ದತ್ತನ 24 ಗುರುಗಳು
೧. ಪೃಥ್ವಿ : ಪೃಥ್ವಿಯಂತೆ ಸಹನಶೀಲ ಹಾಗೂ ತಾಳ್ಮೆಯುಳ್ಳವನಾಗಿರಬೇಕು. ೨. ವಾಯು : ವಾಯುವಿನಂತೆ ವಿರಕ್ತನಾಗಿರಬೇಕು. ಹೇಗೆ ವಾಯುವು ಶೀತೋಷ್ಣತೆಗಳಲ್ಲಿ ಸಂಚರಿಸುತ್ತಿರುವಾಗಲೂ ಅವುಗಳ ಗುಣ ದೋಷಗಳಲ್ಲಿ ಸಿಲುಕಿಕೊಳ್ಳುವುದಿಲ್ಲವೋ, ಹಾಗೆಯೇ ಮುಮುಕ್ಷುವು ಯಾರ ಗುಣದೋಷಗಳನ್ನೂ ನೋಡದೇ ಶ್ರುತಿ ಪ್ರತಿಪಾದಿತ ಮಾರ್ಗದಲ್ಲಿ ಬಹಳ ಶೀತೋಷ್ಣವಿರುವ ಪ್ರದೇಶದಲ್ಲಿ ಮಾರ್ಗಕ್ರಮಣ ಮಾಡಬೇಕು. ೩. ಆಕಾಶ : ಆತ್ಮವು ಆಕಾಶದಂತೆ ಎಲ್ಲ ಚರಾಚರ ವಸ್ತುಗಳನ್ನು ವ್ಯಾಪಿಸಿದೆ, ಆದರೂ ಅದು ನಿರ್ವಿಕಾರ, ಎಲ್ಲರೊಂದಿಗೆ ಸಮಾನತೆಯನ್ನಿಟ್ಟುಕೊಳ್ಳುವ, ನಿಃಸಂಗ, ಅಭೇದ, ನಿರ್ಮಲ, ನಿರ್ವೈರ, ಅಲಿಪ್ತ, ಅಚಲ ಮತ್ತು ಒಂದಾಗಿದೆ. … Read more