ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ (ಬೋಳಾರ, ಮಂಗಳೂರು)
ಶ್ರೀ ಮಂಗಳಾದೇವಿ ಇಲ್ಲಿ ನೆಲಸಿರುವುದರಿಂದಲೇ ಇಲ್ಲಿಗೆ ಮಂಗಳಾಪುರ ಎಂಬ ಹೆಸರು ಬಂದಿದೆ. ಅದುವೇ ಇಂದಿನ ಮಂಗಳೂರು.
ಶ್ರೀ ಮಂಗಳಾದೇವಿ ಇಲ್ಲಿ ನೆಲಸಿರುವುದರಿಂದಲೇ ಇಲ್ಲಿಗೆ ಮಂಗಳಾಪುರ ಎಂಬ ಹೆಸರು ಬಂದಿದೆ. ಅದುವೇ ಇಂದಿನ ಮಂಗಳೂರು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಎಂಬಲ್ಲಿ ಶ್ರೀರಾಜರಾಜೇಶ್ವರಿ ದೇವಸ್ಥಾನವಿದೆ. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನವನ್ನು ಸುತ್ತುವರಿದು ಪಾಲ್ಗುಣಿ ಹೊಳೆ ಹರಿದು ಹೋಗುತ್ತಾಳೆ. ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಪೊಳಲಿಯು ಪ್ರವಾಸಿಗರನ್ನು ತನ್ನ ನೈಸರ್ಗಿಕ ಸೌಂದರ್ಯ ಹಾಗು ದೃಷ್ಯ ಸಲಕರಣೆಯಿಂದ ಆಕರ್ಷಿಸುತ್ತಿದೆ.
ಇತಿಹಾಸ ಸ್ವರ್ಣ ರೇಖಾಂಕಿತಂ ಲಿಂಗಂ, ನಾಸ್ತಿ ನಾಸ್ತಿ, ಜಗತ್ರಾಯೆ ವಾಮ ಭಗದಿತಂ ಲಿಂಗಂ ನ ಭೂತೊ ನಃ ಭವಿಷ್ಯತಿ ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲೂರು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರ ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಕೋಲ ಮಹರ್ಷಿಯು ತಪಸ್ಸುಗೈದುದರಿಂದ ಇದು ಕೋಲಾಪುರವೆನಿಸಿತು. ಇದು ಇಂದಿನ ಕೊಲ್ಲೂರು ಎಂದು ಹೆಸರಾಯಿತು. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. … Read more
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಮುಲ್ಕಿಯಲ್ಲಿದ್ದು, ಸಾಂಪ್ರದಾಯಕವಾಗಿ ಸಾಮಾಜಿಕವಾಗಿ ವೇದಘೋಷಗಳೊಂದಿಗೆ ಎಲ್ಲ ವರ್ಗದ ಜನರು ಜಾತ್ರೆಯಲ್ಲಿ ಭಾಗವಹಿಸುತ್ತಾರೆ
ಜಗನ್ಮಾತೆ ಶ್ರೀ ರೇಣುಕಾ ಯಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ.
ಶ್ರೀ ಯಲ್ಲಮ್ಮ ದೇವಿ ದೇವಸ್ಥಾನವು ನೀರಮಾನ್ವಿಯಲ್ಲಿದೆ ಇದು ಮಾನ್ವಿ ತಾಲ್ಲೂಕು ರಾಯಚೂರು ಜಿಲ್ಲೆಯಲ್ಲಿದೆ. ಈ ದೇವಸ್ಥಾನಕ್ಕೆ ೨೦೦ ವರ್ಷಗಳ ಇತಿಹಾಸವಿದೆ.
ಕುಂಭಾ ಎಂಬ ರಾಕ್ಷಸನನ್ನು ವಧಿಸಲು ಭೀಮನೆದುರು ಪ್ರತ್ಯಕ್ಷನಾಗಿ ಖಡ್ಗವನ್ನು ನೀಡಿದ ವಿನಾಯಾಕನ ಬಗ್ಗೆ ತಿಳಿದುಕೊಳ್ಳೋಣ.
ಮಾರಿಕಾಂಬಾ ದೇವಿಯೇ ಕೆಳದಿ ಇಕ್ಕೇರಿ ಸಂಸ್ಥಾನದ ಗಡಿ ದೇವತೆ ಮತ್ತು ಶಕ್ತಿ ದೇವತೆಯೆಂದು ಊರಿನ ಹಿರಿಯರು ಅಭಿಪ್ರಾಯ ಪಡುತ್ತಾರೆ.
‘ತ್ರೇತಾಯುಗದಲ್ಲಿ ಶ್ರೀರಾಮನು ವನವಾಸದಲ್ಲಿದ್ದಾಗ ಒಮ್ಮೆ ಸೀತಾಮಾತೆಗೆ ತುಂಬ ಬಾಯಾರಿಕೆಯಾಗಿತ್ತು, ಆಗ ಶ್ರೀರಾಮನು ಭೂಮಿಗೆ ಬಾಣ ಹೊಡೆದು ನೀರು ತೆಗೆದನು. ಆ ಸ್ಥಳದಲ್ಲಿ ತೀರ್ಥವು ನಿರ್ಮಾಣವಾಯಿತು. ಇದನ್ನೇ ಈಗ ಕರ್ನಾಟಕ ರಾಜ್ಯದಲ್ಲಿರುವ ಶರಾವತಿ ನದಿಯ ಉಗಮಸ್ಥಾನವೆಂದು ಕರೆಯಲಾಗುತ್ತದೆ.
ಪೂರ್ವಕಾಲದಲ್ಲಿ ನೂರಾರು ವರ್ಷಗಳ ವರೆಗೆ ಮಳೆಯಾಗದೇ ಘೋರ ದುರ್ಭೀಕ್ಷ ಉಂಟಾಗಲು ಭೂಮಿಯಲ್ಲಿ ಎಲ್ಲ ಕರ್ಮಗಳು ಲೋಪವಾದಾಗ ಜೀವ ರಾಶಿಗಳು ತತ್ತರಿಸಿ ಹೋದವು. ಆಗ ಎಲ್ಲ ದೇವತೆಗಳು ಶಿವನನ್ನು ಪ್ರಾರ್ಥಿಸಿದರು.