ಪಂಚೋಪಚಾರ ಪೂಜೆ
ಪಂಚೋಪಚಾರ ಪೂಜೆಯಲ್ಲಿ ದೇವತೆಗೆ ಗಂಧ ಹಚ್ಚುವುದು, ಎಲೆ ಮತ್ತು ಹೂವುಗಳನ್ನು ಅರ್ಪಿಸುವುದು, ಧೂಪವನ್ನು ಅಥವಾ ಊದುಬತ್ತಿಯಿಂದ ಬೆಳಗುವುದು, ದೀಪವನ್ನು ಬೆಳಗುವುದು ನಂತರ ದೇವರಿಗೆ ನೈವೇದ್ಯವನ್ನು ತೋರಿಸುವುದು (ಅರ್ಪಿಸುವುದು). ದೇವರ ಪೂಜೆಯ ಅನೇಕ ಉಪಚಾರಗಳಲ್ಲಿ ಇದು ಒಂದಾಗಿದೆ
ಪಂಚೋಪಚಾರ ಪೂಜೆಯಲ್ಲಿ ದೇವತೆಗೆ ಗಂಧ ಹಚ್ಚುವುದು, ಎಲೆ ಮತ್ತು ಹೂವುಗಳನ್ನು ಅರ್ಪಿಸುವುದು, ಧೂಪವನ್ನು ಅಥವಾ ಊದುಬತ್ತಿಯಿಂದ ಬೆಳಗುವುದು, ದೀಪವನ್ನು ಬೆಳಗುವುದು ನಂತರ ದೇವರಿಗೆ ನೈವೇದ್ಯವನ್ನು ತೋರಿಸುವುದು (ಅರ್ಪಿಸುವುದು). ದೇವರ ಪೂಜೆಯ ಅನೇಕ ಉಪಚಾರಗಳಲ್ಲಿ ಇದು ಒಂದಾಗಿದೆ
ಧಾರ್ಮಿಕ ಕೃತಿಗಳಲ್ಲಿ ಸಹಾಯಕವಾಗಿರುವ ಈ ಘಟಕಗಳು ಧಾರ್ಮಿಕ ಕೃತಿಗಳ ಮಾಧ್ಯಮದಿಂದ ಈಶ್ವರೀ ಕೃಪೆಯು ಪ್ರಾಪ್ತವಾಗಲು ಮಹತ್ವಪೂರ್ಣ ಕೊಂಡಿಯಾಗಿದೆ.
ದೇವತೆಯ ಸುತ್ತಲೂ ಪ್ರದಕ್ಷಿಣೆಗಳನ್ನು ಹಾಕಿದಾಗ ಗರ್ಭಗುಡಿಯಲ್ಲಿರುವ ಸತ್ತ್ವಲಹರಿಗಳ ಪ್ರಭಾವವು ಪ್ರದಕ್ಷಿಣೆ ಹಾಕುವವರ ಮೇಲಾಗುತ್ತದೆ ಮತ್ತು ಅವರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಈ ಸತ್ತ್ವಲಹರಿಗಳ ಲಾಭವಾಗುತ್ತದೆ.
ಬೆಸ ಸಂಖ್ಯೆಗಳು ಶಕ್ತಿಗೆ ಸಂಬಂಧಿಸಿರುತ್ತವೆ. ದೂರ್ವೆಗಳನ್ನು ಹೆಚ್ಚಾಗಿ ಬೆಸ ಸಂಖ್ಯೆಗಳಲ್ಲಿ (ಕನಿಷ್ಠ ೩ ಅಥವಾ ೫, ೭, ೨೧ ಇತ್ಯಾದಿ) ಅರ್ಪಿಸುತ್ತಾರೆ.
ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಬಿಲ್ವಪತ್ರೆಯ ಬಗ್ಗೆ ತಿಳಿದುಕೊಳ್ಳೋಣ !
‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಹೇಳುತ್ತಾ ಭಸ್ಮವನ್ನು ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಹಣೆ, ಹೃದಯ (ಎದೆ), ನಾಭಿ ಮತ್ತು ಕಂಠದ ಮೇಲೆ ಅಡ್ಡವಾಗಿ ಹಚ್ಚಬೇಕು.
ಹಿಂದೂ ಧರ್ಮದಲ್ಲಿನ ಸಗುಣ ಉಪಾಸನೆಯ ಅಡಿಪಾಯವೆಂದರೆ ‘ದೇವರ ಪೂಜೆ’. ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ 16 ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ
ತುಳಸಿಯ ಎಲೆಯಿಂದ ನೈವೇದ್ಯವನ್ನು ಅರ್ಪಿಸುವುದರಿಂದ ಸಾತ್ತ್ವಿಕ ಅನ್ನದಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮಲಹರಿಗಳನ್ನು ತುಳಸಿಯ ಎಲೆಯು ಗ್ರಹಿಸಿಕೊಳ್ಳುತ್ತದೆ. ನಾವು ಅರ್ಪಿಸಿದ ಅನ್ನವು ತುಳಸಿ ಎಲೆಯ ಮಾಧ್ಯಮದಿಂದ ದೇವತೆಗೆ ಬೇಗನೇ ತಲುಪಿ ದೇವತೆಯು ಸಂತುಷ್ಟಳಾಗುತ್ತಾಳೆ.
ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ
ಘಂಟೆಯ ನಾದದಿಂದ ಹಾಗೂ ಶಂಖನಾದದಿಂದ ಜೀವದ ಸುತ್ತಲಿರುವ ವಾಯುಮಂಡಲವು ಜೀವದ ಸಾಧನೆಗಾಗಿ ಸಾತ್ತ್ವಿಕವಾಗುತ್ತದೆ. ಇದರಿಂದ ದೇವತೆಗಳಿಂದ ಬರುವ ಸಾತ್ತ್ವಿಕ ಲಹರಿಗಳನ್ನು ಜೀವವು ಅತ್ಯಧಿಕ ಪ್ರಮಾಣದಲ್ಲಿ ಗ್ರಹಿಸುತ್ತದೆ.