ಗುರು ಗೋವಿಂದಸಿಂಹ
ಆನಂದಪುರದಲ್ಲಿ ದೂರದೂರದಿಂದ ಶಿಷ್ಯರು ಗುರು ಗೋವಿಂದ ಸಿಂಹನ ದರ್ಶನಕ್ಕಾಗಿ ಬಂದಿದ್ದರು. ಇದ್ದಕ್ಕಿದ್ದಂತೆ ಗುರು ರುದ್ರರೂಪ ತಾಳಿ ನಿಂತ. ಕತ್ತಿಯನ್ನು ಝಳಪಿಸುತ್ತಾ, “ಧರ್ಮಕ್ಕಾಗಿ ತಲೆಯನ್ನು ಕೊಡಲು ನಿಮ್ಮ ಪೈಕಿ ಯಾರು ಸಿದ್ಧರಿದ್ದೀರಿ? ನನ್ನ ಕತ್ತಿ ತವಕಿಸುತ್ತಿದೆ” ಎಂದು ಗರ್ಜಿಸಿದ.