ಸನಾತನ ಆಶ್ರಮ
ಹಿಂದೂ ರಾಷ್ಟ್ರದ ಪ್ರೇರಣಾಸ್ರೋತ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಮಾರ್ಗದರ್ಶನದಲ್ಲಿ ರೂಪಿತವಾದ ಮತ್ತು ಈಶ್ವರೀ ರಾಜ್ಯದ ಪ್ರತಿರೂಪವಾದ ಸನಾತನ ಆಶ್ರಮ !
ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ವಾಸ್ತವ್ಯದಿಂದ ಪಾವನವಾಗಿರುವ ಸನಾತನದ (ರಾಮನಾಥಿ, ಗೋವಾದಲ್ಲಿರುವ) ಆಶ್ರಮದಲ್ಲಿ ಚೈತನ್ಯ, ಆನಂದ ಮತ್ತು ಶಾಂತಿಯ ಅನುಭೂತಿಗಳು ಅನೇಕ ಸಾಧಕರಿಗೆ ಬರುತ್ತಿವೆ. ಆಶ್ರಮದಲ್ಲಿನ ಸ್ವಯಂಶಿಸ್ತು, ಆಯೋಜನಾಬದ್ಧತೆ, ಪ್ರೇಮಭಾವ ಮುಂತಾದವುಗಳಿಂದ ಆಶ್ರಮವು ಭಾವೀ ಈಶ್ವರೀ ರಾಜ್ಯದ ಪ್ರತಿರೂಪವೆನಿಸುತ್ತದೆ. ಈ ಆಶ್ರಮವೆಂದರೆ ಈಶ್ವರೀ ರಾಜ್ಯದ ಸ್ಥಾಪನೆ, ಅಧ್ಯಾತ್ಮ ವಿಶ್ವವಿದ್ಯಾಲಯ, ಸರ್ವಾಂಗಸ್ಪರ್ಶಿ ಗ್ರಂಥಗಳ ನಿರ್ಮಿತಿ, ಸೂಕ್ಷ್ಮ-ಜಗತ್ತಿನ ಸಂಶೋಧನೆ ಮುಂತಾದ ಅನೇಕ ಕಾರ್ಯಗಳ ಕೇಂದ್ರವೇ ಆಗಿದೆ.
ಸಾಧಕರಲ್ಲಿ ಸದ್ಗುಣಗಳು ಸಂವರ್ಧನೆಯಾಗುವಂತಹ ಆಶ್ರಮಜೀವನ !
ಜೀವನದ ಪ್ರತಿಯೊಂದು ಕೃತಿಯಲ್ಲಿಯೂ ಸಾಧನೆಯ ಉದ್ದೇಶ !
ಸಾಮಾಜಿಕ ಐಕ್ಯತೆಯ ಪ್ರತೀಕವಾಗಿರುವ ಆಶ್ರಮ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯದ ಶಕ್ತಿಸ್ರೋತ !
ಆಧ್ಯಾತ್ಮಿಕ ಪ್ರಗತಿಗಾಗಿ ಪೂರಕ ವಾತಾವರಣ !
ಹಿಂದೂಸಂಘಟನೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮಾರ್ಗದರ್ಶಕ ಕೇಂದ್ರ !
ಅಭೂತಪೂರ್ವ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯ !
ಆಶ್ರಮದಲ್ಲಿ ಹೆಚ್ಚುತ್ತಿರುವ ಸಾತ್ವಿಕತೆಗೆ ಸಾಕ್ಷಿಯಾಗಿರುವ ದೈವೀ ಬದಲಾವಣೆಗಳು !
ಸನಾತನ ಆಶ್ರಮ
‘ವಸುಧೈವ ಕುಟುಂಬಕಂ |’ (ಇಡೀ ಪೃಥ್ವಿಯು ಕುಟುಂಬವಾಗಿದೆ) ಎಂಬುದು ಹಿಂದೂ ಧರ್ಮದ ಬೋಧನೆಯಾಗಿದೆ. ತಮ್ಮಂತಹ ಸಾಧಕಬಂಧುಗಳು ಮತ್ತು ರಾಷ್ಟ್ರಪ್ರೇಮಿ ಹಾಗೂ ಧರ್ಮಪ್ರೇಮಿಗಳು ನಮಗೆ ಸನಾತನ ಪರಿವಾರದವರೆಂದೇ ಅನಿಸುತ್ತಾರೆ. ತಾವು ಸನಾತನ ಆಶ್ರಮಕ್ಕೆ ಭೇಟಿ ನೀಡಿ ಪರಸ್ಪರರಲ್ಲಿರುವ ಆತ್ಮೀಯತೆಯನ್ನು ದೃಢಗೊಳಿಸುವ ಅವಕಾಶ ನಮಗೆ ಕೊಡಿ. ಸನಾತನದ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲೂ ಪಾಲ್ಗೊಳ್ಳಿ. ನಾವು ಈಶ್ವರೀ ರಾಜ್ಯದ ಸ್ಥಾಪನೆಯ ಉದಾತ್ತ ಧ್ಯೇಯವನ್ನು ಸಂಘಟಿತರಾಗಿ ಸಾಕಾರಗೊಳಿಸಿ ಶೀಘ್ರವಾಗಿ ಈಶ್ವರೀ ಕೃಪೆ ಪಡೆಯೋಣ !