ಅಧ್ಯಾತ್ಮಿಕ ಉಪಚಾರಗಳು
ಕಲಿಯುಗದ ಪ್ರಭಾವದಿಂದ ಇಂದು ಸಮಾಜವು ಧರ್ಮಾಚರಣೆಯಿಂದ ವಿಮುಖವಾಗಿರುವುದರಿಂದ ಅಸುರೀ ಶಕ್ತಿಗಳ ಪ್ರಾಬಲ್ಯವು ಹೆಚ್ಚಿದೆ. ನಾವು ಭೌತಿಕ ವಿಷಯಗಳಲ್ಲಿ ಅಥವಾ ಇತರ ವಿಷಯಗಳ ಮೂಲಕ ಆನಂದವನ್ನು (ಸುಖವನ್ನು) ಹುಡುಕುತ್ತೇವೆ, ಆದರೆ ಅನಿಷ್ಟ ಶಕ್ತಿಗಳ ತೊಂದರೆಯಿಂದಾಗಿ ನಮಗೆ ಆನಂದವು ಸಿಗುವುದಿಲ್ಲ. ಹಾಗಾದರೆ ‘ಈ ತೊಂದರೆ ದೂರವಾಗಲು ಯಾವ ರೀತಿಯ ಉಪಾಯಗಳನ್ನು ಮಾಡಬೇಕು? ಯಾವ ನಾಮಜಪ ಅಥವಾ ಇತರ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು? ನಮ್ಮ ಅತೃಪ್ತ ಪೂರ್ವಜರಿಂದ ಆಗುವ ತೊಂದರೆಗಳಿಗೆ ಪರಿಹಾರಗಳೇನು? ವಾಸ್ತುದೋಷ ಅಥವಾ ವಾಹನಗಳಿಗೆ ದೃಷ್ಟಿ ತಗುಲಿ ಆಗುವ ತೊಂದರೆಗಳಿಗೆ ಪರಿಹಾರಗಳೇನು?’ ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಿರುವ ಲೇಖನಗಳಲ್ಲಿ ನೀಡಲಾಗಿದೆ.