ನವದುರ್ಗಾ

ಮಾರ್ಕಂಡೇಯಋಷಿಗಳು ಬರೆದಿರುವ ದುರ್ಗಾಸಪ್ತಶತಿ ಎಂಬ ಗ್ರಂಥವು ತಂತ್ರ ಮತ್ತು ಮಂತ್ರ ಈ ಎರಡೂ ಮಾರ್ಗಗಳಲ್ಲಿ ಪ್ರಸಿದ್ಧವಾಗಿದ್ದು ಭಾರತದಲ್ಲಿ ಇಂದು ಲಕ್ಷಾಂತರ ಜನರು ಸಪ್ತಶತಿಯ ಪಠಣ ಮಾಡುತ್ತಿರುವುದು ಕಂಡುಬರುತ್ತದೆ.

ಕುಮಾರಿ ಪೂಜೆ

ಹುಡುಗಿಗೆ ೮ನೇ ವರ್ಷದಲ್ಲಿ ‘ಗೌರಿ’, ೧೦ನೇ ವರ್ಷದಲ್ಲಿ ‘ಕನ್ಯಾ’ ಮತ್ತು ೧೨ನೇ ವರ್ಷವು ಪ್ರಾರಂಭವಾದಾಗ ‘ಕುಮಾರಿ’ ಎನ್ನುತ್ತಾರೆ.

ವಿಜಯದಶಮಿಯ ಮಹತ್ವ ಹಾಗೂ ಮಹತ್ವದ ಪೂಜಾ ವಿಧಿಗಳು

ದಸರಾ ಎನ್ನುವ ಶಬ್ದದ ಒಂದು ವ್ಯುತ್ಪತ್ತಿಯು ದಶಹರಾ ಎಂದೂ ಇದೆ. ದಶ ಎಂದರೆ ಹತ್ತು, ಹರಾ ಎಂದರೆ ಸೋತಿವೆ. ದಸರಾದ ಮೊದಲ ಒಂಬತ್ತು ದಿನಗಳ ನವರಾತ್ರಿಗಳಲ್ಲಿ ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಸಂಪನ್ನವಾಗಿರುತ್ತವೆ ಮತ್ತು ನಿಯಂತ್ರಣಕ್ಕೊಳಪಟ್ಟಿರುತ್ತವೆ.

ದೇವಿಯ ಉಪಾಸನೆಯ ವಿವಿಧ ಪದ್ಧತಿಗಳು

ಭಾರತದಲ್ಲಿ ದೇವಿ ಉಪಾಸನೆಯ ಪರಂಪರೆಯು ಪುರಾತನ ಕಾಲದಿಂದ ನಡೆದುಬಂದಿದೆ. ದೇವಿಯ ಮೂಲ ರೂಪ ನಿರ್ಗುಣವಾಗಿದ್ದರೂ, ದೇವಿಯ ಸಗುಣ ರೂಪದ ಉಪಾಸನೆಯ ಪರಂಪರೆ ಭಾರತದಲ್ಲಿ ಪ್ರಚಲಿತವಿದೆ.

ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.