ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

ಸಂತರಿಗೆ ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಸ್ಥಳ ಕಡಿಮೆ ಇದ್ದರೆ ಮತ್ತು ಸಾಷ್ಟಾಂಗ ನಮಸ್ಕಾರ ಹಾಕುವುದು ಸಾಧ್ಯವಿಲ್ಲದಿದ್ದರೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ಸ್ತ್ರೀಯರು ಸಂತರಿಗೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು.

ಮಾತೃಭಾಷಾಭಿಮಾನವು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನದ ಅಡಿಪಾಯವಾಗಿದೆ !

ಮಾತೃಭಾಷೆಯಲ್ಲಿ ಮಾತನಾಡುವಾಗ ತಿಳಿಯದೇ ಬಾಯಿಯಿಂದ ಪರಕೀಯ ಶಬ್ದಗಳು ಬಂದರೂ ಅದರಿಂದ ದುಃಖವಾಗದಿರುವುದು ಅಥವಾ ಪರಕೀಯ ಶಬ್ದಗಳನ್ನು ಉಪಯೋಗಿಸಲು ಇಷ್ಟವಾಗುವುದರಿಂದ ನಿಧಾನವಾಗಿ ರಾಷ್ಟ್ರಾಭಿಮಾನವು ಕಡಿಮೆಯಾಗಲು ಪ್ರಾರಂಭವಾಗುತ್ತದೆ.

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ

ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು?

ಇಂತಹ ಹೂವುಗಳಲ್ಲಿ ದೇವತೆಗಳ ಪವಿತ್ರಕಗಳು ಕಡಿಮೆಯಿರುತ್ತವೆ ಅಥವಾ ಕೆಲವೊಮ್ಮೆ ಇರುವುದೇ ಇಲ್ಲ, ಇಂತಹ ಹೂವುಗಳಲ್ಲಿ ಪರಿಮಳವೂ ಇರುವುದಿಲ್ಲ. ಇಂತಹ ಹೂವುಗಳನ್ನು ದೇವರಿಗೆ ಅರ್ಪಿಸುವುದೆಂದರೆ ದೇವರಿಗೆ ಕಾಗದದ …

ಸ್ನಾನವನ್ನು ಮಾಡುವಾಗ ಪಠಿಸಬೇಕಾದ ಶ್ಲೋಕಗಳು

ಶ್ಲೋಕವನ್ನು ಹೇಳುತ್ತಾ ಸ್ನಾನವನ್ನು ಮಾಡುವುದರಿಂದ ನೀರಿನಲ್ಲಿರುವ ಚೈತನ್ಯವು ಅಣುರೇಣುಗಳಲ್ಲಿ ಸಂಕ್ರಮಣವಾಗಿ ದಿನವಿಡೀ ಮಾಡುವ ಕೃತಿಗಳನ್ನು ಮಾಡಲು ದೇಹವು ಸಕ್ಷಮವಾಗುತ್ತದೆ.

ಕಾರ್ತಿಕೇಯನು ಮಾಡಿದ ಶೂರಪದ್ಮನ ವಧೆ !

ತಾರಕಾಸುರನ ವಧೆಯಿಂದ ದೇವತೆಗಳಿಗೆ ತೊಂದರೆ ತಪ್ಪಿದರೂ ಹೆಚ್ಚುಕಾಲ ಸುಖಶಾಂತಿಯಿಂದ ಇರಲು ಅವರಿಗೆ ಸಾಧ್ಯವಾಗಲಿಲ್ಲ. ತಾರಕನಂತೆಯೇ ಬಲಾಢ್ಯನಾದ ಶೂರಪದ್ಮನೆಂಬ ರಾಕ್ಷಸ ಇದ್ದನಲ್ಲವೆ? ವೀರಮಹೇಂದ್ರ ಎಂಬ ಸ್ಥಳದಲ್ಲಿ ಅವನ ವಾಸ. ವಿಶ್ವಕರ್ಮನ ಮಗಳಾದ ಪದ್ಮಕೋಮಲೆ ಅವನ ಹೆಂಡತಿ. ಅವಳಲ್ಲಿ ಭಾನುಕೋಪ, ಅಗ್ನಿಮುಖ, ಹಿರಣ್ಯಕ, ವಜ್ರಬಾಹು ಮುಂತಾದ ಶೂರರೂ ದುಷ್ಟರೂ ಆದ ಮಕ್ಕಳಿದ್ದರು. ಆ ಮಕ್ಕಳಿಗೆ ದೇವ-ದಾನವ- ಗಂಧರ್ವ-ಸಿದ್ಧ-ವಿದ್ಯಾಧರ-ಮಾನವ-ನಾಗಕನ್ಯೆಯರನ್ನು ತಂದು ಮದುವೆ ಮಾಡಿಸಿ ರಾಕ್ಷಸ ಸಂತತಿಯನ್ನು ಬಹಳವಾಗಿ ಬೆಳೆಸಿದನು. ಅವರೆಲ್ಲ ಸಜ್ಜನರಿಗೆ ಹಿಂಸೆ ಕೊಡುತ್ತ ಅನ್ಯಾಯ, ಅತ್ಯಾಚಾರ ಮಾಡುತ್ತ ಅಧರ್ಮವನ್ನು ಬೆಳೆಸುತ್ತಿದ್ದರು. … Read more

ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ !

ಅ. ‘ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು’. ೧. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು. ೨. ಕೈಗಳ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು. ೩. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರ ಇಡಬೇಕು. ೪. ಪ್ರಾಥಮಿಕ ಸ್ತರದಲ್ಲಿನ ಸಾಧಕರು ಮತ್ತು ಸರ್ವಸಾಮಾನ್ಯ ಜನರು ನಮಸ್ಕಾರ ಮಾಡುವಾಗ ಅಂಗೈಗಳನ್ನು ಒಂದಕ್ಕೊಂದು ತಾಗಿಸಿ ಹಿಡಿಯಬೇಕು. ಅಂಗೈಗಳ ನಡುವೆ ಟೊಳ್ಳನ್ನು ಬಿಡಬಾರದು. ಸಾಧನೆಯನ್ನು ಆರಂಭಿಸಿ ಐದಾರು ವರ್ಷಗಳಾಗಿರುವ ಮುಂದಿನ … Read more

ಗೋಮೂತ್ರ – ಆರೋಗ್ಯವರ್ಧಕ ಹೇಗೆ ?

ಗೋಮೂತ್ರ ಸೇವನೆಯ ಚಮತ್ಕಾರ ಇಲ್ಲಿ ನೋಡಿ. ಮ್ಯಾಕ್ರೋಫೇಸಸ್‌ನ ಸಂಖ್ಯೆ ೧೦೪ ಶೇಕಡಾ ಅಧಿಕವಾಗುವುದು, ಸಂಶೋಧನೆಯಿಂದ ದೃಢಪಟ್ಟಿದೆ. ಈ ಸಂಶೋಧನಾ ಸರಣಿಯ ಮುಂದುವರಿದ ಭಾಗ ಇನ್ನುಷ್ಟು ವಿಶೇಷ.

ಭಾರತೀಯ ಗೋತಳಿಯ ಅಸ್ತಿತ್ವ ಉಳಿಸುವುದು ಆವಶ್ಯಕ !

ಗೋಮೂತ್ರ ಸೇವನೆಯಿಂದ ತೀವ್ರ ಪ್ರತಿಬಂಧಕಶಕ್ತಿಯು ಪ್ರಾಪ್ತವಾಗುತ್ತದೆ. ಅದರಿಂದಾಗಿ ದುಬಾರಿ ಮತ್ತು ಘಾತಕ ಆಧುನಿಕ ಚಿಕಿತ್ಸಾ ಪದ್ಧತಿಯ ಆವಶ್ಯಕತೆ ಅನಿಸುವುದಿಲ್ಲ ಮತ್ತು ಪರಂಪರಾಗತ ಮನೆಯಲ್ಲಿನ ಚಿಕಿತ್ಸೆಯಿಂದ ಆರೋಗ್ಯವು ಒಳ್ಳೆಯದಾಗಿರುತ್ತದೆ.

ಉಪಯುಕ್ತವಾದ ಭಾರತೀಯ ಆಕಳುಗಳು ಹಾಗೂ ಅಪಾಯಕಾರಿಯಾದ ವಿದೇಶಿ ಆಕಳುಗಳು !

ಬ್ರೆಜಿಲ್‌ನಲ್ಲಿ ಆಯೋಜಿಸ ಲಾದ ಕ್ಷೀರೋತ್ಪನ್ನಗಳ ಸ್ಪರ್ಧೆಯಲ್ಲಿ ಭಾರತೀಯ ತಳಿಯ ‘ಗಿರ’ ಎಂಬ ಹಸುವು ಎರಡನೇ ಸ್ಥಾನ ಪಡೆದರೆ ಆಂಧ್ರ ಪ್ರದೇಶದ ‘ಒಂಗೋಲ’ ತಳಿಯ ಆಕಳು ಮೂರನೇ ಸ್ಥಾನ ಪಡೆಯುವುದು.