ಗುರುಕೃಪಾಯೋಗಾನುಸಾರ ಸಾಧನೆಯ ಹಂತಗಳು
ನಾವು ಧ್ಯಾನ, ಭಕ್ತಿ, ಕರ್ಮ, ಜ್ಞಾನ ಇತ್ಯಾದಿ ಮಾರ್ಗಗಳಿಂದ ಸಾಧನೆಯನ್ನು ಮಾಡಬಹುದು. ಆದರೆ ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡಿದರೂ ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗದೆ ಈಶ್ವರಪ್ರಾಪ್ತಿಯಾಗುವುದಿಲ್ಲ. ಗುರು ಎಂಬುದು ಒಂದು ತತ್ತ್ವವಾಗಿದೆ ಮತ್ತು ಅದು ಬೇರೆ ಬೇರೆ ದೇಹಗಳ ಮಾಧ್ಯಮದಿಂದ ಕಾರ್ಯ ಮಾಡುತ್ತದೆ. ಗುರುಕೃಪೆ ಎಂದರೆ ಈ ತತ್ತ್ವವು ನಮ್ಮ ಮೇಲೆ ಮಾಡಿದ ಕೃಪೆ.
ಜಿಜ್ಞಾಸುಗಳು ಶೀಘ್ರ ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕೆಂದು ಪರಾತ್ಪರ ಗುರು ಡಾ. ಆಠವಲೆಯವರು ಕರ್ಮ, ಭಕ್ತಿ ಮತ್ತು ಜ್ಞಾನ ಈ ಯೋಗಮಾರ್ಗಗಳ ಸಂಗಮವಿರುವ ‘ಗುರುಕೃಪಾಯೋಗ’ವನ್ನು ಹೇಳಿದರು. ‘ವ್ಯಕ್ತಿಗಳಷ್ಟು ಪ್ರಕೃತಿಗಳು, ಮತ್ತು ಅಷ್ಟೇ ಸಾಧನಾಮಾರ್ಗಗಳು’ ಎಂಬ ಸಿದ್ಧಾಂತಕ್ಕನುಸಾರ ಗುರುಕೃಪಾಯೋಗದಲ್ಲಿ ಸಾಧನೆಯನ್ನು ಕಲಿಸುವುದರಿಂದ ಸಾಧಕರಿಗೆ ಶೀಘ್ರ ಉನ್ನತಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸಲು ಈಶ್ವರಪ್ರಾಪ್ತಿಯ ಸಹಜ ಮತ್ತು ಸುಲಭ ಮಾರ್ಗವೆಂದರೆ ‘ಗುರುಕೃಪಾಯೋಗ’!
ಗುರುಕೃಪಾಯೋಗಾನುಸಾರ ಸಾಧನೆಯ ಅಂಗಗಳು
‘ವ್ಯಷ್ಟಿ ಸಾಧನೆ’ ಮತ್ತು ‘ಸಮಷ್ಟಿ ಸಾಧನೆ’ ಇವು ಗುರುಕೃಪಾಯೋಗಾನುಸಾರ ಸಾಧನೆಯ ಎರಡು ಅಂಗಗಳಾಗಿವೆ. ವ್ಯಷ್ಟಿ ಸಾಧನೆಯೆಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ. ಸಮಷ್ಟಿ ಸಾಧನೆಯೆಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನ. ಇವೆರಡೂ ರೀತಿಯ ಸಾಧನೆಗಳು ಪರಸ್ಪರ ಪೂರಕವಾಗಿವೆ.
ವ್ಯಷ್ಟಿ ಸಾಧನೆಯ ಅಂಗಗಳೆಂದರೆ ನಾಮಜಪ, ಸತ್ಸಂಗ, ಸತ್ಸೇವೆ, ಸತ್ ಗಾಗಿ ತ್ಯಾಗ, ಇತರರ ಬಗ್ಗೆ ಪ್ರೀತಿ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ಭಕ್ತಿಭಾವವನ್ನು ಜಾಗೃತಗೊಳಿಸುವುದಕ್ಕಾಗಿ ಪ್ರಯತ್ನಗಳು. ಇವುಗಳನ್ನು ‘ಅಷ್ಟಾಂಗ ಸಾಧನೆ’ ಎಂದು ಕರೆಯುತ್ತೇವೆ.
ಅಷ್ಟಾಂಗ ಸಾಧನೆಯ ಹಂತಗಳ ಮಾನದಂಡವು ಸಾಧಕನ ಗುಣಮಟ್ಟದ ಮೇಲೆ ಅವಲಂಬಿಸಿರುತ್ತದೆ.
ಅ. ಮಾನದಂಡ ೧ – ಸಾಧಕನಲ್ಲಿ ತುಂಬಾ ಸ್ವಭಾವದೋಷಗಳು ಮತ್ತು ಅಹಂ ಹೆಚ್ಚಿದ್ದರೆ : ಇಂತಹ ಸಾಧಕನು ಮುಂದೆ ನೀಡಿರುವ ಕ್ರಮದಲ್ಲಿ ಅಷ್ಟಾಂಗ ಸಾಧನೆಯ ಪ್ರಯತ್ನಗಳನ್ನು ಮಾಡಬೇಕು –
೧. ಸ್ವಭಾವದೋಷ ನಿರ್ಮೂಲನ ಮತ್ತು ಗುಣ ಸಂವರ್ಧನೆ | ೨. ಅಹಂ ನಿರ್ಮೂಲನ | ೩. ನಾಮಜಪ | ೪. ಭಕ್ತಿಭಾವ ಜಾಗೃತಗೊಳಿಸಲು ಪ್ರಯತ್ನಗಳು | ೫. ಸತ್ಸಂಗ | ೬. ಸತ್ಸೇವೆ | ೭. ಸತ್ ಗಾಗಿ ತ್ಯಾಗ | ೮. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಸಾಕ್ಷೀಭಾವ
ಆ. ಮಾನದಂಡ ೨ – ಸಾಧಕನಲ್ಲಿ ಭಕ್ತಿಭಾವ ಇದ್ದಾಗ : ಭಕ್ತಿಪ್ರಧಾನ ವ್ಯಕ್ತಿತ್ವವಿರುವ ಸಾಧಕನು ಮುಂದೆ ನೀಡಿರುವ ಕ್ರಮದಲ್ಲಿ ಅಷ್ಟಾಂಗ ಸಾಧನೆಯ ಪ್ರಯತ್ನಗಳನ್ನು ಮಾಡಬೇಕು
೧. ನಾಮಜಪ | ೨. ಮುಂದಿನ ಹಂತದ ಭಕ್ತಿಭಾವ ಜಾಗೃತಗೊಳಿಸಲು ಪ್ರಯತ್ನಗಳು | ೩. ಸತ್ಸಂಗ | ೪. ಸತ್ಸೇವೆ | ೫. ಸ್ವಭಾವದೋಷ ನಿರ್ಮೂಲನ ಮತ್ತು ಗುಣ ಸಂವರ್ಧನೆ | ೬. ಅಹಂ ನಿರ್ಮೂಲನ | ೭. ಸತ್ ಗಾಗಿ ತ್ಯಾಗ | ೮. ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ) ಮತ್ತು ಸಾಕ್ಷೀಭಾವ
ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗದ ಕೆಲವು ತತ್ತ್ವಗಳು ಇರುವುದರಿಂದ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವುದು
ಗುರುಕೃಪಾಯೋಗಾನುಸಾರ ಸಾಧನೆಯ ಹಂತಗಳು | ಭಕ್ತಿ, ಜ್ಞಾನ ಮತ್ತು ಕರ್ಮ ಇವುಗಳ ಪೈಕಿ ಯಾವ ಮಾರ್ಗಕ್ಕನುಸಾರ ಸಾಧನೆಯಾಗುತ್ತದೆ |
ನಾಮಜಪ, ಭಕ್ತಿಭಾವ ಜಾಗೃತಗೊಳಿಸಲು ಪ್ರಯತ್ನಗಳು, ಇತರರ ಬಗ್ಗೆ ಪ್ರೀತಿ (ನಿರಪೇಕ್ಷ ಪ್ರೇಮ) | ಭಕ್ತಿಯೋಗ |
ಸ್ವಭಾವದೋಷ ನಿರ್ಮೂಲನ ಮತ್ತು ಗುಣ ಸಂವರ್ಧನೆ, ಅಹಂ ನಿರ್ಮೂಲನ, ಸತ್ಸಂಗ, ಸತ್ ಗಾಗಿ ತ್ಯಾಗ | ಜ್ಞಾನಯೋಗ |
ಸತ್ಸೇವೆ | ಕರ್ಮಯೋಗ |
ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ
ಜ್ಞಾನಿಗಳು ‘ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ’, ಅಂದರೆ ‘ಮನಸ್ಸೇ ಮನುಷ್ಯನ ಬಂಧನ (ವಿಷಯಾಸಕ್ತಿಗಳಿಂದ ನಿರ್ಮಾಣವಾಗುವ ಸುಖ ದುಃಖಗಳ) ಮತ್ತು ಮೋಕ್ಷಕ್ಕೆ ಕಾರಣವಾಗಿದೆ’ ಎಂದು ಹೇಳಿದ್ದಾರೆ. ಇದರ ಅರ್ಥವೇನು? ನಮ್ಮ ಮನಸ್ಸಿನಲ್ಲಿರುವ ಸ್ವಭಾವದೋಷಗಳು (ಯಾವುದನ್ನು ನಾವು ಷಡ್ವೈರಿ ಎಂದು ಕರೆಯುತ್ತೇವೆಯೋ) ದುಃಖಕ್ಕೆ ಕಾರಣವಾದರೆ, ನಮ್ಮಲ್ಲಿರುವ ಗುಣಗಳು ಸುಖಕ್ಕೆ ಕಾರಣವಾಗುತ್ತವೆ. ಸಾಧನೆಯಲ್ಲಿ ಎಷ್ಟೇ ಮುಂದುವರಿದರೂ ಸ್ವಭಾವದೋಷಗಳಿದ್ದರೆ ನಮ್ಮಿಂದ ತಪ್ಪುಗಳಾಗಿ ನಾವು ಪುನಃ ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕಿಕೊಳ್ಳುತ್ತೇವೆ. ಆದುದರಿಂದ ಗುರುಕೃಪಾಯೋಗದಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಮಹತ್ವವನ್ನು ನೀಡಲಾಗಿದೆ.
ನಾಮಜಪ
‘ಜಕಾರೋ ಜನ್ಮ ವಿಚ್ಛೇದಕಃ ಪಕಾರೋ ಪಾಪನಾಶಕಃ|’ ಇದರ ಅರ್ಥವೇನೆಂದರೆ, ಯಾವುದು ಪಾಪಗಳನ್ನು ನಾಶ ಮಾಡಿ ಜನ್ಮ-ಮೃತ್ಯುಗಳ ಚಕ್ರದಿಂದ ಬಿಡುಗಡೆ ಮಾಡುತ್ತದೆಯೋ ಅದು ಜಪ! ಯಾವ ನಾಮವನ್ನು ಜಪಿಸಬೇಕು, ಎಷ್ಟು ಜಪಿಸಬೇಕು, ಎಲ್ಲಿ ಮತ್ತು ಹೇಗೆ ಜಪಿಸಬೇಕು ಮುಂತಾದ ವಿಷಯಗಳನ್ನು ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ ಮಾಡಿ.
ಭಾವಜಾಗೃತಿ
ದೈನಂದಿನ ಜೀವನವನ್ನು ನಡೆಸುತ್ತಿರುವಾಗ, ಜೀವನದಲ್ಲಿನ ಪ್ರತಿಯೊಂದು ಕೃತಿಯನ್ನೂ ಮಾಡುತ್ತಿರುವಾಗ ನಮಗೆ ನಮ್ಮ ಅಸ್ತಿತ್ವದ ಅರಿವು ಸದಾ ಇರುತ್ತದೆ; ಏಕೆಂದರೆ ಅದು ನಮ್ಮ ವೃತ್ತಿಯಲ್ಲಿ ಬೇರೂರಿರುತ್ತದೆ. ಜೀವನದಲ್ಲಿ ‘ನಾನು’ ಎನ್ನುವ ಜಾಗದಲ್ಲಿ ಮತ್ತು ಅಷ್ಟೇ ತೀವ್ರವಾಗಿ ಈಶ್ವರನ ಅಥವಾ ಈಶ್ವರನ ರೂಪದ ಅರಿವು ನಿರ್ಮಾಣವಾಗುವುದೆಂದರೆ ಭಾವ.
ಸತ್ಸಂಗ
‘ಈಶ್ವರಪ್ರಾಪ್ತಿಗಾಗಿ (ಆನಂದ ಪ್ರಾಪ್ತಿಗಾಗಿ) ಸಾಧನೆ ಮಾಡುವ ಸಾಧಕನ ದೃಷ್ಟಿಯಿಂದ ನಾಮಜಪದ ಮಹತ್ವ ಅಸಾಧಾರಣವಾದುದು. ಸಾಧನೆಗಾಗಿ 24 ಗಂಟೆಗಳೂ ನಾಮಜಪವಾಗುವುದು ಆವಶ್ಯಕವಾಗಿರುತ್ತದೆ. ನಾಮಜಪದ ಮುಂದಿನ ಹಂತವೇ ಸತ್ಸಂಗ. ಸತ್ಸಂಗವು ನಾಮಜಪದ ಸಂಖ್ಯೆ ಮತ್ತು ಗುಣಮಟ್ಟವನ್ನು ಹೆಚ್ಚಿಸುತ್ತದೆ, ಮತ್ತು ಸತ್ಸಂಗದಲ್ಲಿ ಸಾಧಕನಿಗೆ ಸಾಧನೆಯ ಬಗ್ಗೆ ಮುಂದಿನ ಮಾರ್ಗದರ್ಶನ ದೊರೆಯುತ್ತದೆ.
ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ಪರಿಚಯ ಮಾಡಿಸಿ ಕೊಡುವುದು ಹಾಗೂ ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನವನ್ನು ನೀಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸಿಕೊಡಲು ಸನಾತನವು ಹಲವೆಡೆ ಉಚಿತ ಪ್ರತ್ಯಕ್ಷ ಹಾಗೂ ಆನ್‌ಲೈನ್ ಸತ್ಸಂಗಗಳನ್ನು ನಡೆಸುತ್ತದೆ.
ಸತ್ಸೇವೆ
ಆನಂದಪ್ರಾಪ್ತಿ ಅಥವಾ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವ ಸಾಧಕರ ದೃಷ್ಟಿಯಿಂದ ಸತ್ಸೇವೆಗೆ ಅಪಾರ ಮಹತ್ವವಿದೆ. ಸತ್ಸೇವೆಯ ಮೂಲಕ ಸಂತರ ಅಥವಾ ಗುರುಗಳ ಮನಸ್ಸನ್ನು ಗೆಲ್ಲಬಹುದಾಗಿದೆ. ಹಾಗೂ ಅದರ ಮೂಲಕ ಗುರುಕೃಪೆಯು ಕಾರ್ಯನಿರತವಾಗುತ್ತದೆ. ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪೆಯು ಮಹತ್ವಪೂರ್ಣವಾಗಿರುತ್ತದೆ. ಇದರಿಂದ ಸತ್ಸೇವೆಯ ಮಹತ್ವವು ಗಮನಕ್ಕೆ ಬರುತ್ತದೆ. ಅಧ್ಯಾತ್ಮಪ್ರಸಾರ ಹಾಗೂ ಧರ್ಮಪ್ರಸಾರವು ಗುರುಗಳ ನಿರ್ಗುಣ ರೂಪದ ಸೇವೆಯಾಗಿವೆ.
ತ್ಯಾಗ
ಅಧ್ಯಾತ್ಮದಲ್ಲಿ ತನು, ಮನ ಮತ್ತು ಧನದ ತ್ಯಾಗವನ್ನು ಮಾಡಬೇಕಾಗಿರುತ್ತದೆ. ಯಾವಾಗ ಸತ್ಸೇವೆಗಾಗಿ ನಮ್ಮ ಶರೀರವನ್ನು ಸವೆಸುತ್ತೇವೆಯೋ ಆಗ ನಮ್ಮ ತನುವಿನ ತ್ಯಾಗವಾಗುತ್ತದೆ. ಸೇವೆಯನ್ನು ಮಾಡುವಾಗ ನಾಮಸ್ಮರಣೆಯನ್ನು ಮಾಡಿದರೆ ಮನಸ್ಸಿನ ತ್ಯಾಗವಾಗುತ್ತದೆ. ಸೇವೆಯನ್ನು ಇನ್ನಷ್ಟು ಉತ್ತಮವಾಗಿ ಆಗಬೇಕೆಂದು ಪ್ರಯತ್ನಿಸುತ್ತೇವೆ ಆಗ ಅದರಿಂದ ಬುದ್ಧಿಯ ತ್ಯಾಗವಾಗುತ್ತದೆ. ಸೇವೆಗಾಗಿ ನಮಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಲು ಹಣ ಖರ್ಚಾದರೆ ಅದರಿಂದ ನಮ್ಮ ಧನದ ತ್ಯಾಗವಾಗುತ್ತದೆ. ಅಂದರೆ ಸತ್ಸೇವೆಯ ಮೂಲಕ ತಿಳಿದು ಅಥವಾ ತಿಳಿಯದೇ ನಮ್ಮ ತನು, ಮನ, ಧನದ ತ್ಯಾಗವಾಗುತ್ತದೆ.
ಪ್ರೀತಿ ಎಂದರೇನು ?
ಪ್ರೇಮಭಾವವು ಸಮಷ್ಟಿಗೆ ಸಂಬಂಧಪಟ್ಟ ಗುಣವಾಗಿದೆ. ಪರಾತ್ಪರ ಗುರು ಡಾಕ್ಟರ ಆಠವಲೆ ಇವರು ಹೇಳಿರುವುದೇನೆಂದರೆ, “ವ್ಯಷ್ಟಿ ಸಾಧನೆಯನ್ನು ಮಾತ್ರ ಮಾಡುವುದರಿಂದ ‘ಪ್ರೀತಿ’ ಎಂಬ ಪರಮೇಶ್ವರನ ಸರ್ವೋಚ್ಚ ಗುಣವು ನಿರ್ಮಾಣವಾಗುವುದಿಲ್ಲ. ಅದಕ್ಕಾಗಿ ಸಮಷ್ಟಿ ಸಾಧನೆಯನ್ನೇ ಮಾಡಬೇಕು”. ಸಹಸಾಧಕರ ಕಾಳಜಿ ತೆಗೆದುಕೊಳ್ಳುವುದು, ಸೇವೆಯಲ್ಲಿ ಸಾಧಕರಿಗೆ ಯಾರಿಗಾದರೂ ಅಡಚಣೆಯಿದ್ದರೆ ಅದನ್ನು ತಿಳಿದುಕೊಂಡು ಅವರಿಗೆ ಸಹಾಯ ಮಾಡುವುದು, ತಪ್ಪಾದ ನಂತರ ಎದುರಿನ ವ್ಯಕ್ತಿಯಲ್ಲಿ ಮನಸಾರೆ ಕ್ಷಮೆ ಕೇಳುವುದು, ಯಾರಾದರೂ ವಯಸ್ಸಾದವರಿದ್ದರೆ ಅವರಿಗೆ ಮಹಡಿ
ಹತ್ತಲು ಅಥವಾ ಇಳಿಯಲು ಸಹಾಯ ಮಾಡುವುದು, ಅವರ ಕೈಯಲ್ಲಿನ ಸಾಮಾನನ್ನು ಎತ್ತಿಕೊಳ್ಳುವುದು ಇದು ಪ್ರೇಮಭಾವ. ಹೀಗೆ ಮಾಡುವಾಗ ಎದುರಿನ ವ್ಯಕ್ತಿಯಿಂದ ನಮ್ಮಲ್ಲಿ ಯಾವ ಅಪೇಕ್ಷೆಗಳೂ ಇಲ್ಲದಿದ್ದರೆ, ಎದುರಿನವರು ನಮ್ಮನ್ನು ಒಳ್ಳೆಯವರು ಅನ್ನಬೇಕು ಎಂದೂ ಅನ್ನಿಸದಿದ್ದರೆ ಅದು ಪ್ರೀತಿ ಆಯಿತು.
ಗುರುಕೃಪಾಯೋಗದ ಮಹತ್ವ ತಿಳಿಸುವ ಲೇಖನಗಳು
ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ಸಂತರಾದ ಸಾಧಕರು
ಸಾಮಾನ್ಯ ಜನರ ಮತ್ತು ಸಾಧನೆ ಮಾಡದಿರುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. 20 ರಷ್ಟು ಇರುತ್ತದೆ ಮತ್ತು ದಿನನಿತ್ಯ ದೇವರಪೂಜೆ, ಗ್ರಂಥ ಅಧ್ಯಯನ, ಉಪವಾಸ ಇತ್ಯಾದಿ ಕರ್ಮಕಾಂಡದ ಸಾಧನೆ ಪ್ರತಿನಿತ್ಯ ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ.25 ರಿಂದ 30 ರಷ್ಟು ಇರುತ್ತದೆ. ಶೇ. 70 ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ ವ್ಯಕ್ತಿಯು ಸಂತಪದವಿಯಲ್ಲಿ ವಿರಾಜಮಾನರಾಗುತ್ತಾರೆ. ಈ ಸಂತರು ಸಮಷ್ಟಿ ಕಲ್ಯಾಣಕ್ಕಾಗಿ ನಾಮಜಪ ಮಾಡಬಹುದು. ಮೃತ್ಯುನಂತರ ಅವರಿಗೆ ಪುರ್ನಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಮತ್ತು ಮನುಕುಲದ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯ ಮೇಲೆ ಜನ್ಮ ತಾಳಿ ಬರಬಹುದು.
ಇಂದು ಸಮಾಜವು ಧರ್ಮಾಚರಣೆಯಿಂದ ದೂರವಾಗಿರುವುದರಿಂದ ಸಮಾಜದಲ್ಲಿ ರಜ-ತಮಗಳ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ದುಶ್ಚಟಗಳು, ಅಪರಾಧ, ಭ್ರಷ್ಟಾಚಾರ, ಅನೈತಿಕತೆ ಮುಂತಾದ ಅಸುರಿ ಗುಣಗಳ ಪ್ರಾಬಲ್ಯವೂ ಹೆಚ್ಚಿದೆ. ವಾಯುಮಾಲಿನ್ಯ, ಜಲಮಾಲಿನ್ಯ ಮುಂತಾದವುಗಳಿಗಿಂತಲೂ ಈ ರಜ-ತಮಗಳ ಮಾಲಿನ್ಯ ಹೆಚ್ಚು ಅಪಾಯಕಾರಿಯಾಗಿದೆ. ಸತ್ವ-ಗುಣದ ಪ್ರಾಬಲ್ಯ ಹೆಚ್ಚಿಸುವುದು, ಇಂದೊಂದೇ ರಜ-ತಮಗಳ ಮಾಲಿನ್ಯವನ್ನು ತಡೆಯುವ ಪ್ರಭಾವಶಾಲಿ ಉಪಾಯವಾಗಿದೆ. ಇದೇ ಕಾರ್ಯ ಸಂತರಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದಾಗಿ ಸೂಕ್ಷ್ಮದಿಂದ ಆಗುತ್ತಿರುತ್ತದೆ. ‘ಸನಾತನ ಸಂಸ್ಥೆ’ ಹೇಳುತ್ತಿರುವ ಹಿಂದೂ ರಾಷ್ಟ್ರದ (ಈಶ್ವರಿ ರಾಜ್ಯದ) ಸ್ಥಾಪನೆಗಾಗಿ ರಜ-ತಮದ ಪ್ರಾಬಲ್ಯ ಕಡಿಮೆಯಾಗಿ ಸತ್ವಗುಣ ಹೆಚ್ಚುವ ಆವಶ್ಯಕತೆಯಿದೆ. ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಪ್ರಗತಿಗಾಗಿ ಸದೈವ ಕಾರ್ಯನಿರತವಿದ್ದು ಶಾರೀರಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಸ್ತರದಗಳಲ್ಲಿ ಸನಾತನದ ಸಂತರು ಈ ಕಾರ್ಯವನ್ನು ಮಾಡುತ್ತಿದ್ದಾರೆ.
ಅಧ್ಯಾತ್ಮದ ಪ್ರವಾಸವನ್ನು ಆರಂಭಿಸಿ !
ಸಾಧನಾ ಸಂವಾದ – ಆನಂದದಾಯಕ ಜೀವನಕ್ಕೆ ದಾರಿದೀಪ !
ಆನಂದದಾಯಕ ಜೀವನವನ್ನು ಹೇಗೆ ನಡೆಸುವುದು ಮತ್ತು ಶೀಘ್ರ ಆಧ್ಯಾತ್ಮಿಕ ಪ್ರಗತಿಯನ್ನು ಹೇಗೆ ಸಾಧಿಸುವುದು ಎಂಬುದನ್ನು ತಿಳಿಯಲು ‘ಸಾಧನಾ ಸಂವಾದ’ ಸತ್ಸಂಗದಲ್ಲಿ ಭಾಗವಹಿಸಿ. ಸಾಧನಾ ಸಂವಾದ ಸತ್ಸಂಗದ ನಂತರ ‘ಸನಾತನದ ಸತ್ಸಂಗ’ಗಳಿಗೆ ಸೇರಲು…
ಉಪಯುಕ್ತ ಗ್ರಂಥಗಳು
ಗುರುಕೃಪಾಯೋಗಾನುಸಾರ ಸಾಧನೆಗುರುಗಳ ವಿಧಗಳು ಮತ್ತು ಗುರುಮಂತ್ರಗುರುಗಳ ಮಹತ್ವಗುರುಗಳು ಶಿಷ್ಯರಿಗೆ ಕಲಿಸುವುದು ಮತ್ತು ವರ್ತಿಸುವುದು