ಮಹಾಶಿವರಾತ್ರಿ (Mahashivratri 2024)

ಮಹಾಶಿವರಾತ್ರಿ ಎಂದರೆ ಶಿವನ ವಿಶ್ರಾಂತಿಯ ಕಾಲ. ಈ ಸಮಯದಲ್ಲಿ ತಿಳಿದೋ ತಿಳಿಯದೆಯೋ ಶಿವನ ಉಪಾಸನೆ ಮಾಡಿದ್ದಲ್ಲಿ, ಅದರಲ್ಲಿ ಕುಂದು ಕೊರತೆಯಿದ್ದರೂ ೧೦೦ ಶೇ. ಫಲ ದೊರೆಯುತ್ತದೆ

ಶಿವನಿಗೆ ಬಿಲ್ವಪತ್ರೆ ಅರ್ಪಿಸುವ ಪದ್ಧತಿ

ಮೂರು ಎಲೆಗಳಿರುವ, ತ್ರಿಗುಣಗಳಂತಿರುವ, ಮೂರು ಕಣ್ಣುಗಳಂತಿರುವ, ಮೂರು ಆಯುಧಗಳಂತಿರುವ ಮತ್ತು ಮೂರು ಜನ್ಮಗಳ ಪಾಪಗಳನ್ನು ನಾಶ ಮಾಡುವ ಬಿಲ್ವಪತ್ರೆಯ ಬಗ್ಗೆ ತಿಳಿದುಕೊಳ್ಳೋಣ !

ಶಿವಾಲಯದಲ್ಲಿ ಶಿವನ ದರ್ಶನ ಪಡೆಯುವ ಯೋಗ್ಯ ಪದ್ಧತಿ

ಲಿಂಗದ ದರ್ಶನವನ್ನು ಪಡೆದುಕೊಳ್ಳುವಾಗ ಶಿವಲಿಂಗ ಮತ್ತು ನಂದಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಲಿಂಗ ಮತ್ತು ನಂದಿಯನ್ನು ಜೋಡಿಸುವ ರೇಖೆಯ ಬದಿಯಲ್ಲಿ ನಿಂತುಕೊಳ್ಳಬೇಕು.

ಭಸ್ಮವನ್ನು ಎಲ್ಲಿ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು?

‘ಓಂ ನಮಃ ಶಿವಾಯ’ ಎಂಬ ಮಂತ್ರವನ್ನು ಹೇಳುತ್ತಾ ಭಸ್ಮವನ್ನು ಬಲಗೈಯ ಮಧ್ಯದ ಮೂರು ಬೆರಳುಗಳಿಂದ ಹಣೆ, ಹೃದಯ (ಎದೆ), ನಾಭಿ ಮತ್ತು ಕಂಠದ ಮೇಲೆ ಅಡ್ಡವಾಗಿ ಹಚ್ಚಬೇಕು.

ಶಿವಲಿಂಗ

ಶಿವನ ಮೂರ್ತಿವಿಜ್ಞಾನ, ಶಿವಲಿಂಗದ ಆಕಾರದ ಅರ್ಥ

ಪ್ರಳಯಕಾಲದಲ್ಲಿ ಪಂಚಮಹಾಭೂತಗಳ ಸಮೇತ ಇಡೀ ಜಗತ್ತು ಲಿಂಗದಲ್ಲಿ ಲಯವಾಗುತ್ತದೆ ಮತ್ತು ಸೃಷ್ಟಿಕಾಲದಲ್ಲಿ ಮತ್ತೆ ಅದರಿಂದಲೇ ಸಾಕಾರವಾಗುತ್ತದೆ; ಆದುದರಿಂದ ಅದನ್ನು ಲಿಂಗ ಎನ್ನಲಾಗಿದೆ.

ಜ್ಯೋತಿರ್ಲಿಂಗಗಳು

ಭಾರತದಲ್ಲಿನ ಪ್ರಮುಖ ಶಿವಸ್ಥಾನ ಗಳೆಂದರೆ ಹನ್ನೆರಡು ಜ್ಯೋತಿರ್ಲಿಂಗಗಳು. ಅವು ತೇಜಸ್ವಿ ರೂಪದಲ್ಲಿ ಉತ್ಪನ್ನವಾದವು. ಹದಿಮೂರನೆಯ ಪಿಂಡಕ್ಕೆ ಕಾಲಪಿಂಡವೆನ್ನುತ್ತಾರೆ. ಕಾಲದ ಆಚೆಗೆ ಹೋಗಿರುವ ಪಿಂಡವೆಂದರೆ (ದೇಹವೆಂದರೆ) ಕಾಲಪಿಂಡ. ಹನ್ನೆರಡು ಜ್ಯೋತಿರ್ಲಿಂಗಗಳು ಮುಂದಿನಂತಿವೆ. ಹನ್ನೆರಡು ಜ್ಯೋತಿರ್ಲಿಂಗಗಳು ಶರೀರವಾಗಿದ್ದು ಕಾಠಮಾಂಡು (ನೇಪಾಳ) ದಲ್ಲಿರುವ ಪಶುಪತಿನಾಥ ಜ್ಯೋತಿರ್ಲಿಂಗವು ತಲೆಯಾಗಿದೆ. ಜ್ಯೋತಿರ್ಲಿಂಗ ಮತ್ತು ಸಂತರ ಸಮಾಧಿಸ್ಥಳಗಳ ಮಹತ್ವ ಸಂತರು ಸಮಾಧಿಯನ್ನು ಸ್ವೀಕರಿಸಿದ ನಂತರ ಅವರ ಕಾರ್ಯವು ಹೆಚ್ಚು ಪ್ರಮಾಣದಲ್ಲಿ ಸೂಕ್ಷ್ಮದಲ್ಲಿ ನಡೆಯುತ್ತದೆ. ಸಂತರು ದೇಹತ್ಯಾಗ ಮಾಡಿದ ನಂತರ ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯಲಹರಿ ಮತ್ತು … Read more

ಆದಿಶಂಕರಾಚಾರ್ಯ ವಿರಚಿತ ಶಿವಮಾನಸಪೂಜಾ

ಮಾನಸ ಪೂಜೆ ಎಂದರೆ ನಮ್ಮ ಮನಸ್ಸಿನಲ್ಲಿರುವ ನಮ್ಮ ಇಷ್ಟ ದೇವತೆಯ ರೂಪದ ಪೂಜೆ. ಶ್ರೀ ಆದಿಶಂಕರಾಚಾರ್ಯರು ರಚಿಸಿದ ‘ಶಿವಮಾನಸಪೂಜಾ’ ಸ್ತೋತ್ರವನ್ನು ಪಠಿಸಿ, ಆ ಪರಮ ಶಿವನ ಕೃಪೆಗೆ ಪಾತ್ರರಾಗಿ!

ಶಿವನ ವಿಶ್ರಾಂತಿಯ ಕಾಲ ಎಂದರೇನು?

ಪ್ರತಿದಿನ ಶಿವನು ರಾತ್ರಿಯ ೪ ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ ೩ ಗಂಟೆಗಳು