ದೀಪಾವಳಿ

ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಧನತ್ರಯೋದಶಿಯ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆಯನ್ನು ಸಂಪಾದಿಸಿ !

ದೀಪಜ್ಯೋತಿ ನಮೋಸ್ತುತೆ !

ಚಿಕ್ಕಂದಿನಲ್ಲಿ ನಾವೆಲ್ಲರೂ ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದಾಗ ‘ಶುಭಂಕರೋತಿ ಕಲ್ಯಾಣಮ್…..’ ಈ ಶ್ಲೋಕವನ್ನು ಹೇಳುತ್ತಿದ್ದೆವು. ಇಂದೂ ಸಾಯಂಕಾಲದ ಸಮಯದಲ್ಲಿ ಯಾವುದೇ ದೀಪವನ್ನು ಹಚ್ಚಿದರೂ ಬಹಳಷ್ಟು ಜನರು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾರೆ.

ಗೋವತ್ಸ ದ್ವಾದಶಿ

ಎಲ್ಲಿ ಗೋಮಾತೆಯ ಸಂರಕ್ಷಣೆ ಮತ್ತು ಸಂವರ್ಧನೆಯಾಗುತ್ತದೆಯೋ ಹಾಗೂ ಅವಳನ್ನು ಪೂಜಿಸಲಾಗುತ್ತದೆಯೋ, ಅಲ್ಲಿನ ವ್ಯಕ್ತಿಗಳ, ಆ ಸಮಾಜ ಮತ್ತು ಆ ರಾಷ್ಟ್ರದ ಸಮೃದ್ಧಿಯು ನಿಶ್ಚಿತವಾಗಿ ಆಗುತ್ತದೆ

ಆಶ್ವಯುಜ ಕೃಷ್ಣ ತ್ರಯೋದಶಿ – ಧನತ್ರಯೋದಶಿ, ಧನ್ವಂತರಿ ಜಯಂತಿ, ಯಮದೀಪದಾನ

ಇದನ್ನೇ ಆಡುಭಾಷೆಯಲ್ಲಿ ‘ಧನತೇರಸ್’ ಎನ್ನುತ್ತಾರೆ. ಈ ದಿನ ವ್ಯಾಪಾರಿಗಳು ಕೊಪ್ಪರಿಗೆಯನ್ನು (ತಿಜೋರಿಯನ್ನು) ಪೂಜಿಸುತ್ತಾರೆ, ಆಯುರ್ವೇದದ ದೃಷ್ಟಿಯಿಂದ ಈ ದಿನವು ಧನ್ವಂತರಿ ಜಯಂತಿಯ ದಿನವಾಗಿದೆ.

ಅಭ್ಯಂಗಸ್ನಾನ (ಮಂಗಲ ಸ್ನಾನ)

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ.

ನರಕ ಚತುರ್ದಶಿ (ಆಶ್ವಯುಜ ಕೃಷ್ಣ ಚತುರ್ದಶಿ)

ಆಕಾಶದಲ್ಲಿ ನಕ್ಷತ್ರಗಳಿರುವಾಗ ಬ್ರಾಹ್ಮೀಮಹೂರ್ತದಲ್ಲಿ ಅಭ್ಯಂಗಸ್ನಾನವನ್ನು ಮಾಡಿ ನಂತರ ಅಪಮೃತ್ಯುವಿನ ನಿವಾರಣೆಗಾಗಿ ಯಮತರ್ಪಣವನ್ನು ಮಾಡಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ಹಿಂದೂಗಳ ಪರಾಕ್ರಮಿ ರಾಜ ವಿಕ್ರಮಾದಿತ್ಯರ ಕುಲದೇವಿ ಶ್ರೀ ಹರಸಿದ್ಧಿ ದೇವಿ

ಶಿವಪುರಾಣಕ್ಕನುಸಾರ ಮಧ್ಯಪ್ರದೇಶದ ಉಜ್ಜೈನಿಯಲ್ಲಿಯ ಪ್ರಮುಖ ದೇವಸ್ಥಾನಗಳಲ್ಲಿ ಶ್ರೀ ಹರಸಿದ್ಧೀದೇವಿ ದೇವಸ್ಥಾನವು ೫೧ ಶಕ್ತಿಪೀಠಗಳಲ್ಲಿ ಒಂದು ಶಕ್ತಿಪೀಠವಾಗಿದ್ದು ಈ ದೇವಸ್ಥಾನವು ಊರ್ಜೆಯ ದೊಡ್ಡ ಸ್ರೋತವಾಗಿದೆ.

ಶ್ರೀ ಲಕ್ಷ್ಮೀ ಪೂಜಾವಿಧಿ (ಆಶ್ವಯುಜ ಅಮಾವಾಸ್ಯೆ)

ಶ್ರೀ ಮಹಾಲಕ್ಷ್ಮೀಯ ಪ್ರೀತ್ಯರ್ಥವಾಗಿ ನನ್ನ/ನಮ್ಮ ದಾರಿದ್ರ್ಯವು ಪರಿಹಾರವಾಗಬೇಕು ಹಾಗೂ ಯಥೇಚ್ಛ ಲಕ್ಷ್ಮೀ ಪ್ರಾಪ್ತಿ ಮಂಗಳ ಐಶ್ವರ್ಯ, ಕುಲದ ಅಭಿವೃದ್ಧಿ ಸುಖ-ಸಮೃದ್ಧಿ ಇತ್ಯಾದಿ ಫಲಪ್ರಾಪ್ತಿಯಾಗಬೇಕು ಎಂದು ಲಕ್ಷ್ಮೀಪೂಜೆ ಹಾಗೂ ಕುಬೇರ ಪೂಜೆಯನ್ನು ಮಾಡುತ್ತೇನೆ – ಎಂಬ ಸಂಕಲ್ಪ ಮಾಡಿ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಿ.