ಮಳೆಗಾಲದ ಋತುಚರ್ಯೆ – ಆರೋಗ್ಯವಂತರಾಗಿರಲು ಆಯುರ್ವೇದದ ಕಿವಿಮಾತು !
ಮಳೆಗಾಲದ ದಿನಗಳಲ್ಲಿ ಪಚನಶಕ್ತಿಯೂ ಕಡಿಮೆಯಾಗುತ್ತದೆ. ಹಸಿವೆಯು ಕಡಿಮೆಯಾಗುವುದರಿಂದ ಅಪಚನದ ರೋಗವು ನಿರ್ಮಾಣವಾಗುತ್ತದೆ. ಮಳೆಯ ನೀರಿನೊಂದಿಗೆ ಧೂಳು, ಕಸ ಹರಿದು ಬರುವುದರಿಂದ ನೀರು ಕಲುಷಿತಗೊಂಡು ಅದು ಸಹ ರೋಗಗಳಿಗೆ ಕಾರಣವಾಗುತ್ತದೆ. ಆದುದರಿಂದ ಮಳೆಗಾಲದಲ್ಲಿ ವಹಿಸಬೇಕಾದ ವಿಶೇಷ ಕಾಳಜಿಯನ್ನು ಆಯುರ್ವೇದ ತಿಳಿಸಿದೆ.