ಹಿಂದೂ ಧರ್ಮದ ಎಲ್ಲ ಹಬ್ಬಗಳು ಹಾಗು ವಿಧಿಗಳು ಯಾವುದಾದರೊಂದು ದೇವತೆಗೆ ಸಂಬಂಧಿಸಿರುತ್ತವೆ. ಆಯಾ ಹಬ್ಬದಂದು ಅಥವಾ ವಿಧಿಯ ಸಮಯದಲ್ಲಿ ಆಯಾ ದೇವತೆಯ ತತ್ತ್ವವು ವಾತಾವರಣದಲ್ಲಿ ಇತರ ದಿನಗಳ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿರುತ್ತದೆ, ಅಥವಾ ಆ ವಿಧಿಯಿಂದ ಅಲ್ಲಿಗೆ ಆಕರ್ಷಿಸಲ್ಪಡುತ್ತದೆ. ಆ ತತ್ವವು ಇನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸಬೇಕು ಮತ್ತು ಅದರಿಂದ ಎಲ್ಲರಿಗೂ ಲಾಭವಾಗಬೇಕು ಎಂದು ಆ ತತ್ತ್ವವನ್ನು ಆಕರ್ಷಿಸಿ ಪ್ರಕ್ಷೇಪಿಸುವ ರಂಗೋಲಿಗಳನ್ನು ಬಿಡಿಸಬಹುದು. ಅಂದರೆ, ಕೇವಲ ಕಣ್ಣುಗಳಿಗೆ ಮುದ ನೀಡುವ ರಂಗೋಲಿಗಳಿಗಿಂತ ದೇವತೆಗಳ ತತ್ತ್ವಗಳನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ರಂಗೋಲಿಗಳು ಲಾಭದಾಯಕವಾಗಿರುತ್ತವೆ.
ಇಲ್ಲಿ ನೀಡಿರುವ ರಂಗೋಲಿಗಳ ಬಣ್ಣಗಳು ಸಾತ್ತ್ವಿಕವಾಗಿವೆ. ಇದರಿಂದ ರಂಗೋಲಿಯ ಸಾತ್ತ್ವಿಕತೆಯು ಹೆಚ್ಚಾಗಲು ಸಹಾಯವಾಗುತ್ತದೆ. ರಂಗೋಲಿಯ ಸಾತ್ತ್ವಿಕತೆಯು ಹೆಚ್ಚಾದರೆ, ದೇವತೆಯ ತತ್ತ್ವವನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಸಹಾಯವಾಗುತ್ತದೆ.