ದೇವಸ್ಥಾನದ ಮಹತ್ವ
ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ . ದೇವಸ್ಥಾನಗಳು ಈಶ್ವರನ ಶಕ್ತಿಯನ್ನು ಆಕರ್ಷಿಸುವ, ಪ್ರಕ್ಷೇಪಿಸುವ ಮತ್ತು ಹರಡುವ ಕೇಂದ್ರಗಳಾಗಿವೆ.
ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವುದರಿಂದ ನಮಗೆ ಅಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಲು ಸಾಧ್ಯವಾಗುತ್ತದೆ . ದೇವಸ್ಥಾನಗಳು ಈಶ್ವರನ ಶಕ್ತಿಯನ್ನು ಆಕರ್ಷಿಸುವ, ಪ್ರಕ್ಷೇಪಿಸುವ ಮತ್ತು ಹರಡುವ ಕೇಂದ್ರಗಳಾಗಿವೆ.
ಭಾರತದಲ್ಲಿ ದೇವಿ ಉಪಾಸನೆಯ ಪರಂಪರೆಯು ಪುರಾತನ ಕಾಲದಿಂದ ನಡೆದುಬಂದಿದೆ. ದೇವಿಯ ಮೂಲ ರೂಪ ನಿರ್ಗುಣವಾಗಿದ್ದರೂ, ದೇವಿಯ ಸಗುಣ ರೂಪದ ಉಪಾಸನೆಯ ಪರಂಪರೆ ಭಾರತದಲ್ಲಿ ಪ್ರಚಲಿತವಿದೆ.
ಹಿಂದೂ ಧರ್ಮದಲ್ಲಿನ ಸಗುಣ ಉಪಾಸನೆಯ ಅಡಿಪಾಯವೆಂದರೆ ‘ದೇವರ ಪೂಜೆ’. ದೇವತೆಗಳನ್ನು ಆವಾಹನೆ ಮಾಡುವುದು, ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೊಡುವುದು, ಅವರಿಗೆ ಚರಣಗಳನ್ನು ತೊಳೆದುಕೊಳ್ಳಲು ನೀರನ್ನು ಕೊಡುವುದು ಮುಂತಾದ ಕ್ರಮವಾದ 16 ಉಪಚಾರಗಳನ್ನು ಕಲಿಸಿ ವಿಧಿಪೂರ್ವಕ ಮತ್ತು ಭಾವಪೂರ್ಣವಾಗಿ ಧರ್ಮಾಚರಣೆಯನ್ನು ಮಾಡಲು ಕಲಿಸಲಾಗಿದೆ
ಹಿಂದೂ ಧರ್ಮದಲ್ಲಿನ ಶವಸಂಸ್ಕಾರವನ್ನು ಅಧ್ಯಾತ್ಮಶಾಸ್ತ್ರೀಯ ದೃಷ್ಟಿಕೋನದಿಂದ ವಿಚಾರ ಮಾಡಿದರೆ ಕಟ್ಟಿಗೆಯ ಚಿತೆಯ ಮೇಲಿನ ದಹನಸಂಸ್ಕಾರವನ್ನಲ್ಲ, ಇನ್ನಿತರ ಘಟಕಗಳಿಂದ (ಔದ್ಯೋಗಿಕ ಪ್ರದೂಷಣೆ, ತ್ಯಾಜ್ಯ ನೀರು ಇತ್ಯಾದಿ) ಆಗುವ ಪ್ರದೂಷಣೆಯನ್ನು ನಿಯಂತ್ರಿಸುವುದು ಆವಶ್ಯಕವಾಗಿದೆ.
೧. ಪ್ರಾಚೀನ ಕಾಲದಲ್ಲಿ ಯಾರಾದರೊಬ್ಬರ ಜುಟ್ಟು ಕತ್ತರಿಸುವುದು ಅಂದರೆ ಮೃತ್ಯುದಂಡಕ್ಕೆ ಸಮಾನ ಎಂದು ಪರಿಗಣಿಸಲ್ಪಡುವುದು ! ‘ಹರಿವಂಶ’ ಪುರಾಣದಲ್ಲಿ ಒಂದು ಕಥೆ ಇದೆ. ಹೈಹಯ ಮತ್ತು ತಾಲಜಂಘ ವಂಶದಲ್ಲಿನ ರಾಜಾಂನೀಶಕ, ಯವನ, ಕಾಂಬೋಜ ಪಾರದ ಮುಂತಾದ ರಾಜರ ಸಹಾಯದಿಂದ ಬಾಹೂ ರಾಜನ ರಾಜ್ಯವನ್ನು ವಶಪಡಿಸಿಕೊಂಡಾಗ, ಬಾಹೂ ರಾಜನು ತನ್ನ ಪತ್ನಿಯೊಂದಿಗೆ ಅರಣ್ಯಕ್ಕೆ ಹೊರಟು ಹೋದನು. ಅಲ್ಲಿ ಬಾಹೂ ರಾಜನು ಮರಣಹೊಂದಿದನು. ಓರ್ವ ಮಹರ್ಷಿಗಳು ರಾಜನ ಗರ್ಭವತಿ ಪತ್ನಿಯ ರಕ್ಷಣೆ ಮಾಡಿ ಅವಳನ್ನು ತಮ್ಮ ಆಶ್ರಮಕ್ಕೆ ಕರೆತಂದರು. ಅಲ್ಲಿ … Read more
ಪ್ರತಿಯೊಂದು ಕುಟುಂಬದಲ್ಲಿ ಈ ವಿಧಿಯನ್ನು ಪ್ರತಿ ೧೨ ವರ್ಷಗಳಿಗೊಮ್ಮೆ ಮಾಡಬೇಕು ಅಥವಾ ಪಿತೃಗಳಿಂದ ತೊಂದರೆಯಾಗುತ್ತಿರುವ ಕುಟುಂಬಗಳು ಈ ವಿಧಿಯನ್ನು ದೋಷ ನಿವಾರಣೆಗಾಗಿ ಮಾಡಬೇಕು.
ನಾರಾಯಣಬಲಿ ೧. ಉದ್ದೇಶ : ದುರ್ಮರಣ ಹೊಂದಿದ ಅಥವಾ ಆತ್ಮಹತ್ಯೆ ಮಾಡಿದ ಜೀವದ ಕ್ರಿಯಾಕರ್ಮಗಳು ಆಗದೇ ಇರುವುದರಿಂದ ಪ್ರೇತತ್ವವು ಮುಗಿದು ಪಿತೃತ್ವವು ಸಿಗದೇ ಇದ್ದುದರಿಂದ ಅದರ ಲಿಂಗದೇಹವು ಹಾಗೆಯೇ ಅಲೆದಾಡುತ್ತಿರುತ್ತದೆ. ಇಂತಹ ಲಿಂಗದೇಹವು ಕುಲದಲ್ಲಿ ಸಂತತಿ ಆಗಬಾರದೆಂದು ತೊಂದರೆಗಳನ್ನು ಕೊಡುತ್ತದೆ. ಅದೇ ರೀತಿ ಯಾವುದಾದರೊಂದು ರೀತಿಯಲ್ಲಿ ವಂಶಜರಿಗೆ ತೊಂದರೆ ಕೊಡುತ್ತದೆ. ಇಂತಹ ಲಿಂಗದೇಹಕ್ಕೆ ಗತಿಯನ್ನು ನೀಡಲು ನಾರಾಯಣಬಲಿ ವಿಧಿಯನ್ನು ಮಾಡಬೇಕಾಗುತ್ತದೆ. ೨. ವಿಧಿ ಅ. ವಿಧಿಯನ್ನು ಮಾಡಲು ಯೋಗ್ಯ ಸಮಯ: ನಾರಾಯಣಬಲಿಯ ವಿಧಿಯನ್ನು ಮಾಡಲು ಯಾವುದೇ ತಿಂಗಳ … Read more
ವಿಧಿಗಳನ್ನು ಮಾಡಲು ಪುರುಷರಿಗೆ ಧೋತರ, ಉಪವಸ್ತ್ರ, ಬನಿಯನ್ ಮತ್ತು ಮಹಿಳೆಯರಿಗೆ ಸೀರೆ, ರವಿಕೆ ಮತ್ತು ಲಂಗ ಮುಂತಾದ ಹೊಸ ಬಟ್ಟೆಗಳು (ಕಪ್ಪು ಮತ್ತು ಹಸಿರು ಬಣ್ಣ ಇರಬಾರದು) ಬೇಕಾಗುತ್ತವೆ.
ಆಯಾ ಗೋತ್ರದ ಪಿತೃಗಳು ಆಯಾ ಸ್ಥಳಗಳಿಗೆ ಬಂದು ಶ್ರಾದ್ಧದಲ್ಲಿನ ಆಹಾರವನ್ನು ಸೇವಿಸಿ ತೃಪ್ತರಾಗುತ್ತಾರೆ. ‘ಶಬ್ದವಿದ್ದಲ್ಲಿ ಅದರ ಸ್ಪರ್ಶ, ರೂಪ, ರಸ, ಗಂಧ ಮತ್ತು ಅದರ ಶಕ್ತಿ ಒಟ್ಟಿಗೆ ಇರುತ್ತವೆ’ ಇದು ಅಧ್ಯಾತ್ಮದಲ್ಲಿನ ಮೂಲ ಸಿದ್ಧಾಂತವಾಗಿದೆ.