ಗಂಗಾ ರಕ್ಷಣೆಯ ಸಂದರ್ಭದಲ್ಲಿ ಜನತೆಯ ಕೆಲವು ಅಯೋಗ್ಯ ಕೃತಿಗಳು

ಹಿಂದೂಗಳ ಮನಸ್ಸಿನಲ್ಲಿ ಮೋಕ್ಷದಾಯಿನಿ ಗಂಗೆಯ ಬಗ್ಗೆ ಯಾವ ಉದಾತ್ತ ಭಾವನೆಯಿದ್ದರೂ ಗಂಗೆಯನ್ನು ಕಲುಷಿತಗೊಳಿಸುವವರನ್ನು ತಡೆಯಲು ಹಿಂಜರಿಯುತ್ತಾರೆ.

ಭಕ್ತಾದಿಗಳು ಗಂಗೆಯ ಸಂದರ್ಭದಲ್ಲಿ ಮಾಡಬೇಕಾದ ಸಮಷ್ಟಿ ಸಾಧನೆ (ಉಪಾಸನೆ)

ಪವಿತ್ರ ಗಂಗಾ ನದಿಯ ರಕ್ಷಣೆಯು ಪ್ರತಿಯೊಬ್ಬ ಹಿಂದೂವಿನ ಧಾರ್ಮಿಕ, ಸಾಮಾಜಿಕ, ಮಾನವೀಯ ಮತ್ತು ಮೊದಲ ರಾಷ್ಟ್ರೀಯ ಕರ್ತವ್ಯವಾಗಿದೆ

ಭಕ್ತಾದಿಗಳು ಗಂಗೆಯ ಸಂದರ್ಭದಲ್ಲಿ ಮಾಡಬೇಕಾದ ವ್ಯಷ್ಟಿ ಸಾಧನೆ (ಉಪಾಸನೆ)

ಗಂಗಾಸ್ನಾನದ ನಂತರ ಗಂಗೆಯ ಪೂಜೆಯನ್ನು ಮಾಡಬೇಕು. ಶ್ರೀ ಗಂಗಾದೇವಿಯ ಸಹಸ್ರನಾಮದಲ್ಲಿ ‘ಕದಂಬಕುಸುಮಪ್ರಿಯಾ’ (ಕದಂಬ ಹೂವುಗಳೆಂದರೆ ಪ್ರಿಯವಾಗಿರುವವಳು) ಎಂಬ ಹೆಸರಿದೆ. ಆದ್ದರಿಂದ ಗಂಗಾಪೂಜೆಯನ್ನು ಮಾಡುವಾಗ ಕದಂಬದ ಹೂವುಗಳನ್ನು ಅರ್ಪಿಸುತ್ತಾರೆ.

ಗಂಗಾಸ್ನಾನ ಮತ್ತು ಅದರ ಮಹತ್ವ

ಪರ್ವಪ್ರಸಂಗಗಳಲ್ಲಿ ಗಂಗಾಸ್ನಾನವು ಅತ್ಯಂತ ಪುಣ್ಯಕಾರಕವಾಗಿರುತ್ತದೆ. ಆದ್ದರಿಂದ ಇಲ್ಲಿ ಸಂಕ್ರಾಂತಿ, ಗ್ರಹಣಕಾಲ, ಅರ್ಧೋದಯ ಯೋಗ, ಮಹೋದಯ ಯೋಗ ಇತ್ಯಾದಿ ಪರ್ವಕಾಲಗಳಲ್ಲಿ ಅನೇಕ ಭಕ್ತರು ಗಂಗಾಸ್ನಾನಕ್ಕಾಗಿ ತೀರ್ಥಯಾತ್ರೆ ಮಾಡುತ್ತಾರೆ.

ಗಂಗಾತೀರದ ತೀರ್ಥಕ್ಷೇತ್ರಗಳು

ಗಂಗೆಯ ತೀರವು ಯಾವಾಗಲೂ ಎಲ್ಲ ಕಾಲದಲ್ಲಿಯೂ ಶುಭವಾಗಿದೆ, ತೀರದ ಮೇಲಿನ ದೇಶವೂ ಶುಭವಾಗಿದೆ ಮತ್ತು ತೀರದ ಮೇಲಿನ ಎಲ್ಲ ಜನರು ದಾನವನ್ನು ಗ್ರಹಿಸಲು ಯೋಗ್ಯರಾಗಿದ್ದಾರೆ. (ಸ್ಕಂದಪುರಾಣ, ಕಾಶಿಖಂಡ, ಅಧ್ಯಾಯ ೨೭, ಶ್ಲೋಕ ೬೯)

ಹಿಂದೂಗಳ ಜೀವನದರ್ಶನದಲ್ಲಿನ ಗಂಗೋದಕದ ಸ್ಥಾನ

ಯಾತ್ರಿಕರು ಹರಿದ್ವಾರ, ಪ್ರಯಾಗ ಮುಂತಾದ ತೀರ್ಥಗಳಿಂದ ಗಂಗಾಜಲವನ್ನು ಮನೆಗೆ ತಂದು ಅದನ್ನು ಪೂಜಿಸುತ್ತಾರೆ. ಹಾಗೆಯೇ ಆಪ್ತೇಷ್ಟರನ್ನು ಕರೆದು ಅವರಿಗೆ ಆ ತೀರ್ಥವನ್ನು ಕೊಡುತ್ತಾರೆ. ಪ್ರತಿದಿನ ಸ್ನಾನ ಮಾಡುವಾಗ ಗಂಗೆಯೊಂದಿಗೆ ಪವಿತ್ರ ನದಿಗಳನ್ನು ಸ್ಮರಿಸಲಾಗುತ್ತದೆ.

ಗಂಗಾ ಆದಿ ಪವಿತ್ರರನದಿಗಳಲ್ಲಿ ಸ್ನಾನ, ತೀರ್ಥಸ್ನಾನ

ಗಂಗೆಯ ಮಹತ್ವ

ಭಾರತದಲ್ಲಿನ ಎಲ್ಲ ಸಂತರು, ಆಚಾರ್ಯರು ಮತ್ತು ಮಹಾಪುರುಷರು, ಹಾಗೆಯೇ ಎಲ್ಲ ಸಂಪ್ರದಾಯದ ಭಕ್ತರು ಗಂಗಾಜಲದ ಪಾವಿತ್ರ್ಯವನ್ನು ಒಪ್ಪಿಕೊಂಡಿದ್ದಾರೆ. ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ‘ಸ್ರೋತಸಾಮಸ್ಮಿ ಜಾಹ್ನವಿ |’ ಅಂದರೆ ‘ಎಲ್ಲ ಪ್ರವಾಹಗಳಲ್ಲಿ ನಾನು ಗಂಗೆಯಾಗಿದ್ದೇನೆ’, ಎಂದು ಹೇಳಿದ್ದಾನೆ.

ಗಂಗಾ ನದಿಯ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಭಾರತದ ಏಳು ಪವಿತ್ರ ನದಿಗಳಲ್ಲಿ ಗಂಗಾ ಮೊದಲ, ಅಂದರೆ ಪವಿತ್ರತಮ ನದಿಯಾಗಿದೆ. ಪುರಾಣಾದಿ ಧರ್ಮಗ್ರಂಥಗಳಲ್ಲಿ ಗಂಗೆಯನ್ನು ‘ಮೋಕ್ಷದಾಯಿನಿ’ ಎಂದು ಕರೆಯಲಾಗಿದೆ. ಗಂಗೆಯು ‘ದಶಹರಾ’ ಆಗಿದ್ದಾಳೆ. ಅವಳು ಶಾರೀರಿಕ, ವಾಚಿಕ ಮತ್ತು ಮಾನಸಿಕ ಪಾಪಗಳನ್ನೊಳಗೊಂಡ ಹತ್ತು ಪಾಪಗಳನ್ನು ನಾಶ ಮಾಡುತ್ತಾಳೆ.

ಪವಿತ್ರ ನದಿಗಳಲ್ಲಿ ತೀರ್ಥಸ್ನಾನ, ಗಂಗಾ ಸ್ನಾನ

ಗಂಗಾ ಮಹಾತ್ಮೆ

ಗಂಗಾ ನದಿಯ ತೀರವು ತೀರ್ಥಕ್ಷೇತ್ರವಾಗಿದ್ದು ಅದು ಹಿಂದೂಗಳಿಗೆ ಅತಿ ವಂದನೀಯ ಮತ್ತು ಉಪಾಸನೆಗಾಗಿ ಪವಿತ್ರ ಸಿದ್ಧಿಕ್ಷೇತ್ರವೇ ಆಗಿದೆ. ಗಂಗಾದರ್ಶನ, ಗಂಗಾಸ್ನಾನ ಮತ್ತು ಪಿತೃ ತರ್ಪಣ ಈ ಮಾರ್ಗಗಳಿಂದ ಮೋಕ್ಷವನ್ನು ಸಾಧ್ಯಗೊಳಿಸಬಹುದು ಎಂಬ ಸತ್ಯವನ್ನು ಧರ್ಮಾಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಕುಂಭದರ್ಶನ : ಜಾಗೃತ ತೀರ್ಥಕ್ಷೇತ್ರಗಳಲ್ಲಿ ಬಂದಂತಹ ಕಹಿ ಅನುಭವಗಳು

ಕುಂಭಕ್ಷೇತ್ರದಲ್ಲಿ ಜಾಗೃತ ತೀರ್ಥಕ್ಷೇತ್ರಗಳಲ್ಲಿ ಪಂಡಾಗಳಿಂದ (ಅರ್ಚಕರಿಂದ) ಲೂಟಿ, ಇತರ ಅನೇಕ ಅಪರಾಧಗಳ ಬಗ್ಗೆ ಸರಕಾರದ ನಿಷ್ಕಾಳಜಿ ತೋರುತ್ತದೆ.