ಗಂಗಾ ನದಿಯ ಆಧ್ಯಾತ್ಮಿಕ ವೈಶಿಷ್ಟ್ಯಗಳು
ಭಾರತದ ಏಳು ಪವಿತ್ರ ನದಿಗಳಲ್ಲಿ ಗಂಗಾ ಮೊದಲ, ಅಂದರೆ ಪವಿತ್ರತಮ ನದಿಯಾಗಿದೆ. ಪುರಾಣಾದಿ ಧರ್ಮಗ್ರಂಥಗಳಲ್ಲಿ ಗಂಗೆಯನ್ನು ‘ಮೋಕ್ಷದಾಯಿನಿ’ ಎಂದು ಕರೆಯಲಾಗಿದೆ. ಗಂಗೆಯು ‘ದಶಹರಾ’ ಆಗಿದ್ದಾಳೆ. ಅವಳು ಶಾರೀರಿಕ, ವಾಚಿಕ ಮತ್ತು ಮಾನಸಿಕ ಪಾಪಗಳನ್ನೊಳಗೊಂಡ ಹತ್ತು ಪಾಪಗಳನ್ನು ನಾಶ ಮಾಡುತ್ತಾಳೆ.