|| ಶ್ರೀ ಗುರುದೇವ ದತ್ತ ||
ಪಿತೃ ಋಣವನ್ನು ತೀರಿಸಲು ಮತ್ತು ಪೂರ್ವಜರ ಮುಕ್ತಿಯನ್ನು ತಡೆಗಟ್ಟದೇ ಅವರಿಗೆ ಗತಿ ಸಿಗಬೇಕೆಂದು ದತ್ತಗುರುಗಳ ನಾಮಜಪವನ್ನು ಶ್ರದ್ಧೆಯಿಂದ ಮಾಡಿ !
1. ತಾರಕ ಮತ್ತು ಮಾರಕ ನಾಮಜಪ
ದೇವತೆಯ ಹೆಸರನ್ನು ಜಪಿಸುವುದು ಕಲಿಯುಗದಲ್ಲಿ ಸರಳವಾದ ಸಾಧನೆಯ ಮಾರ್ಗ. ದೇವತೆಗೆ ‘ತಾರಕ’ ಮತ್ತು ‘ಮಾರಕ’ ಎಂಬ ಎರಡು ರೂಪಗಳಿವೆ. ಭಕ್ತನನ್ನು ಆಶೀರ್ವದಿಸುವ ದೇವತೆಯ ರೂಪವು ತಾರಕ ರೂಪ ಮತ್ತು ರಾಕ್ಷಸರನ್ನು ನಾಶಮಾಡುವ ರೂಪವು ದೇವತೆಯ ಮಾರಕ ರೂಪವಾಗಿದೆ. ಇದರಿಂದ ದೇವತೆಯ ತಾರಕ ರೂಪಕ್ಕೆ ಸಂಬಂಧಿಸಿದ ಪಠಣವು ‘ತಾರಕ’ ಪಠಣ ಮತ್ತು ದೇವತೆಯ ಮಾರಕ ರೂಪಕ್ಕೆ ಸಂಬಂಧಿಸಿದ ಪಠಣವು ‘ಮಾರಕ’ ಪಠಣ ಎಂದು ಕರೆಯಬಹುದು.
2. ದೇವತೆಯ ‘ತಾರಕ’ ನಾಮವನ್ನು ಜಪಿಸುವ ಮಹತ್ವ
ದೇವತೆಯ ಹೆಸರನ್ನು ಜಪಿಸುವುದರಿಂದ ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿ ಬರುತ್ತದೆ, ಹಾಗೆಯೇ ದೇವತೆಯ ಬಗ್ಗೆ ಸಾತ್ವಿಕ ಭಾವವೂ ನಿರ್ಮಾಣವಾಗುತ್ತದೆ. ಕೆಟ್ಟ ಶಕ್ತಿಗಳಿಂದ ರಕ್ಷಿಣೆಯಾಗಬೇಕಾದರೆ, ದೇವತೆಯ ತಾರಕ ರೂಪದ ನಾಮವನ್ನು ಜಪಿಸುವುದು ಆವಶ್ಯಕ.
3. ದೇವತೆಯ ‘ಮಾರಕ’ ನಾಮವನ್ನು ಜಪಿಸುವ ಮಹತ್ವ
ಮಾರಕ ನಾಮಜಪ ಪಠಿಸುವುದರಿಂದ ದೇವತೆಯಿಂದ ಪ್ರಕ್ಷೇಪಿಸಲ್ಪಟ್ಟ ಶಕ್ತಿ ಮತ್ತು ಚೈತನ್ಯವನ್ನು ಗ್ರಹಿಸಲ್ಪಡುತ್ತದೆ, ಹಾಗೆಯೇ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳನ್ನು ದೂರಗೊಳಿಸಲು ದೇವತೆಯ ಮಾರಕ ರೂಪದ ನಾಮವನ್ನು ಜಪಿಸುವುದು ಆವಶ್ಯಕ.
4. ಶ್ರೀ ದತ್ತಗುರುಗಳ ಹೆಸರನ್ನು ಜಪಿಸುವುದು ಹೇಗೆ?
ನಾಮಜಪದಿಂದ ದೇವತೆಯ ತತ್ತ್ವದಿಂದ ಹೆಚ್ಚಿನ ಲಾಭವನ್ನು ಪಡೆಯಲು, ಆ ನಾಮಜಪದ ಉಚ್ಚಾರವು ಆಧ್ಯಾತ್ಮ ಶಾಸ್ತ್ರದ ದೃಷ್ಟಿಯಿಂದ ಸರಿಯಾಗಿರಬೇಕು. ಇದಕ್ಕಾಗಿ, ‘ಶ್ರೀ ಗುರುದೇವ ದತ್ತ’ ಜಪವನ್ನು ಹೇಗೆ ಜಪಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳೋಣ.
‘ಶ್ರೀ ಗುರುದೇವ ದತ್ತ’ ಜಪಿಸುವಾಗ, ಶ್ರೀ ದತ್ತ ಗುರುಗಳ ರೂಪವನ್ನು ಮನಸ್ಸಿನ ಮುಂದೆ ತಂದು, ತನ್ನ ಪೂರ್ವಜರ ತೊಂದರೆಗಳಿಂದ ರಕ್ಷಿಸಲು ದತ್ತಗುರುಗಳೇ ಧಾವಿಸಿ ಬರುತ್ತಾರೆ ಎಂಬ ಭಾವವನ್ನಿಟ್ಟು ನಾಮಜಪದ ಪ್ರತಿಯೊಂದು ಅಕ್ಷರವನ್ನು ಉಚ್ಚರಿಸಬೇಕು.
ಅದೇ, ನಾಮವನ್ನು ಮಾರಕ ರೀತಿಯಲ್ಲಿ ಜಪಿಸುವಾಗ, ‘ಶ್ರೀ ಗುರುದೇವ ದತ್ತ’ ಜಪದ ಪ್ರತಿಯೊಂದು ಅಕ್ಷರವನ್ನು ಮಾರಕ ಸ್ವರದಲ್ಲಿ ಉಚ್ಚರಿಸಬೇಕು. ಈ ಸಮಯದಲ್ಲಿ, ದೇವತೆಯ ಹೆಸರಿಗೆ, ಅಂದರೆ ‘ದತ್ತ’ ಪದದಲ್ಲಿ ‘ದ’ ಅಕ್ಷರ ಮೇಲೆ ಹೆಚ್ಚಿನ ಒತ್ತು ನೀಡಬೇಕು.
“ಶ್ರೀ ಗುರುದೇವ ದತ್ತ | ತಾರಕ ನಾಮಜಪ”
“ಶ್ರೀ ಗುರುದೇವ ದತ್ತ | ಮಾರಕ ನಾಮಜಪ”
“ॐ ॐ ಶ್ರೀ ಗುರುದೇವ ದತ್ತ ॐ ॐ ತಾರಕ ನಾಮಜಪ”
“ॐ ॐ ಶ್ರೀ ಗುರುದೇವ ದತ್ತ ॐ ॐ ಮಾರಕ ನಾಮಜಪ”
5. ಸ್ವಭಾವಕ್ಕೆ ಅನುಗುಣವಾಗಿ ‘ತಾರಕ’ ಅಥವಾ ‘ಮಾರಕ’ ನಾಮವನ್ನು ಜಪಿಸುವುದು ಮುಖ್ಯ
ಸ್ವಭಾವದ ಪ್ರಕಾರ, ದೇವತೆಯ ತಾರಕ ಅಥವಾ ಮಾರಕ ಜಪಿಸುವುದರಿಂದ ವ್ಯಕ್ತಿಗೆ ದೇವತೆಯ ತತ್ವದಿಂದ ಹೆಚ್ಚಿನ ಲಾಭವಾಗುತ್ತದೆ.
ಮೇಲೆ ತಿಳಿಸಿದ ತಾರಕ ಮತ್ತು ಮಾರಕ ಎರಡೂ ರೀತಿಯಲ್ಲಿ ಸ್ವಲ್ಪ ಸಮಯದವರೆಗೆ ಜಪಿಸಲು ಪ್ರಯತ್ನಿಸಿ ಮತ್ತು ಮನಸ್ಸಿನ ಒಲವು ಯಾವ ಜಪದ ಕಡೆಗೆ ಹೆಚ್ಚು ಇರುತ್ತದೆಯೋ ಆ ಜಪವನ್ನು ಮಾಡಿ. ನಿಯಮಿತವಾಗಿ ಪಠಣ ಅಥವಾ ಸಾಧನೆ ಮಾಡುತ್ತಿಲ್ಲವಾದರೆ, ಅಂತಹವರು ಕೂಡ ತಾರಕ ಮತ್ತು ಮಾರಕ ಎರಡನ್ನೂ ಸ್ವಲ್ಪ ಸಮಯದವರೆಗೆ ಜಪಿಸಲು ಪ್ರಯತ್ನಿಸಬೇಕು ಮತ್ತು ಇಷ್ಟವಾಗುವ ಜಪವನ್ನು ಮಾಡಬೇಕು.
– ಕು. ತೇಜಲ ಪಾತ್ರೀಕರ್, ಸಂಗೀತ ವಿಶಾರದೆ, ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ,
ಈ ಜಪವನ್ನು ಕೇಳುವಾಗ ನಿಮಗೆ ಯಾವುದೇ ರೀತಿಯ ವಿಶಿಷ್ಟ ಅನುಭೂತಿಗಳು ಬಂದಲ್ಲಿ ನಮಗೆ ತಿಳಿಸಿ. ನಮ್ಮ ವಿಳಾಸ [email protected]