ವ್ರತಗಳ ವಿಧಗಳು

ಸಕಾಮ (ಕಾಮ್ಯ), ನಿಷ್ಕಾಮ, ಆವಶ್ಯಕತೆಗನುಸಾರ, ಇಂದ್ರಿಯಕ್ಕನುಸಾರ, ಕಾಲಾನುಸಾರ, ವೈಯಕ್ತಿಕ ಮತ್ತು ಸಾಮೂಹಿಕ ವ್ರತಗಳ ಬಗ್ಗೆ ತಿಳಿದುಕೊಳ್ಳಿ.

ಸ್ನಾನ ಮಾಡುವ ಪದ್ಧತಿ

ಸ್ತ್ರೀಯರು ಮೊದಲು ಜಡೆ ಹಾಕಿಕೊಂಡು ನಂತರವೇ ಸ್ನಾನ ಮಾಡುವುದು ಯೋಗ್ಯವಾಗಿದೆ. ಜಡೆ ಹಾಕಿಕೊಳ್ಳುವ ಪ್ರಕ್ರಿಯೆಯಿಂದ ದೇಹದಲ್ಲಾಗಿರುವ ರಜ-ತಮಾತ್ಮಕ ಲಹರಿಗಳ ಸಂಕ್ರಮಣವು ಸ್ನಾನದಿಂದಾಗುವ ದೇಹದ ಶುದ್ಧಿಯಿಂದ ನಾಶವಾಗುತ್ತದೆ

ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು, ವಿಶಿಷ್ಟ ಸ್ಥಳದಲ್ಲಿ ಅಪಘಾತ ಸಂಭವಿಸುವ ಕಾರಣಗಳು ಮತ್ತು ಅದರ ಉಪಾಯಗಳು

ವಾಹನವು ಕೆಟ್ಟಿಲ್ಲದಿದ್ದರೂ ಕೆಲವೊಂದು ವಿಶಿಷ್ಟ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತವೆ. ಹಾಗೆಯೇ ವಿಶಿಷ್ಟ ತಿಥಿಗಳಿಗೆ ಉದಾ. ಅಮಾವಾಸ್ಯೆ ಅಥವಾ ಹುಣ್ಣಿಮೆಯಂದು ಅಪಘಾತಗಳಾಗುವ ಪ್ರಮಾಣಹೆಚ್ಚಿರುತ್ತದೆ. ಅಪಘಾತ ಸಂಭವಿಸುವ ವಿವಿಧ ಕಾರಣಗಳು ತಿಳಿದುಕೊಂಡು, ಅದರ ಉಪಾಯಗಳನ್ನು ಮಾಡಿ ಅಪಘಾತಗಳಿಂದ ರಕ್ಷಣೆ ಪಡೆಯೋಣ.

‘ಯು.ಎ.ಎಸ್. (ಯುನಿವರ್ಸಲ್ ಆರಾ ಸ್ಕ್ಯಾನರ್) ಉಪಕರಣದ ಮೂಲಕ ಘಟಕದ ಪ್ರಭಾವಳಿಯನ್ನು ಅಳೆಯುವುದರ ಬಗ್ಗೆ ಮಾಹಿತಿ !

೧. ಪರೀಕ್ಷಣೆಯಲ್ಲಿನ ಘಟಕಗಳ ಆಧ್ಯಾತ್ಮಿಕ ಸ್ತರದಲ್ಲಿನ ವೈಶಿಷ್ಟ್ಯಗಳನ್ನು ವೈಜ್ಞಾನಿಕ ಉಪಕರಣ ಅಥವಾ ತಂತ್ರಜ್ಞಾನಗಳ ಮೂಲಕ ಅಧ್ಯಯನ ಮಾಡುವ ಉದ್ದೇಶ ಯಾವುದಾದರೊಂದು ಘಟಕದಲ್ಲಿ (ವಸ್ತು, ವಾಸ್ತು, ಪ್ರಾಣಿ ಇವುಗಳಲ್ಲಿ ಮತ್ತು ವ್ಯಕ್ತಿಯಲ್ಲಿ) ಎಷ್ಟು ಶೇಕಡಾ ಸಕಾರಾತ್ಮಕ ಸ್ಪಂದನಗಳಿವೆ, ಆ ಘಟಕವು ಸಾತ್ತ್ವಿಕವಾಗಿದೆಯೋ ಅಥವಾ ಇಲ್ಲವೋ, ಹಾಗೆಯೇ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಳಲು ಸೂಕ್ಷ್ಮದಲ್ಲಿನ ವಿಷಯಗಳು ತಿಳಿಯುವುದು ಆವಶ್ಯಕವಾಗಿದೆ. ಉಚ್ಚ ಮಟ್ಟದ ಸಂತರು ಸೂಕ್ಷ್ಮದಲ್ಲಿನ ವಿಷಯಗಳನ್ನು ಅರಿಯಬಲ್ಲರು. ಆದ್ದರಿಂದ ಅವರು ಪ್ರತಿಯೊಂದು ಘಟಕದಲ್ಲಿನ ಸ್ಪಂದನಗಳನ್ನು … Read more

ಚಾತುರ್ಮಾಸದ ಕಾಲದಲ್ಲಿ ಮಾಡಬೇಕಾದ ಸಾಧನೆಯ ಮಹತ್ವ

ಮನುಷ್ಯನ ಒಂದು ವರ್ಷದ ಮೊದಲ ಆರು ತಿಂಗಳು ಎಂದರೆ ದೇವರ ಒಂದು ದಿನ ಮತ್ತು ಮನುಷ್ಯನ ಇನ್ನುಳಿದ ಆರು ತಿಂಗಳು ಎಂದರೆ ದೇವರ ಒಂದು ರಾತ್ರಿಯಾಗಿದೆ; ಆದರೆ ದೇವತೆಗಳು ಚಾತುರ್ಮಾಸದಲ್ಲಿ ಕೇವಲ ನಾಲ್ಕು ತಿಂಗಳುಗಳಷ್ಟೇ ನಿದ್ರಿಸುತ್ತಾರೆ ಮತ್ತು ಒಂದು ತೃತೀಯಾಂಶ ರಾತ್ರಿ ಉಳಿದಿರುವಾಗಲೇ ಎಚ್ಚರಗೊಳ್ಳುತ್ತಾರೆ.

ಶ್ರೀರಾಮನ ಬಾಣದಿಂದ ನಿರ್ಮಾಣವಾದ ತೀರ್ಥ – ಶರಾವತಿ ನದಿಯ ಜೋಗದ ಜಲಪಾತ

‘ತ್ರೇತಾಯುಗದಲ್ಲಿ ಶ್ರೀರಾಮನು ವನವಾಸದಲ್ಲಿದ್ದಾಗ ಒಮ್ಮೆ ಸೀತಾಮಾತೆಗೆ ತುಂಬ ಬಾಯಾರಿಕೆಯಾಗಿತ್ತು, ಆಗ ಶ್ರೀರಾಮನು ಭೂಮಿಗೆ ಬಾಣ ಹೊಡೆದು ನೀರು ತೆಗೆದನು. ಆ ಸ್ಥಳದಲ್ಲಿ ತೀರ್ಥವು ನಿರ್ಮಾಣವಾಯಿತು. ಇದನ್ನೇ ಈಗ ಕರ್ನಾಟಕ ರಾಜ್ಯದಲ್ಲಿರುವ ಶರಾವತಿ ನದಿಯ ಉಗಮಸ್ಥಾನವೆಂದು ಕರೆಯಲಾಗುತ್ತದೆ.