್ಸಂಗಗಳು ಹೆಚ್ಚು ಉಪಯುಕ್ತವಾಗುತ್ತವೆ.
ಸನಾತನ ಸತ್ಸಂಗದ ವೈಶಿಷ್ಟ್ಯಗಳು
ನಿಮ್ಮ ಸ್ವಭಾವಕ್ಕೆ ಅನುಗುಣವಾಗಿ ಸರಿಯಾದ ಮತ್ತು ಸುಲಭವಾದ ಸಾಧನೆಯ ಬಗ್ಗೆ ಮಾರ್ಗದರ್ಶನ!
ಜೀವನದಲ್ಲಿ ಎದುರಾಗುವ ಆಧ್ಯಾತ್ಮಿಕ ಸಮಸ್ಯೆಗಳಿಗೆ ಆಧ್ಯಾತ್ಮಿಕ ಪರಿಹಾರಗಳ ಬಗ್ಗೆ ಮಾರ್ಗದರ್ಶನ!
ಆಧ್ಯಾತ್ಮ ಮತ್ತು ಸಾಧನೆಗೆ ಸಂಬಂಧಿಸಿದ ಪ್ರಶ್ನೆಗಳ ಉತ್ತರಗಳು!
ನೀವು ಈಗಾಗಲೇ ಸನಾತನ ಸಂಸ್ಥೆಯ ಸಂಪರ್ಕದಲ್ಲಿದ್ದರೆ, ಸಾಧನಾ ಸಂವಾದ ಸತ್ಸಂಗಕ್ಕೆ ನಿಮ್ಮ ಹೆಸರನ್ನು ನೋಂದಾಯಿಸುವ ಆವಶ್ಯಕತೆಯಿಲ್ಲ.
ಸಾಧನಾ ಸಂವಾದ ಸತ್ಸಂಗಕ್ಕೆ ನಿಮ್ಮ ಹೆಸರು ಕೂಡಲೇ ನೋಂದಾಯಿಸಿ, ಇಲ್ಲಿ ಕ್ಲಿಕ್ ಮಾಡಿ !