ಜಾಲತಾಣದಲ್ಲಿ ಉಪಯೋಗಿಸಿದ ಕೆಲವು ಆಧ್ಯಾತ್ಮಿಕ ಪರಿಭಾಷೆಗಳ ಅರ್ಥ

ಸಂಕಲನಕಾರರ ವೈಜ್ಞಾನಿಕ ದೃಷ್ಟಿಕೋನ ಈ ಜಾಲತಾಣದ ಬರವಣಿಗೆಯನ್ನು ವಾಚಕರಿಗೆ ‘ಸಂವಿಧಾನದ ಪರಿಚ್ಛೇದ ೫೧ಅಗನುಸಾರ ವೈಜ್ಞಾನಿಕ ದೃಷ್ಟಿಕೋನವನ್ನಿಡಲು’ ಅಡ್ಡಿಪಡಿಸಲು ಬರೆದಿಲ್ಲ. ಸಂವಿಧಾನವು ‘ಪರಿಚ್ಛೇದ ೨೫’ಕ್ಕನುಸಾರ ವ್ಯಕ್ತಿಗೆ ಧರ್ಮಪಾಲನೆಯ ಮತ್ತು ಧರ್ಮಪ್ರಸಾರದ ಅಧಿಕಾರವನ್ನು ಕೊಟ್ಟಿದೆ. ಧಾರ್ಮಿಕ ಭಾವನೆಗಳು ತೋರಿಕೆಗೆ ಹೇಗೆ ಕಂಡರೂ, ಅವುಗಳಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರ ಸರಕಾರ ಅಥವಾ ನ್ಯಾಯಾಲಯಗಳಿಗಿಲ್ಲ ಎಂಬುದು ನ್ಯಾಯಾಲಯಗಳ ಅನೇಕ ತೀರ್ಪುಗಳಿಂದ ಸ್ಪಷ್ಟವಾಗಿದೆ. ಈ ಹಸ್ತಕ್ಷೇಪವನ್ನು ಕೇವಲ ಸಾಮಾಜಿಕ ಶಾಂತತೆ, ನೈತಿಕತೆ ಮತ್ತು ಆರೋಗ್ಯಕ್ಕೆ ಅಪಾಯವಾಗುತ್ತಿದ್ದರೆ ಮಾತ್ರ ಮಾಡಬಹುದು. ಪ್ರಸ್ತುತ ಜಾಲತಾಣವನ್ನು ಈ ಮೂರೂ … Read more

ಕೆಲವು ದೇವಸ್ಥಾನಗಳಲ್ಲಿ ಪುರುಷರು ಅಂಗಿಯನ್ನು ತೆಗೆದು ಪ್ರವೇಶಿಸಬೇಕು ಎಂಬ ನಿಯಮ ಏಕೆ ಮಾಡಿರುತ್ತಾರೆ?

ಸ್ತ್ರೀಯರು ಪ್ರತ್ಯಕ್ಷ ಶಕ್ತಿರೂಪಿ ಧಾರೆಯಾಗಿರುವುದರಿಂದ ಮತ್ತು ಪುರುಷರು ಶಿವರೂಪಿ ಕಾರ್ಯ ಮಾಡುವವರಾಗಿದ್ದರಿಂದ ಅವರು ಹೆಚ್ಚಿನ ಪ್ರಮಾಣದಲ್ಲಿ ಸಾತ್ತ್ವಿಕತೆಯನ್ನು ಪಡೆದುಕೊಳ್ಳುವುದು ಮಹತ್ವದ್ದಾಗಿರುತ್ತದೆ.

ವಾಸ್ತುಗೆ ದೃಷ್ಟಿ ತಗಲುತ್ತದೆ ಎಂದರೆ ಏನಾಗುತ್ತದೆ?

ಯಾವ ವಾಸ್ತುವಿನಲ್ಲಿ ತ್ರಾಸದಾಯಕ (ಕೆಟ್ಟ) ಕರ್ಮಗಳನ್ನು ಮಾಡುವ ವ್ಯಕ್ತಿಗಳು ವಾಸಿಸುತ್ತಾರೆಯೋ, ಅಲ್ಲಿ ಸತತವಾಗಿ ಅವರ ಕೆಟ್ಟ ವಿಚಾರಗಳಲ್ಲಿನ ತಮೋಗುಣೀ ಸ್ಪಂದನಗಳು ಘನೀಭೂತವಾಗಿ ಆ ವಾಸ್ತುವು ತ್ರಾಸದಾಯಕ ಸ್ಪಂದನಗಳಿಂದ ತುಂಬಿಕೊಳ್ಳುತ್ತದೆ. ಸತ್ವಗುಣೀ ವಿಚಾರಗಳ ವ್ಯಕ್ತಿಗಳಿರುವ ವಾಸ್ತುವನ್ನು ಬಾಧಿಸುವುದು ಕಠಿಣವಾಗಿರುತ್ತದೆ.

ರಾಷ್ಟ್ರಧ್ವಜದ ಗೌರವ ಕಾಪಾಡಿ!

೨೬ ಜನವರಿ / ಆಗಸ್ಟ್ ೧೫ ಎಂದರೆ ರಾಷ್ಟ್ರೀಯ ಕರ್ತವ್ಯದ ಅರಿವು ಮಾಡಿಕೊಡುವ ರಾಷ್ಟ್ರೀಯ ಹಬ್ಬ! ರಾಷ್ಟ್ರೀಯ ಅಭಿಮಾನವನ್ನು ಜಾಗೃತಗೊಳಿಸುವ ಈ ದಿನ ನಾವೇನು ನೋಡುತ್ತೇವೆ? ರಾಷ್ಟ್ರಧ್ವಜದ ವಿಡಂಬನೆ, ರಾಷ್ಟ್ರಗೀತೆಯ ಅವಮಾನ ಇದನ್ನೇ ನೋಡುತ್ತೇವಲ್ಲ?

ಬೇವಿನ ಮಿಶ್ರಣ

ಬೇವಿನ ಹೂವು, ಬೇವಿನ ಚಿಗುರೆಲೆ, ಕರಿಮೆಣಸು, ಸಕ್ಕರೆ, ಓಮ ಮತ್ತು ಸ್ವಲ್ಪ ಹಿಂಗು ಇವೆಲ್ಲವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ ಹುಣಸೆಹಣ್ಣಿನೊಂದಿಗೆ ಸೇರಿಸಿ ಎಲ್ಲರಿಗೂ ಕೊಡಬೇಕು.

ಎಲ್ಲವನ್ನೂ ಭಗವಂತನೇ ಮಾಡುವುದಾದರೆ ಪಾಪ ಕರ್ಮಗಳು ನಮಗೇಕೆ ?

ನೀನು ‘ಭಗವಂತನೇ ಸದಾ ನನ್ನನ್ನು ಮಾರ್ಗದರ್ಶನ ಮಾಡುವ ಪ್ರಭು, ಅವನ ನಿಯಂತ್ರಣದಲ್ಲಿ ನನ್ನ ಬದುಕು ಮಾಂಗಲಿಕವಾಗಿ ನಡೆಯಲಿ’ ಎಂದು ನಿರಂತರ ಪ್ರಾರ್ಥನೆ ಮಾಡು.

ನಾವು ಮಾಡಿದ ಪಾಪ ಕರ್ಮದ ಫಲವನ್ನು ನಾವೇ ಅನುಭವಿಸಬೇಕು !

ಭಕ್ತನ ಪರ ಪುರೋಹಿತ ಮಾಡುವ ಕರ್ಮ ಭಕ್ತನಿಗೆ ಬರುತ್ತದೆ; ತಂದೆಯ ಪರ ಮಗ ಮಾಡುವ ಕರ್ಮ ತಂದೆಗೆ ಬರಬಹುದು. ಇದು ಒಬ್ಬರ ಪರ ಇನ್ನೊಬ್ಬರು ಮಾಡಿದ ಕರ್ಮ. ಈ ವಿಚಾರವನ್ನು ಹೊರತುಪಡಿಸಿದರೆ ನಾವು ಅನುಭವಿಸುವುದು ನಾವೇ ಮಾಡಿದ ಕರ್ಮಫಲವೇ ಹೊರತು ಇನ್ನೊಬ್ಬರದ್ದಲ್ಲ.