ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?

ತಟ್ಟೆಯ ಸುತ್ತಲೂ ಹಾಕಿದ ಮಂಡಲದಿಂದ ಪ್ರಕ್ಷೇಪಿತವಾಗುವ ಲಹರಿಗಳು ತಟ್ಟೆಯ ಕೆಳಗಿನ ಕೇಂದ್ರಬಿಂದುವಿನ ಕಡೆಗೆ ಸಂಕ್ರಮಿತವಾಗುವುದರಿಂದ, ಕೇಂದ್ರಬಿಂದುವಿನಲ್ಲಿರುವ ಆಯಾಯ ದೇವತೆಯ ಅಪ್ರಕಟ ಶಕ್ತಿಯು ಜಾಗೃತವಾಗುತ್ತದೆ ಮತ್ತು ಕೇಂದ್ರಬಿಂದುವಿನಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ.

ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!

೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು. ಶಾಸ್ತ್ರ: ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ೨. ‘ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆಯನ್ನು … Read more

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ

ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ

ಪಂಚೋಪಚಾರ ಪೂಜೆಯಲ್ಲಿ ‘ಕರ್ಪೂರದೀಪ ಹಚ್ಚುವ ಉಪಚಾರ’ ಇಲ್ಲದಿದ್ದರೂ, ಕರ್ಪೂರವು ಸಾತ್ತ್ವಿಕವಾಗಿರುವುದರಿಂದ ಕರ್ಪೂರದೀಪವನ್ನು ಹಚ್ಚುವುದರಿಂದ ಹೆಚ್ಚಿನ ಸಾತ್ತ್ವಿಕತೆ ಸಿಗಲು ಸಹಾಯವಾಗುತ್ತದೆ.

ಪೂಜೆಯಲ್ಲಿ ನಿಷಿದ್ಧ ಹೂವುಗಳು ಮತ್ತು ಹೂವು ಕೀಳುವುದರ ಬಗ್ಗೆ ಮಹತ್ವಪೂರ್ಣ ಅಂಶಗಳು

ಪುಷ್ಪದ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು. ಸಾತ್ತ್ವಿಕ ಪುಷ್ಪಗಳಿಂದ ಪ್ರಕ್ಷೇಪಿತವಾಗುವ ದೇವತಾತತ್ತ್ವದ ಪವಿತ್ರಕಗಳ ಕಾರಣದಿಂದ ವಾತಾವರಣದಲ್ಲಿರುವ ಅನಿಷ್ಟ ಶಕ್ತಿಗಳಿಗೆ ತೊಂದರೆಯಾಗುತ್ತದೆ. ಅವುಗಳ ತಮಪ್ರಧಾನ ಶಕ್ತಿ ಅಂದರೆ ಕಪ್ಪು ಶಕ್ತಿಯು ಕಡಿಮೆಯಾಗುತ್ತಾ ಹೋಗುತ್ತದೆ ಅಥವಾ ನಾಶವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಸಾತ್ತ್ವಿಕ ಪುಷ್ಪ, ದೇವತಾತತ್ತ್ವದ ತರಂಗಗಳನ್ನು ಪ್ರಕ್ಷೇಪಿಸಿ ವಾತಾವರಣದಲ್ಲಿರುವ ಕೆಟ್ಟ ಶಕ್ತಿಗಳೊಂದಿಗೆ … Read more