ಶರಶಯ್ಯೆಯಲ್ಲಿ ಭೀಷ್ಮಾಚಾರ್ಯರು

ಅಸಂಖ್ಯ ಬಾಣಗಳಿಂದ ಹಲ್ಲೆಗೊಳಗಾದ ಆ ಶರೀರವು ಇನ್ನು ನಿಂತುಕೊಳ್ಳಲು ಅಸಮರ್ಥವಾದಾಗ, ಭೀಷ್ಮಾಚಾರ್ಯರು ಪೂರ್ವದಿಕ್ಕಿಗೆ ತಲೆ ಮಾಡಿ ರಥದಿಂದ ಕೆಳಗೆ ಬೀಳುತ್ತಾರೆ. ಆ ಅಸಂಖ್ಯ ಬಾಣಗಳು ಅವರ ದೇಹಕ್ಕೆ ಒಂದು ಶರಶಯ್ಯೆಯನ್ನೇ ಆಗಿರುತ್ತವೆ

ಕಾರ್ತಿಕೇಯನು ಮಾಡಿದ ಶೂರಪದ್ಮನ ವಧೆ !

ತಾರಕಾಸುರನ ವಧೆಯಿಂದ ದೇವತೆಗಳಿಗೆ ತೊಂದರೆ ತಪ್ಪಿದರೂ ಹೆಚ್ಚುಕಾಲ ಸುಖಶಾಂತಿಯಿಂದ ಇರಲು ಅವರಿಗೆ ಸಾಧ್ಯವಾಗಲಿಲ್ಲ. ತಾರಕನಂತೆಯೇ ಬಲಾಢ್ಯನಾದ ಶೂರಪದ್ಮನೆಂಬ ರಾಕ್ಷಸ ಇದ್ದನಲ್ಲವೆ? ವೀರಮಹೇಂದ್ರ ಎಂಬ ಸ್ಥಳದಲ್ಲಿ ಅವನ ವಾಸ. ವಿಶ್ವಕರ್ಮನ ಮಗಳಾದ ಪದ್ಮಕೋಮಲೆ ಅವನ ಹೆಂಡತಿ. ಅವಳಲ್ಲಿ ಭಾನುಕೋಪ, ಅಗ್ನಿಮುಖ, ಹಿರಣ್ಯಕ, ವಜ್ರಬಾಹು ಮುಂತಾದ ಶೂರರೂ ದುಷ್ಟರೂ ಆದ ಮಕ್ಕಳಿದ್ದರು. ಆ ಮಕ್ಕಳಿಗೆ ದೇವ-ದಾನವ- ಗಂಧರ್ವ-ಸಿದ್ಧ-ವಿದ್ಯಾಧರ-ಮಾನವ-ನಾಗಕನ್ಯೆಯರನ್ನು ತಂದು ಮದುವೆ ಮಾಡಿಸಿ ರಾಕ್ಷಸ ಸಂತತಿಯನ್ನು ಬಹಳವಾಗಿ ಬೆಳೆಸಿದನು. ಅವರೆಲ್ಲ ಸಜ್ಜನರಿಗೆ ಹಿಂಸೆ ಕೊಡುತ್ತ ಅನ್ಯಾಯ, ಅತ್ಯಾಚಾರ ಮಾಡುತ್ತ ಅಧರ್ಮವನ್ನು ಬೆಳೆಸುತ್ತಿದ್ದರು. … Read more