ಪ.ಪೂ. ಭಕ್ತರಾಜ ಮಹಾರಾಜರ ಅಮೃತಮಯ ಬೋಧನೆಗಳು
ಬಾಬಾರವರ ಸಹವಾಸವೆಂದರೆ ಒಂದು ರೀತಿ ಅಧ್ಯಾತ್ಮದ ನಡೆದಾಡುವ ವಿಶ್ವವಿದ್ಯಾಲಯದಂತೆ. ಪ.ಪೂ. ಬಾಬಾರವರ ಮಾತು, ಅವರ ತಮಾಷೆ, ಅವರ ಸಹವಾಸದಲ್ಲಿ ನಡೆದ ಪ್ರಸಂಗಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಕ್ತರಿಗೆ ಎಷ್ಟೋ ಕಲಿಯಲು ಸಿಗುತ್ತಿತ್ತು.
ಬಾಬಾರವರ ಸಹವಾಸವೆಂದರೆ ಒಂದು ರೀತಿ ಅಧ್ಯಾತ್ಮದ ನಡೆದಾಡುವ ವಿಶ್ವವಿದ್ಯಾಲಯದಂತೆ. ಪ.ಪೂ. ಬಾಬಾರವರ ಮಾತು, ಅವರ ತಮಾಷೆ, ಅವರ ಸಹವಾಸದಲ್ಲಿ ನಡೆದ ಪ್ರಸಂಗಗಳಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಕ್ತರಿಗೆ ಎಷ್ಟೋ ಕಲಿಯಲು ಸಿಗುತ್ತಿತ್ತು.
ಪರಾತ್ಪರ ಗುರು ಡಾ. ಆಠವಲೆಯವರು ಉನ್ನತ ವ್ಯಾಸಂಗ ಮಾಡಿದವರಾಗಿದ್ದರೂ, ಅವರು ಪ.ಪೂ.ಭಕ್ತರಾಜ ಮಹಾರಾಜರಿಗೆ ತನು-ಮನ-ಧನವನ್ನು ಅರ್ಪಿಸಿ ಪರಿಪೂರ್ಣ ಸೇವೆ ಮಾಡಿದರು.
ಪ.ಪೂ. ಭಕ್ತರಾಜ ಮಹಾರಾಜರ ಸದಾ ಆಶೀರ್ವಾದ ಲಭಿಸಿದ ಸನಾತನ ಸಂಸ್ಥೆಯ ಕಾರ್ಯದ ವಿಸ್ತಾರವು ಇಂದು ಅನೇಕ ಪಟ್ಟುಗಳಲ್ಲಿ ಹೆಚ್ಚಾಗಿದ್ದು ಸಾವಿರಾರು ಸಾಧಕರು ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುತ್ತಿದ್ದಾರೆ.
ಪ.ಪೂ. ರಾಮಾನಂದ ಮಹಾರಾಜರು ಅತ್ಯಂತ ನಿಷ್ಠೆಯಿಂದ ಪ.ಪೂ. ಬಾಬಾರವರ ಸೇವೆ ಮಾಡಿ ಗುರುಕೃಪೆಯನ್ನು ಸಂಪಾದಿಸಿದರು. ಅಂತಹ ಪ್ರಯತ್ನವನ್ನು ನಮ್ಮೆಲ್ಲ ಸಾಧಕರಿಂದಲೂ ಮಾಡಿಸಿಕೊಳ್ಳಬೇಕೆಂದು ಪ.ಪೂ. ಬಾಬಾರವರ ಚರಣಗಳಲ್ಲಿ ಪ್ರಾರ್ಥನೆ !
ಸಂತ ಭಕ್ತರಾಜ ಮಹಾರಾಜರ ಬೋಧನೆಯ ಸಾರವಿರುವ ಮತ್ತು ಭಕ್ತರ ಮೇಲೆ ಚೈತನ್ಯದ ಕೃಪೆ ತೋರುವ – ತ್ರಿಸೂತ್ರಗಳು ಭಜನೆ, ಭ್ರಮಣ (ಪ್ರಯಾಣ) ಮತ್ತು ಭಂಡಾರ (ಅನ್ನಸಂತರ್ಪಣೆ) !
ಸಂತರ ಸಗುಣ ಸೇವೆ ಮಾಡುವುದು ಕಠಿಣವಿರುತ್ತದೆ. ಅದರಲ್ಲಿ ಸಾಧು ಸಂತರ ಸೇವೆ ಮಾಡುವುದು ಅದಕ್ಕಿಂತಲೂ ಕಠಿಣವಿರುತ್ತದೆ. ಕ್ಷಣಕ್ಷಣಕ್ಕೂ ಸಾಧನೆಯ ಮತ್ತು ಶಿಷ್ಯನ ನಿಷ್ಠೆಯ ಪರೀಕ್ಷೆಯೇ ಆಗಿರುತ್ತದೆ. ಪ.ಪೂ. ಬಾಬಾ ಇವರು ಅಕ್ಷರಶಃ ದೇಹಬುದ್ಧಿಯನ್ನು ಮರೆತು ಗುರುಸೇವೆ ಮಾಡಿದರು.
ತಮ್ಮ ಚೈತನ್ಯಮಯವಾಣಿ ಹಾಗೂ ಅಮೂಲ್ಯ ಬೋಧನೆ ಯಿಂದ ನಮ್ಮೆಲ್ಲರ ಮೇಲೆ ಕೃಪೆ ತೋರುವ ಹಾಗೂ ಈಶ್ವರೀ ರಾಜ್ಯದ ಸ್ಥಾಪನೆಯಲ್ಲಿನ ಅಡಚಣೆಗಳನ್ನು ದೂರಗೊಳಿಸುವ ಪ.ಪೂ. ಭಕ್ತರಾಜ ಮಹಾರಾಜರ ಚರಣಗಳಲ್ಲಿ ಜನ್ಮಶತಮಾನೋತ್ಸವ ನಿಮಿತ್ತ ಅನಂತ ಕೋಟಿ ಕೃತಜ್ಞತೆಗಳು !
ಶಿಷ್ಯನು ಗುರುಗಳ ಬಗ್ಗೆ ಅನನ್ಯ ಶರಣಾಗತ, ಲೀನ ಮತ್ತು ಸಮರ್ಪಣೆ ಭಾವವು ಹೆಚ್ಚಿಸುವುದು, ಗುರುಗಳ ಬಗ್ಗೆ ಬಿಡಿಸಲಾಗದ ಶ್ರದ್ಧೆ ಇಡುವುದು, ಗುರುವಾಜ್ಞೆಯನ್ನು ಪಾಲಿಸುವುದು, ನಿರಂತರ ಕೃತಜ್ಞತೆ ವ್ಯಕ್ತಪಡಿಸುವುದು ಇವುಗಳಿಂದ ಗುರುಕೃಪೆಯನ್ನು ನಿರಂತರವಾಗಿ ಪಡೆಯಬಹುದು.
ಶಿಷ್ಯನ ಅನೇಕ ವಿಧಗಳಲ್ಲಿ ‘ಸಾಧಕ ಶಿಷ್ಯ’ ಅತ್ಯಂತ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಸಾಧಕ ಶಿಷ್ಯನು ಗುರುಗಳ ಆಜ್ಞಾಪಾಲನೆಯನ್ನು ನಿಷ್ಕಾಮ ಭಾವನೆಯಿಂದ ಮಾಡುತ್ತಾನೆ.
ಯೋಗತಜ್ಞ ಪ.ಪೂ. ದಾದಾಜಿ ವೈಶಂಪಾಯನರು ಒಂದು ತೀರ್ಥಕ್ಷೇತ್ರದಲ್ಲಿ ಧ್ಯಾನಮಗ್ನರಾಗಿರುವಾಗ ಭಗವಂತ ನೆಡೆಗೆ ಪ್ರಕಟವಾಗಿರುವ ಅವರ ಆತ್ಮಚಿಂತನವನ್ನು ಇಲ್ಲಿ ನೀಡುತ್ತಿದ್ದೇವೆ. ಸಂತರ ಭಗವಂತನೆಡೆಗಿರುವ ಅಮೂಲ್ಯ ಭಾವವಿಶ್ವ ಹೇಗಿರುತ್ತದೆ, ಎನ್ನುವುದು ಈ ಲೇಖನದಿಂದ ತಿಳಿಯುತ್ತದೆ.