ಗುರು, ಸದ್ಗುರು ಮತ್ತು ಪರಾತ್ಪರ ಗುರು
ಗುರು, ಸದ್ಗುರು ಮತ್ತು ಪರಾತ್ಪರ ಗುರು – ವ್ಯಾಖ್ಯೆ, ಅರ್ಥ, ಕಾರ್ಯ ಮತ್ತು ಶಿಷ್ಯನ ಉನ್ನತಿಯಲ್ಲಿನ ಪಾಲು
ಗುರು, ಸದ್ಗುರು ಮತ್ತು ಪರಾತ್ಪರ ಗುರು – ವ್ಯಾಖ್ಯೆ, ಅರ್ಥ, ಕಾರ್ಯ ಮತ್ತು ಶಿಷ್ಯನ ಉನ್ನತಿಯಲ್ಲಿನ ಪಾಲು
ಶಿಷ್ಯನ ಅನೇಕ ವಿಧಗಳಲ್ಲಿ ‘ಸಾಧಕ ಶಿಷ್ಯ’ ಅತ್ಯಂತ ಶ್ರೇಷ್ಠನಾಗಿದ್ದಾನೆ. ಏಕೆಂದರೆ ಸಾಧಕ ಶಿಷ್ಯನು ಗುರುಗಳ ಆಜ್ಞಾಪಾಲನೆಯನ್ನು ನಿಷ್ಕಾಮ ಭಾವನೆಯಿಂದ ಮಾಡುತ್ತಾನೆ.
ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಇದು ಶಿಷ್ಯರ ಕರ್ತವ್ಯವೇ ಆಗಿದೆ. ಗುರುಗಳ ಪ್ರೀತಿಗೆ ಪಾತ್ರರಾಗಲು ಶಿಷ್ಯರಾದ ಆರುಣಿ ಮತ್ತು ಉಪಮನ್ಯು ಹಾಗೆ ಸ್ವಂತ ವಿಚಾರ ಮಾಡದೆ ಗುರುಗಳ ಆಜ್ಞೆಯ ಪಾಲನೆ ಮಾಡಬೇಕು ಎಂದು ಈ ನೀತಿಕಥೆಯಿಂದ ತಿಳಿಯುವುದು.
ಭಾರತೀಯ ಗುರುಕುಲ ಪದ್ಧತಿಯಲ್ಲಿ ಕೇವಲ ವಿದ್ಯೆಯನ್ನು ನೀಡುವುದು ಮಾತ್ರ ಧ್ಯೇಯವಾಗಿರದೇ ‘ಶಿಷ್ಯನು ಸ್ವತಃ ಕೃತಿಶೀಲನಾಗಬೇಕು’, ಎಂಬ ವಿಚಾರ ಇರುತ್ತಿತ್ತು.
ನಮಗೆ ಈಜಲು ಬರದಿದ್ದರೆ, ನದಿಯನ್ನು ಪಾರು ಮಾಡಲು ನೌಕೆಯ ಆವಶ್ಯಕತೆಯಿರುತ್ತದೆ. ಅದೇ ರೀತಿ ಸಂಸಾರಸಾಗರವನ್ನು ದಾಟಿ ಹೋಗಲು ಸಂತರೂಪಿ ನೌಕೆಯ ಆವಶ್ಯಕತೆಯಿರುತ್ತದೆ.
ಎಲ್ಲರೂ ಅಯೋಗ್ಯ ವಿಚಾರ ಮತ್ತು ಟೀಕೆಗಳಿಗೆ ಯೋಗ್ಯವಾಗಿ ಪ್ರತಿವಾದ ಮಾಡದಿರುವುದರಿಂದ ಧರ್ಮದ ಮೇಲಿನ ಹಿಂದೂಗಳ ಶ್ರದ್ಧೆಯು ಡೋಲಾಯಮಾನವಾಗುತ್ತದೆ ಮತ್ತು ಇದರಿಂದ ಧರ್ಮಹಾನಿಯಾಗುತ್ತದೆ. ಈ ಹಾನಿಯನ್ನು ನಿಲ್ಲಿಸಲು ಹಿಂದೂಗಳಿಗೆ ಬೌದ್ಧಿಕ ಬಲ ಪ್ರಾಪ್ತವಾಗಬೇಕೆಂಬುದಕ್ಕಾಗಿ ಟೀಕೆಗಳ ಖಂಡನೆಯನ್ನು ಇಲ್ಲಿ ಕೊಡಲಾಗಿದೆ.
‘ಗುರುವೇ ಪರಮೇಶ್ವರ ! ಗುರುವೇ ಸರ್ವೇಶ್ವರ ! ಎಲ್ಲವನ್ನೂ ಅರ್ಪಿಸಬೇಕು ಗುರುಚರಣಗಳಲ್ಲಿ !’ ಗುರು ನಮ್ಮನ್ನು ಜ್ಞಾನದ ಗರ್ಭಗುಡಿಯೊಳಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಜ್ಞಾನದೊಂದಿಗೆ ಏಕರೂಪ ಮಾಡುತ್ತಾರೆ.
ಅನಂತಕೋಟಿ ತೀರ್ಥಗಳು ಯಾರ ಚರಣಗಳಲ್ಲಿ ಇವೆಯೋ, ಅಂತಹ ಶ್ರೀಗುರುಪಾದುಕೆಗಳ ಮನಃಪೂರ್ವಕ ಸೇವೆಯನ್ನು ಮಾಡಿದರೆ ಆ ಭಕ್ತನು ಮುಕ್ತಿಪದವಿಯನ್ನು ಪ್ರಾಪ್ತಮಾಡಿಕೊಳ್ಳುವನು !
ಎಲ್ಲವೂ ಗುರುಕೃಪೆಯಿಂದಲೇ ಆಗುತ್ತದೆ, ಗುರುಕೃಪೆಯ ಹೊರತು ಏನೂ ಆಗುವುದಿಲ್ಲ. ಗುರುಗಳ ಆಜ್ಞೆಯಂತೆ ನಡೆದುಕೊಂಡರೆ, ನಿಶ್ಚಿತವಾಗಿಯೂ ಗುರುಕೃಪೆಯಾಗುವುದು. ಗುರುಗಳಿಗೆ ಅಪೇಕ್ಷಿತವಿರುವಂತೆ ನಡೆದುಕೊಂಡರೆ ಅವರ ಬಳಿ ಏನೂ ಕೇಳಬೇಕಾಗುವುದಿಲ್ಲ !