ಮೂರ್ತಿ ವಿಸರ್ಜನೆಯ ಪೂಜೆ ಹೇಗೆ ಮಾಡಬೇಕು?

ಮೂರ್ತಿಯ ವಿಸರ್ಜನೆಯನ್ನು ಕುಲಾಚಾರಕ್ಕನುಸಾರ ಯೋಗ್ಯ ದಿನ / ಸಮಯಕ್ಕೆ ಮಾಡಬೇಕು. ಆ ದಿನ ಗಂಧ, ಹೂವುಗಳು, ಧೂಪ, ದೀಪ ಮತ್ತು ನೈವೇದ್ಯಕ್ಕೆ ಮೊಸರು, ಅನ್ನ, ಮೋದಕ ಇತ್ಯಾದಿ ಪದಾರ್ಥಗಳನ್ನು ಪೂಜೆಯಲ್ಲಿ ಬಳಸಬೇಕು. ಉತ್ತರ ಪೂಜೆಯನ್ನು ಪ್ರಾರಂಭಿಸುವ ಮೊದಲು ಪೂಜಕನು ತನಗೆ ಕುಂಕುಮದ ತಿಲಕವನ್ನು ಹಚ್ಚಿಕೊಳ್ಳಬೇಕು. ಆನಂತರ ಆಚಮನ ಮಾಡಿ, ಕೈಯಲ್ಲಿ ಅಕ್ಷತೆಯನ್ನು ಹಿಡಿದು ಮುಂದಿನ ಸಂಕಲ್ಪವನ್ನು ಮಾಡಬೇಕು. ಶ್ರೀ ಸಿದ್ಧಿವಿನಾಯಕ ದೇವತಾ ಪ್ರೀತ್ಯರ್ಥಂ ಉತ್ತರಾರಾಧನಂ ಕರಿಷ್ಯೆ | ತದಂಗತ್ವೇನ ಗಂಧಾದಿಪಂಚೋಪಚಾರಪೂಜನಮಹಂ ಕರಿಷ್ಯೆ | ಶ್ರೀ ಸಿದ್ಧಿವಿನಾಯಕಾಯ ನಮಃ … Read more

ಗಣೇಶ ಮೂರ್ತಿಯನ್ನು ಸ್ಥಾಪಿಸಿದ ನಂತರ ಪ್ರತಿ ದಿನ ಮಾಡಬೇಕಾದ ಪಂಚೋಪಚಾರ ಪೂಜೆ

ಅ. ಸಂಜೆ ಏಳು ಏಳುವರೆಗೆ ದೇವರಿಗೆ ಅರ್ಪಿಸಿದ ಹೂವು ತೆಗೆದು ಗಂಧ, ಹೂವು, ದೂರ್ವೆ, ಧೂಪ, ದೀಪ ಮತ್ತು ನೈವೇದ್ಯವನ್ನು ಅರ್ಪಿಸಬೇಕು. ಆರತಿಯನ್ನು ಬೆಳಗಬೇಕು. ಇದನ್ನು ಪಂಚೋಪಚಾರ ಪೂಜೆ ಎನ್ನುತ್ತಾರೆ. (ಪಂಚೋಪಚಾರ ಪೂಜೆಯನ್ನು ಹೇಗೆ ಮಾಡಬೇಕು ಎಂದು ಸವಿಸ್ತಾರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !) ರಾತ್ರಿ ಮಲಗುವ ಮುಂಚೆ ಗಣಪತಿಗೆ ಪ್ರಾರ್ಥನೆಯನ್ನು ಮಾಡಿ ಅ ದಿನದ ಸೇವೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿಸಿಕೊಂಡಿರುವುದಕ್ಕೆ ಕೃತಜ್ಞತೆಯನ್ನು ಅರ್ಪಿಸಬೇಕು. ಆ. ಪ್ರತಿ ದಿನವೂ ಷೋಡಶೋಪಚಾರ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಮೇಲೆ ನೀಡಿರುವಂತೆ … Read more

ಪೂಜಾಸ್ಥಳದ ಶುದ್ಧೀಕರಣ ಮತ್ತು ಉಪಕರಣಗಳಲ್ಲಿನ ದೇವತ್ವವನ್ನು ಜಾಗೃತಗೊಳಿಸುವುದು

ಪೂಜಾಸ್ಥಳದ ಶುದ್ಧೀಕರಣ ಅ. ಪೂಜೆ ಮಾಡುವವನು ಆ ಕೋಣೆಯ ಕಸ (ಪೂಜಕನನ್ನು ಹೊರತುಪಡಿಸಿ ಇತರರು) ಗುಡಿಸಬೇಕು. ಅದು ಸಾಧ್ಯವಿಲ್ಲದಿದ್ದರೆ ಪೂಜೆ ಮಾಡುವ ವ್ಯಕ್ತಿ ಕಸ ಗುಡಿಸಬೇಕು. ಆ. ಕಸ ಗುಡಿಸಿದ ನಂತರ ಕೋಣೆಯಲ್ಲಿನ ನೆಲವು ಮಣ್ಣಿನದ್ದಾಗಿದ್ದರೆ, ನೆಲವನ್ನು ಸೆಗಣಿಯಿಂದ ಸಾರಿಸಬೇಕು. ಮಣ್ಣಿನ ನೆಲವಲ್ಲದಿದ್ದರೆ (ಟೈಲ್ಸ್ ಇದ್ದಲ್ಲಿ) ಸ್ವಚ್ಛ ನೀರಿನಿಂದ ನೆಲ ಒರೆಸಬೇಕು. ಇ. ಮಾವಿನ ಅಥವಾ ತುಳಸೀ ಎಲೆಯಿಂದ ಕೋಣೆಯಲ್ಲಿ ಗೋಮೂತ್ರವನ್ನು ಸಿಂಪಡಿಸಬೇಕು. ಗೋಮೂತ್ರವಿಲ್ಲದಿದ್ದರೆ ನೀರಿನಲ್ಲಿ ಸಾತ್ತ್ವಿಕ ಊದುಬತ್ತಿಯ ವಿಭೂತಿ ಹಾಕಿ ಆ ನೀರನ್ನು ಕೋಣೆ ಯಲ್ಲಿ … Read more

ಪೂಜೆಯ ಸಂದರ್ಭದಲ್ಲಿ ಕೆಲವು ಸೂಚನೆಗಳು

ಅ. ಪೂಜೆಯ ಮೊದಲು ಮಡಿವಸ್ತ್ರ ಅಥವಾ ಧೋತರ ಮತ್ತು ಉತ್ತರೀಯವನ್ನು ಧರಿಸಿರಬೇಕು. ಆ. ಪೂಜೆಯನ್ನು ಆರಂಭಿಸುವ ಮೊದಲು ಮನೆಯಲ್ಲಿನ ಹಿರಿಯರಿಗೆ ಮತ್ತು ಪುರೋಹಿತರಿಗೆ ನಮಸ್ಕಾರ ಮಾಡಿ ಅವರ ಆಶೀರ್ವಾದ ಪಡೆಯಬೇಕು. ಇ. ಪೂಜೆಗಾಗಿ ಮಣೆಯ ಮೇಲೆ ಕುಳಿತುಕೊಳ್ಳುವ ಮೊದಲು ನಿಂತುಕೊಂಡು ಭೂಮಿ ಮತ್ತು ದೇವತೆಗಳಿಗೆ ‘ಈ ಆಸನದ ಸ್ಥಳದಲ್ಲಿ ತಮ್ಮ ಚೈತನ್ಯಮಯ ವಾಸ್ತವ್ಯವಿರಲಿ’ ಎಂದು ಪ್ರಾರ್ಥನೆ ಮಾಡಬೇಕು. ಈ. ಪೂಜೆ ಮಾಡುವಾಗ ‘ದೇವತೆಯು ತಮ್ಮೆದುರಿಗೆ ಪ್ರತ್ಯಕ್ಷ ಪ್ರಕಟವಾಗಿ ಆಸೀನರಾಗಿದ್ದಾರೆ ಮತ್ತು ನಾವು ಅನನ್ಯ ಶರಣಾಗತ ಭಾವದಿಂದ ಮಾಡುತ್ತಿರುವ … Read more

ಪೂಜಾಸಾಹಿತ್ಯದ ಪಟ್ಟಿ

ಪೂಜೆಯ ಸಿದ್ಧತೆ ಮಾಡುವಾಗ ಸ್ತೋತ್ರಪಠಣ ಅಥವಾ ನಾಮಜಪ ಮಾಡಬೇಕು. ನಾಮಜಪದ ತುಲನೆಯಲ್ಲಿ ಸ್ತೋತ್ರದಲ್ಲಿ ಸಗುಣ ತತ್ತ್ವವು ಹೆಚ್ಚಿರುತ್ತದೆ. ಆದುದರಿಂದ ಸ್ತೋತ್ರವನ್ನು ದೊಡ್ಡಸ್ವರದಲ್ಲಿ ಹೇಳಬೇಕು ಮತ್ತು ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡಬೇಕು. ನಾಮ ಜಪವು ಮನಸ್ಸಿನಲ್ಲಿ ಆಗದಿದ್ದರೆ ದೊಡ್ಡಸ್ವರದಲ್ಲಿ ಮಾಡಬಹುದು. ಪೂಜಾಸಾಹಿತ್ಯದ ಪಟ್ಟಿ ೧. ಕುಂಕುಮ ೧೦೦ ಗ್ರಾಮ್ ೨. ಅರಿಶಿನ ೧೦೦ ಗ್ರಾಮ್ ೩. ಸಿಂಧೂರ ೨೫ ಗ್ರಾಮ್ ೪. ತೇಯ್ದ ಗಂಧ / ಅಷ್ಟಗಂಧ ೧೦೦ ಗ್ರಾಮ್ ೫. ರಂಗೋಲಿ ಪುಡಿ ಕಾಲು ಕಿಲೋ ೬. ಸುಗಂಧದ್ರವ್ಯ … Read more

ಶ್ರೀ ಗಣೇಶ ಚತುರ್ಥಿಯ ಬಗ್ಗೆ ನಿಮಗಿವು ತಿಳಿದಿವೆಯೇ?

ಗಣೇಶ ಚತುರ್ಥಿಯನ್ನು ಆಚರಿಸುವುದರ ಮಹತ್ವವೇನು, ನೂತನ ಮೂರ್ತಿಯನ್ನು ಏಕೆ ತರಬೇಕು, ಗಣೇಶ ಮೂರ್ತಿಯು ಭಂಗವಾದರೆ ಅದರ ಪರಿಹಾರಗಳೇನು ಈ ವಿಷಯಗಳಿಗೆ ಸಂಬಂಧಪಟ್ಟ ಮಾಹಿತಿ

ಗಣೇಶ ಚತುರ್ಥಿಯ ಲಾಭ ಹೀಗೆ ಪಡೆಯಿರಿ !

ಗಣೇಶೋತ್ಸವದ ನಿಮಿತ್ತ ನಾವೆಲ್ಲರೂ ಒಂದಾಗುತ್ತೇವೆ. ನಮ್ಮ ಮನೆಗೆ ಗಣಪತಿ ಬರುವವನಿದ್ದಾನೆ ಎಂಬ ಕಲ್ಪನೆಯಿಂದ ನಮ್ಮ ಮನಸ್ಸು ತುಂಬಿರುತ್ತದೆ. ಈ ಉತ್ಸವದಲ್ಲಿ ನಾವು ನಮ್ಮ ಅಯೋಗ್ಯ ಕೃತಿಗಳನ್ನು ಸರಿಪಡಿಸಿ ಈ ಲೇಖದಲ್ಲಿ ನೀಡಿರುವ ಕೃತಿ ಮಾಡಿದರೆ ಶ್ರೀ ಗಣೇಶನಿಂದ ಆಧ್ಯಾತ್ಮಿಕ ಲಾಭ ದೊರಕುವುದು.

ಶ್ರೀ ಗಣೇಶನ ಮೂರ್ತಿಯನ್ನು ಮನೆಗೆ ಹೇಗೆ ತರಬೇಕು?

ಶ್ರೀ ಗಣೇಶಮೂರ್ತಿಯನ್ನು ಮನೆಗೆ ತರಲು ಮನೆಯಲ್ಲಿನ ಕರ್ತ (ಪ್ರಮುಖ) ಪುರುಷನು ಇತರರೊಂದಿಗೆ ಹೋಗಬೇಕು. ಮೂರ್ತಿಯನ್ನು ಮನೆಗೆ ತರುವಾಗ ಮೂರ್ತಿಯ ಮುಖವು ತರುವವನ ಕಡೆಗೆ ಮತ್ತು ಬೆನ್ನು ಮುಂದಿನ ಬದಿಗಿರಬೇಕು.

ಗಣೇಶಭಕ್ತ “ಮೋರಯಾ ಗೋಸಾವಿ”

ಗಣಪತಿ ಬಪ್ಪಾ ಮೋರಯಾ, ಮಂಗಲಮೂರ್ತಿ ಮೋರಯಾ ಎಂಬ ಜಯಘೋಷದಲ್ಲಿ “ಮೋರಯಾ” ಎನ್ನುವುದು ಮೋರಯಾ ಗೋಸಾವಿ ಎಂಬ ಶ್ರೀ ಗಣೇಶನ ಭಕ್ತನ ಹೆಸರಾಗಿದೆ. ಭಕ್ತ ಮತ್ತು ಭಗವಂತನೊಂದಿಗೆ ಸಂಬಂಧವನ್ನು ಈ ಜಯಘೋಷವು ತೋರಿಸುತ್ತದೆ.

ಗಣೇಶಮೂರ್ತಿಯನ್ನು ಯೋಗ್ಯ ಪದ್ಧತಿಯಲ್ಲಿ ವಿಸರ್ಜನೆ ಮಾಡಿ!

ಕೆಲವೊಂದು ಸ್ಥಳಗಳಲ್ಲಿ ಜಲಾಶಯಗಳಲ್ಲಿ (ಬಾವಿ, ಕೆರೆ, ನದಿ ಇತ್ಯಾದಿಗಳಲ್ಲಿ) ಗಣೇಶ ಮೂರ್ತಿಯ ವಿಸರ್ಜನೆಗೆ ಬೇಕಾಗುವಷ್ಟು ನೀರು ಇರುವುದಿಲ್ಲ ಅಥವಾ ಕಲುಷಿತವಾಗಿರುತ್ತದೆ. ಆಗ ಮುಂದಿನ ಉಪಾಯ ಮಾಡಬೇಕು.