ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ

‘ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದಾಣಿಕೆಯಾಗುತ್ತವೆ. ಆದುದರಿಂದ ನಮ್ಮ ಆಪ್ತೇಷ್ಟರು ಮತ್ತು ಹಿತಚಿಂತಕರು ನಮಗೆ ಆ ತಿಥಿಗೆ ನೀಡಿದ ಶುಭೇಚ್ಛೆ ಮತ್ತು ಶುಭಾಶೀರ್ವಾದಗಳು ಎಲ್ಲಕ್ಕಿಂತ ಹೆಚ್ಚು ಫಲದಾಯಕವಾಗುತ್ತವೆ

ಹುಟ್ಟುಹಬ್ಬವನ್ನು ಆಚರಿಸುವ ಪದ್ಧತಿ

ಮೊದಲನೆಯ ವರ್ಷ ಪ್ರತಿ ತಿಂಗಳು ಹಾಗೂ ಅನಂತರ ಪ್ರತಿವರ್ಷ ಜನ್ಮದಿನದ ತಿಥಿಯಂದು ಹುಟ್ಟುಹಬ್ಬವನ್ನು ಆಚರಿಸುವಾಗ ಮೊದಲು ಅಭ್ಯಂಗಸ್ನಾನವನ್ನು ಮಾಡಿಸಿ ಕುಂಕುಮ ತಿಲಕವನ್ನು ಹಚ್ಚಬೇಕು. ಹುಟ್ಟುಹಬ್ಬವನ್ನು ಆಚರಿಸುವವನು ಪ್ರಾರ್ಥನೆ ಮಾಡಿ ಮುಷ್ಠಿಯಷ್ಟು ಎಳ್ಳು, ಬೆಲ್ಲದ ಒಂದು ತುಂಡು ಹಾಗೂ ಅರ್ಧಲೋಟ ಹಾಲನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಸ್ವೀಕರಿಸಬೇಕು.

ಶ್ರೀರಾಮನವಮಿಯ ಪೂಜಾವಿಧಿ

ಈ ದಿನದಂದು ಶ್ರೀರಾಮನ ವ್ರತವನ್ನೂ ಮಾಡುತ್ತಾರೆ. ಈ ಒಂದು ವ್ರತ ಮಾಡುವುದರಿಂದ ಎಲ್ಲ ವ್ರತಗಳನ್ನು ಮಾಡಿದ ಫಲಪ್ರಾಪ್ತಿಯಾಗುತ್ತದೆ ಮತ್ತು ಎಲ್ಲ ಪಾಪಗಳ ಕ್ಷಾಲನೆಯಾಗಿ ಕೊನೆಗೆ ಉತ್ತಮ ಲೋಕ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. 1. ಭಗವಾನ ಶ್ರೀರಾಮನ ಜನನ ಮಧ್ಯಾಹ್ನ ಅಂದರೆ 12 ಗಂಟೆಗೆ ಆಚರಿಸಲಾಗುತ್ತದೆ. 2. ಭಗವಾನ ಶ್ರೀರಾಮನ ವಿಗ್ರಹ ಅಥವಾ ಪ್ರತಿಮೆಯ ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯನ್ನು ಮಾಡಬೇಕು. 3. ಮಧ್ಯಾಹ್ನ 12 ಗಂಟೆಗೆ ‘ಪ್ರಭು ಶ್ರೀರಾಮಚಂದ್ರ ಕೀ ಜೈ!’ ಎಂಬ ಜಯಘೋಷ ಮಾಡಬೇಕು. 4. ಶ್ರೀರಾಮನ … Read more

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ

ಯಾವುದೇ ಯೋಗಮಾರ್ಗದಿಂದ ಸಾಧನೆ ಮಾಡಿದರೂ ಎಲ್ಲಿಯವರೆಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಸ್ವಲ್ಪ ಪ್ರಮಾಣದಲ್ಲಾದರೂ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗುತ್ತದೆ

ಗುರುಪೂರ್ಣಿಮೆ (ವ್ಯಾಸಪೂಜೆ)

ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ !

ಮತ್ತೊಮ್ಮೆ ‘ಆನಂದದಾಯಿ ಗುರುಕುಲರೂಪಿ ಧರ್ಮಶಿಕ್ಷಣಪದ್ಧತಿ’ಯನ್ನು ಭಾರತದಲ್ಲಿ ತರಲು ಕಟಿಬದ್ಧರಾಗೋಣ !

ವಿಜ್ಞಾನವು ಚೈತನ್ಯರಹಿತವಾಗಿರುವುದರಿಂದ ಅದು ವಿದ್ಯಾರ್ಥಿಗಳಿಗೆ ಹತಾಶವಾಗುವುದನ್ನು ಕಲಿಸುತ್ತದೆ. ಅಧ್ಯಾತ್ಮ ಮಾತ್ರ ನಿತ್ಯನೂತನ ಮತ್ತು ಚೈತನ್ಯಮಯ ವಾಗಿರುವುದರಿಂದ ಅದು ಭಕ್ತರಿಗೆ, ಭಾವಿಕರಿಗೆ, ವಿದ್ಯಾರ್ಥಿಗಳಿಗೆ ಪ್ರತಿದಿನ ಬೇರೆ ಬೇರೆ ಪದ್ಧತಿಯ ಆನಂದವನ್ನು ನೀಡುತ್ತದೆ.

ರಾಮಸೇತುವಿನ ಚೈತನ್ಯಮಯ ಕಲ್ಲುಗಳು ಮತ್ತು ಶ್ರೀರಾಮನ ಕಾಲದ ನಾಣ್ಯಗಳು

ತಮಿಳುನಾಡಿನ ಪೂರ್ವ ದಂಡೆಯ ಮೇಲಿರುವ ರಾಮೇಶ್ವರಂ ಒಂದು ತೀರ್ಥಕ್ಷೇತ್ರವಾಗಿದೆ. ರಾವಣನ ಲಂಕೆಯನ್ನು (ಶ್ರೀಲಂಕೆ) ಪ್ರವೇಶಿಸಲು ಶ್ರೀರಾಮನು ತನ್ನ ಕೋದಂಡ ಧನುಷ್ಯದ ತುದಿಯಿಂದ ರಾಮಸೇತುವೆ ಕಟ್ಟಲು ಈ ಸ್ಥಾನದ ಆಯ್ಕೆ ಮಾಡಿದನು.

ಸೇತುಬಂಧ ರಾಮೇಶ್ವರ ಮಹಾತ್ಮೆ

ಭಾರತದಲ್ಲಿರುವ ಎಲ್ಲ ಧಾರ್ಮಿಕ ಸ್ಥಳಗಳು ಶೈವ ಮತ್ತು ವೈಷ್ಣವ ಸಂಪ್ರದಾಯಗಳಲ್ಲಿ ವಿಭಜಿಸಲ್ಪಟ್ಟಿವೆ. ರಾಮೇಶ್ವರಂ ಮಾತ್ರ ಇದಕ್ಕೆ ಅಪವಾದವಾಗಿದೆ. ಏಕೆಂದರೆ ರಾಮೇಶ್ವರಂ ಇದು ಶೈವ ಮತ್ತು ವೈಷ್ಣವ ಈ ಎರಡೂ ಸಂಪ್ರದಾಯಗಳಿಗೆ ಪೂಜನೀಯ ಸ್ಥಳವಾಗಿದೆ.

ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಏಕೆ ಮಾಡಬಾರದು?

‘ಜೀರ್ಣ’ ಎಂದರೆ ಅತ್ಯಂತ ಹಳೆಯ. ಕಾಲಕಳೆದಂತೆ ಇಂತಹ ದೇವಾಲಯಗಳ ಸ್ಥಳಗಳಲ್ಲಿ ಅಲ್ಲಿನ ದೇವತೆಗಳ ಶಕ್ತಿರೂಪೀ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿರುತ್ತದೆ.