‘ಗುರುಕೃಪಾಯೋಗ’ – ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!
ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.
ಗುರುಕೃಪೆ ಮತ್ತು ಗುರುಪ್ರಾಪ್ತಿಯಾಗಲು ಮತ್ತು ಗುರುಕೃಪೆಯು ಸತತವಾಗಿ ಆಗುತ್ತಿರಲು ಮಾಡಬೇಕಾದ ಸಾಧನೆಗೆ ‘ಗುರುಕೃಪಾಯೋಗಾನುಸಾರ ಸಾಧನೆ’ ಎನ್ನುತ್ತಾರೆ.
ದೇವರೆದುರು ನಮ್ರವಾಗಿ ಇಚ್ಛಿತ ವಿಷಯಗಳನ್ನು ತಳಮಳ, ಆದರ, ಪ್ರೇಮ, ವಿನಯಭಾವ (ನಮ್ರತೆ), ಶ್ರದ್ಧೆ ಮತ್ತು ಭಕ್ತಿಭಾವಗಳಿಂದ ಬೇಡುವುದಕ್ಕೆ ‘ಪ್ರಾರ್ಥನೆ’ ಎನ್ನುತ್ತಾರೆ.
ಯಾವುದೇ ಯೋಗಮಾರ್ಗದಿಂದ ಸಾಧನೆ ಮಾಡಿದರೂ ಎಲ್ಲಿಯವರೆಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಸ್ವಲ್ಪ ಪ್ರಮಾಣದಲ್ಲಾದರೂ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಅತ್ಯಂತ ಕಷ್ಟವಾಗುತ್ತದೆ
ಜೀವನದ ಧ್ಯೇಯವೇನು ? ಈ ಜಗತ್ತಿನಲ್ಲಿ ಜನಿಸಿದ ಹುಳು ಹುಪ್ಪಟೆಗಳಿಂದ ಹಿಡಿದು ಶ್ರೇಷ್ಠವೆನಿಸಿದ ಮಾನವನ ತನಕದ ಪ್ರತಿಯೊಂದು ಜೀವಿಯೂ ಅನುಕ್ಷಣವೂ ಸುಖ ಸಿಗಬೇಕೆಂದು ಚಡಪಡಿಸುತ್ತಿರುತ್ತದೆ. ನಾವು ಏನೆಲ್ಲ ಮಾಡುತ್ತೇವೋ ಅದೆಲ್ಲವೂ ಸುಖ ಪ್ರಾಪ್ತಿಗಾಗಿಯೇ ಇದೆ ಎಂದರೂ ತಪ್ಪಲ್ಲ. ಸುಖ ಮತ್ತು ಆನಂದದಲ್ಲಿರುವ ವ್ಯತ್ಯಾಸ ಸುಖ ಎಂಬ ಶಬ್ದಕ್ಕೆ ಪರ್ಯಾಯವಾಗಿ ನಾವು ಬಳಸುವ ಇನ್ನೊಂದು ಶಬ್ದವೇ ಆನಂದ. ಆದರೆ ಸುಖಕ್ಕೂ ಆನಂದಕ್ಕೂ ಅಜಗಜಾಂತರ ವ್ಯತ್ಯಾಸವಿದೆಯೆಂಬುದು ಬಹುಮಂದಿಗೆ ತಿಳಿದೇ ಇಲ್ಲ. ಸುಖ ಎಂದೊಡನೆ ಅದರೊಂದಿಗೇ ಹಿಂಬಾಲಿಸಿ ಬರುವ ಇನ್ನೊಂದು ಶಬ್ದವೆಂದರೆ … Read more
ಲೌಕಿಕ ಜೀವನದಲ್ಲಿ ಹೇಗೆ ನಾವು ಒಂದೊಂದೇ ತರಗತಿಯನ್ನು ಕಲಿತು ತೇರ್ಗಡೆಗೊಂಡು ಮುಂದಿನ ತರಗತಿಗೆ ಹೋಗುತ್ತೇವೆಯೋ, ಹಾಗೆಯೇ ಅಧ್ಯಾತ್ಮದಲ್ಲಿಯೂ ಮುಂದುಮುಂದಿನ ಹಂತ ತಲುಪಲು ಸಾಧನೆಯನ್ನು ಮಾಡಬೇಕಾಗುತ್ತದೆ.
ಮನಸ್ಸು ಮತ್ತು ಬುದ್ಧಿಯಿಂದ ಏನಾದರೂ ಕೃತಿ ಮಾಡುವುದು ಪ್ರಾಯೋಗಿಕ ಅಂಗವಾಗಿದೆ. ಈ ಪ್ರಾಯೋಗಿಕ ಅಂಗವೇ ‘ಸಾಧನೆ’.
ಅ. ಮೊದಲನೆಯ ಹಂತ : ಸಾಮಾನ್ಯ ವ್ಯಕ್ತಿಯು ತನ್ನ ಕುಲದೇವತೆ ಅಥವಾ ಉಪಾಸ್ಯದೇವತೆಯಲ್ಲಿ ಮತ್ತು ಗುರುಪ್ರಾಪ್ತಿಯಾದ ವ್ಯಕ್ತಿಯು ಗುರುಗಳಲ್ಲಿ ಪ್ರಾರ್ಥನೆಯನ್ನು ಮಾಡಬೇಕು. ಆ. ಎರಡನೆಯ ಹಂತ : ಮೊದಲನೆಯ ಹಂತದ ಪ್ರಾರ್ಥನೆಯ ಜೊತೆಗೆ ಆಯಾ ಕಾರ್ಯಕ್ಕೆ ಸಂಬಂಧಿಸಿದ ದೇವತೆಗಳಲ್ಲಿ ಉದಾ. ಸ್ನಾನದ ಮೊದಲು ಜಲದೇವತೆಗೆ ಮತ್ತು ಭೋಜನದ ಮೊದಲು ಶ್ರೀ ಅನ್ನಪೂರ್ಣಾ ದೇವಿಗೆ ಪ್ರಾರ್ಥನೆಯನ್ನು ಮಾಡಬೇಕು. ಇದರಿಂದ ಆಯಾ ದೇವತೆಯ ಮಹತ್ವವು ಗಮನಕ್ಕೆ ಬಂದು ಕೃತಜ್ಞತಾಭಾವವು ಹೆಚ್ಚಾಗುತ್ತದೆ. ಇ. ಮೂರನೆಯ ಹಂತ : ಮೊದಲನೆಯ ಮತ್ತು ಎರಡನೆಯ … Read more
ಪ್ರಾರ್ಥನೆಯನ್ನು ಕೇವಲ ಓದಿದಂತೆ ಮಾಡದೇ, ಪ್ರಾರ್ಥನೆಯಿಂದ ದೇವತೆಯೊಂದಿಗೆ/ಗುರುಗಳೊಂದಿಗೆ ಆರ್ತತೆಯಿಂದ ಮಾತನಾಡಲು ಪ್ರಯತ್ನಿಸಬೇಕು
ಪ್ರಾರ್ಥನೆ ಎಂದರೆ ಈಶ್ವರನ ಚರಣಗಳಲ್ಲಿ ಶರಣಾಗತಿ. ಶರಣಾಗತಿಯಿಂದ ಅಹಂ ಕಡಿಮೆಯಾಗಿ ಈಶ್ವರನ ಕೃಪೆಯಾಗುತ್ತದೆ ಮತ್ತು ಜೀವನದಲ್ಲಿ ನಿಜವಾದ ಕಲ್ಯಾಣವಾಗುತ್ತದೆ ಹಾಗೂ ನಿಜವಾದ ಆನಂದ ಸಿಗುತ್ತದೆ.
ಪ್ರಾರ್ಥಿಸುವುದರ ಮೂಲಕ ನಮ್ಮ ಅಪೇಕ್ಷಿತ ಉದ್ದೇಶಗಳನ್ನು ಪೂರೈಸಬಲ್ಲ ಪ್ರಕೃತಿಯ ಶಕ್ತಿಗಳನ್ನು ಆಕರ್ಷಿಸಲು ಸಾಧ್ಯವಿದೆ. ಪ್ರಾರ್ಥನೆಯು ಒಂದು ಅತ್ಯುತ್ತಮ ಔಷಧಿಯಾಗಬಲ್ಲದು ಎಂಬುದನ್ನು ಈಗೀಗ ವಿಜ್ಞಾನವೂ ಸಹ ನಂಬಲಾರಂಭಿಸಿದೆ.