ಬ್ರಾಹ್ಮ ಹಾಗೂ ಕ್ಷಾತ್ರ ತೇಜದ ಸಂಗಮ – ಯೋದ್ಧಾವತಾರಿ ಭಗವಾನ್ ಪರಶುರಾಮ !
ಪರಶುರಾಮರು ಕಾಮವಾಸನೆಯನ್ನು ಜಯಿಸಿದ್ದರು. ಆದ್ದರಿಂದ ಅವರು ಅಖಂಡ ಬ್ರಹ್ಮಚಾರಿಯಾಗಿದ್ದರು. ಪರಶುರಾಮರಲ್ಲಿ ಪ್ರಚಂಡ ವಾದ ವಿರಕ್ತಿಯಿತ್ತು. ಆದ್ದರಿಂದಲೇ ಅವರು ಸಂಪೂರ್ಣ ಪೃಥ್ವಿಯನ್ನು ಜಯಿಸಿದರೂ ಕಶ್ಯಪ ಋಷಿಗಳಿಗೆ ಅದೆಲ್ಲವನ್ನೂ ಕೈಯೆತ್ತಿ ದಾನ ಮಾಡಿ ಮಹೇಂದ್ರ ಪರ್ವತದ ಮೇಲೆ ಏಕಾಂತದಲ್ಲಿದ್ದು ಸಂನ್ಯಾಸ ಜೀವನವನ್ನು ನಡೆಸಿದರು.