ಪ್ರೀತಿಯ ಭವ್ಯ ಸಾಗರವಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆ ಸಾಧಕನು ಮನಸ್ಸಿನಲ್ಲಿ ಸಂಗ್ರಹಿಸಿಟ್ಟ ಭಾವಮುತ್ತುಗಳು !
ಒಂದು ಬಾರಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರಸಾರದ ನಿಮಿತ್ತ ಗೋವಾಕ್ಕೆ ಬಂದಿದ್ದರು. ಫೋಂಡಾದಲ್ಲಿ ಸಾಧಕರಿಗಾಗಿ ಸತ್ಸಂಗವಿತ್ತು. ಆ ಸಮಯದಲ್ಲಿ ನಾನು ಸಹ ಪರಾತ್ಪರ ಗುರು ಡಾ. ಆಠವಲೆಯವರೊಂದಿಗೆ ಗೋವಾಕ್ಕೆ ಬಂದಿದ್ದೆನು. ಸತ್ಸಂಗ ಮುಗಿದ ನಂತರ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ಮನೆಗೆ ಬಂದಿದ್ದರು.