ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ

ಪೂಜೆಯಲ್ಲಿ ದೇವತೆಗೆ ನೈವೇದ್ಯ ಮತ್ತು ಜಲವನ್ನು ಅರ್ಪಿಸಿ ಆರತಿಯನ್ನು ಮಾಡುತ್ತಾರೆ. ಆರತಿಯ ನಂತರ ನೈವೇದ್ಯ ಮತ್ತು ಜಲದಲ್ಲಿನ ಸಾತ್ತ್ವಿಕತೆಯು ಶೇ.೧೦ರಷ್ಟು ಹೆಚ್ಚಾಗುತ್ತದೆ.

ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?

ತಟ್ಟೆಯ ಸುತ್ತಲೂ ಹಾಕಿದ ಮಂಡಲದಿಂದ ಪ್ರಕ್ಷೇಪಿತವಾಗುವ ಲಹರಿಗಳು ತಟ್ಟೆಯ ಕೆಳಗಿನ ಕೇಂದ್ರಬಿಂದುವಿನ ಕಡೆಗೆ ಸಂಕ್ರಮಿತವಾಗುವುದರಿಂದ, ಕೇಂದ್ರಬಿಂದುವಿನಲ್ಲಿರುವ ಆಯಾಯ ದೇವತೆಯ ಅಪ್ರಕಟ ಶಕ್ತಿಯು ಜಾಗೃತವಾಗುತ್ತದೆ ಮತ್ತು ಕೇಂದ್ರಬಿಂದುವಿನಿಂದ ವಾತಾವರಣದಲ್ಲಿ ಪ್ರಕ್ಷೇಪಿಸಲ್ಪಡುತ್ತದೆ.

ಭಗವಂತನ ವಿಚಾರವಿಲ್ಲದ ವ್ಯಾಪಾರವು ಯಾವಾಗಲೂ ನಷ್ಟದಲ್ಲಿಯೇ ಇರುತ್ತದೆ!

ಇಂದಿನ ವ್ಯಾಪಾರಿಗಳು ಈಶ್ವರನ ಚಿಂತನೆಯಿಲ್ಲದೇ ವ್ಯಾಪಾರವನ್ನು ಮಾಡುವುದರಿಂದ ಗಳಿಸುವ ಧನವು ಅಲಕ್ಷ್ಮೀಯ ರೂಪದಲ್ಲಿ ಇರುತ್ತದೆ.

ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!

೧. ‘ಶಿವಪೂಜೆಯಲ್ಲಿ ಶಂಖದ ಪೂಜೆಯನ್ನು ಮಾಡುವುದಿಲ್ಲ ಮತ್ತು ಶಿವನಿಗೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುವುದಿಲ್ಲ. ದೇವರ ಮೂರ್ತಿಯಲ್ಲಿ ಪಂಚಾಯತನದ ಸ್ಥಾಪನೆ ಇದ್ದರೆ, ಅದರಲ್ಲಿನ ಬಾಣಲಿಂಗದ ಮೇಲೆ ಶಂಖೋದಕವನ್ನು ಹಾಕಬಹುದು; ಆದರೆ ಮಹಾದೇವನ ಲಿಂಗವಿರುವ ಬಾಣಲಿಂಗಕ್ಕೆ ಶಂಖೋದಕದಿಂದ ಅಭಿಷೇಕ ಮಾಡಬಾರದು. ಶಾಸ್ತ್ರ: ಶಿವಲಿಂಗದಲ್ಲಿ ಪಾಣಿಪೀಠದ ರೂಪದಲ್ಲಿ ಸ್ತ್ರೀತತ್ತ್ವವು ಇರುವುದರಿಂದ ಸ್ತ್ರೀತತ್ತ್ವವಿರುವ ಶಂಖದಲ್ಲಿನ ನೀರನ್ನು ಮತ್ತೊಮ್ಮೆ ಹಾಕುವ ಅವಶ್ಯಕತೆಯಿರುವುದಿಲ್ಲ. ಬಾಣಲಿಂಗದ ಜೊತೆಗೆ ಪಾಣಿಪೀಠವು ಇಲ್ಲದಿರುವುದರಿಂದ ಅದಕ್ಕೆ ಶಂಖದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ೨. ‘ದೇವಸ್ಥಾನದಲ್ಲಿ ಮಹಾದೇವನ ಪೂಜೆಯನ್ನು ಮಾಡುವಾಗ ಶಂಖಪೂಜೆಯನ್ನು … Read more

ರಂಗೋಲಿಯನ್ನು ಬಿಡಿಸುವುದು ಮತ್ತು ಅದರ ಮೇಲೆ ಅರಿಶಿನ-ಕುಂಕುಮ ಹಾಕುವುದರ ಮಹತ್ವ !

ರಂಗೋಲಿಯ ಬೇರೆಬೇರೆ ಆಕೃತಿಯಂತೆ, ಆಯಾ ಆಕೃತಿಯಲ್ಲಿ ಸಂಗ್ರಹವಾದ ವಿಶಿಷ್ಟ ದೇವತೆಗಳ ಲಹರಿಗಳಿಂದಾಗಿ ಕೆಟ್ಟ ಶಕ್ತಿಗಳು ರಂಗೋಲಿಯನ್ನು ನೋಡಿ ಹೆದರುತ್ತವೆ. ರಂಗೋಲಿಯನ್ನು ಬಿಡಿಸಿದ ನಂತರ ರಂಗೋಲಿಯ ಕೇಂದ್ರಬಿಂದುವಿನ ಮೇಲೆ ಅರಿಶಿನ-ಕುಂಕುಮವನ್ನು

ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

ಸಂತರಿಗೆ ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಸ್ಥಳ ಕಡಿಮೆ ಇದ್ದರೆ ಮತ್ತು ಸಾಷ್ಟಾಂಗ ನಮಸ್ಕಾರ ಹಾಕುವುದು ಸಾಧ್ಯವಿಲ್ಲದಿದ್ದರೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು. ಸ್ತ್ರೀಯರು ಸಂತರಿಗೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು.

ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ

ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಏಕೆ ಕೀಳಬಾರದು?

ಇಂತಹ ಹೂವುಗಳಲ್ಲಿ ದೇವತೆಗಳ ಪವಿತ್ರಕಗಳು ಕಡಿಮೆಯಿರುತ್ತವೆ ಅಥವಾ ಕೆಲವೊಮ್ಮೆ ಇರುವುದೇ ಇಲ್ಲ, ಇಂತಹ ಹೂವುಗಳಲ್ಲಿ ಪರಿಮಳವೂ ಇರುವುದಿಲ್ಲ. ಇಂತಹ ಹೂವುಗಳನ್ನು ದೇವರಿಗೆ ಅರ್ಪಿಸುವುದೆಂದರೆ ದೇವರಿಗೆ ಕಾಗದದ …

ದೇವರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ !

ಅ. ‘ದೇವರಿಗೆ ನಮಸ್ಕಾರ ಮಾಡುವಾಗ ಮೊದಲು ಎದೆಯ ಮುಂದೆ ಎರಡೂ ಕೈಗಳ ಅಂಗೈಗಳನ್ನು ಒಂದರ ಮೇಲೊಂದಿಟ್ಟು ಕೈಗಳನ್ನು ಜೋಡಿಸಬೇಕು’. ೧. ಕೈಗಳನ್ನು ಜೋಡಿಸುವಾಗ ಬೆರಳುಗಳನ್ನು ಸಡಿಲವಾಗಿಡಬೇಕು. ೨. ಕೈಗಳ ಬೆರಳುಗಳ ನಡುವೆ ಅಂತರವನ್ನು ಬಿಡದೇ ಬೆರಳುಗಳನ್ನು ಜೋಡಿಸಬೇಕು. ೩. ಕೈಗಳ ಬೆರಳುಗಳನ್ನು ಹೆಬ್ಬೆರಳುಗಳಿಂದ ದೂರ ಇಡಬೇಕು. ೪. ಪ್ರಾಥಮಿಕ ಸ್ತರದಲ್ಲಿನ ಸಾಧಕರು ಮತ್ತು ಸರ್ವಸಾಮಾನ್ಯ ಜನರು ನಮಸ್ಕಾರ ಮಾಡುವಾಗ ಅಂಗೈಗಳನ್ನು ಒಂದಕ್ಕೊಂದು ತಾಗಿಸಿ ಹಿಡಿಯಬೇಕು. ಅಂಗೈಗಳ ನಡುವೆ ಟೊಳ್ಳನ್ನು ಬಿಡಬಾರದು. ಸಾಧನೆಯನ್ನು ಆರಂಭಿಸಿ ಐದಾರು ವರ್ಷಗಳಾಗಿರುವ ಮುಂದಿನ … Read more